ಗಂಡು-ಹೆಣ್ಣು ಸರಿಯಾದ ಜೀವನ ಸಂಗಾತಿಯನ್ನು ಆರಿಸಿ ಮದುವೆಯಾದರೆ ಜೀವನ ಸುಸೂತ್ರವಾಗಿ ಸಾಗುತ್ತದೆ ಆದರೆ ಇಲ್ಲೊಬ್ಬಳು ತನ್ನ ಗಂಡನ ತಂದೆಯನ್ನು ಸಂಗಾತಿಯನ್ನಾಗಿ ಆರಿಸಿಕೊಂಡಿದ್ದಾಳೆ. ಗಂಡನ ತಂದೆಯನ್ನು ಮದುವೆಯಾಗಲು ಕಾರಣವೇನು ಹಾಗೂ ಈ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ

ಪ್ರೀತಿ ಎನ್ನುವುದು ಯಾರಿಗೆ ಯಾವಾಗ ಯಾರ ಮೇಲೆ ಹುಟ್ಟುತ್ತದೆ ಎಂಬುದನ್ನು ತಿಳಿಯಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಯುವಕರಿಗೆ ಯುವತಿಯರ ಮೇಲೆ ಪ್ರೀತಿ ಹುಟ್ಟುತ್ತದೆ ಆದರೆ ಬ್ರಿಟನ್ ನಲ್ಲಿ ಅಳಿಯನಿಗೆ ತನ್ನ ಅತ್ತೆಯ ಮೇಲೆ ಪ್ರೀತಿ ಆಗಿರುವ ಘಟನೆ ಕಂಡುಬಂದಿದೆ. ಬ್ರಿಟನ್ ನ ಗ್ಲೌಸೆಸ್ಟರ್​ನ ಇಂಗ್ಲಿಷ್ ಕೌಂಟಿಯಲ್ಲಿ ವಾಸಿಸುತ್ತಿರುವ ಜೆಸ್ ಆಲ್ಡ್ರಿಡ್ಜ್ ಎನ್ನುವವಳು ತಾನು ಮದುವೆಯಾದ ಪತಿಯ ತಂದೆಯನ್ನು ವಿವಾಹವಾಗಿದ್ದಾಳೆ. ಗಂಡ ಮತ್ತು ತನ್ನ ಸ್ವಂತ ತಾಯಿ ಮಾಡಿದ ಮೋಸದಿಂದಾಗಿ ಜೆಸ್ ಆಲ್ಡ್ರಿಡ್ಜ್ ಕೊನೆಗೆ ಮಾವನನ್ನೆ ವಿವಾಹವಾಗಬೇಕಾದ ಅನಿವಾರ್ಯತೆ ಎದುರಾಯಿತು.

ಜೆಸ್ ಆಲ್ಡ್ರಿಡ್ಜ್ ಹಾಗೂ ರಿಯಾನ್ ಶೆಲ್ಟನ್ ಮದುವೆಯಾದರು‌. ರಿಯಾನ್ ಶೆಲ್ಟನ್ ಜೆಸ್ ಆಲ್ಡ್ರಿಡ್ಜ್ ಅವಳ ತಾಯಿಯೊಂದಿಗೆ ಪರಾರಿಯಾದನು ಆಗ ಜೆಸ್ ಆಲ್ಡ್ರಿಡ್ಜ್ ತಾನು ಯಾರೊಂದಿಗೆ ಬದುಕಲಿ ಎಂದು ಯೋಜಿಸಿ ಕೊನೆಗೆ ತನ್ನ ಪತಿಯ ತಂದೆಯನ್ನು ಗ್ಲೌಸೆಸ್ಟಶೈರ್​ನಲ್ಲಿ ಮದುವೆಯಾಗಿದ್ದಾಳೆ. ಸದ್ಯ ಒಟ್ಟಿಗೆ ಜೀವನ ಮಾಡುತ್ತಿದ್ದಾರೆ. ಟಿಕ್​ಟಾಕ್ ಬಳಕೆಗಾರ್ತಿ ಜೆಸ್ ಆಲ್ಡ್ರಿಡ್ಜ್ ಮಾವನನ್ನು ಮದುವೆಯಾದ ಬಗ್ಗೆ  ಹೇಳಿಕೊಂಡಿದ್ದಾಳೆ ಅಲ್ಲದೆ ಇದಕ್ಕೆ ಕಾರಣವನ್ನು ನೀಡಿದ್ದಾಳೆ ರಿಯಾನ್ ತಾಯಿ ಇತ್ತೀಚೆಗೆ ನಿಧನರಾದರು. ಈ ವೇಳೆ ಆತನ ತಂದೆ ಒಬ್ಬಂಟಿಯಾಗಿರುವುದನ್ನು ನಾನು ನೋಡಲಾರೆ ಅದಕ್ಕೆ ನಾನು ರಿಯಾನ್ ಶೆಲ್ಟನ್ ತಂದೆಯನ್ನು ಮದುವೆಯಾದೆ ಎಂದಿದ್ದಾಳೆ.

ಇನ್ನು ರಿಯಾನ್ ಶೆಲ್ಟನ್ ತನ್ನ ಪತ್ನಿ ಜೆಸ್ ಆಲ್ಡ್ರಿಡ್ಜ್ ಅವಳ ತಾಯಿ ಜಾರ್ಜಿನಾ ಜೊತೆಗೆ ಬೇರೆ ಕಡೆ ವಾಸಿಸುತ್ತಿದ್ದಾನೆ. ಜೆಸ್​ಗೆ  ಈ ಮೊದಲೇ ತನ್ನ ತಾಯಿ ಮತ್ತು ರಿಯಾನ್ ನಡುವಿನ ಸಂಬಂಧದ ಬಗ್ಗೆ ಅನುಮಾನವಿತ್ತು. ಅವರಿಬ್ಬರನ್ನು ದೂರ ಮಾಡಲು ಪ್ರಯತ್ನಿದಳು ಆದರೆ ಜೆಸ್ ಗರ್ಭಿಣಿಯಾದ ಸಮಯದಲ್ಲಿ ಇಬ್ಬರು ಓಡಿ ಹೋಗುವ ಮೂಲಕ ಶಾಕ್ ನೀಡಿದರು. ಗರ್ಭಿಣಿ ಜೆಸ್ ಆಲ್ಡ್ರಿಡ್ಜ್ ಹೆರಿಗೆ ಆಸ್ಪತ್ರೆಗೆ ಹೋದರೆ ಇತ್ತ ಪತಿ ಮತ್ತು ಅತ್ತೆ ಓಡಿ ಹೋಗಿದ್ದಾರೆ. ಈ ವೇಳೆ ದಿಕ್ಕು ಕಾಣದೆ ಜೆಸ್ ಆಲ್ಡ್ರಿಡ್ಜ್ ಕೊನೆಗೆ ಮಾವನನ್ನೆ ಮದುವೆಯಾದ ಪ್ರಸಂಗ ನಡೆದಿದೆ. ಜಗತ್ತಿನಲ್ಲಿ ಎಂತೆಂಥಹ ಅದ್ಭುತ, ಆಶ್ಚರ್ಯ ಘಟನೆಗಳು ನಡೆಯುತ್ತದೆ

Leave a Reply

Your email address will not be published. Required fields are marked *