ನಾವಿಂದು ನಿಮಗೆ ಒಂದು ಆಸಕ್ತಿದಾಯಕ ವಿಷಯದ ಕುರಿತಾಗಿ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಆ ಆಸಕ್ತಿದಾಯಕ ವಿಷಯ ಯಾವುದು ಎಂದರೆ ಯಾವ ರಾಶಿಯವರಿಗೆ ಯಾವ ಬಣ್ಣ ಅದೃಷ್ಟವನ್ನು ತಂದುಕೊಡುತ್ತದೆ ಎಂಬುದರ ಕುರಿತಾಗಿ. ಯಾವ ರಾಶಿಯವರಿಗೆ ಯಾವ ಬಣ್ಣ ತುಂಬಾ ಚೆನ್ನಾಗಿ ಆಗಿ ಬರುತ್ತದೆ ಮತ್ತು ಬಣ್ಣವನ್ನು ಧರಿಸುವುದರಿಂದ ಅವರಿಗೆ ಆ ದಿನ ಹೇಗೆ ಸುಂದರವಾಗಿರುತ್ತದೆ ಈ ಕುರಿತಾದ ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ. ಮೊದಲನೆಯದಾಗಿ ಮೇಷ ರಾಶಿ ಈ ರಾಶಿಯವರು ಯಾವುದೇ ಕೆಲಸವನ್ನು ಉತ್ಕಟವಾದ ಪ್ರೀತಿಯಿಂದ ಮಾಡುತ್ತಾರೆ ತುಂಬಾ ಖುಷಿ ಮತ್ತು ಉತ್ಸಾಹದಿಂದ ಕಾಣಿಸಿಕೊಳ್ಳುತ್ತಾರೆ ಕೆಂಪು ಬಣ್ಣ ಹೇಗೆ ಕಾಣಿಸಿಕೊಳ್ಳುತ್ತದೆಯೋ ಹಾಗೆ. ಮೇಷ ರಾಶಿಯವರಿಗೆ ಕೆಂಪು ಬಣ್ಣ ಇನ್ನಷ್ಟು ಬಲ ಹಾಗೂ ಉತ್ಕಟ ಪ್ರೀತಿಯನ್ನು ತಂದುಕೊಡುತ್ತದೆ.
ಮುಂದಿನದಾಗಿ ವೃಷಭ ರಾಶಿ ಈ ರಾಶಿಯವರು ಭೂಮಿತತ್ವದವರು ಆದ್ದರಿಂದ ಇದರ ಅದೃಷ್ಟದ ಬಣ್ಣ ಹಸಿರು. ತುಂಬಾ ಶ್ರಮಜೀವಿಗಳು ಹಾಗೂ ಸದಾ ಉತ್ಸಾಹದಿಂದ ಪುಟಿಯುವ ಸಣ್ಣ ವಯಸ್ಸಿನ ವರ ಹುಮ್ಮಸ್ಸು ಇವರದಾಗಿರುತ್ತದೆ. ಮುಂಡಿನದಾಗಿ ಮಿಥುನ ರಾಶಿ ಕಿತ್ತಳೆ ಬಣ್ಣವು ಸ್ವಾತಂತ್ರ್ಯ ವೈವಿಧ್ಯತೆ ಹಾಗೂ ಸ್ಪೂರ್ತಿಯ ದ್ಯೋತಕವಾಗಿದೆ ಮಿಥುನ ರಾಶಿಯವರು ಈ ಎಲ್ಲಾ ಗುಣಗಳನ್ನು ಹೊಂದಿರುತ್ತಾರೆ ಇನ್ನೊಬ್ಬರ ಜೊತೆಗೆ ತುಂಬಾ ಆರಾಮವಾಗಿ ಮಾತನಾಡುತ್ತಾರೆ
ಸಮಾಜಮುಖಿಯಾದ ವ್ಯಕ್ತಿತ್ವ ಇವರದ್ದು ಕಿತ್ತಳೆ ಬಣ್ಣವನ್ನು ಧರಿಸುವುದರಿಂದ ಮಿಥುನ ರಾಶಿಯವರು ಇನ್ನಷ್ಟು ಉತ್ಸಾಹದಿಂದ ಕಾಣಿಸಿಕೊಳ್ಳುತ್ತಾರೆ. ಕರ್ಕಾಟಕ ರಾಶಿ ಈ ರಾಶಿಯವರು ತುಂಬಾ ಸೂಕ್ಷ್ಮ ಸೌಹಾರ್ದದ ಸ್ವಭಾವದವರು ಕರ್ಕಾಟಕ ರಾಶಿಯ ವ್ಯಕ್ತಿಗಳು ತುಂಬಾ ಆಳವಾದ ಚಿಂತಕರು ಹಾಗೂ ಅದ್ಭುತವಾದ ಶಕ್ತಿ ಇರುವವರು ನೇರಳೆ ಬಣ್ಣ ಇವರ ಪಾಲಿಗೆ ಅದೃಷ್ಟವನ್ನು ತಂದುಕೊಡುತ್ತದೆ. ಈ ಬಣ್ಣವನ್ನು ಧರಿಸುವುದರಿಂದ ಇವರ ಬುದ್ಧಿಶಕ್ತಿ ಹಾಗೂ ಸಾಮರ್ಥ್ಯ ಇನ್ನೂ ಹೆಚ್ಚುತ್ತದೆ.
ಮುಂದಿನದಾಗಿ ಸಿಂಹರಾಶಿ ಇವರು ಶಕ್ತಿಶಾಲಿ ಧೈರ್ಯಶಾಲಿ ಹಾಗೂ ಉಗ್ರ ಸ್ವಭಾವದವರು. ಸಂತೋಷ ಬರವಸೆ ಹಾಗು ತೀರ್ಮಾನಗಳನ್ನು ಈ ಬಣ್ಣ ಪ್ರತಿನಿಧಿಸುತ್ತದೆ ಅದು ಅರಿಶಿಣ ಬಣ್ಣ ಇದೇ ವೇಳೆ ಅದು ಸ್ಪಷ್ಟತೆ ಹಾಗೂ ಶಕ್ತಿಯನ್ನು ಸೂಚಿಸುತ್ತದೆ. ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ ಈ ಬಣ್ಣ ಸಹಾಯಮಾಡುತ್ತದೆ ಹಾಗಾಗಿ ಸಿಂಹ ರಾಶಿಯವರಿಗೆ ಅರಿಶಿಣ ಬಣ್ಣ ಅದೃಷ್ಟವನ್ನು ತಂದುಕೊಡುತ್ತದೆ. ಮುಂದಿನದಾಗಿ ಕನ್ಯಾರಾಶಿ ಕನ್ಯಾ ರಾಶಿಯವರ ಅದೃಷ್ಟದ ಬಣ್ಣ ನೀಲಿ ಇದು ಅವಕಾಶ ಹಾಗೂ ಸಮುದ್ರ ಎರಡನ್ನೂ ಪ್ರತಿನಿಧಿಸುತ್ತದೆ.
ಇವರು ಸ್ವಚ್ಛಂದ ಹಕ್ಕಿಯಂತೆ ಮತ್ತು ಅವರು ಎಲ್ಲದರಲ್ಲಿಯೂ ಸರಿಯಾಗಿ ಇರುವಂಥವರು ನೀಲಿ ಬಣ್ಣ ಆ ಗುಣವನ್ನು ಪ್ರತಿನಿಧಿಸುತ್ತದೆ ಪ್ರಾಮಾಣಿಕ ಹಾಗೂ ವಿಶ್ವಾಸಾರ್ಹ ಹಾಗೂ ನಂಬಿಕಸ್ತರು ಈ ಬಣ್ಣಕ್ಕೆ ಯಾವಾಗಲೂ ಪ್ರಾಮುಖ್ಯವನ್ನು ಕೊಡುತ್ತಾರೆ. ಮುಂದಿನದಾಗಿ ತುಲಾ ರಾಶಿ ಎಲ್ಲದಕ್ಕೂ ಹೆಚ್ಚಾಗಿ ನ್ಯಾಯ ಬದ್ಧತೆಯನ್ನು ನಿರೀಕ್ಷಿಸುವವರು ಇವರು ಸಂಧಾನ ಮಾಡುವ ವಿಷಯದಲ್ಲಿ ಇವರು ನಿಪುಣರು ಇವರಿಗೆ ಪಚ್ಚಹಸಿರು ಬಣ್ಣ ಚೆನ್ನಾಗಿ ಆಗಿ ಬರುತ್ತದೆ. ಪ್ರಕೃತಿ ಶಕ್ತಿ ಅಭಿವೃದ್ಧಿ ಸುರಕ್ಷತೆ ಬಲವಂತ ಕೆಯನ್ನು ಇದು ಪ್ರತಿನಿಧಿಸುತ್ತದೆ.
ಮುಂದಿನದಾಗಿ ವೃಶ್ಚಿಕ ರಾಶಿ ಪ್ರೀತಿ ಸಾಮರ್ಥ್ಯ ಜಾದು ಇವೆಲ್ಲವನ್ನು ಪ್ರತಿನಿಧಿಸುವ ಬಣ್ಣ ಕೆಂಪು ಮತ್ತು ನೇರಳೆ ಈ ಎರಡು ಬಣ್ಣಗಳ ಗುಣವನ್ನು ವೃಶ್ಚಿಕ ರಾಶಿಯವರು ಹೊಂದಿರುತ್ತಾರೆ ಹಾಗಾಗಿ ಕೆಂಪು ಹಾಗೂ ನೇರಳೆ ಬಣ್ಣ ವೃಶ್ಚಿಕರಾಶಿಯವರಿಗೆ ಅದೃಷ್ಟವನ್ನು ತಂದುಕೊಡುವ ಬಣ್ಣವಾಗಿದೆ. ಮುಂದಿನ ದಾಗಿ ಧನುರ್ ರಾಶಿ ಶಕ್ತಿ ಹಾಗೂ ಆಸಕ್ತಿ ಎರಡರ ತಾಳ ಮೇಳವನ್ನು ಸೂಚಿಸುವ ವಿದ್ಯುತ್ ಸಂಚಾರದಂತಹ ಗುಣ ಧನುರ್ ರಾಶಿಯವರದ್ದು ಇವರಿಗೆ ಆತ್ಮವಿಶ್ವಾಸ ಕೂಡ ಹೆಚ್ಚಿರುತ್ತದೆ
ಯಾವುದೇ ವಿಚಾರ ಸರಿ ಅನಿಸಿದರೆ ಅದನ್ನು ಹೇಳುವುದಕ್ಕೆ ಹಿಂಜರಿಯುವ ಜಾಯಮಾನದವರಲ್ಲ ತಿಳಿನೀಲಿ ಇವರಿಗೆ ಅದೃಷ್ಟದ ಬಣ್ಣ. ಮಕರ ರಾಶಿ ಅಪರೂಪದ ಹಾಗೂ ಆಳದ ಚಿಂತನೆ ಮಾಡುವ ಮಕರ ರಾಶಿಯವರು ಇಂಡಿಗೋ ಬಣ್ಣವನ್ನು ಪ್ರತಿನಿಧಿಸುತ್ತಾರೆ ಇವರು ಸ್ವಂತ ನಿರ್ಣಯ ತೆಗೆದುಕೊಳ್ಳುವುದರಲ್ಲಿ ಎತ್ತಿದ ಕೈ ಇಂಡಿಗೋ ಬಣ್ಣ ಆಧ್ಯಾತ್ಮ ಹಾಗೂ ಬುದ್ಧಿವಂತಿಕೆಯನ್ನು ಕೂಡ ಸೂಚಿಸುತ್ತದೆ ಈ ಎರಡಕ್ಕೂ ಮಕರ ರಾಶಿಯವರು ಅಭಿಮಾನಿಗಳು.
ಮುಂದಿನದಾಗಿ ಕುಂಭ ರಾಶಿ ತುಂಬಾ ಸೂಕ್ಷ್ಮ ಸ್ವಭಾವ ಹಾಗೂ ಸಾಮರ್ಥ್ಯ ಎರಡನ್ನೂ ಏಕಕಾಲಕ್ಕೆ ತೋರಿಸಬಲ್ಲಂತವರು ಕುಂಭರಾಶಿಯವರು. ನೀಲಿ ಬಣ್ಣ ಪ್ರತಿನಿಧಿಸುವ ಗುಣಗಳಾದಂತಹ ನಂಬಿಕೆ ವಿಶ್ವಾಸ ಸ್ವಚ್ಛತೆ ಮತ್ತು ಅರ್ಥಮಾಡಿಕೊಳ್ಳುವಂತಹ ಗುಣ ಇವರದ್ದು. ಕೊನೆಯದಾಗಿ ಮೀನರಾಶಿ ಇವರಿಗೆ ತಮ್ಮದೇ ಪ್ರಪಂಚ ಬೇರೆ ಯಾವುದಕ್ಕೂ ಅಂಟಿಕೊಳ್ಳುವವರಲ್ಲ ಇವರಿಗೆ ಆಧ್ಯಾತ್ಮಿಕ ಚಿಂತನೆ ಹೆಚ್ಚು. ಅಂತರ್ಮುಖಿಗಳಾಗಿ ತಮ್ಮದೇ ಲೋಕದಲ್ಲಿ ವಿಹರಿಸುತ್ತಿರುತ್ತಾರೆ ಸಮತೋಲನ ಹಾಗೂ ಸಮೃದ್ಧಿಯನ್ನು ಸೂಚಿಸುವ ಸಮುದ್ರ ಹಸಿರುಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ.
ಈ ರೀತಿಯಾಗಿ ಯಾವ ರಾಶಿಯವರಿಗೆ ಯಾವ ಬಣ್ಣ ಒಪ್ಪುತ್ತದೆ ಎಂದು ತಿಳಿಸಲಾಗಿದೆ. ನೀವು ಕೂಡ ನಿಮ್ಮ ರಾಶಿಗೆ ಒಪ್ಪುವ ಬಣ್ಣವನ್ನು ಧರಿಸುವುದರಿಂದ ಅದೃಷ್ಟ ನಿಮ್ಮನ್ನು ಹಿಂಬಾಲಿಸಿಕೊಂಡು ಬರುತ್ತದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿರಿ.