ಅಣಬೆ ಕೃಷಿಯಲ್ಲಿ ಯಶಸ್ವಿಯಾಗಿ ವರ್ಷಕ್ಕೆ ಲಕ್ಷಾಂತರ ರೂಪಾಯಿ ಆದಾಯವನ್ನೂ ಗಳಿಸುತ್ತಿರುವ ರಶ್ಮಿ ಭಾನುಪ್ರಕಾಶ್ ಅವರ ಸಾಧನೆಯ ಬಗ್ಗೆ ನಾವಿಂದು ನಿಮಗೆ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ರಶ್ಮಿ ಭಾನುಪ್ರಕಾಶ್ ಅವರು ಕೃಷಿ ವಿಜ್ಞಾನ ಕೇಂದ್ರದಲ್ಲಿ ಅಣಬೆ ಬೇಸಾಯ ತರಬೇತಿ ಮತ್ತು ಅದರ ಮೌಲ್ಯವರ್ಧನೆ ಮಾಡುತ್ತಿದ್ದಾರೆ. ಇವರು ಕಳೆದ ಮೂರು ವರ್ಷಗಳಿಂದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಅಣಬೆ ಕೃಷಿಯನ್ನು ಮಾಡುವುದರ ಜೊತೆಗೆ ಕೃಷಿಕರಿಗೆ ತರಬೇತಿಯನ್ನು ಸಹ ನೀಡುತ್ತಿದ್ದಾರೆ. ಪ್ರಾರಂಭದಲ್ಲಿ ಇವರಿಗೆ ಅಣಬೆ ಕೃಷಿಯ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಇವರು ಕೃಷಿ ವಿಜ್ಞಾನ ಕೇಂದ್ರದಲ್ಲಿ ಒಂದು ತಿಂಗಳ ತರಬೇತಿಯನ್ನು ಪಡೆದುಕೊಂಡು ಕೆಲಸವನ್ನು ಮಾಡುತ್ತಿದ್ದಾರೆ ಇವನ್ನು ಸಾಮಾನ್ಯವಾಗಿ ಒಯ್ಸ್ಟರ್ ಅಣಬೆಗಳನ್ನು ಬೇಸಾಯ ಮಾಡುತ್ತಾರೆ. ಶಿಟಕಿ ಅಣಬೆ ಬಟನ್ ಅಣಬೆ ಮುಂತಾದ ವಿಧದ ಅಣಬೆಗಳನ್ನು ಬೆಳೆಯುವುದಕ್ಕೆ ತುಂಬಾ ಕರ್ಚು ಉಂಟಾಗುತ್ತದೆ.

ಒಯ್ಸ್ಟರ್ ಅಣಬೆಗಳನ್ನು ತುಂಬಾ ಕಡಿಮೆ ಖರ್ಚಿನಲ್ಲಿ ಸುಲಭವಾಗಿ ಮನೆಯಲ್ಲಿಯೇ ಬೆಳೆಸಬಹುದು. ರಶ್ಮಿ ಅವರು ಇದುವರೆಗೂ ಸಾವಿರಕ್ಕಿಂತ ಹೆಚ್ಚು ಮಹಿಳಾ ಸಂಘಗಳಿಗೆ ತರಬೇತಿಯನ್ನು ನೀಡಿದ್ದಾರೆ ಜೊತೆಗೆ ಗುಡ್ಡಗಾಡು ಪ್ರದೇಶದ ಜನರಿಗೆ ಹೋಗಿ ಉಚಿತವಾಗಿ ತರಬೇತಿಯನ್ನು ನೀಡಿದ್ದಾರೆ. ಒಯ್ಸ್ಟರ್ ಅಣಬೆಗಳಲ್ಲಿ ಪೋಷಕಾಂಶಗಳು ಹೆಚ್ಚಾಗಿವೆ ಜೊತೆಗೆ ಇದನ್ನು ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾಗಿರುವವರೂ ಕೂಡ ಸೇವಿಸಬಹುದು ಇದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯ ಪ್ರಯೋಜನ ಉಂಟಾಗುತ್ತದೆ.

ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೋಲಿಕ್ಯಾಸಿಡ್ ಇದ್ದು ಇದು ಹೃದಯ ಸಂಬಂಧಿ ಕಾಯಿಲೆಗಳಿಗೆ ಉಪಯುಕ್ತವಾಗಿದೆ. ರಶ್ಮಿ ಅವರು ಯಾವ ರೀತಿಯಾಗಿ ಅಣಬೆ ಕೃಷಿ ಯನ್ನು ಮಾಡುತ್ತಾರೆ ಎಂಬುವುದನ್ನು ತಿಳಿಯುವುದಾದರೆ ಲಕ್ಷ್ಮಿ ಅವರು ಹೇಳುವ ಪ್ರಕಾರ ಇದನ್ನು ತುಂಬಾ ಸುಲಭವಾಗಿ ಬೆಳೆಸಬಹುದು.ಹೇಗೆಂದರೆ ಕೃಷಿಯಲ್ಲಿ ಅನೇಕ ತ್ಯಾಜ್ಯ ವಸ್ತುಗಳು ಸಿಗುತ್ತವೆ ಉದಾಹರಣೆಗೆ ಬತ್ತದ ಹುಲ್ಲು ಕಾಫಿ ಹೊಟ್ಟು ಬತ್ತದ ಹೊಟ್ಟು ತೆಂಗಿನಕಾಯಿ ಚಿಪ್ಪಿನ ಪುಡಿ ಅಡಿಕೆ ಸಿಪ್ಪೆ ಕಾರ್ಡ್ಬೋರ್ಡ್ ಪೇಪರ್ ಈ ಎಲ್ಲವುಗಳನ್ನು ಬಳಸಿಕೊಂಡು ಅಣಬೆ ಕೃಷಿ ಯನ್ನು ಮಾಡಬಹುದು.

ಭತ್ತದ ಹುಲ್ಲನ್ನು ಬಳಸಿಕೊಂಡು ಅಣಬೆ ಕೃಷಿಯನ್ನು ಮಾಡುವುದರಿಂದ ಹೆಚ್ಚಿನ ಇಳುವರಿಯನ್ನು ಪಡೆಯಬಹುದು. ಭತ್ತದ ಹುಲ್ಲನ್ನು ಎರಡರಿಂದ ನಾಲ್ಕು ಇಂಚು ಕಟ್ಟು ಮಾಡಿಕೊಂಡು ಅದನ್ನು ರಾತ್ರಿಯಿಡೀ ನೆನೆಸಿಡಬೇಕು ಅಂದರೆ ಬತ್ತದ ಹುಲ್ಲನ್ನು ಒಂದು ಚೀಲದಲ್ಲಿ ತುಂಬಿ ಡ್ರಮ್ಮಿನ ನೀರಿನಲ್ಲಿ ಮುಳುಗಿಸಿಡ ಬೇಕು ಬೆಳಿಗ್ಗೆ ಅದನ್ನ ಹೊರತೆಗೆದು ಅದನ್ನು ಹಂಡೆಯಲ್ಲಿ ಕುದಿಸಬೇಕು

ನಂತರ ಸ್ವಲ್ಪ ಪ್ರಮಾಣದ ಸೂರ್ಯನ ಬಿಸಿಲಿನಲ್ಲಿ ತಂಪಿನಲ್ಲಿ ಸ್ವಲ್ಪ ಹೊತ್ತು ಒಣಗಿಸಬೇಕು. ಶೇಕಡ ಎಪ್ಪತ್ತರಷ್ಟು ಒಣಗಿರುವ ಹಾಗೆ ಮುವತ್ತರಷ್ಟು ಹಸಿಯಾಗಿರುವ ಹಾಗೆ ನೋಡಿಕೊಳ್ಳಬೇಕು. ಕೈಯಲ್ಲಿ ಹುಲ್ಲನ್ನು ಒತ್ತಿ ನೋಡಿದಾಗ ಅದರಲ್ಲಿ ಮೋಯ್ಸ್ಚರ್ ಇರಬೇಕು. ಅಂತಹ ಹುಲ್ಲನ್ನ ಪಿಪಿ ಕವರ್ ಗಳನ್ನು ತೆಗೆದುಕೊಂಡು ಅದರಲ್ಲಿ ಒಂದು ಲೇಯರ್ ಎರಡರಿಂದ ಮೂರು ಇಂಚಸ್ಟು ಹುಲ್ಲುಗಳನ್ನು ಹಾಕಿ ಅದರ ಮೇಲೆ ಅಣಬೆ ಬೀಜಗಳನ್ನು ಹಾಕಬೇಕು. ಅಣಬೆ ಬೀಜಗಳು ಕೃಷಿ ಕೇಂದ್ರದಲ್ಲಿ ನಿಮಗೆ ಸಿಗುತ್ತವೆ.

ಈ ರೀತಿಯಾಗಿ ಕವರ್ನಲ್ಲಿ ಮೂರರಿಂದ ನಾಲ್ಕು ಲೇಯರ್ ಗಳನ್ನು ಹಾಕಿ ಅದನ್ನು ಬಿಗಿಯಾಗಿ ಕಟ್ಟಿ ಇಪ್ಪತ್ತೊಂದು ದಿನಗಳ ಕಾಲ ಕತ್ತಲೆ ಕೋಣೆಯಲ್ಲಿ ಇಡುತ್ತಾರೆ. ಇಪ್ಪತ್ತೊಂದು ದಿನಗಳ ನಂತರ ಅದನ್ನು ಹೊರತೆಗೆದು ಅದಕ್ಕೆ ಸ್ಪ್ರೇ ಮಾಡಬೇಕಾಗುತ್ತದೆ. ಒಂದು ಕವರ್ನಲ್ಲಿ ಐದು ನೂರರಿಂದ ಆರುನೂರು ಗ್ರಾಂ ಅಣಬೆಯನ್ನು ಬೆಳೆಯಬಹುದು. ಮಾರುಕಟ್ಟೆಯಲ್ಲಿ ಒಂದು ಕೆಜಿಗೆ ಎರಡು ನೂರಾ ಐವತ್ತರಿಂದ ಮುನ್ನೂರು ರೂಪಾಯಿಯವರೆಗೆ ಬೆಲೆ ಇದೆ.

ಇವರು ರೈತರಿಗೆ ಅಣಬೆ ತರಬೇತಿಯನ್ನು ಕೊಟ್ಟು ಅವರು ಬೆಳೆದಂತಹ ಅಣಬೆಯನ್ನು ಇವರೇ ಖರೀದಿಸಿ ಅದನ್ನು ಮಾರಾಟ ಕೂಡ ಮಾಡುತ್ತಾರೆ. ಇವರು ತಿಂಗಳಿಗೆ ಸುಮಾರು ಮುನ್ನೂರು ಕೆಜಿಯಷ್ಟು ಅಣಬೆಯನ್ನು ಬೆಳೆಯುತ್ತಾರೆ. ಇನ್ನು ಅಣಬೆಯನ್ನು ಯಾವ ರೀತಿಯಾಗಿ ಮೌಲ್ಯವರ್ಧನೆ ಮಾಡುತ್ತಾರೆ ಎಂದರೆ ಸೂರ್ಯನ ಬಿಸಿಲಿನಲ್ಲಿ ಒಣಗಿಸಿ ಅದನ್ನು ಪೌಡರ್ ಮಾಡುತ್ತಾರೆ. ಅದರಲ್ಲಿ ನ್ಯೂಟ್ರಿಷನ್ ಅಂಶ ಹೆಚ್ಚಾಗಿರುವುದರಿಂದ ಅದನ್ನ ಅಡುಗೆಯಲ್ಲಿ ಸಾಂಬಾರ್ ಪಲ್ಲೆಗಳಲ್ಲಿ ಬಳಸಬಹುದು ಜೊತೆಗೆ ಅಣಬೆಯಿಂದ ಬಳಸಿಕೊಂಡು ಅನೇಕ ವಿಧವಾದ ಅಂತಹ ಖಾದ್ಯ ಪದಾರ್ಥಗಳನ್ನು ತಯಾರಿಸಬಹುದು.

ಒಂದು ವೇಳೆ ಅಣಬೆ ಕೊಯ್ಲಿಗೆ ಬಂದು ಅದು ಮಾರಾಟವಾಗದೆ ಹಾಗೆ ಉಳಿದರೆ ಅದರಿಂದ ಬೇರೆ ಉತ್ಪನ್ನಗಳನ್ನು ತಯಾರಿಸಿ ಲಾಭವನ್ನು ಪಡೆಯುತ್ತಾರೆ. ಇವರು ಒಂದು ತಿಂಗಳಿಗೆ ಖರ್ಚೆಲ್ಲ ಸೇರಿ ಐವತ್ತು ಸಾವಿರ ರೂಪಾಯಿಗಳಿಸುತ್ತಾರೆ. ನೀವು ಕೂಡ ಮನೆಯಲ್ಲಿ ಕಡಿಮೆ ಕರ್ಚಿನಲ್ಲಿ ಇದನ್ನು ಬೆಳೆದು ಉತ್ತಮವಾದಂತಹ ಲಾಭವನ್ನು ಪಡೆಯಬಹುದಾಗಿದೆ. ದಿನದಲ್ಲಿ ಒಂದರಿಂದ ಎರಡು ತಾಸನ್ನು ನಿಮ್ಮ ಸಮಯವನ್ನು ಅಣಬೆ ಬೆಳೆ ಗೆ ವಿನಿಯೋಗಿಸಿ ಉತ್ತಮವಾದಂತಹ ಇಳುವರಿ ಹಾಗೂ ಉತ್ತಮವಾದಂತಹ ಲಾಭವನ್ನು ಪಡೆಯಬಹುದಾಗಿದೆ. ರಶ್ಮಿ ಭಾನುಪ್ರಕಾಶ್ ಅವರು ಅಣಬೆ ಕೃಷಿಯಲ್ಲಿ ಯಶಸ್ಸನ್ನು ಸಾಧಿಸಿದ್ದಾರೆ ನೀವು ಕೂಡ ಅಣಬೆ ಕೃಷಿಯನ್ನು ಮಾಡುವ ಮೂಲಕ ಯಶಸ್ಸನ್ನು ಸಾಧಿಸಬಹುದಾಗಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!