Anganwadi recruitment 2023: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಖಾಲಿ ಇರುವ ಅಂಗನವಾಡಿ ಟೀಚರ್ ಹುದ್ದೆಗಳನ್ನು ಭರ್ತಿ ಮಾಡಲು ಆದೇಶ ನೀಡಲಾಗಿದೆ. ಈ ಕೆಲಸಕ್ಕೆ ನೀವು ಅಪ್ಲೈ ಮಾಡಿ ಆಯ್ಕೆಯಾದರೆ ಇದಕ್ಕಾಗಿ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಡೈರೆಕ್ಟ್ ಆಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಒಟ್ಟು 21 ಸಾವಿರಕ್ಕಿಂತ ಹೆಚ್ಚು ಪೋಸ್ಟ್ ಗಳು ಖಾಲಿ ಇವೆ. ಕರ್ನಾಟಕದಲ್ಲಿ 1000 ಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇವೆ..

ಈ ಕೆಲಸಕ್ಕೆ 7ನೇ ತರಗತಿ, 9ನೇ ತರಗತಿ, 10ನೇ ತರಗತಿ, ಪಿಯುಸಿ ಮತ್ತು ಡಿಗ್ರಿ ಪಾಸ್ ಆಗಿರುವವರು ಅರ್ಜಿ ಸಲ್ಲಿಸಬಹುದು. ಆಸಕ್ತಿ ಇರುವವರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಕೆಲಸಕ್ಕಾಗಿ ಅರ್ಜಿ ಸಲ್ಲಿಸಲು ಬೇಕಾಗುವ ಎಲ್ಲಾ ಮಾಹಿತಿಗಳನ್ನು ಇಂದು ನಿಮಗೆ ತಿಳಿಸಕೊಡುತ್ತೇವೆ. ಮೊದಲಿಗೆ ನೀವು www.wcd.nic.in ಈ ವೆಬ್ಸೈಟ್ ಓಪನ್ ಮಾಡಿದಾಗ ಹೋಮ್ ಪೇಜ್ ಓಪನ್ ಆಗುತ್ತದೆ.

Anganwadi recruitment 2023

ಇಲ್ಲಿ ನೀವು ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಇದರಲ್ಲಿ ನೀವು ಹುದ್ದೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಓದಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 10 2023. ಈ ದಿನಾಂಕದ ಒಳಗೆ ಅರ್ಜಿ ಸಲ್ಲಿಸಿ. ಇಲ್ಲಿ ಖಾಲಿ ಇರುವ ಹುದ್ದೆಗಳು ಯಾವುವು ಎಂದರೆ, 1.ಅಂಗನವಾಡಿ ಮೇಲ್ವಿಚಾರಕಿ 2.ಅಂಗನವಾಡಿ ಕಾರ್ಯಕರ್ತೆ 3.ಅಂಗನವಾಡಿ ಸಹಾಯಕಿ 4.ಶಿಕ್ಷಕ. ಒಟ್ಟು 24,500 ಕ್ಕಿಂತ ಹೆಚ್ಚು ಪೋಸ್ಟ್ ಗಳು ಖಾಲಿ ಇವೆ.

ಇದು ಕೇಂದ್ರ ಸರ್ಕಾರದ ಹುದ್ದೆ ಆಗಿದ್ದು, ಎಲ್ಲಾ ಮಹಿಳೆಯರು ಅರ್ಜಿ ಸಲ್ಲಿಸಬಹುದು. CPC ಪ್ರಕಾರ ನಿಮಗೆ ಕೇಂದ್ರ ಸರ್ಕಾರದಿಂದ ವೇತನ ಸಿಗುತ್ತದೆ. ಈ ಹುದ್ದೆಗೆ ಅಗತ್ಯವಿರುವ ವಯೋಮಿತಿ ಬಗ್ಗೆ ಹೇಳುವುದಾದರೆ, ಈ ವರ್ಷಕ್ಕೆ ಕನಿಷ್ಠ 18 ವರ್ಷ ಆಗಿರಬೇಕು, ಹಾಗೆಯೇ 45 ವರ್ಷ ಮೀರಿರಬಾರದು. ಇಲ್ಲಿ ವಯೋಮಿತಿ ಸಡಿಲಿಕೆ ಇರಲಿದ್ದು, ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ, ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷದವರೆಗು ವಯೋಮಿತಿ ಸಡಿಲಿಕೆ ಇರುತ್ತದೆ.

ಈ ಕೆಲಸದ ಶೈಕ್ಷಣಿಕ ಅರ್ಹತೆ ಬಗ್ಗೆ ಹೇಳುವುದಾದರೆ, ಸರ್ಕಾರದ ಮಾನ್ಯತೆ ಪಡೆದಿರುವ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ 8ನೇ ತರಗತಿ, 10ನೇ ತರಗತಿ, ಪಿಯುಸಿ ಅಥವಾ ಡಿಗ್ರಿ ಪಾಸ್ ಮಾಡಿರಬೇಕು. ಆಯ್ಕೆ ಆಗುವ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಬಗ್ಗೆ ಹೇಳುವುದಾದರೆ, ಇದಕ್ಕಾಗಿ ಯಾವುದೇ ಪರೀಕ್ಷೆ ಇರುವುದಿಲ್ಲ, ಡಾಕ್ಯುಮೆಂಟ್ ವೆರಿಫಿಕೇಶನ್ ಇರುತ್ತದೆ. ನೇರವಾಗಿ ಇಂಟರ್ವ್ಯೂ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ರಾಜ್ಯ ಸರ್ಕಾರ ಹುದ್ದೆಗಳನ್ನು ಭರ್ತಿ ಮಾಡಿದರು ಅದಕ್ಕಾಹಿ ಪರೀಕ್ಷೆ ಇರುವುದಿಲ್ಲ. ಇನ್ನು ತಿಂಗಳ ವೇತನ ಹುದ್ದೆಗೆ ಆಧಾರದ ಮೇಲೆ ನಿಗದಿ ಮಾಡಲಾಗುತ್ತದೆ. 15 ರಿಂದ 25 ಸಾವಿರದವರೆಗು ತಿಂಗಳ ವೇತನ ಇರುತ್ತದೆ. ಆಸಕ್ತಿ ಇರುವವರು ಶೀಘ್ರದಲ್ಲೇ ಅರ್ಜಿ ಸಲ್ಲಿಸಿ.

Leave a Reply

Your email address will not be published. Required fields are marked *