ವಿಧಿಯಾಟವನ್ನು ಬಲ್ಲವರು ಯಾರಿದ್ದಾರೆ, ಇಂದು ನಮ್ಮೊಂದಿಗಿರುವವರು ನಾಳೆ ನಮ್ಮನ್ನು ಬಿಟ್ಟು ಬಹುದೂರ ಹೋಗಿರುತ್ತಾರೆ. ಪುನೀತ್ ಅವರು ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಅಕ್ಟೋಬರ್ 29ನೇ ತಾರೀಖಿನಂದು ನಿಧನರಾಗಿದ್ದು ಆಶ್ಚರ್ಯ ಹಾಗೂ ವಿಷಾದದ ಸಂಗತಿಯಾಗಿದೆ. ಅವರು ಬದುಕಿದ್ದಾಗ ಅದೆಷ್ಟೊ ಸಹಾಯ ಮಾಡಿದ್ದರೂ ಎಲೆಮರೆಯ ಕಾಯಿಯಂತೆ ಇದ್ದು ಪ್ರಚಾರ ಮಾಡಲಿಲ್ಲ ಅವರ ಮರಣದ ಬಳಿಕ ಅವರು ಮಾಡಿರುವ ಸಹಾಯದ ವಿಷಯ ತಿಳಿಯಿತು. ಅವರು ನಡೆಸುತ್ತಿದ್ದ ಅನಾಥಾಶ್ರಮ, ಗೋಶಾಲೆ ಇನ್ನಿತರ ಸಮಾಜ ಸೇವಾ ಕಾರ್ಯಗಳನ್ನು ಮುನ್ನಡೆಸುವುದಾಗಿ ಅವರ ಪತ್ನಿ ಅಶ್ವಿನಿ ಅವರು ನಿರ್ಧಾರ ಮಾಡಿದ್ದಾರೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತೆಗೆದುಕೊಳ್ಳೋಣ.

ಅಪ್ಪು ಅಗಲಿಕೆಯ ನೋವನ್ನು ಸಹಿಸಿಕೊಳ್ಳುವುದು ಅನಿವಾರ್ಯವಾಗಿದೆ. ನೋಡು ನೋಡುತ್ತಿದ್ದಂತೆ ಹತ್ತು ದಿನಗಳು ಕಳೆದೆ ಹೋಯಿತು. ಪುನೀತ್ ಅವರ ಕುಟುಂಬದವರು ಮಾಡಬೇಕಾದ ಕಾರ್ಯಗಳನ್ನು ಮಾಡಲೆ ಬೇಕಿದ್ದು ನೋವಿನ ನಡುವೆ ಎಲ್ಲಾ ತಯಾರಿಯನ್ನು ನಡೆಸುತ್ತಿದ್ದಾರೆ. ಇನ್ನೊಂದು ಕಡೆ ಅಪ್ಪು ಅವರ ಸಮಾಧಿ ಬಳಿ ಜನರು ದಿನದಿಂದ ದಿನಕ್ಕೆ ಹೆಚ್ಚಾಗಿ ಬರುತ್ತಿದ್ದಾರೆ.

ಪ್ರತಿದಿನ ಇಪ್ಪತ್ತರಿಂದ ಮೂವತ್ತು ಸಾವಿರ ಜನರು ಅಪ್ಪು ಸಮಾಧಿ ಬಳಿ ಆಗಮಿಸುತ್ತಿದ್ದು ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧರು ವಿಶೇಷ ಚೇತನರು ಆಗಮಿಸಿ ಅಪ್ಪು ಸಮಾಧಿಗೆ ನಮಸ್ಕರಿಸುತ್ತಿರುವುದನ್ನು ಕಂಡರೆ ಅಪ್ಪು ನಿಜವಾಗಿ ಜೀವನದಲ್ಲಿ ಗಳಿಸಿದ ಆಸ್ತಿ ಅಮೂಲ್ಯವಾದದ್ದು ಎಂದು ಹೆಮ್ಮೆಯಿಂದ ಹೇಳಬಹುದು. ನಾಳೆ ಪುನೀತ್ ಅವರು ವಿಧಿವಶರಾಗಿ ಹನ್ನೊಂದನೆ ದಿನವಾಗಿದ್ದು ಅವರ ಹನ್ನೊಂದನೆ ದಿನದ ಕಾರ್ಯ ನಡೆಯಲಿದ್ದು ಕುಟುಂಬದವರು ಪೂಜೆಗೆ ಎಲ್ಲಾ ತಯಾರಿ ನಡೆಸುತ್ತಿದ್ದಾರೆ.

ಹನ್ನೊಂದನೆ ದಿನದ ಕಾರ್ಯಕ್ಕೆ ಮನೆಯಲ್ಲಿ ಪೂಜೆಗೆ ಬೇಕಾದ ಸಾಮಗ್ರಿಗಳು ಹಾಗೂ ಎಡೆಗೆ ಇಡಬೇಕಾದ ತಿನಿಸುಗಳನ್ನು ಮಾಡಬೇಕಾಗಿರುತ್ತದೆ ಆದ್ದರಿಂದ ಪುನೀತ್ ಅವರ ಸಹೋದರಿಯರ ಕುಟುಂಬದವರು ಹಾಗೂ ರಾಘಣ್ಣ, ಶಿವಣ್ಣ ಅವರ ಕುಟುಂಬದವರು ಪುನೀತ್ ಅವರ ನಿವಾಸಕ್ಕೆ ಆಗಮಿಸಿದ್ದು ಮಡಿಯಲ್ಲಿ ಪೂಜೆಗೆ ಸಕಲ ತಯಾರಿ ನಡೆಸುತ್ತಿದ್ದಾರೆ ಎಂಬ ಸುದ್ದಿ ಲಭ್ಯವಾಗಿದೆ. ಪುನೀತ್ ಅವರಿಗೆ ಇಷ್ಟವಾದ ಅಡುಗೆಗಳನ್ನೆ ಮಾಡುತ್ತಿದ್ದಾರೆ.

ಅದರ ಜೊತೆಗೆ ಕಳೆದ ಐದು ದಿನಗಳಿಂದ ಪುನೀತ್ ಅವರ ನಿವಾಸಕ್ಕೆ ಒಬ್ಬರಲ್ಲ ಒಬ್ಬರು ಕಲಾವಿದರು ಆಗಮಿಸುತ್ತಿದ್ದು ತೆಲುಗು, ತಮಿಳು ಚಿತ್ರರಂಗದ ಗಣ್ಯರು, ರಾಜಕಾರಣಿಗಳು, ಮುಖ್ಯಮಂತ್ರಿಗಳು, ಸಚಿವರುಗಳು ಪುನೀತ್ ಅವರ ನಿವಾಸಕ್ಕೆ ಆಗಮಿಸಿ ಅಶ್ವಿನಿ ಅವರಿಗೆ ಸಾಂತ್ವಾನ ಹೇಳಿದ್ದಾರೆ. ಪುನೀತ್ ಅವರ ಸಾವಿನ ದುಃಖದ ನಡುವೆ ಪುನೀತ್ ಅವರ ಪತ್ನಿ ಅಶ್ವಿನಿ ಅವರು ಮಹತ್ವದ ನಿರ್ಧಾರವನ್ನು ಮಾಡಿದ್ದಾರೆ.

ಪುನೀತ್ ಅವರು ಬಲಗೈಯಲ್ಲಿ ಮಾಡಿದ ದಾನ ಎಡಗೈಗೆ ತಿಳಿಯಬಾರದೆನ್ನುವಂತೆ ಎಲೆ ಮರೆಯ ಕಾಯಿಯಂತೆ ಕೋಟ್ಯಾಂತರ ರೂಪಾಯಿಗಳನ್ನು ದಾನ ಮಾಡಿದ್ದಾರೆ. ಹದಿನೇಳು ಗೋಶಾಲೆ, ವೃದ್ಧಾಶ್ರಮ, ಅನಾಥಾಶ್ರಮಗಳು, ಶಾಲೆಗಳು ಜೊತೆಗೆ ಸಾವಿರದ ಹದಿನೆಂಟುನೂರು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕೊಡಿಸುತ್ತಿದ್ದಾರೆ. ತಮ್ಮ ಕಣ್ಣಿಗೆ ಕಾಣುವ ಬಡವರಿಗೆ ಸಾಕಷ್ಟು ಪ್ರಮಾಣದಲ್ಲಿ ಸಹಾಯ ಮಾಡಿದ್ದಾರೆ. ಕೊರೋನ ವೈರಸ್ ಹರಡಿರುವ ಸಮಯದಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಐವತ್ತು ಲಕ್ಷ ರೂಪಾಯಿ ಹಾಕಿದ್ದಾರೆ.

ಈ ವರ್ಷ ಲಾಕ್ ಡೌನ್ ಸಮಯದಲ್ಲಿ ಕಲಾವಿದರಿಗಾಗಿ ಹತ್ತು ಲಕ್ಷ ರೂಪಾಯಿ ಹಾಗೂ ತಾವು ವಾಕ್ ಮಾಡುವ ಪಾರ್ಕ್ ಅಲ್ಲಾಗಲಿ, ಜಿಮ್ ನಲ್ಲಾಗಲಿ, ಆಸ್ಪತ್ರೆಯಲ್ಲಿನ ಸಿಬ್ಬಂದಿಗಳಿಗಾಗಲಿ ಕೈತುಂಬಾ ದಾನ ಮಾಡುತ್ತಿದ್ದರು ಆದರೆ ಎಲ್ಲಿಯೂ ಪ್ರಚಾರ ಮಾಡುತ್ತಿರಲಿಲ್ಲ, ಅಣ್ಣ ಶಿವಣ್ಣನ ಬಳಿಯೂ ಯಾವ ವಿಚಾರವನ್ನು ಹಂಚಿಕೊಂಡಿರಲಿಲ್ಲ. ಮತ್ತೊಬ್ಬರಿಗೆ ನೆರವಿಗೆ ಆಗಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ ಎಂಬುದನ್ನು ಪುನೀತ್ ಅವರು ಪಾಲಿಸಿದ್ದಾರೆ.

ಅಪ್ಪು ಅವರ ಮರಣದ ಬಳಿಕ ಅವರ ದಾನದ ವಿಚಾರಗಳು ಹೊರ ಬಂದಿದ್ದು ಅಪ್ಪು ಮೇಲಿನ ಗೌರವ ಹೆಚ್ಚಾಗಿ ಅನೇಕರು ಅಪ್ಪುವಿನ ಕಾರ್ಯಕ್ಕೆ ಕೈಜೋಡಿಸಲು ಮುಂದಾಗಿರುವುದನ್ನು ನೋಡುತ್ತಿದ್ದೇವೆ. ತಮಿಳು ನಟ ವಿಶಾಲ್ ಅಪ್ಪು ವಿಧ್ಯಾಭ್ಯಾಸ ನೀಡುತ್ತಿದ್ದ ವಿದ್ಯಾರ್ಥಿಗಳ ಜವಾಬ್ದಾರಿ ಇನ್ನುಮುಂದೆ ನನ್ನದು ಇದು ನನ್ನ ಸ್ನೇಹಿತನಿಗೆ ನಾನು ನೀಡುತ್ತಿರುವ ಗೌರವ ಎಂದಿದ್ದಾರೆ. ಈ ಎಲ್ಲಾ ಕೆಲಸಗಳು ಅಪ್ಪು ತಮ್ಮ ಆತ್ಮತೃಪ್ತಿಗಾಗಿ ಮಾಡುತ್ತಿದ್ದರು.

ಈ ಕೆಲಸಗಳು ಯಾವುದೆ ಸಮಯದಲ್ಲಿಯೂ ನಿಲ್ಲಬಾರದೆಂದು ಪುನೀತ್ ಅವರು ಅದಾಗಲೆ ಎಂಟು ಕೋಟಿ ರೂಪಾಯಿಯಷ್ಟು ಹಣವನ್ನು ಎಫ್ ಡಿ ಮಾಡಿದ್ದರು ಅದರಿಂದ ಬಂದ ಹಣದಲ್ಲಿ ಈ ಎಲ್ಲಾ ಕೆಲಸಗಳನ್ನು ಮಾಡಿ ಸಂತೋಷ ಪಡುತ್ತಿದ್ದರು. ಎಲ್ಲಿಯೂ ಈ ವಿಚಾರಗಳನ್ನು ಹೇಳಬಾರದು ಎಂದು ಹೇಳಿದ್ದರು. ಈಗ ಈ ಎಲ್ಲಾ ಕೆಲಸಗಳಿಗೆ ಕೈ ಜೋಡಿಸಲು ಮುಂದಾಗಿರುವವರಿಗೆ ಧನ್ಯವಾದಗಳನ್ನು ಅರ್ಪಿಸಿರುವ ಅಶ್ವಿನಿ ಅವರು ತಮ್ಮ ಪತಿಯ ಆತ್ಮತೃಪ್ತಿಗಾಗಿ ಮಾಡುತ್ತಿದ್ದ ಕೆಲಸಗಳನ್ನು ತಾವೆ ಮುಂದುವರೆಸಿಕೊಂಡು ಹೋಗುವ ನಿರ್ಧಾರ ಮಾಡಿದ್ದಾರೆ. ಕುಟುಂಬದವರ ಸಲಹೆಯ ಮೇರೆಗೆ ಅಪ್ಪು ಇಷ್ಟ ಪಟ್ಟು ಮಾಡುತ್ತಿದ್ದ ಎಲ್ಲಾ ಕೆಲಸಗಳು ಹಾಗೆಯೆ ಮುಂದುವರೆಯಲಿದೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ.

ಅಪ್ಪು ಅವರು ಮಾಡುತ್ತಿದ್ದ ಒಂದು ಸಣ್ಣ ಕೆಲಸವನ್ನು ಸಹ ಬಿಡದೆ ಮುಂದುವರೆಸಿಕೊಂಡು ಹೋಗುವ ನಿರ್ಧಾರ ಮಾಡಿರುವುದನ್ನು ನೋಡಿದರೆ ಅಶ್ವಿನಿ ಅವರ ಬಗ್ಗೆ ಹೆಮ್ಮೆ ಎನಿಸುತ್ತದೆ. ಅಶ್ವಿನಿ ಅವರಿಗೆ ಹಾಗೂ ಅವರ ಕುಟುಂಬದವರಿಗೆ ದೇವರು ಪುನೀತ್ ಅವರ ನಿಧನದ ದುಃಖವನ್ನು ತಡೆಯುವ ಶಕ್ತಿಯನ್ನು ಕರುಣಿಸಲಿ ಎಂದು ಆಶಿಸೋಣ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *