ಸಾಮಾನ್ಯವಾಗಿ ಜ್ವರ ಬಂದಾಗ ಆಸ್ಪತ್ರೆಗೆ ಹೋಗುತ್ತೇವೆ ಆದರೆ ಮನೆಯಲ್ಲಿ ಸುಲಭವಾಗಿ ದಿನನಿತ್ಯ ಉಪಯೋಗಿಸುವ ಸಾಮಗ್ರಿಗಳನ್ನು ಬಳಸಿ ತಯಾರಿಸಿದ ಮನೆ ಮದ್ದನ್ನು ಸೇವಿಸಿ ಜ್ವರವನ್ನು ಕಡಿಮೆಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಕೊರೋನ ವೈರಸ್ ನಿಂದ ಆಸ್ಪತ್ರೆಗೆ ಹೋಗಲು ಜನರು ಹೆದರುತ್ತಿದ್ದಾರೆ ಈ ಸಮಯದಲ್ಲಿ ಈ ಮನೆ ಮದ್ದು ಉಪಯುಕ್ತ. ಹಾಗಾದರೆ ಈ ಮನೆ ಮದ್ದನ್ನು ತಯಾರಿಸುವ ವಿಧಾನವನ್ನು ಈ ಲೇಖನದ ಮೂಲಕ ತಿಳಿಯೋಣ.
ಅಮೃತ ಬಳ್ಳಿ ಕಷಾಯ ಬೇಕಾಗುವ ಸಾಮಗ್ರಿಗಳು ಅಮೃತ ಬಳ್ಳಿಯ ಎಲೆ, ಬೇಕಾದರೆ ದಂಟು, ನೀರು. ಮಾಡುವ ವಿಧಾನವೆಂದರೆ ಬೇಕಾದಷ್ಟು ನೀರನ್ನು ಕುದಿಸಿ ಅದಕ್ಕೆ 5 ಎಲೆಯನ್ನು ಹಾಕಿ ದಂಟು ಹಾಕುವುದಾದರೆ ಜಜ್ಜಿ ಹಾಕಬೇಕು. ಕೇವಲ ಎಲೆ ಹಾಕುವುದಾದರೆ 10 ಎಲೆ ಹಾಕಬೇಕು. ನಂತರ ನೀರನ್ನು ಲೋಟಕ್ಕೆ ಸೋಸಬೇಕು. ಒಂದು ಲೋಟ ಕಷಾಯವನ್ನು ದಿನಕ್ಕೆ ಮೂರು ಬಾರಿ ಸಮ ಪ್ರಮಾಣದಲ್ಲಿ ಕುಡಿಯಬೇಕು. ಈ ಕಷಾಯ ಕುಡಿಯಲು ಚೆನ್ನಾಗಿರುವುದಿಲ್ಲ ಕುಡಿಯಲು ಆಗದೆ ಇದ್ದರೆ ಅದಕ್ಕೆ ಬೆಲ್ಲ ಸೇರಿಸಿ ಕುಡಿಯಬಹುದು. ಅಮೃತ ಬಳ್ಳಿಯ ಎಲೆಯನ್ನು ದಿನಕ್ಕೆ ಮೂರು ಬಾರಿ ಸೇವಿಸಿದರೂ ಆರೋಗ್ಯಕ್ಕೆ ಒಳ್ಳೆಯದು.
ಹಿಪ್ಪಲಿಯನ್ನು ಕುಟ್ಟಿ ಪುಡಿ ಮಾಡಬೇಕು. ಅರ್ಧ ಸ್ಪೂನ್ ಹಿಪ್ಪಲಿ ಪುಡಿಗೆ ಒಂದು ಸ್ಪೂನ್ ಬೆಲ್ಲವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ದಿನಕ್ಕೆ ಮೂರು ಬಾರಿ ಸಮ ಪ್ರಮಾಣದಲ್ಲಿ ತಿನ್ನಬೇಕು ಇದರಿಂದಲೂ ಜ್ವರ ಕಡಿಮೆಯಾಗುತ್ತದೆ. ತುಳಸಿ ಕುಡಿ, 6 ಮೆಣಸಿನ ಕಾಳು ಇವೆರಡನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು. ಬೆಳಗ್ಗೆ ಎದ್ದ ತಕ್ಷಣ ಹಾಗೂ ರಾತ್ರಿ ಊಟದ ಮೊದಲು ತಿನ್ನಬೇಕು. ಈ ಮೂರು ಮನೆ ಮದ್ದಿನಲ್ಲಿ ಯಾವುದಾದರೂ ಮಾಡಬಹುದಾಗಿದೆ. ಇದರಿಂದ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ. ಈ ಮನೆ ಮದ್ದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಜೀರ್ಣ ಶಕ್ತಿ ಹೆಚ್ಚಾಗಿ ಆರೋಗ್ಯ ವೃದ್ಧಿಯಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಮನೆ ಮದ್ದಿನ ಮೂಲಕ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ.