ರಾಜ್ಯದಲ್ಲಿ ಹಲವು ಧಾರ್ಮಿಕ ಕ್ಷೇತ್ರಗಳಿವೆ ಹಾಗೂ ಪ್ರವಾಸಿತಾಣಗಳಿವೆ ಎಲ್ಲವು ಕೂಡ ತನ್ನದೆಯಾದ ವಿಶೇಷತೆ ಹಾಗೂ ಮಹತ್ವವನ್ನು ಹೊಂದಿರುತ್ತವೆ, ಅದೇ ನಿಟ್ಟಿನಲ್ಲಿ ಈ ಅಂತರಗಂಗೆ ಬೆಟ್ಟ ಕೂಡ ತನ್ನದೆಯಾದ ವಿಶೇಷತೆ ಹಾಗೂ ಮಹತ್ವವನ್ನು ಹೊಂದಿದೆ. ಈ ಅಂತರಗಂಗೆ ಬೆಟ್ಟಕ್ಕೆ ದಕ್ಷಿಣ ಕಾಶಿ ಎಂಬುದಾಗಿ ಕರೆಯಲಾಗುತ್ತದೆ. ಇಲ್ಲಿನ ವಿಶೇಷತೆ ಹಾಗೂ ಇದು ಎಲ್ಲಿದೆ ಅನ್ನೋದನ್ನ ತಿಳಿಯುವುದಾದರೆ, ಇದು ಇರೋದು ಕೋಲಾರದಲ್ಲಿ ಹೌದು ಕೋಲಾರದಿಂದ ನಾಲ್ಕು ಕಿ.ಮಿ ದೂರದಲ್ಲಿರುವ ಬೆಟ್ಟವಾಗಿದೆ ಇಲ್ಲಿರುವಂತ ಬಸವನ ಮೂರ್ತಿಯ ಬಾಯಿಯಿಂದ ನಿರಂತರವಾಗಿ ನೀರು ಹರಿಯುತ್ತಿರುತ್ತದೆ. ಇಲ್ಲಿ ಸುತ್ತಲೂ ಹಳ್ಳಿಗಳು ಇದ್ದು ಹಳ್ಳಿಯ ಸೊಬಗನ್ನು ಕಣ್ತುಂಬಿ ಕೊಳ್ಳಬಹುದಾಗಿದೆ, ಈ ಬೆಟ್ಟದ ಸುತ್ತಲೂ ಏಳು ಹಳ್ಳಿಗಳನ್ನು ಹೊಂದಿದ್ದು ಹುಣ್ಣಿಮೆಯ ದಿನದ ಸಂದರ್ಭದಲ್ಲಿ ಸಾಂಸ್ಕೃತಿಕ ಸಂಘದವರು ಸಾಂಸ್ಕೃತಿಕ ಚಟುವಟಿಕೆಗಳನ್ನು ಏರ್ಪಡಿಸುತ್ತಾರೆ.

ಈ ಬೆಟ್ಟವು ಪೌರಾಣಿಕ ಹಿನ್ನಲೆಯನ್ನು ಹೊಂದಿದೆ, ಹೌದು ಹಿಂದೂ ಪುರಾಣದ ಪ್ರಕಾರ ಕರ್ತವೀರ್ಯಾರ್ಜುನನನ್ನು ಪರಶುರಾಮನು ಕೊಂದಿದ್ದಾನೆ, ನಂತರ ಜಮದಗ್ನಿಯ ಸಾವು ಹಾಗೂ ರೇಣುಕಾ ಸ್ವಯಂ ಬಲಿ ಈ ಬೆಟ್ಟದ ಮೇಲೆ ನಡೆದಿದೆ. ಇನ್ನೂ ಭಕ್ತರಲ್ಲಿ ಇರವಂತ ನಂಬಿಕೆ ಏನು ಅನ್ನೋದನ್ನ ಹೇಳುವುದಾದರೆ ಪರಶುರಾಮನು ಕ್ಷತ್ರಿಯ ವರ್ಗದವರನ್ನು ಕೊಲ್ಲಲು ಈ ಬೆಟ್ಟದ ಮೇಲೆ ಶಪಥ ಮಾಡಲಾಗಿದೆ. ಕಾಶಿ ವಿಶ್ವೇಶ್ವರ ದೇವಾಲಯದ ನೀರು ಬಸವನ ಬಾಯಿಂದ ಬರುವ ಅಂತರಗಂಗೆ ಎಂಬ ಜಲವೆಂದು ಭಕ್ತರ ನಂಬಿಕೆ ಇದೆ.

ಈ ಬೆಟ್ಟಕ್ಕೆ ಅನಂತರಗಂಗೆ ಎಂದು ಕರೆಯಲು ಕಾರಣವೇನು ಹಾಗೂ ಇಲ್ಲಿನ ವಿಶೇಷತೆ ಏನು ಅನ್ನೋದನ್ನ ತಿಳಿಯುವುದಾದರೆ, ಬೆಟ್ಟದ ಮೇಲೆ ಶಿವನ ದೇವಸ್ಥಾನ, ಅದರ ಪಕ್ಕದಲ್ಲೇ ಕಲ್ಯಾಣಿ, ಗಣೇಶನ ವಿಗ್ರಹ ಹಾಗೂ ಬಸವಣ್ಣನ ಮೂರ್ತಿಯ ಬಾಯಿಯಿಂದ ನಿರಂತರವಾಗಿ ಗಂಗೆ ಹರಿಯುವುದು ಇಲ್ಲಿನ ವಿಶೇಷವಾಗಿದೆ ಆದ್ದರಿಂದ ಈ ಸ್ಥಳಕ್ಕೆ ಹಾಗೂ ಬೆಟ್ಟಕ್ಕೆ ಅನಂತರಗಂಗೆ ಎಂಬುದಾಗಿ ಕರೆಯಲಾಗುವುದು. ಇಲ್ಲಿನ ಬಸವನ ಬಾಯಿಯಿಂದ ನಿರಂತರವಾಗಿ ನೀರು ಹರಿಯುತ್ತಿರುವುದು ಇಂದಿಗೂ ಒಂದು ಬಾರಿಯೂ ನಿಂತಿಲ್ಲ ಅನ್ನೋದನ್ನ ಹೇಳಲಾಗುತ್ತದೆ. ಪ್ರವಾಸಿಗರ ನೆಚ್ಚಿನ ತಾಣವಾಗಿದೆ ಈ ಅಂತರಗಂಗೆ ಬೆಟ್ಟ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!