ನಟ ಪುನೀತ್ ರಾಜಕುಮಾರ್ ಅವರ ಎಲ್ಲ ಜವಾಬ್ದಾರಿ ಹೊತ್ತುಕೊಂಡ ಯುವ ನಟ

Uncategorized
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ನಟ ಪುನೀತ್ ರಾಜಕುಮಾರ್ ಅವರನ್ನು ರಾಜಕುಮಾರ್ ಅವರ ಕುಟುಂಬದ ಭವಿಷ್ಯ ಎನ್ನುವ ರೀತಿಯಲ್ಲಿ ನೋಡಲಾಗುತ್ತಿತ್ತು. ಕಾರಣ ರಾಜಕುಮಾರ್ ಅವರ ಸಂಪೂರ್ಣ ಗುಣವನ್ನ ಮೈಗೂಡಿಸಿಕೊಂಡವರು ಎಂದರೆ ಪುನೀತ್ ರಾಜಕುಮಾರ್ ಅವರು. ಅಭಿನಯದಿಂದ ಮತ್ತೊಂದು ಕಡೆಯಿಂದ ರಾಜಕುಮಾರ್ ಅವರ ಪ್ರಾಮಾಣಿಕತೆ ಮುಗ್ಧತೆ ನಿಷ್ಕಲ್ಮಶತೆ ಎಲ್ಲವೂ ಕೂಡ ಪುನೀತ್ ರಾಜಕುಮಾರ್ ಅವರಿಗೆ ಎರವಲಾಗಿ ಬಂದುಬಿಟ್ಟಿತ್ತು. ಅದೇ ರೀತಿ ಜನರ ಕಷ್ಟಕ್ಕೆ ಸ್ಪಂದಿಸುವಂತಹ ಗುಣ ಸಮಾಜಸೇವೆ ಎಲ್ಲವೂ ಕೂಡ ಪುನೀತ್ ರಾಜಕುಮಾರ್ ಅವರಿಗೆ ಬಂದಿತ್ತು.

ಇನ್ನೊಂದಿಷ್ಟು ವರ್ಷಗಳಾಗಿದ್ದರೆ ಕನ್ನಡ ಸಿನಿಮಾರಂಗದ ನಾಯಕತ್ವವನ್ನು ಪುನೀತ್ ರಾಜಕುಮಾರ್ ಅವರು ವಹಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನ ಇರಲಿಲ್ಲ. ಅಷ್ಟರೊಳಗಾಗಿ ಪುನೀತ್ ರಾಜಕುಮಾರ್ ಅವರನ್ನು ಭಗವಂತನೇ ಕರೆಸಿಕೊಂಡ. ಇದೀಗ ರಾಜಕುಮಾರ್ ಅವರ ಕುಟುಂಬದ ಭವಿಷ್ಯ ಯಾರು ಎಂದು ನೋಡುವಂತಹ ಪರಿಸ್ಥಿತಿ ಎದುರಾಗಿದೆ. ಕಾರಣ ಶಿವರಾಜಕುಮಾರ್ ಅವರ ಇಬ್ಬರು ಹೆಣ್ಣು ಮಕ್ಕಳು ಕೂಡ ಸಿನಿಮಾರಂಗದಿಂದ ದೂರವಿದ್ದಾರೆ ಪುನೀತ್ ರಾಜಕುಮಾರ್ ಅವರಿಗೂ ಕೂಡ ಇಬ್ಬರು ಹೆಣ್ಣುಮಕ್ಕಳಿದ್ದು ಅವರು ಕೂಡ ಸಿನಿಮಾ ರಂಗದಿಂದ ದೂರವೇ ಇದ್ದಾರೆ. ಇನ್ನು ರಾಘವೇಂದ್ರ ರಾಜಕುಮಾರ್ ಅವರ ಮಕ್ಕಳ ವಿಷಯಕ್ಕೆ ಬಂದರೆ ವಿನಯ ರಾಜಕುಮಾರ್ ಅವರು ಸಿನಿಮಾ ರಂಗದಲ್ಲಿ ಅತ್ಯಂತ ಚಟುವಟಿಕೆಯಿಂದಿದ್ದಾರೆ ಆದರೆ ಭಾರಿ ಬರವಸೆಯನ್ನ ಮೂಡಿಸುತ್ತಿಲ್ಲ.

ಸದ್ಯ ಎಲ್ಲರಲ್ಲಿಯೂ ಭರವಸೆ ಮೂಡಿಸುತ್ತಿರುವವರು ಯುವ ರಾಜಕುಮಾರ್. ಕಾರಣ ಅವರ ಮುಖದಲ್ಲೊಂದು ಕಳೆ ಕಾಣಿಸುತ್ತಿದೆ ಅವರ ಮುಖದಲ್ಲೊಂದು ಗತ್ತು-ಗೈರತ್ತು ಎಲ್ಲವೂ ಕೂಡ ಕಾಣಿಸುತ್ತಿದೆ ನೋಡುವುದಕ್ಕೂ ಸ್ವಲ್ಪ ರಾಜಕುಮಾರ್ ಅವರಂತೆ ಪುನೀತ್ ರಾಜಕುಮಾರ್ ಅವರಂತೆ ಕಾಣಿಸುತ್ತಾರೆ. ಪುನೀತ್ ರಾಜಕುಮಾರ್ ಅವರು ವಿಧಿವಶರಾಗುವವರೆಗೂ ಯುವರಾಜಕುಮಾರ ಅವರನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ ಆದರೆ ಪುನೀತ್ ರಾಜಕುಮಾರ್ ಅವರು ಮರಣ ಹೊಂದಿದ ಸಂದರ್ಭದಲ್ಲಿ ಕುಟುಂಬ ದುಃಖದಲ್ಲಿದ್ದಂತಹ ಸಂದರ್ಭದಲ್ಲಿ ಎಲ್ಲಾ ಕಡೆಗಳಲ್ಲಿ ಓಡಾಡಿಕೊಂಡಿದ್ದಂತವರು ಇದೇ ಯುವ ರಾಜಕುಮಾರ್ ಅವರು. ಇವರು ನಟಿಸಿರುವ ಒಂದೇಒಂದು ಚಿತ್ರ ಯುವ ರಣಧೀರ ಕಂಠೀರವ ಇದರ ಟ್ರೇಸರ್ ಬಿಡುಗಡೆಯಾಗಿತ್ತು ಸಿನಿಮಾ ಇನ್ನೂ ಬಿಡುಗಡೆಯಾಗಿರಲಿಲ್ಲ ಅದರ ಮೂಲಕವೇ ಅವರು ಭರವಸೆಯನ್ನು ಮೂಡಿಸಿದ್ದರು.

ಹೀಗಾಗಿ ಇವರನ್ನ ಹೆಚ್ಚಿನ ಕಡೆಗಳಲ್ಲಿ ನೋಡಿದ್ದು ಕಡಿಮೆ ಈ ಹಿಂದೆ ಅವರು ವಜ್ರೇಶ್ವರಿ ಕಂಬೈನ್ಸ್ ನ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡಿದ್ದರು. ಜೊತೆಗೆ ಅಣ್ಣ ವಿನಯ್ ರಾಜಕುಮಾರ್ ಅವರ ಹಿಂದೆ ನಿಂತು ಎಲ್ಲವನ್ನೂ ನೋಡಿಕೊಳ್ಳುತ್ತಿದ್ದುದುಕೂಡ ಯುವ ರಾಜಕುಮಾರ್ ಅವರೆ. ತಂದೆಯ ಆರೋಗ್ಯದ ಬಗ್ಗೆ ಸಂಪೂರ್ಣ ಕಾಳಜಿಯನ್ನು ತೆಗೆದುಕೊಳ್ಳುತ್ತಿರುವವರು ಕೂಡ ಇದೆ ಯುವ ರಾಜಕುಮಾರ್ ಅವರು. ಹಂತ-ಹಂತವಾಗಿ ರಾಜಕುಮಾರ್ ಅವರ ಪುನೀತ್ ರಾಜಕುಮಾರ್ ಅವರ ಗುಣಗಳನ್ನು ಮೈಗೂಡಿಸಿಕೊಳ್ಳುತ್ತಿದ್ದಾರೆ. ಆ ಮೂಲಕ ಎಲ್ಲರ ಗಮನ ಸೆಳೆಯುವಂತಹ ಕೆಲಸವನ್ನು ಕೂಡ ಮಾಡುತ್ತಿದ್ದಾರೆ. ಇನ್ನೂ ಅಭಿನಯದ ವಿಚಾರಕ್ಕೆ ಬರುವುದಾದರೆ ಯುವ ರಣಧೀರ ಕಂಠೀರವ ಸಿನಿಮಾದ ಟೀಸರ್ ಬಿಡುಗಡೆಯಾಗುವವರೆಗೂ ಇವರ ಮೇಲೆ ಹೇಳಿಕೊಳ್ಳುವಂತಹ ಬರವಸೆ ಯಾರಿಗೂ ಕೂಡ ಇರಲಿಲ್ಲ ಅದರ ಟೀಸರ್ ಹೊಸ ಸಂಚಲನವನ್ನು ಸೃಷ್ಟಿಮಾಡಿತು.

ಪುನೀತ್ ರಾಜಕುಮಾರ್ ಅವರು ಎಲ್ಲರ ಜವಾಬ್ದಾರಿಯನ್ನು ಸಂಪೂರ್ಣವಾಗಿ ತೆಗೆದುಕೊಂಡು ನಿರ್ವಹಿಸುತ್ತಿದ್ದರು ಅವರು ವಿಧಿವಶರಾದ ನಂತರ ಜವಾಬ್ದಾರಿಯನ್ನು ತೆಗೆದುಕೊಳ್ಳುವವರು ಯಾರು ಎಂಬ ಪ್ರಶ್ನೆ ಎಲ್ಲರಿಗು ಕೂಡ ಎದುರಾಯಿತು. ಆ ಜವಾಬ್ದಾರಿಯನ್ನು ಯುವರಾಜಕುಮಾರ ತೆಗೆದುಕೊಳ್ಳುವ ರೀತಿಯಲ್ಲಿ ಕಾಣಿಸುತ್ತಿದೆ. ಎಲ್ಲರೂ ಗಮನಿಸಿರುವ ಹಾಗೆ ಅಶ್ವಿನಿ ರಾಜಕುಮಾರ್ ಅವರಿಗೆ ಸಾಂತ್ವನ ಹೇಳುವುದಕ್ಕೆ ಮನೆಗೆ ಅನೇಕರು ಬರುತ್ತಿದ್ದರು ಆ ಸಂದರ್ಭದಲ್ಲಿ ಯುವ ರಾಜಕುಮಾರರು ಮನೆಯಲ್ಲಿ ಉಪಸ್ಥಿತರಿದ್ದರು ಅವರನ್ನು ನೋಡಿಕೊಳ್ಳುತ್ತಿದ್ದರು.

ಜೊತೆಗೆ ಪಿ ಆರ್ ಕೆ ಪ್ರೊಡಕ್ಷನ್ ನ ಮುಂದಿನ ಹಲವು ಯೋಜನೆಗಳಿಗೆ ಹೆಗಲು ಕೊಡುವುದಕ್ಕೆ ತಯಾರಾಗಿದ್ದಾರೆ ಅಶ್ವಿನಿ ಅವರ ಜವಾಬ್ದಾರಿಗಳಿಗೂ ಬೆನ್ನೆಲುಬಾಗಿ ನಿಲ್ಲುವುದಕ್ಕೆ ತಯಾರಾಗಿದ್ದಾರೆ. ಜೊತೆಗೆ ಅವರ ಮಕ್ಕಳಾದ ದೃತಿ ಮತ್ತು ವಂದಿತಾ ಅವರ ರಕ್ಷಣೆಗೆ ನಿಂತುಕೊಂಡಿದ್ದಾರೆ. ಅಂದರೆ ಪುನೀತ್ ರಾಜಕುಮಾರ್ ಅವರ ಒಂದೊಂದೇ ಜವಾಬ್ದಾರಿಯನ್ನು ಯುವ ರಾಜಕುಮಾರ್ ಅವರು ತೆಗೆದುಕೊಳ್ಳುವ ರೀತಿಯಲ್ಲೇ ಕಾಣಿಸುತ್ತಿದೆ.

ಪುನೀತ್ ರಾಜಕುಮಾರ್ ಅವರು ಬದುಕಿದ್ದಾಗ ಚಿಕ್ಕಪ್ಪ ಮತ್ತು ಮಗನ ನಡುವೆ ಉತ್ತಮವಾದಂತಹ ಬಾಂಧವ್ಯ ಇತ್ತು. ಯುವ ರಾಜಕುಮಾರ್ ಅವರ ಎಲ್ಲಾ ಕೆಲಸಗಳಿಗೆ ಪುನೀತ್ ರಾಜಕುಮಾರ್ ಅವರು ಪ್ರೋತ್ಸಾಹವನ್ನು ನೀಡುತ್ತಿದ್ದರು. ಹಾಗಾಗಿ ರಾಜಕುಮಾರ್ ಅವರ ಅದ್ಭುತವಾದಂತಹ ಪರಂಪರೆಯನ್ನು ಒಂದು ಹಂತಕ್ಕೆ ಮುಂದೆ ತೆಗೆದುಕೊಂಡು ಹೋಗುವಂತಹ ಶಕ್ತಿ ಯುವ ರಾಜಕುಮಾರ್ ಅವರಿಗೆ ಇದೆ ಜೊತೆಗೆ ಅವರ ನಟನೆ ಇನ್ನಷ್ಟು ಜನರಿಗೆ ತಿಳಿಯಬೇಕು ಎಂದರೆ ಅವರ ಯುವ ರಣಧೀರ ಕಂಠೀರವ ಸಿನಿಮಾ ಬಿಡುಗಡೆಯಾಗಬೇಕಿದೆ.

ಒಟ್ಟಾರೆಯಾಗಿ ರಾಜಕುಮಾರ್ ಅವರ ಕುಟುಂಬದ ಪರಂಪರೆ ಸಾಮಾನ್ಯವಾದುದಲ್ಲ ದೊಡ್ಮನೆ ಅದೆಷ್ಟೋ ಜನರಿಗೆ ಊಟ ಹಾಕಿದಂತಹ ಮನೆ. ಅನ್ನ ನೀಡಿದಂತಹ ಮನೆ ಎಷ್ಟೋ ಜನರಿಗೆ ಬದುಕನ್ನ ರೂಪಿಸಿ ಕೊಟ್ಟಂತಹ ಮನೆ. ಯಾರಿಗೂ ಕೂಡ ಕೆಟ್ಟದ್ದನ್ನ ಬಯಸದೆ ಪ್ರತಿಯೊಬ್ಬರಿಗೂ ಕೂಡ ಒಳ್ಳೆಯದನ್ನೇ ಬಯಸುತ್ತಿದ್ದಂತಹ ಮನೆ ಎಂದರೆ ದೊಡ್ಮನೆ. ಹಾಗಾಗಿ ಅವರ ಪರಂಪರೆ ಎಂದಿಗೂ ಕೂಡ ನಿಲ್ಲಬಾರದು ಅದು ಮುಂದುವರೆಯುತ್ತಲೇ ಇರಬೇಕು. ಯುವ ರಾಜಕುಮಾರ್ ಅವರ ಭವಿಷ್ಯಕ್ಕೆ ಕೂಡ ಒಳ್ಳೆಯದಾಗಲಿ ಪುನೀತ್ ರಾಜಕುಮಾರ್ ಅವರ ಒಳ್ಳೆಯ ಗುಣಗಳನ್ನು ಅವರು ಮುಂದುವರಿಸಿಕೊಂಡು ಹೋಗಲಿ ಎಂದು ನಾವು ಆಶಿಸೋಣ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *