ಶನಿದೇವ ಎಂದಾಗ ಎಲ್ಲರಿಗೂ ಕೂಡ ಸ್ವಲ್ಪಮಟ್ಟಿಗೆ ಅಳುಕು ಉಂಟಾಗುವುದು ಗ್ಯಾರಂಟಿ ಆದರೆ ಎಲ್ಲಾ ಹೊತ್ತು ಶನಿದೇವ ವಕ್ರದೃಷ್ಟಿಯನ್ನು ಬೀರುತ್ತಾನೆ ಅಥವಾ ಕಷ್ಟ ಪಡುವಂತೆ ಮಾಡುತ್ತಾನೆ ಎಂದು ಹೇಳಲು ಸಾಧ್ಯವಿಲ್ಲ ಯಾಕೆಂದರೆ ಕೆಟ್ಟ ಕೆಲಸ ಮಾಡಿದವರಿಗೆ ಮಾತ್ರ ಕೆಟ್ಟ ಪರಿಣಾಮ ಹಾಗೂ ಒಳ್ಳೆಯ ಕೆಲಸ ಮಾಡಿದವರಿಗೆ ಒಳ್ಳೆಯ ಪರಿಣಾಮ ನೀಡುವುದು ಆತನ ಕರ್ತವ್ಯವಾಗಿದೆ ಹೀಗಾಗಿ ಶನಿ ಗೆ ಅತ್ಯಂತ ನೆಚ್ಚಿನ 5 ರಾಶಿಗಳ ಕುರಿತಂತೆ ಇಂದಿನ ಲೇಖನಿಯಲ್ಲಿ ಹೇಳಲು ಹೊರಟಿದ್ದೇವೆ.
ವೃಷಭ ರಾಶಿ; ವೃಷಭ ರಾಶಿಯವರ ಮೇಲೆ ಶನಿ ಅತ್ಯಂತ ಕರುಣಾಮಯಾಗಿ ಸಹೃದಯಿ ಆಗಿರುತ್ತಾನೆ. ವೃಷಭ ರಾಶಿಯವರ ಜಾತಕದಲ್ಲಿದ್ದರೂ ಅಥವಾ ಸಂಚಾರದಲ್ಲಿದ್ದರೂ ಕೂಡ ಶನಿ ಹೆಚ್ಚಿನ ಮಟ್ಟದ ಬಾಧೆಯನ್ನು ವೃಷಭ ರಾಶಿಯವರಿಗೆ ಯಾವತ್ತೂ ಕೂಡ ನೀಡುವುದಿಲ್ಲ. ತುಲಾ ರಾಶಿ; ತುಲಾ ರಾಶಿ ಕೂಡ ಶನಿ ದೇವರಿಗೆ ಅತ್ಯಂತ ಪ್ರಿಯವಾಗಿರುವ ರಾಶಿಯಾಗಿದೆ. ತುಲಾ ರಾಶಿಯ ಜನರ ಕೆಲಸದಲ್ಲಿ ಪ್ರಗತಿ ಸಾಧಿಸುವಂತಹ ಆಶೀರ್ವಾದವನ್ನು ಕೂಡ ನೀಡುವುದು ಮಾತ್ರವಲ್ಲದೆ ಒಂದು ವೇಳೆ ತುಲಾ ರಾಶಿಯವರ ವಿರುದ್ಧವಾಗಿರುವಂತಹ ಸ್ಥಳದಲ್ಲಿ ಇದ್ದರೂ ಕೂಡ ಶನಿದೇವ ಹೆಚ್ಚಿನ ಮಟ್ಟದ ಹಾನಿಯನ್ನು ಉಂಟುಮಾಡುವುದಿಲ್ಲ.
ಕುಂಭ ರಾಶಿ; ಕುಂಭ ಎನ್ನುವುದು ಶನಿದೇವನ ರಾಶಿ ಚಕ್ರದ ಚಿನ್ಹೆ. ಅಂದರೆ ಕುಂಭ ರಾಶಿಯ ಅಧಿಪತಿ ಶನಿದೇವ. ಕುಂಭ ರಾಶಿಯವರಿಗೆ ಶನಿದೇವನ ವಕ್ರದೃಷ್ಟಿಯ ಪ್ರಭಾವವು ಕೂಡ ಅತ್ಯಂತ ಕಡಿಮೆ ಸಮಯದವರೆಗೆ ಇರುತ್ತದೆ. ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲು ಕೂಡ ಅವಕಾಶ ನೀಡುತ್ತಾನೆ. ಧನು ರಾಶಿ; ಧನು ರಾಶಿಯವರಿಗೂ ಕೂಡ ಶನಿ ಹೆಚ್ಚಿನ ತೊಂದರೆಯನ್ನು ನೀಡಲು ಹೋಗುವುದಿಲ್ಲ. ಗುರುವಿನ ರಾಶಿಯಾಗಿರುವ ಧನು ರಾಶಿಯವರಿಗೆ ಗುರುವಿನ ಜೊತೆಗೆ ಚೆನ್ನಾಗಿ ಸಂಬಂಧವನ್ನು ಹೊಂದಿರುವ ಶನಿ ಹೆಚ್ಚಿನ ತಾಪತ್ರೆಯ ನೀಡುವುದಿಲ್ಲ ಹಾಗೂ ಸಮಾಜದಲ್ಲಿ ಗೌರವ ಹಾಗೂ ಸಂಪತ್ತನ್ನು ಸಂಪಾದಿಸುವ ಹೇರಳ ಅವಕಾಶವನ್ನು ಕೂಡ ನೀಡುತ್ತಾನೆ.
ಮಕರ ರಾಶಿ; ಮಕರ ರಾಶಿಯ ಅಧಿಪತಿ ಶನಿ ಆಗಿರುವ ಕಾರಣದಿಂದಾಗಿ ಮಕರ ರಾಶಿಯು ಕೂಡ ಶನಿಯ ನೆಚ್ಚಿನ ರಾಶಿಗಳಲ್ಲಿ ಒಂದಾಗಿದೆ. ಸಾಡೇಸಾತಿ ಹಾಗೂ ದೈಯ್ಯ ಸಂದರ್ಭದಲ್ಲಿ ಕೂಡ ಶನಿಯಿಂದ ಹೆಚ್ಚಿನ ಪ್ರಕೋಪಕ್ಕೆ ಒಳಗಾಗುವ ಅವಕಾಶಗಳಿಲ್ಲ ಎಂಬುದು ಕೂಡ ಮತ್ತೊಂದು ಗಮನಿಸಬೇಕಾಗಿರುವ ವಿಚಾರ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡೋ ಮೂಲಕ ಹಂಚಿಕೊಳ್ಳಿ.