ಆಸ್ತಿಯನ್ನು ತನ್ನ ಸಾವಿನ ಬಳಿಕ ಮಕ್ಕಳಿಗೆ ವರ್ಗಾಯಿಸುವುದು ಭಾರತದಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ. ಆದರೆ ಕೆಲವೊಮ್ಮೆ ಮೋಸ ಹೋಗುವ ಸಂದರ್ಭಗಳಿರುತ್ತವೆ. ಹೀಗಾಗಿ ನಮ್ಮ ಜೀವಿತಾವಧಿಯಲ್ಲಿ ಅಥವಾ ಸಾವಿನ ಬಳಿಕ ಮಕ್ಕಳಿಗೆ ಆಸ್ತಿ ವರ್ಗಾವಣೆಯಾಗುವುದನ್ನು ಖಾತರಿ ಪಡಿಸಿಕೊಳ್ಳುವುದು ಉತ್ತಮ. ಆಸ್ತಿಯ ಉತ್ತರಾಧಿಕಾರದ ಕುರಿತ ಕಾನೂನು ಇದಕ್ಕೆ ಉತ್ತರ ನೀಡುತ್ತದೆ. ಆದ್ದರಿಂದ ನಾವು ಇಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಮುಖ್ಯವಾಗಿ ಪಹಣಿಯು ಆ ವ್ಯಕ್ತಿ ಹೆಸರಿಗೆ ಬಂದ ಮೇಲೆ ಪಹಣಿಯಲ್ಲಿ ತಾಲೂಕಿನ ಹೆಸರು, ಹೋಬಳಿಯ ಹೆಸರು, ಗ್ರಾಮದ ಹೆಸರು, ಸರ್ವೇ ನಂಬರ್, ಜಮೀನಿನ ವಿಸ್ತೀರ್ಣ ಮತ್ತು ಅದರಲ್ಲಿರುವ ಕರಾವು ಎಷ್ಟು ಎಂಬ ವಿವರಣೆಗಳಿರುತ್ತವೆ. ನಂತರ ಅವೆರಡೂ ಕಳೆದು ಜಾತಾ ವಿಸ್ತೀರ್ಣ ಕೂಡ ಇರುತ್ತದೆ. ನಂತರ ಈ ಸರ್ವೆ ನಂಬರಿಗೆ ಸಂಬಂಧಪಟ್ಟಂತೆ ಭೂಕಂದಾಯ ರಕಂ ಕೂಡ ಇರುತ್ತದೆ.
ಕಲಂ ನಂಬರ್ 9 ರಲ್ಲಿ ಹಕ್ಕುದಾರರ ಹೆಸರು ಇರುತ್ತದೆ. ಆ ಜಮೀನಿನ ಮೇಲೆ ಲೋನ್ ಗಳಿದ್ದರೆ ಅದು ಕೂಡ ಎಂಟ್ರಿ ಇರುತ್ತದೆ. ಆ ಸರ್ವೇ ನಂಬರಲ್ಲಿ ಬೆಳೆಯುವ ಬೆಳೆಗಳ ಎಂಟ್ರಿ ಕೂಡ ಇರುತ್ತದೆ. ಎಲ್ಲಾ ಸಂಪೂರ್ಣ ಮಾಹಿತಿಗಳು ಪತ್ರಿಕೆಯೊಳಗೆ ದೊರಕುತ್ತದೆ.
ಒಬ್ಬ ವ್ಯಕ್ತಿಯ ಹೆಸರಿಗೆ ಪಹಣಿ ಪತ್ರಿಕೆಯು ಆದಮೇಲೆ ಆತನು ಹಕ್ಕು ವರ್ಗಾವಣೆಗಳನ್ನು ಯಾವ ರೀತಿ ಮಾಡಬಹುದು ಹಾಗೂ ಕಂದಾಯ ಅಧಿಕಾರಿಗಳಿಗೆ ಇರುವಂತಹ ಪ್ರಕ್ರಿಯೆಗಳು ಏನು ಎಂದು ತಿಳಿದುಕೊಳ್ಳಬೇಕಾಗುತ್ತದೆ. ಆಸ್ತಿ ವರ್ಗಾವಣೆಯನ್ನು ಕ್ರಯಪತ್ರದ ಮೂಲಕ ಮಾಡಬಹುದು. ಸ್ವಇಚ್ಛೆಯಿಂದ ವಿಲ್ ನ್ನು ಕೂಡ ಮಾಡಬಹುದು. ಜೊತೆಗೆ ಲೀಸ್ ನ ಮೂಲಕವೂ ಕೂಡ ಹಕ್ಕು ವರ್ಗಾವಣೆ ಮಾಡಿಕೊಳ್ಳಲು ಅವಕಾಶವಿದೆ. ಕುಟುಂಬ ಸದಸ್ಯರಿಗೆ ಗಿಫ್ಟ್ ಡೀಡ್ ಮೂಲಕ ಆಸ್ತಿ ವರ್ಗಾವಣೆ ಮಾಡಬಹುದು.
ಹಕ್ಕು ವರ್ಗಾವಣೆಗೆ ಮೊದಲು ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಕ್ರಯ ಪತ್ರವನ್ನು ಮಾಡಿಸಿದಾಗ ಜೀ ಸ್ಲಿಪ್ ನ ಜೊತೆಗೆ ಆಸ್ತಿ ಪತ್ರಗಳ ದಾಖಲೆಯೂ ತಾಲೂಕ ಕಛೇರಿಗೆ ಹೋಗುತ್ತದೆ. ಅಲ್ಲಿ ರೆವೆನ್ಯೂ ಆಫೀಸರ್ ಆ ದಾಖಲೆಗಳನ್ನು 30 ದಿನಗಳವರೆಗೆ ನೋಟಿಸ್ ಬೋರ್ಡ್ ನಲ್ಲಿ ಹಾಕಿ ಅದಕ್ಕೆ ಯಾವುದೇ ತಕರಾರುಗಳು ಬರದೇ ಇದ್ದಲ್ಲಿ ಅದನ್ನು ಮುಂದಿನ ಹಂತಕ್ಕೆ ಒಯುತ್ತಾರೆ. ಜೊತೆಗೆ ಅದನ್ನು ಅವರ ಹೆಸರಿಗೆ ವರ್ಗಾಯಿಸಲು ಬರುತ್ತದೆ. ಆಸ್ತಿಯನ್ನು ಖರೀದಿಸುವಾಗ ಮೂಲ ಸರ್ವೆ ದಾಖಲೆಗಳಿಂದ ಹಿಡಿದು ಪ್ರತಿಯೊಂದು ಕ್ರಯಪತ್ರಗಳನ್ನು ಜಾಗರೂಕತೆಯಿಂದ ಪರಿಶೀಲಿಸಿಕೊಂಡಾಗ ಮಾತ್ರ ಮೋಸಗಳಿಂದ ತಪ್ಪಿಸಿಕೊಂಡು ಸರಿಯಾಗಿ ಆಸ್ತಿ ಪತ್ರಗಳನ್ನು ಹಸ್ತಾಂತರಿಸಿಕೊಳ್ಳಲಾಗುತ್ತದೆ.