Aquarius Horoscope on August Month: ಕುಂಭ ರಾಶಿಯವರ ಪಾಲಿಗೆ ಈ ಆಗಸ್ಟ್ ತಿಂಗಳು ಹೇಗಿರತ್ತೆ ನೋಡಿ ಆಗಸ್ಟ್ ತಿಂಗಳ ಕುಂಭ ರಾಶಿಯ ರಾಶಿ ಫಲವನ್ನು ತಿಳಿದುಕೊಳ್ಳೋಣ. ಕುಂಭ ರಾಶಿಯವರಿಗೆ ಈ ತಿಂಗಳು ಅಭಿವೃದ್ಧಿ ಕಡಿಮೆ ಇರುವಂತಹ ಮಾಸವಾಗಿದೆ. ಆಸ್ತಿ ಖರೀದಿ ಮಾಡುವ ಸಂದರ್ಭದಲ್ಲಿ ನೀವು ಮೋಸ ಹೋಗುವ ಸಾಧ್ಯತೆಗಳು ಈ ತಿಂಗಳಲ್ಲಿ ಜಾಸ್ತಿ ಆಗಿರುತ್ತದೆ ಯಾರಾದರೂ ಆಸ್ತಿ ಖರೀದಿ ಮಾಡುವ ಯೋಚನೆ ಇದ್ದರೆ ಸ್ವಲ್ಪ ಹುಷಾರಾಗಿ ಖರೀದಿ ಮಾಡಬೇಕು.

ನಿಶ್ಚಲವಾದಂತಹ ವಿವಾಹಗಳು ಮುರಿದು ಬೀಳುವ ಸಾಧ್ಯತೆಗಳು ಇರುತ್ತವೆ ಸ್ವಲ್ಪ ಜಾಗರೂಕತೆಯಿಂದ ಇರಬೇಕು.ವಿವಾಹದ ಜೀವನ ಅಷ್ಟೊಂದು ಚೆನ್ನಾಗಿರುವುದಿಲ್ಲ, ಹಲವಾರು ತೊಂದರೆಗಳು ಎದುರಾಗುತ್ತದೆ. ನಿಮ್ಮ ಹಿತ ಶತ್ರುಗಳಿಂದ ತೊಂದರೆಯನ್ನು ಅನುಭವಿಸುತ್ತೀರಿ.

Aquarius Horoscope on August Month

ಲೇವಾದೇವಿ ವ್ಯವಹಾರ ಮಾಡುವಂಥವರಿಗೆ ಧನ ನಷ್ಟ ಉಂಟಾಗುತ್ತದೆ. ಬಡ್ಡಿ ವ್ಯವಹಾರ ಮಾಡುವಂತವರಿಗೆ, ಹಣ ಸರಿಯಾಗಿ ನಿಮ್ಮ ಕೈ ಸೇರುವುದಿಲ್ಲ ಅದರಿಂದ ನೀವು ಹಲವಾರು ರೀತಿಯ ನಷ್ಟವನ್ನು ಅನುಭವಿಸುತ್ತೀರಾ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಉಂಟಾಗುತ್ತದೆ ಮತ್ತು ಉದ್ಯೋಗ ಹುಡುಕುತ್ತಿದ್ದವರಿಗೆ ಉದ್ಯೋಗ ಸಿಗುವ ಸಾಧ್ಯತೆ ಕಡಿಮೆ ಇರುತ್ತದೆ. ಈ ಒಂದು ಆಗಸ್ಟ್ ತಿಂಗಳು ಅಷ್ಟೊಂದೆ ಚೆನ್ನಾಗಿಲ್ಲ ಆದರೂ ಸಹ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ.

ಮನೆಯಲ್ಲಿ ಅಶಾಂತಿಯ ವಾತಾವರಣ ಆಗುವ ಸಾಧ್ಯತೆಗಳು ಇದೆ ಮತ್ತು ಮನಸ್ಸಿಗೆ ಸಂತೋಷ ಇರುವುದಿಲ್ಲ. ಗುದದ್ವಾರಗಳಲ್ಲಿ ಒಂದಿಷ್ಟು ತೊಂದರೆಗಳು ಉಂಟಾಗುವ ಸಾಧ್ಯತೆಗಳಿವೆ ಅದರಲ್ಲೂ ಆಗಸ್ಟ್ ತಿಂಗಳ ಕೊನೆಯ ವಾರದಲ್ಲಿ ಈ ಸಮಸ್ಯೆಗಳೆಲ್ಲ ಜಾಸ್ತಿ ಕಾಣಬಹುದು. ಪ್ರೇಮಿಗಳ ನಡುವೆ ಅನುಮಾನ ಮತ್ತು ಮನಸ್ಥಾಪ ಉಂಟಾಗಬಹುದು. ಲಾಯರ್ ಆಗಿ ಕೆಲಸ ಮಾಡುವಂಥವರಿಗೆ, ನಟ ನಟಿಯರಿಗೆ, ರೇಷ್ಮೆ ಬೆಳೆಗಾರರಿಗೆ, ಕೃಷಿಕರಿಗೆ, ಕಬ್ಬಿಣ ವಸ್ತುಗಳ ಮಾರಾಟಗಾರರಿಗೆ, ಇಂಜಿನಿಯರ್ ಕೆಲಸ ಮಾಡುವಂಥವರಿಗೆ ಈ ತಿಂಗಳು ಅಷ್ಟೊಂದು ಉತ್ತಮವಲ್ಲ.

ಈ ತಿಂಗಳು ಪೂರ್ತಿ ಬಾಲಸುಬ್ರಹ್ಮಣ್ಯ ದೇವರ ಪೂಜೆ ಮಾಡುವುದರಿಂದ ಸಾಕಷ್ಟು ದೋಷಗಳು ಪರಿಹಾರಗೊಳ್ಳುತ್ತದೆ ಸಾಧ್ಯವಾದರೆ ಒಮ್ಮೆ ಸುಬ್ರಹ್ಮಣ್ಯನ ದೇವಸ್ಥಾನಕ್ಕೆ ಭೇಟಿ ನೀಡಿ. ಇದನ್ನೂ ಓದಿ Pisces Horoscope: ಮೀನ ರಾಶಿಯವರಿಗೆ ಆಗಸ್ಟ್ ತಿಂಗಳಲ್ಲಿ ಎಲ್ಲ ಕಡೆಯಿಂದ ಅದೃಷ್ಟ ಒದಗಿ ಬರುತ್ತೆ ಆದ್ರೆ..

By AS Naik

Leave a Reply

Your email address will not be published. Required fields are marked *