ಯುವರತ್ನ ಪುನೀತ್ ರಾಜ್‌ಕುಮಾರ್ ನಟನೆಯ ಕೊನೆಯ ಸಿನಿಮಾ ಜೇಮ್ಸ್, ಈ ಸಿನಿಮಾ ನೋಡುವುದಕ್ಕೆ ಕನ್ನಡಿಗರಿಗೆ ಮಾತ್ರವಲ್ಲ, ದೇಶ ವಿದೇಶಗಳಲ್ಲಿರುವ ಜನರಿಗೂ ಬಹಳ ಕುತೂಹಲವಿತ್ತು ಆ ಕಾತುರಕ್ಕೆ ನಿನ್ನೆ ತೆರೆ ಬಿದಿದ್ದೆ.
ಜೇಮ್ಸ್’ ಅಬ್ಬರ ದೇಶ ವಿದೇಶದಲ್ಲಿ ಶುರುವಾಗಿದ್ದು ಅಪ್ಪು ಕೊನೆಯ ಸಿನಿಮಾವನ್ನು ನೋಡಲು ಎಲ್ಲರೂ ಕಾಯುತ್ತಿದ್ದಾರೆ ಈ ಸಿನಿಮಾವನ್ನು ಅಪ್ಪು ಹುಟ್ಟಿದ ದಿನ ಮಾರ್ಚ್ 17 ರಂದು ರಿಲೀಸ್ ಮಾಡಲಾಗಿದ್ದು, ಅಲ್ಲದೆ ಅನಿವಾಸಿ ಕನ್ನಡಿಗರಿಗೆ ಚಿತ್ರತಂಡ ಮತ್ತೊಂದು ಖುಷಿ ವಿಚಾರವನ್ನು ಕೊಟ್ಟಿದೆ ಈ ಸಿನಿಮಾ ಅಮೆರಿಕ ಜರ್ಮನಿ ನೆದಲ್ಯಾಂಡ್ ಆಸ್ಟ್ರೇಲಿಯಾ, ಪೋಲ್ಯಾಂಡ್, ಭಾರತ ಸೇರಿದಂತೆ ಒಟ್ಟು 15 ದೇಶಗಳಲ್ಲಿ ಜೇಮ್ಸ್ ರಿಲೀಸ್ ಆಗಿದೆ ಈ ಚಿತ್ರವನ್ನು ಕೇವಲ ವಿದೇಶಿ ಭಾರತೀಯರು ಮಾತ್ರ ಇಷ್ಟ ಪಟ್ಟಿಲ್ಲ ಅವರೊಂದಿಗೆ ಅಲ್ಲಿನ ವಿದೇಶಿಗರು ನೋಡಿ ಸಂತೋಷ ವ್ಯಕ್ತ ಪಡಿಸಿದ್ದಾರೆ. ಪುನೀತ್ ರಾಜಕುಮಾರ್ ಅಭಿನಯನವನ್ನ ಕೊಂಡಾಡಿದ್ದಾರೆ.
ದಾಖಲೆಯೆಂದರೆ ಇದು ಇಡೀ ಕರ್ನಾಟಕದ ಶೇ 80 ಕಿಂತಲೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಮೂರ್ನಾಲ್ಕು ದಿನಗಳಿಗೆ ಬುಕ್ಕಿಂಗ್ ಆಗಿ, ಎಲ್ಲಾ ಚಿತ್ರಮಂದಿರಗಳ ಮುಂದೆ ಹೌಸ್ ಫುಲ್ ಬೋರ್ಡ್ ಇಟ್ಟು, ದಾಖಲೆಯ ಮಟ್ಟದಲ್ಲಿ ಬಾಕ್ಸಾಫೀಸ್ ಧೂಳೆಬ್ಬಿಸಿರುವ ಜೇಮ್ಸ್, ಭಾರತ ಸಿನಿ ಇತಿಹಾಸದ ಸ್ವರ್ಣ ಪುಟಗಳಲ್ಲಿ ಮುದ್ರೆಯೊತ್ತಿದೆ ಎಂದರೆ ತಪ್ಪಾಗಲಾರದು. ಕೇವಲ ಕನ್ನಡಿಗರಷ್ಟೇ ಚಿತ್ರವನ್ನು ನೋಡುತ್ತಿಲ್ಲ ಬದಲಾಗಿ ಭಾರತದ ಅಷ್ಟು ಭಾಷೆಯ ಸಿನಿಪ್ರೇಮಿಗಳು ಅಪ್ಪು ಅವರನ್ನು ಪರದೆಯ ಮೇಲೆ ನೋಡಿ ಆನಂದಿಸುತ್ತಾ ತಮ್ಮ ನೆಚ್ಚಿನ ರಾಜಕುಮಾರನಿಗೆ ಜೈಕಾರ ಹೇಳುತ್ತಿದ್ದಾರೆ ಆಸ್ಟ್ರೇಲಿಯಾ, ಅಮೆರಿಕ ಸೇರಿದಂತೆ 15 ವಿದೇಶಗಳಲ್ಲಿ ಬಿಡುಗಡೆಯಾಗಿರುವ ಜೇಮ್ಸ್ ಚಿತ್ರವನ್ನು ಅಲ್ಲಿ ಬರೀ ಕನ್ನಡಿಗರಷ್ಟೇ ಅಲ್ಲದೆ ಎಲ್ಲಾ ಭಾರತೀಯರು, ವಿದೇಶಿಗರು ವೀಕ್ಷಣೆ ಮಾಡುತ್ತಿದ್ದಾರೆ .
ಜೇಮ್ಸ್ ‘ ಸಿನಿಮಾದಲ್ಲಿ ಅಪ್ಪುಗೆ ಶಿವಣ್ಣ ದನಿಯಾಗಿದ್ದು, ಇದೇ ಮೊದಲ ಬಾರಿ ರಾಘವೇಂದ್ರ ರಾಜ್‌ಕುಮಾರ್ ಸೇರಿದಂತೆ ಮೂವರು ಸಹೋದರರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ . ಒಂದೇ ಸಿನಿಮಾದಲ್ಲಿ ಮೂವರು ಕಾಣಿಸಿಕೊಳ್ಳಬೇಕು ಎಂಬುದು ಅಪ್ಪು ಕನಸು ಸಹ ಆಗಿತ್ತು. ಈ ಸಿನಿಮಾದ ಮೂಲಕ ಅವರ ಕನಸು ಈಡೇರಿದ್ದರಿಂದ ಸಿನಿಮಾ ಮತ್ತಷ್ಟು ಕುತೂಹಲ ಮೂಡಿಸಿದೆ .
ಒಟ್ಟಾರೆ ಕನ್ನಡದ ಯಾವ ಸಿನಿಮಾವು ಮಾಡದ ದಾಖಲೆಯನ್ನು ಜೇಮ್ಸ್ ಸಿನಿಮಾ ಮಾಡಿದೆ. ಈ ಸಿನಿಮಾದ ಕೆಲ ಹಾಡುಗಳ ಚಿತ್ರೀಕರಣವನ್ನು ವಿದೇಶದಲ್ಲಿ ಮಾಡಲಾಗಿದೆ. ಈ ಸಮಯದಲ್ಲಿ ಅಪ್ಪು ನಮ್ಮೊಂದಿಗಿಲ್ಲ ಎಂಬುದೇ ಎಲ್ಲಾ ಭಾರತೀಯರಿಗೂ ಅತಿ ದುಃಖದ ಸಂಗತಿಯಾಗಿದೆ.