Aquarius Horoscope October Prediction ಮೊದಲಿಗೆ ಅಕ್ಟೋಬರ್ ತಿಂಗಳಿನಲ್ಲಿ ಸ್ಥಾನ ಬದಲಾವಣೆ ಮಾಡುವ ಗ್ರಹಗಳು ಯಾವುವು ಎಂದು ನೋಡುವುದಾದರೆ, ಅಕ್ಟೋಬರ್ 1ರಂದು ಬುಧ ಶುಕ್ರ ಇಬ್ಬರ ಸ್ಥಾನ ಬದಲಾವಣೆ ಕೂಡ ನಡೆಯಲಿದ್ದು, ಬುಧ ಕನ್ಯಾ ರಾಶಿಗೆ ಪ್ರವೇಶ ಮಾಡಲಿದ್ದಾನೆ, ಶುಕ್ರ ಸಿಂಹ ರಾಶಿಗೆ ಪ್ರವೇಶ ಮಾಡಲಿದ್ದಾನೆ. 3ನೇ ತಾರೀಕು ಕುಜ ಗ್ರಹ ತುಲಾ ರಾಶಿಗೆ ಪ್ರವೇಶ ಮಾಡಲಿದ್ದಾನೆ, 17ನೇ ತಾರೀಕಿನಂದು ಸೂರ್ಯ ತುಲಾ ರಾಶಿಗೆ ಪ್ರವೇಶ ಮಾಡಲಿದ್ದಾನೆ. 18ನೇ ತಾರೀಕಿನಂದು ಬುಧ ತುಲಾ ರಾಶಿಗೆ ಪ್ರವೇಶ ಮಾಡಲಿದ್ದಾನೆ..

ಈ ರಾಶಿಯಲ್ಲಿ ಗ್ರಹಗಳ ಸಂಚಾರ ಹೇಗಿರುತ್ತದೆ ಎಂದು ನೋಡುವುದಾದರೆ, ಕುಂಭ ರಾಶಿಯಲ್ಲಿ ಸೂರ್ಯದೇವನ ಸಂಚಾರ 8 ಮತ್ತು 9ನೇ ಮನೆಯಲ್ಲಿ ನಡೆಯುತ್ತದೆ. ಕುಜ 9ನೇ ಮನೆಯಲ್ಲಿ, ಬುಧ 8 ಮತ್ತು 9ನೇ ಮನೆಯಲ್ಲಿ, ಗುರು 3ನೇ ಮನೆಯಲ್ಲಿ, ಶುಕ್ರ 7ನೇ ಮನೆಯಲ್ಲಿ, ಶನಿ 1ನೇ ಮನೆಯಲ್ಲಿ, ರಾಹು 3ನೇ ಮನೆಯಲ್ಲಿ, ಕೇತು 9ನೇ ಮನೆಯಲ್ಲಿ ಸಂಚಾರ ಮಾಡಲಿದ್ದಾರೆ.

ಅಕ್ಟೋಬರ್ ತಿಂಗಳಿನಲ್ಲಿ ಕುಂಭ ರಾಶಿಯವರ ಫಲ ಹೇಗಿರುತ್ತದೆ ಎಂದರೆ, ಈ ರಾಶಿಯವರಿಗೆ ಅದೃಷ್ಟ ಮತ್ತು ರಾಜಯೋಗ ಇರುತ್ತದೆ. ದಿಢೀರ್ ಎಂದು ಕೆಲಕ್ವ ಬದಲಾವಣೆ ಆಗಬಹುದು, ಈ ವೇಳೆ ಶುಭ ತರುವಂಥ ಒಳ್ಳೆಯ ವಿಚಾರಗಳು ನಡೆಯುತ್ತದೆ. ಸಂತೋಷ ಇರುತ್ತದೆ, ಆದರೆ ಸ್ತ್ರೀಯರ ಜೊತೆಗೆ ಯಾವುದೇ ವ್ಯವಹಾರ ಮಾಡುವಾಗ ಮಾನಹಾನಿ ಆಗುವ ಸಾಧ್ಯತೆ ಇದೆ, ಹಾಗಾಗಿ ಎಚ್ಚರಿಕೆ ಇಂದ ಇರಿ.

ಈ ವೇಳೆ ಖರ್ಚು ಹೆಚ್ಚಾಗಿ, ಹಣದ ಬರುವಿಕೆ ಆದಾಯ ಜಾಸ್ತಿಯಾಗುತ್ತದೆ. ಮಹಿಳೆಯರಿಗೆ ಅನಾರೋಗ್ಯದಿಂದ ಮುಕ್ತಿ ಸಿಗುತ್ತದೆ. ಈ ತಿಂಗಳು ಸಂತೋಷ ಮತ್ತು ಶಕ್ತಿ ಜಾಸ್ತಿ ಇರುತ್ತದೆ. ಆರೋಗ್ಯ ಸಮಸ್ಯೆ ಇರುವವರಿಗೆ ಎಲ್ಲವೂ ಸರಿ ಹೋಗುತ್ತದೆ, ಮಕ್ಕಳಲ್ಲಿ ವಿದ್ಯಾಭ್ಯಾಸದ ಕಡೆಗೆ ಆಸಕ್ತಿ ಮೂಡುತ್ತದೆ. ಆಧ್ಯಾತ್ಮದಲ್ಲಿ ಗುರುತಿಸಿಕೊಂಡಿರುವವರಿಗೆ ವಿಶೇಷವಾದ ಗೌರವ ಪ್ರತಿಷ್ಠೆ ಸಿಗುತ್ತದೆ. ಆಯುಧಗಳನ್ನು ಮಾರಾಟ ಮಾಡುವವರಿಗೆ, ಲಾಯರ್ ಗಳಿಗೆ, ವಾಹನ ಮಾರಾಟ ಮಾಡುವವರಿಗೆ, ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವವರಿಗೆ, ಜವಳಿ ವ್ಯಾಪಾರಿಗಳಿಗೆ, ಲಾಟರಿ ತೆಗೆದುಕೊಂಡಿರುವವರಿಗೆ, ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಿರುವವರಿಗೆ ಲಾಭ ಜಾಸ್ತಿ ಸಿಗುತ್ತದೆ.

ಐಷಾರಾಮಿ ವಸ್ತುಗಳನ್ನು ಖರೀದಿ ಮಾಡುತ್ತೀರಿ, ನಿಮ್ಮ ವಸ್ತುಗಳನ್ನು ಸಹ ಮಾರಾಟ ಮಾಡುತ್ತೀರಿ. ಕಬ್ಬಿಣ, ಉಕ್ಕು, ಪೆಟ್ರೋಲಿಯಂ ಮಾರಾಟಗಾರರಿಗೆ ಹೆಚ್ಚಿನ ಲಾಭ ಸಿಗುತ್ತದೆ. ಕುಂಭ ರಾಶಿಯವರಿಗೆ ಇದು ಒಳ್ಳೆಯ ತಿಂಗಳು. ಉದ್ಯೋಗದಲ್ಲಿ ಇರುವವರಿಗೆ ಒಳ್ಳೆಯ ಅವಕಾಶಗಳು ಸಿಗುತ್ತದೆ, ಕೆಲಸ ಬದಲಾವಣೆ ಮಾಡಬೇಕು ಎಂದುಕೊಂಡಿರುವವರಿಗೆ ಇದು ಸೂಕ್ತವಾದ ಸಮಯ. ಹೊರದೇಶದಲ್ಲಿ ಕೆಲಸಕ್ಕೆ ಹೋಗಬೇಕು ಎಂದುಕೊಂಡಿರುವವರಿಗೆ ಈ ತಿಂಗಳು ಉತ್ತಮ ಪ್ರತಿಫಲ ಸಿಗುತ್ತದೆ.

Aquarius Horoscope October Prediction

ಹೊಸ ಲವ್ ಲೈಫ್ ಶುರುವಾಗುತ್ತದೆ, ಹೊಸ ಸಂಗಾತಿ ನಿಮ್ಮ ಬದುಕಿಗೆ ಬರುತ್ತಾರೆ. ಆರೋಗ್ಯದಲ್ಲಿ ಸುಧಾರಣೆ ಆಗುತ್ತದೆ. ಆದರೆ ನಿಮ್ಮ ಜನ್ಮ ಜಾತಕದಲ್ಲಿ ಸಮಸ್ಯೆ ಇದ್ದರೆ ನಿಮ್ಮ ಆರೋಗ್ಯಕ್ಕೂ ತೊಂದರೆ ಉಂಟಾಗಬಹುದು. ಹಾಗಾಗಿ ಜನ್ಮ ಜಾತಕ ತೋರಿಸಿ, ಪರಿಹಾರ ಮಾಡಿಕೊಳ್ಳಿ. ಸಾಡೇಸಾತಿ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ಸಾಡೇಸಾತಿ ನಡೆಯುವಾಗಲೇ ಒಳ್ಳೆಯದು ಕೂಡ ಆಗುತ್ತದೆ. ಆದರೆ ಶನಿದೇವರ ಸ್ಥಾನ ಒಳ್ಳೆಯ ರೀತಿಯಲ್ಲಿಲ್ಲ ಎಂದರೆ, ತೊಂದರೆ ಆಗಬಹುದು.

ನಿಮ್ಮ ಜೀವನದಲ್ಲಿ ಸಾಡೇಸಾತಿ 2ನೇ ಸಾರಿ ನಡೆಯುತ್ತಿದ್ದರೆ ನಿಮಗೆ ಕೆಟ್ಟದ್ದು ಆಗುವುದಿಲ್ಲ. ಮಕರ ರಾಶಿಗೆ ಶನಿದೇವರು ಪ್ರವೇಶ ಮಾಡಿದಾಗ ನಿಮಗೆ ಸಾಡೇಸಾತಿ ಶುರುವಾಗುತ್ತದೆ. ಶನಿದೇವರು ಮತ್ತೆ ಮೇಷ ರಾಶಿಗೆ ಪ್ರವೇಶ ಮಾಡುವವರೆಗೂ ನಿಮಗೆ ಸಾಡೇಸಾತಿ ನಿಲ್ಲುವುದಿಲ್ಲ. ಮಕರ, ಕುಂಭ ಮತ್ತು ಮೀನ ರಾಶಿಗೆ ಶನಿದೇವರ ಪ್ರವೇಶವಾದಾಗ ನಿಮಗೆ ಸಾಡೇಸಾತಿ ನಡೆಯುತ್ತದೆ. ನಿಮ್ಮ ರಾಶಿಯಲ್ಲಿ ಜನ್ಮ ಶನಿ, ಗರ್ಭ ಶನಿ ಹಾಗಾಗಿ ಗೊಂದಲ ಮಾಡಿಕೊಳ್ಳದೆ ಜಾತಕ ತೋರಿಸಿ.

ಎರಡನೇ ಸಾರಿ ಸಾಡೇಸಾತಿ ನಡೆಯುತ್ತಿದ್ದರೆ ಅದನ್ನು ಹೊಂಬಶನಿ ಎಂದು ಕರೆಯುತ್ತಾರೆ. ಇದರಿಂದ ಬದುಕಿನಲ್ಲಿ ಒಳ್ಳೆಯ ಯೋಗ ಬರುತ್ತದೆ. ಅಕ್ಟೋಬರ್ ತಿಂಗಳಿನಲ್ಲಿ ನಿಮಗೆ ಅಗತ್ಯವಿರುವ ಪರಿಹಾರ ಏನು ಎಂದರೆ, ಮೊದಲನೆಯದಾಗಿ ಸಾಮಾಜಿಕ ಪರಿಹಾರ ಮಾಡಿ, ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಭೂಮಿಯನ್ನು ಸುರಕ್ಷಿತವಾಗಿ ಇರುವ ಹಾಗೆ ನೋಡಿಕೊಳ್ಳಿ. ಆಧ್ಯಾತ್ಮಿಕ ಪರಿಹಾರದ ಬಗ್ಗೆ ಹೇಳುವುದಾದರೆ, ಧನಿಷ್ಠ ನಕ್ಷತ್ರದ 3ನೇ ಮತ್ತು 4ನೇ ಪಾದದಲ್ಲಿ ಜನಿಸಿದವರು ಪ್ರತಿದಿನ ವಿಷ್ಣುಸಹಸ್ರನಾಮದ ಪಠಣೆ ಮಾಡಿ.

ಶತಾಭಿಷ ನಕ್ಷತ್ರದಲ್ಲಿ ಹುಟ್ಟಿದವರು ದುರ್ಗಾ ಸಹಸ್ರನಾಮದ ಪಠಣೆ ಮಾಡಿ. ಪೂರ್ವಭಾದ್ರ ನಕ್ಷತ್ರದ 1, 2 ಮತ್ತು 3ನೇ ಪಾದದಲ್ಲಿ ಹುಟ್ಟಿದವರು ಶಿವಸಹಸ್ರನಾಮದ ಪಠಣೆ ಮಾಡಿ, ಇದರಿಂದ ದೇವರ ಆಶೀರ್ವಾದ ಅನುಗ್ರಹ ಸಿಗುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *