ಈ ಅಮೃತ ಬಳ್ಳಿ ಮತ್ತು ಇದರ ಎಲೆಗಳಲ್ಲಿ ಸುಮಾರು ೭೫ ರೋಗಗಳನ್ನು ವಾಸಿ ಮಾಡುವ ಗುಣವನ್ನು ಇದು ಹೊಂದಿದೆ. ಇದನ್ನು ಒಂದು ಆಯುರ್ವೇದ ಔಷಧಿ ಸಸ್ಯ ಎಂದು ಪರಿಗಣಿಸಲಾಗಿದೆ. ಹಲವಾರು ಆಯುರ್ವೇದ ಔಷಧಿಗಳನ್ನು ತಯಾರಿಸುವಾಗ ಈ ಅಮೃತ ಬಳ್ಳಿಯನ್ನು ಬಳಸುತ್ತಾರೆ. ಅಮೃತ ಬಳ್ಳಿಯಲ್ಲಿ ಇರುವಂತಹ ವಿಟಮಿನ್ಸ್ ಮತ್ತು ಮಿನರಲ್ಸ್ ಗಳು ಇದರ ಔಷಧೀಯ ಗುಣಗಳನ್ನು ಹೆಚ್ಚಿಸುತ್ತವೆ.
ಅಮೃತ ಬಳ್ಳಿಯ ಆರೋಗ್ಯಕರ ಗುಣಗಳ ಬಗ್ಗೆ ಹೇಳುವುದಾದರೆ, ಕಾಮಾಲೆ ಅಥವಾ ಜೋಯಿಂಡಿಸ್ ಖಾಯಿಲೆ ಇರುವವರು ತಮ್ಮ ಡಯೆಟ್ ನಲ್ಲಿ ಅಮೃತ ಬಳ್ಳಿಯ ಎಲೆಗಳು ಅಥವಾ ಬಳ್ಳಿಗಳನ್ನು ಬಳಸಬಹುದು. ಇದರ ಜ್ಯೂಸ್ ಕುಡಿಯಬಹುದು ಅಥವಾ ಅಮೃತ ಬಳ್ಳಿಯ ಎಲೆಗಳನ್ನು ಹಾಗೆಯೇ ತಿನ್ನಬಹುದು ಅಥವಾ ಬಳ್ಳಿಯಿಂದ ಕಷಾಯ ತಯಾರಿಸಿ ಅದನ್ನು ಸಹ ಕುಡಿಯಬಹುದು. ಒಟ್ಟಾರೆಯಾಗಿ ಹೇಳುವುದಾದರೆ ಈ ಕಾಮಾಲೆ ಅಥವಾ ಜೋಯಿಂಡಿಸ್ ಖಾಯಿಲೆಯನ್ನ ಓಡಿಸುವಲ್ಲಿ ಅಮೃತ ಬಳ್ಳಿ ಮತ್ತು ಅದರ ಎಲೆಗಳು ತುಂಬಾ ಸಹಾಯಕಾರಿ ಆಗುತ್ತವೆ.
ಇನ್ನು ಅರ್ಥರಿತೀಸ್ ಕೀಳು ನೋವಿನ ಸಮಸ್ಯೆ ಇರುವವರು ಅಮೃತ ಬಳ್ಳಿ ಮತ್ತು ಎಲೆಗಳಿಂದ ತಯಾರಿಸಿದ ಕಾಹಾಯವನ್ನು ಕುಡಿಯುತ್ತಾ ಇದ್ದಲ್ಲಿ ಕೀಳು ನೋವಿನ ಸಮಸ್ಯೆ ದೂರ ಆಗುತ್ತದೆ. ಹಾಗೆ ಈ ಅಮೃತ ಬಳ್ಳಿಯಲ್ಲಿ ಆಂಟಿ ಪೈರಟಿಕ್ ಅಂಶ ಇದೆ ಹಾಗಾಗಿ ಇದು ನಮಗೆ ಅತಿ ಹೆಚ್ಚು ಜ್ವರ ಬಂದಾಗ ಜ್ವರವನ್ನು ಕಡಿಮೆ ಮಾಡುವಲ್ಲಿ ಸಹಾಯಕವಾಗಿದೆ. ಅದರಲ್ಲೂ ಮಲೇರಿಯಾ ಮತ್ತು ಡೆಂಗ್ಯೂ ಖಾಯಿಲೆಗಳು ಕಾಣಿಸಿಕೊಂಡಾಗ ಜ್ವರ ಹೆಚ್ಚಾಗಿ ಇರತ್ತೆ ಆ ಜ್ವರವನ್ನು ಕಡಿಮೆ ಮಾಡುವ ಗುಣ ಅಮೃತ ಬಳ್ಳಿಯಲ್ಲಿ ಇದೆ. ಇನ್ನು ಅಮೃತ ಬಳ್ಳಿಯಲ್ಲಿ ಆಂಟಿ ಆಕ್ಸಿಡೆಂಟ್ ಗಳು ಹೆಚ್ಚಾಗಿ ಇರುವುದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೆ ನಮ್ಮ ದೇಹದಲ್ಲಿ ಇರುವಂತಹ ವಿಷಕಾರಿ ಅಂಶಗಳನ್ನು ಹೊರ ಹಾಕುತ್ತೆ. ಅದರಲ್ಲೂ ಕಿಡ್ನಿ ಮತ್ತು ಲಿವರ್ ನಲ್ಲಿ ಇರುವಂತಹ ಟಾಕ್ಸಿಲ್ಸ್ ಇವುಗಳನ್ನು ತೆಗೆದುಹಾಕಲು ಸಹ ಅಮೃತ ಬಳ್ಳಿ ಸಹಾಯಕವಾಗಿದೆ.
ಜೊತೆಗೆ ನಮ್ಮ ಜೀರ್ಣ ಕ್ರಿಯೆ ಸರಾಗವಾಗಿ ನಡೆಯಲು ಸಹಾಯವಾಗುತ್ತದೆ. ಇದರಿಂದ ಆಸಿಡಿಟಿ, ಮಲಬದ್ಧತೆ, ಗ್ಯಾಸ್ಟ್ರಿಕ್ ಅಂತಹ ಸಮಸ್ಯೆಗಳನ್ನು ಸಹ ನಿವಾರಣೆ ಮಾಡುತ್ತದೆ ಅಷ್ಟೇ ಅಲ್ಲದೆ ಪೈಲ್ಸ್ ಸಮಸ್ಯೆಗೂ ಕೂಡ ಇದು ರಾಮ ಬಾಣ. ಇನ್ನು ಅಧಿಕ ರಕ್ತದ ಒತ್ತಡ ಮತ್ತು ಮಧುಮೇಹ ಇರುವ ವ್ಯಕ್ತಿಗಳಿಗೂ ಸಹ ಅಮೃತ ಬಳ್ಳಿ ಒಂದು ರೀತಿ ಸ್ನೇಹಿತ ಇದ್ದ ಹಾಗೆ. ಇವೆರಡೂ ಖಾಯಿಲೆ ಇರುವವರು ಅಮೃತ ಬಳ್ಳಿಯ ಎಲೆಗಳನ್ನು ಸೇವಿಸುವುದರಿಂದ ಅಧಿಕ ರಕ್ತದ ಒತ್ತಡ ಕಡಿಮೆ ಆಗತ್ತೆ ಹಾಗೂ ಮಧುಮೇಹಿಗಳಿಗೆ ಸಹ ಇದರ ಎಲೆಗಳನ್ನು ಆಗಾಗ ತಿನ್ನುವುದರಿಂದ ಅವರ ರಕ್ತದಲ್ಲಿ ಇರುವಂತಹ ಶುಗರ್ ಲೆವೆಲ್ ಕಡಿಮೆ ಆಗತ್ತೆ. ಇನ್ನು ರಕ್ತ ಹೀನತೆ ಮತ್ತು ಅನಿಮಿಯಾ ಖಾಯಿಲೆಯನ್ನು ಗುಣ ಪಡಿಸಲು ಸಹ ಅಮೃತ ಬಳ್ಳಿಯ ಎಲೆಗಳನ್ನು ಉಪಯೋಗಕ್ಕೆ ಬರುತ್ತವೆ. ನಮ್ಮ ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಿ ಅನಿಮಿಯಾ ಖಾಯಿಲೆಯನ್ನು ಗುಣ ಪಡಿಸುತ್ತದೆ. ಜೊತೆಗೆ ಪಿ ಸಿ ಓ ಡಿ ಮತ್ತು ಸರಿಯಾಗಿ ತಿಂಗಳ ಮುಟ್ಟು ಆಗದೆ ಇರುವವರು ಸಹ ಅಮೃತ ಬಳ್ಳಿಯ ಎಲೆಗಳನ್ನು ಸೇವಿಸುವುದರಿಂದ ಮತ್ತು ಅದರ ಕಷಾಯವನ್ನು ಕುಡಿಯುವುದರಿಂದಲೂ ಸಹ ಈ ಎರಡು ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಹಾಗೂ ಹಾರ್ಮೋನುಗಳು ವ್ಯತ್ಯಾಸ ಆಗಿದ್ದಾರೆ ಅವು ಸರಿ ಆಗತ್ತೆ.
ಅಮೃತ ಬಳ್ಳಿಯಲ್ಲಿ ಇರುವಂತಹ ಆಂಟಿ ಕ್ಯಾನ್ಸರ್ ಅಂಶಗಳು ನಮ್ಮ ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳು ಬೆಳೆಯದಂತೆ ನೋಡಿಕೊಳ್ಳುತ್ತವೆ. ಇನ್ನು ಚರ್ಮ ರೋಗಗಳನ್ನು ನಿವಾರಣೆ ಮಾಡುವ ಗುಣವನ್ನು ಸಹ ಹೊಂದಿದೆ. ಅಮೃತ ಎಲೆಗಳನ್ನು ಪೇಸ್ಟ್ ಮಾಡಿ ಅದಕ್ಕೆ ಶುದ್ಧವಾದ ಅರಿಶಿನವನ್ನು ಸೇರಿಸಿ ಚರ್ಮದ ಮೇಲೆ ಹಚ್ಚಿದರೆ ಆ ಚರ್ಮ ರೋಗ ಬೇಗ ಗುಣವಾಗುತ್ತದೆ. ಹಾಗೆಯೇ ಕಿವಿ ನೋವಿಗೂ ಸಹ ಇದನ್ನು ಬಳಸಬಹುದು. ಅಮೃತ ಬಳ್ಳಿಯ ಎಲೆಗಳನ್ನು ಜಜ್ಜಿ ರಸ ತೆಗೆದು ಎರಡು ಹನಿ ರಸವನ್ನು ನೋವು ಇರುವ ಕಿವಿಗೆ ಹಾಕಿದ್ರೆ ಕಿವಿ ನೋವು ಗುಣ ಆಗತ್ತೆ. ಅಮೃತ ಬಳ್ಳಿಯ ಎಲೆಗಳನ್ನು ನಮ್ಮ ಕಣ್ಣಿನ ಆರೋಗ್ಯಕ್ಕೆ ಕೂಡ ಬಳಸಬಹುದು. ಇದರಲ್ಲಿ ಇರುವಂತಹ ವಿಟಮಿನ್ ಎ ನಮ್ಮ ಕಣ್ಣಿನ ಆರೋಗ್ಯವನ್ನು ಚೆನ್ನಾಗಿ ಕಾಪಾಡುತ್ತವೆ. ಶೀತ ಕೆಮ್ಮು ಹಾಗೂ ಉಸಿರಾಟದ ಸಮಸ್ಯೆ ಇದ್ದರೆ ಅಮೃತ ಬಳ್ಳಿಯ ಎಲೆಗಳನ್ನು ರಸ ತೆಗೆದು ಒಂದು ಟಿ ಸ್ಪೂನ್ ಜೇನು ತುಪ್ಪ ಸೇರಿಸಿ ಸೇವಿಸಿದರೆ ಈ ರೋಗಗಳು ಕಡಿಮೆ ಆಗುತ್ತವೆ. ಹಾಗೆ ಮುಖದಲ್ಲಿ ತುಂಬಾ ಮೊಡವೆಗಳು ಕಲೆಗಳು ಇರುವವರು ಆಗಾಗ ಅಮೃತ ಬಳ್ಳಿಯ ಎಲೆಗಳನ್ನು ಸೇವಿಸುವುದು ಒಳ್ಳೆಯದು.
ಇದು ನಮ್ಮ ರಕ್ತವನ್ನು ಶುದ್ಧೀಕರಿಸಿ ಚರ್ಮ ರೋಗವನ್ನು ಬಹಳ ಬೇಗ ಕಡಿಮೆ ಮಾಡುತ್ತದೆ. ಅಮೃತ ಬಳ್ಳಿ ಮತ್ತು ಎಲೆ ನಮ್ಮ ಮೆದುಳಿಗೂ ಸಹ ತುಂಬ ಒಳ್ಳೆಯದು. ನರಕೋಶಗಳ ಆರೋಗ್ಯಕ್ಕೂ ಒಳ್ಳೆಯದು. ಖಿನ್ನತೆ ಇರುವವರು ಅಮೃತ ಬಳ್ಳಿ ಸೇವಿಸುವುದು ಒಳ್ಳೆಯದು ಇದರಿಂದ ಖಿನ್ನತೆ ದೂರ ಆಗತ್ತೆ. ಇನ್ನು ಲೈಂಗಿಕ ಸಮಸ್ಯೆಯನ್ನು ದೂರ ಮಾಡುವ ಗುಣವೂ ಸಹ ಅಮೃತ ಬಳ್ಳಿಯಲ್ಲಿ ಇದೆ. ಇವಿಷ್ಟು ಅಮೃತ ಬಳ್ಳಿ ಮತ್ತು ಎಲೆಗಳ ಉಪಯೋಗಗಳು. ಹಾಗಾಗಿ ನಮ್ಮ ದೇಹಕ್ಕೆ ಇಷ್ಟೊಂದು ಉಪಯೋಗ ಆಗುವ ಅಮೃತ ಬಳ್ಳಿ ಮತ್ತು ಎಲೆ ಸಿಕ್ಕಿದ್ರೆ ದಿನಕ್ಕೆ ಒಮ್ಮೆ ಅದರ ಎಲೆಗಳನ್ನು ಸೇವಿಸಿ ಹತ್ತು ಹಲವು ಖಾಯಿಲೆಗಳಿಂದ ದೂರ ಇರಬಹುದು.