ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತಾವು ಬದುಕಿದ್ದಷ್ಟು ಕಾಲ ಪರೋಪಕಾರಕ್ಕಾಗಿಯೇ ಬದುಕಿದವರು. ನಿಸ್ವಾರ್ಥ ಜೀವನವನ್ನು ಮಾಡುವಂತಹ ಕೆಲವೇ ಕೆಲವು ಬೆರಳೆಣಿಕೆಯ ಸ್ಟಾರ್ ನಟರಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೂಡ ಒಬ್ಬರಾಗಿದ್ದರು. ಕೇವಲ ನಟನೆ ಡ್ಯಾನ್ಸ್ ಹಾಗೂ ರಿಯಲ್ ಸ್ಟಂಟ್ಗಳ ಮೂಲಕ ಮಾತ್ರವಲ್ಲದೆ ತಮ್ಮ ಪಾರದರ್ಶಕ ವ್ಯಕ್ತಿತ್ವದ ಮೂಲಕವೂ ಕೂಡ ಕನ್ನಡಿಗರ ಮನಸ್ಸಿನಲ್ಲಿ ವಿಶೇಷ ಸ್ಥಾನವನ್ನು ಅಪ್ಪು ಹೊಂದಿದ್ದರು. ಅಪ್ಪು ಯಾವುದೇ ರೀತಿಯ ಕಳಂಕವನ್ನು ಹೊಂದುವಂತಹ ವಿಚಾರಗಳಿಗೆ ಯಾವತ್ತೂ ಕೂಡ ಸಿಲುಕಿದವರಲ್ಲ.

ಕನ್ನಡ ಚಿತ್ರರಂಗದಲ್ಲಿ ಅಜಾತಶತ್ರು ಎಂಬುದಾಗಿ ಅವರನ್ನು ಕರೆಯಲಾಗುತ್ತಿತ್ತು. ಇನ್ನು ತಮ್ಮ ತಂದೆ ರಾಜಕುಮಾರ ಅವರ ಹಾಗೆ ತಾವು ಕೂಡ ಹಾಡುಗಾರಿಕೆಯಲ್ಲಿ ಸಾಕಷ್ಟು ಪ್ರಾವೀಣ್ಯತೆಯನ್ನು ಹೊಂದಿದ್ದರು. ಎಲ್ಲರೂ ಹಣಕ್ಕಾಗಿಯೇ ಹಾಡಿದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮಾತ್ರ ತಾವು ಹಾಡಿರುವ ಹಾಡಿಗಾಗಿ ಸಿಕ್ಕಂತಹ ಸಂಭಾವನೆಯನ್ನು ಪೂರ್ತಿಯಾಗಿ ವೃದ್ದಾಶ್ರಮಗಳಿಗಾಗಿ ವಿನಿಯೋಗಿಸುತ್ತಿದ್ದರು. ಅಪ್ಪು ಅವರಂತಹ ಮತ್ತೊಂದು ಬಂಗಾರ ಮನಸ್ಸಿನ ವ್ಯಕ್ತಿತ್ವವನ್ನು ಕನ್ನಡ ಚಿತ್ರರಂಗದಲ್ಲಿ ಹುಡುಕಿದರೂ ಕೂಡ ಸಿಗುವುದು ಕಷ್ಟ.

ನಮ್ಮೆಲ್ಲರ ನೆಚ್ಚಿನ ಅಪ್ಪು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಯಾವುದೇ ಸಿನಿಮಾಗಳಿಗಾಗಿ ಹಾಡಿದರು ಕೂಡ ಸಂಭಾವನೆಯನ್ನು ಪಡೆಯುತ್ತಿದ್ದರು ನಿಜ ಆದರೆ ಆ ಸಂಭಾವನೆಯನ್ನು ತಾವು ನಡೆಸುತ್ತಿದ್ದ ವೃದ್ಧಾಶ್ರಮಗಳಿಗಾಗಿ ಸಂಪೂರ್ಣವಾಗಿ ಬಳಸಿಕೊಳ್ಳುತ್ತಿದ್ದರು ಎಂಬುದನ್ನು ಎಲ್ಲರೂ ಕೂಡ ತಿಳಿದವರು ಕೊಳ್ಳಲು ಬೇಕಾಗಿರುವಂತಹ ವಿಚಾರ. ಇನ್ನು ಒಂದು ಹಾಡನ್ನು ಹಾಡಲು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಪಡೆದುಕೊಳ್ಳುತ್ತಿದ್ದ ಸಂಭಾವನೆ ಎಷ್ಟು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು ಮಿತ್ರರೇ ಸ್ಟಾರ್ ಗಾಯಕರ ರೇಂಜ್ ನಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕಂಠಸಿರಿಗು ಕೂಡ ಸಾಕಷ್ಟು ಡಿಮಾಂಡ್ ಇತ್ತು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಹಾಡಿದರೆ ಆ ಹಾಡು ಸಿನಿಮಾದ ಮೈಲೇಜ್ ಅನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ ಎಂಬುದು ನಿರ್ಮಾಪಕ ಹಾಗೂ ನಿರ್ದೇಶಕರಲ್ಲಿ ನಂಬಿಕೆ ಇತ್ತು.

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಒಂದು ಸಿನಿಮಾಗೆ ಹಾಡಲು ಬರೋಬ್ಬರಿ ಮೂರರಿಂದ ನಾಲ್ಕು ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆಯುತ್ತಿದ್ದರು ಎಂಬುದಾಗಿ ತಿಳಿದು ಬಂದಿದೆ. ಈಗಾಗಲೇ ಸಾಕಷ್ಟು ಹಾಡುಗಳನ್ನು ಹಾಡಿರುವ ಅಪ್ಪು ಹಾಡಿನಿಂದ ಬರುವ ಸಂಭಾವನೆಯನ್ನು ಸಂಪೂರ್ಣವಾಗಿ ವೃದ್ಧಾಶ್ರಮಗಳಿಗಾಗಿ ಬಳಸುತ್ತಿದ್ದರು.

Leave a Reply

Your email address will not be published. Required fields are marked *