ನೀವು ATM ಬಳಸುತ್ತಿದ್ರೆ ತಪ್ಪದೆ ಎಟಿಎಂ ವ್ಯವಹಾರದಲ್ಲಿನ ಈ ಹೊಸ ನಿಯಮ ತಿಳಿದುಕೊಳ್ಳಿ

0 1

ಬ್ಯಾಂಕ್ ವ್ಯವಹಾರ ಸುರಕ್ಷಿತವಾಗಿದ್ದು ಎಲ್ಲರೂ ಬ್ಯಾಂಕ್ ವ್ಯವಹಾರಕ್ಕೆ ಒಳಗಾಗುತ್ತಾರೆ. ಇದೀಗ ಬ್ಯಾಂಕ್ ವ್ಯವಹಾರದ ಭಾಗವಾದ ಎಟಿಎಂ ವ್ಯವಹಾರದಲ್ಲಿ ಕೆಲವು ಬದಲಾವಣೆಯಾಗಿದೆ. ಬದಲಾದ ಬದಲಾವಣೆಯ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ಹೊಸ ವರ್ಷದಿಂದ ಎಟಿಎಂನ ವಿತ್‌ಡ್ರಾ ಶುಲ್ಕವು ದುಬಾರಿ ಆಗಲಿದೆ. 2022 ರಿಂದ ಎಟಿಎಂಗಳಿಂದ ನಗದು ಹಿಂಪಡೆಯುವುದು ಹೆಚ್ಚು ದುಬಾರಿಯಾಗಲಿದೆ. ಜನವರಿ ತಿಂಗಳಿನಿಂದ ಎಟಿಎಂ ಬಳಕೆದಾರರು ಉಚಿತ ಎಟಿಎಂ ವಹಿವಾಟಿನ ಮಿತಿಯನ್ನು ಮೀರಿದರೆ ಹೆಚ್ಚಿನ ಶುಲ್ಕವನ್ನು ಪಾವತಿ ಮಾಡಬೇಕಾಗು‌ತ್ತದೆ.1 ಜನವರಿ 2022 ರಿಂದ ಉಚಿತ ಮಾಸಿಕ ಮಿತಿಯು ಮುಗಿದ ನಂತರ ಬ್ಯಾಂಕ್ ಗ್ರಾಹಕರು ತಮ್ಮ ಎಟಿಎಂ ವಹಿವಾಟುಗಳಿಗೆ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಈಗಾಗಲೆ ಎಟಿಎಂಗಳಲ್ಲಿ ನಗದು ಹಿಂಪಡೆಯುವ ಶುಲ್ಕವನ್ನು 1 ಜನವರಿ 2022 ರಿಂದ ಹೆಚ್ಚಿಸಲಾಗುವುದು ಎಂದು ಘೋಷಣೆ ಮಾಡಿದೆ.

ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್‌ಗಳು ನಗದು ಮತ್ತು ನಗದುರಹಿತ ಎಟಿಎಂಗೆ ಹೆಚ್ಚಿದ ಶುಲ್ಕಗಳ ಕುರಿತು ತಮ್ಮ ವೆಬ್‌ಸೈಟ್ ಮೂಲಕ ತಿಳಿಸಿದೆ. ಈ ಮಾಹಿತಿಯೊಂದಿಗೆ ಐದು ವಿಚಾರಗಳನ್ನು ತಿಳಿಯ ಬೇಕಾಗಿದೆ. ಜನವರಿ 1, 2022 ರಿಂದ ಉಚಿತ ಮಾಸಿಕ ಅನುಮತಿಸುವ ಮಿತಿಯನ್ನು ಮೀರಿ ನಗದು ಮತ್ತು ನಗದು ರಹಿತ ಎಟಿಎಂ ವಹಿವಾಟುಗಳಿಗೆ ಶುಲ್ಕವನ್ನು ಹೆಚ್ಚಿಸಲು ಕೇಂದ್ರ ಬ್ಯಾಂಕ್ ಬ್ಯಾಂಕ್‌ಗಳಿಗೆ ಅನುಮತಿ ನೀಡಿದೆ.

1 ಜನವರಿ 2022 ರಿಂದ ಗ್ರಾಹಕರು ಮಾಸಿಕ ಉಚಿತ ವಹಿವಾಟು ಮಿತಿಯನ್ನು ಮೀರಿದರೆ ಇಷ್ಟು ದಿನಗಳಂತೆ 20 ರೂಪಾಯಿ ಬದಲಿಗೆ ಪ್ರತಿ ವಹಿವಾಟಿಗೆ 21ರೂಪಾಯಿ ಅನ್ನು ಪಾವತಿಸಬೇಕಾಗುತ್ತದೆ. ಇದರೊಂದಿಗೆ ಒಂದು ಸಿಹಿ ಸುದ್ದಿಯಿದೆ ಬ್ಯಾಂಕ್ ಗ್ರಾಹಕರು ತಮ್ಮ ಸ್ವಂತ ಬ್ಯಾಂಕ್ ಎಟಿಎಂಗಳಿಂದ ಪ್ರತಿ ತಿಂಗಳು ಐದು ಉಚಿತ ವಹಿವಾಟುಗಳನ್ನು ಹೊಂದಿದ್ದಾರೆ ಅಲ್ಲದೆ ಅದು ಹಣಕಾಸು ಮತ್ತು ಹಣಕಾಸೇತರ ವಹಿವಾಟುಗಳನ್ನು ಒಳಗೊಂಡಿದೆ. ಈ ಮಿತಿಯನ್ನು ಮೀರಿದರೆ ಪ್ರತಿ ವಹಿವಾಟಿಗೆ 21ರೂಪಾಯಿಗಳನ್ನು ಪಾವತಿ ಮಾಡಬೇಕಾಗು‌ತ್ತದೆ.

ಇದಲ್ಲದೆ ಬ್ಯಾಂಕ್ ಗ್ರಾಹಕರು ಇತರ ಬ್ಯಾಂಕ್ ಎಟಿಎಂಗಳಿಂದ ಉಚಿತ ವಹಿವಾಟುಗಳಿಗೆ ಅರ್ಹರಾಗಿರುತ್ತಾರೆ ಅಂದರೆ ಮೆಟ್ರೊ ಕೇಂದ್ರಗಳಲ್ಲಿ ಮೂರು ವಹಿವಾಟುಗಳು ಮತ್ತು ಮೆಟ್ರೊ ಅಲ್ಲದ ಕೇಂದ್ರಗಳಲ್ಲಿ ಐದು ವಹಿವಾಟುಗಳನ್ನು ಉಚಿತವಾಗಿ ಮಾಡಬಹುದು. ಇದು ಕೂಡಾ ಹಣಕಾಸು ಮತ್ತು ಹಣಕಾಸೇತರ ವಹಿವಾಟುಗಳನ್ನು ಒಳಗೊಂಡಿದೆ. ಈ ಮಿತಿಯನ್ನು ಮೀರಿದರೆ ಪ್ರತಿ ವಹಿವಾಟಿಗೆ ಅಧಿಕ ಹಣ ಪಾವತಿ ಮಾಡಬೇಕಾಗುತ್ತದೆ.

ಜೂನ್ 2019 ರಲ್ಲಿ ಆರ್‌ಬಿಐ ಸ್ಥಾಪಿಸಿದ ಸಮಿತಿಯ ಸಲಹೆಗಳ ಆಧಾರದ ಮೇಲೆ ಈ ಬದಲಾವಣೆಯನ್ನು ಘೋಷಣೆ ಮಾಡಲಾಗಿದೆ. ಎಟಿಎಂ ಶುಲ್ಕಗಳು ಮತ್ತು ಶುಲ್ಕಗಳ ಸಂಪೂರ್ಣ ಶ್ರೇಣಿಯನ್ನು ಪರಿಶೀಲನೆ ಮಾಡುವ ನಿಟ್ಟಿನಲ್ಲಿ ಭಾರತೀಯ ಬ್ಯಾಂಕ್‌ಗಳ ಸಂಘದ ಮುಖ್ಯ ಕಾರ್ಯನಿರ್ವಾಹಕರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಎಟಿಎಂ ವಹಿವಾಟುಗಳಿಗಾಗಿ ಇಂಟರ್ಚೇಂಜ್ ರಚನೆಯ ಮೇಲೆ ನಿರ್ದಿಷ್ಟ ಗಮನವನ್ನು ಹೊಂದಿದೆ.

ಹೆಚ್ಚಿನ ಇಂಟರ್‌ಚೇಂಜ್ ಶುಲ್ಕವನ್ನು ಸರಿದೂಗಿಸಲು ಮತ್ತು ವೆಚ್ಚದಲ್ಲಿ ಸಾಮಾನ್ಯ ಹೆಚ್ಚಳವನ್ನು ನೀಡುವುದಕ್ಕಾಗಿ ಪ್ರತಿ ವಹಿವಾಟಿಗೆ ಗ್ರಾಹಕ ಶುಲ್ಕವನ್ನು 20 ರೂಪಾಯಿಯಿಂದ 21 ರೂಪಾಯಿಗೆ ಹೆಚ್ಚಳ ಮಾಡಲು ಬ್ಯಾಂಕ್ ಗಳಿಗೆ ಅನುಮತಿ ನೀಡಲಾಗಿದೆ. ಈ ಹೆಚ್ಚಳವು ಜನವರಿ 1 2022 ರಿಂದ ಜಾರಿಗೆ ಬರುತ್ತದೆ ಎಂದು ಆರ್‌ಬಿಐ ಸುತ್ತೋಲೆಯಲ್ಲಿ ತಿಳಿಸಿದೆ. ಬ್ಯಾಂಕ್ ನ ಈ ಬದಲಾವಣೆಯನ್ನು ನಾವೆಲ್ಲರೂ ತಪ್ಪದೆ ಪಾಲಿಸಬೇಕಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

Leave A Reply

Your email address will not be published.