ಪ್ರತಿಯೊಂದು ರಾಶಿಯವರು ಅವರದೇ ಆದ ಒಂದು ವಿಶಿಷ್ಟ ಗುಣವನ್ನು ಹೊಂದಿರುತ್ತಾರೆ ಆ ವಿಶಿಷ್ಟ ಗುಣದಿಂದಲೇ ಅವರು ಗುರುತಿಸಲ್ಪಡುತ್ತಾರೆ. ಒಂದು ವಿಷಯದ ಕುರಿತು ವಾದ ಮಾಡುವುದು ಕೂಡ ಒಂದು ವಿಶೇಷ ಗುಣ ನಾವಿಂದು ನಿಮಗೆ ಕೆಲವು ರಾಶಿಯವರನ್ನು ತಿಳಿಸಿಕೊಡುತ್ತೇವೆ ಆ ರಾಶಿಯವರು ಹೆಚ್ಚು ವಾದವನ್ನು ಮಾಡಿ ತಮ್ಮ ವಾದವೇ ಸರಿ ಎಂದು ನಿರೂಪಿಸಿ ಗೆದ್ದೇ ಗೆಲ್ಲುತ್ತಾರೆ ಅಂತೆ ಕೆಲವರು ವಾಗ್ವಾದದಲ್ಲಿ ಹೆಚ್ಚಿನ ನಂಬಿಕೆಯನ್ನು ಇಡುವುದಿಲ್ಲ ಏಕೆಂದರೆ ನಮ್ಮಲ್ಲಿ ಬಹುತೇಕರು ವಾದ-ವಿವಾದಗಳಿಂದ ದೂರ ಉಳಿಯುವುದಕ್ಕೆ ಪ್ರಯತ್ನಿಸುತ್ತಾರೆ. ಇನ್ನೊಂದೆಡೆ ಕೆಲವರು ವಾಗ್ವಾದದ ಯಾವುದೇ ಅವಕಾಶವನ್ನು ಬಿಡುವುದಕ್ಕೆ ಸಿದ್ಧವಾಗಿರುವುದಿಲ್ಲ ಅವರು ಯಾರೊಂದಿಗೆ ವಾಗ್ವಾದ ಮಾಡಿದರು ಕೂಡ ತಮ್ಮ ವಾದ ಹೇಗೆ ಸರಿಯಾಗಿದೆ ಎಂಬುದನ್ನು ಎದುರಿನ ವ್ಯಕ್ತಿಗೆ ಮನವರಿಕೆ ಮಾಡಿ ಬಿಡುತ್ತಾರೆ.
ಹಾಗಾದರೆ ಯಾವ ಯಾವ ರಾಶಿಯವರು ವಾದಮಾಡಿ ತಮ್ಮ ವಾದವೇ ಸರಿ ಎಂದು ಗೆದ್ದೇ ಗೆಲ್ಲುತ್ತಾರೆ ಎಂಬುದನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಮೊದಲಿಗೆ ಮೇಷ ರಾಶಿ ಈ ರಾಶಿಯ ಜನರು ಯಾವಾಗಲೂ ಎಲ್ಲಾ ಸಂಗತಿಗಳಲ್ಲಿ ಮುಂದೆ ಇರುತ್ತಾರೆ ತಾವೇ ಉತ್ತಮ ಎಂಬುದು ಇವರ ನಂಬಿಕೆ ತಮ್ಮ ವಾದ ಸರಿ ಎಂಬುದನ್ನು ನಿರೂಪಿಸುವುದಕ್ಕೆ ಇವರು ತಾರ್ಕಿಕವಾದಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ.
ಎರಡನೆಯದಾಗಿ ಮಿಥುನ ರಾಶಿ ಮಿಥುನ ರಾಶಿಯವರು ತುಂಬಾ ಬೇಗನೆ ಬೇರೆಯವರೊಂದಿಗೆ ಬೆರೆತು ಹೋಗುತ್ತಾರೆ ಮತ್ತು ಯಾವಾಗಲೂ ಹೊಸ ಸಂಗತಿಗಳನ್ನು ತಿಳಿದುಕೊಳ್ಳುವಲ್ಲಿ ವಿಶ್ವಾಸವನ್ನಿಡುತ್ತಾರೆ. ಆ ಕಾರಣದಿಂದ ಅವರು ಪ್ರತಿಯೊಂದು ವಿಷಯದಲ್ಲೂ ಮುಂದೆ ಇರುತ್ತಾರೆ ಹಾಗೂ ಇವರಿಗೆ ಬಹುತೇಕ ಸಂಗತಿಗಳ ಮಾಹಿತಿ ಇರುತ್ತದೆ ಎಂದು ಬಹುತೇಕರು ನಂಬುತ್ತಾರೆ.
ಅವರು ತಮ್ಮ ವಾದ ಸರಿಯಾಗಿದೆ ಎಂಬುದನ್ನು ನಿರೂಪಿಸುವುದಕ್ಕೆ ಇವರು ಎಲ್ಲಾ ರೀತಿಯಿಂದಲೂ ಪ್ರಯತ್ನಿಸುತ್ತಾರೆ. ಅದು ತಾರ್ಕಿಕ ಚರ್ಚೆ ಇರಲಿ ಅಥವಾ ಬೇರೆ ಯಾವುದೇ ಚರ್ಚೆ ಇರಲಿ ಇತರರನ್ನು ಪ್ರಭಾವಿತ ಗೊಳಿಸುವುದಕ್ಕೆ ಇವರು ಹಿಂದೆ ಬೀಳುವುದಿಲ್ಲ. ಮುಂದಿನದಾಗಿ ವೃಶ್ಚಿಕ ರಾಶಿ ಈ ರಾಶಿಯ ಜನರು ತಮ್ಮ ಪ್ರತಿಸ್ಪರ್ಧಿಯ ವಿರುದ್ಧ ಹೇಗೆ ಹೋರಾಟ ನಡೆಸಬೇಕು ಗೆಲ್ಲಬೇಕು ಎಂಬುದರ ಬಗ್ಗೆ ಚೆನ್ನಾಗಿ ಅರಿತಿರುತ್ತಾರೆ ಪ್ರತಿಯೊಂದು ಮಾತಿಗೆ ಇವರು ತಕ್ಕ ಉತ್ತರವನ್ನು ನೀಡುತ್ತಾರೆ ಮತ್ತು ಎದುರಿನ ವ್ಯಕ್ತಿಗೆ ತಮ್ಮ ಅನಿಸಿಕೆಯನ್ನು ಮನವರಿಕೆ ಮಾಡಿಯೇ ತೀರುತ್ತಾರೆ. ಮುಂದಿನದಾಗಿ ಕುಂಭ ರಾಶಿ ಈ ರಾಶಿಯ ಜನರು ತಮ್ಮ ಎದುರಿನ ವ್ಯಕ್ತಿ ಮಾಡುತ್ತಿರುವ ವಾದವನ್ನು ಮೊದಲಿಗೆ ಗಮನವಿಟ್ಟು ಆಲಿಸುತ್ತಾರೆ ಈ ಅವಧಿಯಲ್ಲಿ ತಾವು ಮಾಡಬೇಕಾದ ವಾದಕ್ಕಾಗಿ ಸಾಕಷ್ಟು ವಿಷಯಗಳ ಸಂಗ್ರಹ ಮಾಡುತ್ತಾರೆ.
ಈ ವ್ಯಕ್ತಿಗಳು ಮೊದಲಿಗೆ ತೀರಾ ಸಾಮಾನ್ಯವಾಗಿ ತಮ್ಮ ವಾದವನ್ನು ಪ್ರಸ್ತುತ ಮಾಡುತ್ತಾರೆ ಒಂದು ವೇಳೆ ಇವರು ಪ್ರಸ್ತುತ ಪಡಿಸಿದ ವಾದವನ್ನು ಇತರರು ಒಪ್ಪದೇ ಹೋದಲ್ಲಿ ಇವರು ವಾದಕ್ಕೆ ಇಳಿಯುತ್ತಾರೆ. ಇವರು ಕೂಡ ತಮ್ಮ ಎದುರಿಗೆ ಇರುವಂತಹ ವ್ಯಕ್ತಿಗೆ ತಾವು ಮಾಡುತ್ತಿರುವ ವಾದ ಸರಿಯಾಗಿದೆ ಎಂಬುದನ್ನು ಮನವರಿಕೆ ಮಾಡಿಕೊಡುವುದರಲ್ಲಿ ಬಹಳ ನಿಪುಣರಾಗಿರುತ್ತಾರೆ.
ಈ ರೀತಿಯಾಗಿ ನಾವು ಮೇಲೆ ತಿಳಿಸಿರುವ ರಾಶಿಯ ವ್ಯಕ್ತಿಗಳು ವಾದದಲ್ಲಿ ಯಾವಾಗಲೂ ಮುಂದೆ ಇರುತ್ತಾರೆ ವಾದ ಮಾಡುವುದಕ್ಕೆ ಅವಕಾಶ ಸಿಕ್ಕಿದರೆ ಅದನ್ನು ಸದುಪಯೋಗಪಡಿಸಿಕೊಳ್ಳುತ್ತಾರೆ. ಎದುರಾಳಿಗಳನ್ನು ತಮ್ಮ ವಾದ ಮಂಡನೇಯ ಮೂಲಕ ಕಟ್ಟಿ ಹಾಕುತ್ತಾರೆ. ಇದಿಷ್ಟು ಯಾವ ರಾಶಿಯವರು ವಾದಮಾಡಿ ಗೆದ್ದೇ ಗೆಲ್ಲುತ್ತಾರೆ ಎಂಬುದರ ಕುರಿತಾದ ಮಾಹಿತಿಯಾಗಿದೆ ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿರಿ.