ಕನ್ನಡ ಚಿತ್ರರಂಗ ಎಂದು ಮರೆಯದ ಹೆಸರುಗಳಲ್ಲಿ ನಟಸಾರ್ವಭೌಮ ಪುನೀತ್ ರಾಜಕುಮಾರ್ ಅವರು ಕೂಡ ಒಬ್ಬರು. ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಒಬ್ಬ ಪ್ರತಿಭಾನ್ವಿತ ನಟನನ್ನು ಕಳೆದುಕೊಂಡು ದುಖಿಸುತ್ತಿದೆ. ಪುನೀತ್ ರಾಜಕುಮಾರ್ ಅವರು ತಾವು ಬದುಕಿದಷ್ಟು ಕಾಲ ಇತರರಿಗೆ ಸಹಾಯವನ್ನು ಮಾಡುವ ಮೂಲಕ ಒಳ್ಳೊಳ್ಳೆ ಸಿನಿಮಾಗಳಲ್ಲಿ ನಟಿಸುವ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿದ್ದರು. ನಾವಿಂದು ಪುನೀತ್ ರಾಜಕುಮಾರ್ ಅವರ ಬಾಡಿಗಾರ್ಡ್ ಅವರು ಅಪ್ಪು ಅವರ ಕುರಿತು ಏನು ಹೇಳುತ್ತಾರೆ ಮತ್ತು ಅಪ್ಪು ಅವರು ಅವರ ಬಾಡಿಗಾರ್ಡ್ ಗೆ ಎಷ್ಟು ಸಂಭಾವನೆಯನ್ನು ನೀಡುತ್ತಿದ್ದರು ಎಂಬ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ.
ಅಪ್ಪು ಅವರ ಬಾಡಿಗಾರ್ಡ್ ಹೆಸರು ಚಲಪತಿ ಸಾಕಷ್ಟು ಕಾರ್ಯಕ್ರಮಗಳಲ್ಲಿ ಅಪ್ಪುಅವರ ಜೊತೆ ಚಲಪತಿಯನ್ನು ಎಲ್ಲರೂ ನೋಡಿರುತ್ತಾರೆ. ಅಪ್ಪು ಇಷ್ಟು ವರ್ಷ ಸುರಕ್ಷಿತವಾಗಿದ್ದರು ಎಂದರೇ ಅದಕ್ಕೆ ಈ ಬಾಡಿಗಾರ್ಡ್ ಕೂಡ ಕಾರಣ. ಇವರು ಅಪ್ಪು ಅವರ ಕುಟುಂಬದವರೊಂದಿಗೆ ಸ್ನೇಹಿತರಂತೆ ಇದ್ದರು ಅವರಿಗೆ ತಾವು ಬಾಡಿಗಾರ್ಡ್ ಎನ್ನುವ ಅನುಭವ ಎಂದಿಗೂ ಆಗಿರಲಿಲ್ಲವಂತೆ. ಹಾಗೆಯೇ ಪುನೀತ್ ರಾಜಕುಮಾರ್ ಅವರು ಕೂಡ ಇವರು ಬಾಡಿಗಾರ್ಡ್ ಇಂದು ಎಂದಿಗೂ ಕಡೆಗಣಿಸಿಲ್ಲ. ಅವರನ್ನು ಕಂಡ ತಕ್ಷಣ ಊಟ ಆಯ್ತಾ ಕಾಫಿ ಆಯ್ತಾ ಎಂದು ಅವರ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದರು. ಅಪ್ಪು ಅವರು ಎಲ್ಲಿಗೆ ಹೋದರು ಅವರಿಗೆ ಬಾಡಿಗಾರ್ಡ್ ಆಗಿ ಚಲಪತಿ ಹೋಗುತ್ತಿದ್ದರು ಅಪ್ಪು ಅವರನ್ನ ವಿಚಾರಿಸಿಕೊಳ್ಳುತ್ತಿದ್ದರು ಅನೇಕ ವರ್ಷಗಳಿಂದ ಚಲಪತಿ ಅವರು ಪುನೀತ್ ರಾಜಕುಮಾರ್ ಪಕ್ಕದಲ್ಲಿ ಕೆಲಸವನ್ನು ಮಾದಿದ್ದಾರೆ.
ಕೆಲವರಿಗೆ ಕುತೂಹಲವಿರುತ್ತದೆ ಅಪ್ಪು ಅವರು ಅವರ ಬಾಡಿಗಾರ್ಡ್ ಗೆ ಎಷ್ಟು ಸಂಬಳವನ್ನು ಕೊಡುತ್ತಿದ್ದರು ಎಂದು. ಆ ಕುರಿತು ಚಲಪತಿ ಅವರು ಏನು ಹೇಳುತ್ತಾರೆ ಎಂದರೆ ಸಂಬಳಕ್ಕಿಂತ ಹೆಚ್ಚಾಗಿ ನಾನು ಬಾಡಿಗಾರ್ಡ್ ಕೆಲಸವನ್ನು ಮಾಡುತ್ತಿದ್ದದ್ದು ನಾನು ದೇವರ ಹತ್ತಿರ ಇದ್ದೇನೆ ಎಂದು ಹೇಳಿದ್ದಾರೆ. ಹಾಗಾಗಿ ಇವರು ಸಾಕಷ್ಟು ಪುಣ್ಯವಂತರು ಎಂದು ಹೇಳಬಹುದು ಇವರು ರಾಜ್ ಕುಟುಂಬದ ಒಬ್ಬ ಸದಸ್ಯನಂತೆ ಇದ್ದರು. ಅದನ್ನ ದುಡ್ಡಿನಿಂದ ಅಳೆಯಲು ಸಾಧ್ಯವಿಲ್ಲ ಎಷ್ಟೇ ದುಡ್ಡು ಕೊಟ್ಟರೂ ದೇವರ ಪಕ್ಕದಲ್ಲಿ ಕೆಲಸ ಮಾಡುವಂತಹ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ ಅಪ್ಪು ಅವರು ಎಲ್ಲರಿಗೂ ದೇವರಾಗಿದ್ದರು. ರಾಜಕುಟುಂಬದ ಕುಡಿಗಳೆ ಹಾಗೆ ದಾನ ಧರ್ಮ ಮಾಡುವುದರಲ್ಲಿ ಮುಂದೆ ಇರುತ್ತಾರೆ.
ಅಪ್ಪು ಅವರು ಮಾಡಿರುವ ದಾನ ಧರ್ಮಗಳ ವಿಚಾರವನ್ನ ತಿಳಿದುಕೊಂಡರೆ ನಿಜಕ್ಕೂ ಆಶ್ಚರ್ಯವಾಗುತ್ತದೆ ಅಷ್ಟರ ಮಟ್ಟಿಗೆ ಅವರು ದಾನಧರ್ಮಗಳನ್ನು ಮಾಡಿ ಹೆಸರುವಾಸಿಯಾಗಿದ್ದರು. ಅಮಿತಾ ಬಚ್ಚನ್ ಸಲ್ಮಾನ್ ಖಾನ್ ಈ ರೀತಿಯ ಬಾಲಿವುಡ್ ಸ್ಟಾರ್ ಗಳ ಬಾಡಿಗಾರ್ಡ್ ಗಳಿಗೆ ಒಂದು ಕೋಟಿಯವರೆಗೆ ಸಂಭಾವನೆ ಇರುತ್ತದೆ. ಇನ್ನು ನಮ್ಮ ಕನ್ನಡದ ಹಲವಾರು ಸೂಪರ್ ಸ್ಟಾರ್ ಗಳಿಗೆ ಬಾಡಿಗಾರ್ಡ್ ಗಳು ಇದ್ದಾರೆ ಅಂತಹ ಸ್ಟಾರ್ ಗಳು ಸುರಕ್ಷಿತವಾಗಿ ಇರುವುದಕ್ಕೆ ಬಾಡಿಗಾರ್ಡ್ ಗಳು ಕೂಡ ಕಾರಣ ಎಂದು ಹೇಳಬಹುದು. ಅದೇ ರೀತಿ ಅಪ್ಪು ಅವರಿಂದ ಬಾಡಿಗಾರ್ಡ್ ಚಲಪತಿಯವರಿಗೆ ಎಪ್ಪತ್ತು ಸಾವಿರದವರೆಗೆ ಸಂಭಾವನೆಯ ದೊರೆಯುತ್ತಿತ್ತು. ಇವರು ಅಪ್ಪು ಅವರ ಪಕ್ಕದಲ್ಲಿ ಇಷ್ಟು ವರ್ಷಗಳ ಕಾಲ ಕೆಲಸವನ್ನು ಮಾಡಿದ್ದಾರೆ. ಅದು ಇವರ ಪುಣ್ಯ ಎನ್ನಬಹುದು. ಅಪ್ಪು ಅವರು ತಾವು ಮಾಡಿರುವ ಒಳ್ಳೆಯ ಕೆಲಸದಿಂದಾಗಿ ಎಂದಿಗೂ ಕೂಡ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತಾರೆ.