ಈ ಜಗತ್ತಿನಲ್ಲಿ ಸಸ್ಯಗಳಿಗೆ ತನ್ನದೇ ಆದ ವಿಶಿಷ್ಟ ಸ್ಥಾನವಿದೇ. ಕೆಲವೊಂದಿಷ್ಟು ಸಸ್ಯಗಳನ್ನು ನಮ್ಮ ಭಾರತೀಯ ಹಿಂದೂ ಸಂಸ್ಕೃತಿಯಲ್ಲಿ ದೈವಕ್ಕೇ ಹೋಲಿಸಿದ್ದಾರೆ. ಇಂತಹ ದೈವತ್ವ ಹೊಂದಿದ ಒಂದು ವಶಿಷ್ಟವಾದ ಸಸ್ಯದ ಬಗ್ಗೆ ಇಂದು ತಿಳಿದುಕೊಳ್ಳೋಣ.
ಆದರೆ ಯಾವುದು ಈ ಸಸ್ಯ ಅನ್ನೋ ಒಂದು ಪ್ರಶ್ನೆ ಕಾಡಬಹುದು. ಸಾಮಾನ್ಯವಾಗಿ ಈ ಸಸ್ಯವನ್ನು ನಾವೆಲ್ಲರೂ ನೋಡಿರುತ್ತೇವೆ ಹಾಗೂ ಎಲ್ಲರ ಮನೆಯಲ್ಲೂ ಕೂಡ ಇರುವಂತಹ ಸಸ್ಯವೇ.ಅದು ಬೇರೆ ಯಾವುದೂ ಅಲ್ಲ ಲೋಳೆಸರ ಅಥವಾ ಅಲೋವೆರ.. ಈ ಸಸ್ಯ ಯಾರ ಮನೆಯಲ್ಲಿ ಇರುತ್ತದೆಯೋ ಅವರ ಮನೆಯಲ್ಲಿ ಅದೃಷ್ಟ ಲಕ್ಷ್ಮಿ ತಾಂಡವ ಆಡುತ್ತಾಳೆ ಹಾಗೂ ಆ ಮನೆಯಲ್ಲಿ ಆರೋಗ್ಯಕರ ವಾತಾವರಣ ಕೂಡಾ ಇರುತ್ತದೆ. ಈ ಲೋಳೆಸರದ ಇನ್ನೊಂದು ವಿಶೇಷತೆ ಏನಪ್ಪಾ ಅಂದರೆ ಇದರಲ್ಲಿ ಇರುವ ಮುಳ್ಳುಗಳು…. ಇದರಲ್ಲಿ ಇರುವ ಒಂದೊಂದು ಮುಳ್ಳಿನಲ್ಲೂ ಸಹ ಒಂದೊಂದು ದೇವತೆಗಳು ನೆಲೆಸಿರುತ್ತಾರೆ ಎಂದು ಪಂಡಿತರು ಹೇಳುತ್ತಾರೆ. ಇದು ಯಾರ ಮನೆಯ ಮುಂದೆ ಇರುತ್ತದೆಯೋ ಅವರ ಮನೆಯ ಮುಂದೆ ನಕಾರಾತ್ಮಕ ಶಕ್ತಿಗಳು ಪ್ರವೇಶ ಮಾಡುವುದಿಲ್ಲ. ಈ ಗಿಡದ ಬೆರಿನಲ್ಲಿ ಇಂತಹ ಶಕ್ತಿ ಇದೆ ಎಂದರೆ ಇದು ಇರುವ ಮನೆಯಲ್ಲಿ ಜಗಳ, ಮನಸ್ತಾಪ ಏನೂ ಬರದ ಹಾಗೇ ನೋಡಿಕೊಳ್ಳುತ್ತದೆ.
ಈ ಗಿಡವು ನೀರು ಇಲ್ಲದೆ, ಬಿಸಿಲು ಇಲ್ಲದೆ ಗಾಳಿಯಲ್ಲಿಯೇ ಬದುಕಬಹುದು. ಅದು ಹೇಗೆ ಅಂದರೆ, ಮನೆಯ ಪ್ರಧಾನ ಬಾಗಿಲಿನ ಮೇಲ್ಭಾಗಕ್ಕೆ ಬೇರು ಮೇಲೆ ಬರುವಂತೆ ಬುಡ ಮೇಲಾಗಿ ಕಟ್ಟಿದರೆ, ಆ ಮನೆಗೆ ಲಕ್ಷ್ಮಿ ದೇವಿ ಬಹಳ ಸಂತೋಷವಾಗಿ ಬರುತ್ತಾಳೆ. ಈ ಗಿಡ ಮನೆಯಲ್ಲಿ ಯಾವುದೇ ಕ್ರಿಮಿ, ಸೊಳ್ಳೆಗಳು ಬರದೇ ಇರುವ ಹಾಗೆಯೇ ತಡೆಯುತ್ತದೆ. ಈ ಗಿಡವನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಡೆಂಗ್ಯೂ, ಮಲೇರಿಯಾ ಅಂತಹ ಅಪಾಯಕಾರಿ ರೋಗಗಳಿಂದ ತಪ್ಪಿಸಿಕೊಳ್ಳಬಹುದು. ಇದರ ಲೋಳೆಯನ್ನು ಮುಖಕ್ಕೆ ಹಚ್ಚಿದರೆ ಮುಖದ ಕಾಂತಿ ಹೆಚ್ಚುತ್ತದೆ. ಲೋಳೆಸರದ ಲೋಳೆಯಿಂದ ಮಾಡಿದ ರಸವನ್ನು ಮುಂಜಾನೆ ಬರೀ ಹೊಟ್ಟೆಯಲ್ಲಿ ಸೇವಿಸಿದರೆ, ದೇಹದಲ್ಲಿ ಇರುವ ಬೊಜ್ಜು ಕರಗುತ್ತದೆ. ಕ್ಯಾನ್ಸರ್ ಅಂತಹ ಮಾರಕ ರೋಗಗಳಿಂದ ಸಹ ಮುಕ್ತಿ ಹೊಂದಬಹುದು. ಇನ್ನೂ ಇಂತಹ ಹತ್ತು ಹಲವಾರು ಸಸ್ಯ ಸಂಕುಲಗಳ ಬಗ್ಗೆ ನಾವು ತಿಳಿದುಕೊಳ್ಳಬೇಕಿದೆ.