ನಮ್ಮ ಸುತ್ತಲಿನ ವಾತಾವರದಲ್ಲಿ ಇರುವಂತ ಕೆಲವು ಸಸ್ಯ ವರ್ಗಗಳು ನಮ್ಮ ದೈಹಿಕ ಸಮಸ್ಯೆಗಳಿಗೆ ಪರಿಹಾರವನ್ನು ನೀಡುವಂತ ಕೆಲಸ ಮಾಡುತ್ತವೆ ಅಂತಹ ಸಸ್ಯ ವರ್ಗಗಳಲ್ಲಿ ಕೆಲವೊಂದು ಸಸ್ಯಗಳು ಚಿಕನ್ ಗುನ್ಯಾದಂತ ಸಮಸ್ಯೆಗಳಿಗೆ ಹೇಗೆ ಪರಿಹಾರ ನೀಡುವಂತ ಕೆಲಸವನ್ನು ಮಾಡುತ್ತವೆ ಅನ್ನೋದನ್ನ ಈ ಮೂಲಕ ತಿಳಿಯೋಣ. ನಿಮಗೆ ಉಪಯುಕ್ತ ವಿಚಾರ ಇಷ್ಟವಾಗಿದ್ದರೆ ನಿಮ್ಮ ಆತ್ಮೀಯರಿಗೂ ಕೂಡ ತಿಳಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.
ಚಿಕನ್ ಗುನ್ಯಾ ಜ್ವರ ಒಬ್ಬ ವ್ಯಕ್ತಿಗೆ ಬಂದರೆ ಇದು ಮಾರಕ ಕಾಯಿಲೆ ರೀತಿಯಲ್ಲಿ ಕಾಡುತ್ತದೆ ಇದಕ್ಕೆ ಸರಿಯಾದ ಚಿಕಿತ್ಸೆ ದೊರೆಯದಿದ್ದರೆ ಕೆಲವೊಮ್ಮೆ ಪ್ರಾಣಕ್ಕೆ ಕುತ್ತು ಬರುವಂತ ಸಂಗತಿ ಎದುರಾಗುತ್ತದೆ. ಹಾಗಾಗಿ ಯಾವುದೇ ಸಮಸ್ಯೆ ಇರಲಿ ದೊಡ್ಡ ಕಾಯಿಲೆಗಳೇ ಇರಲಿ ಸರಿಯಾದ ಚಿಕಿತ್ಸೆಯನ್ನು ಪಡೆದುಕೊಳ್ಳುವ ಕೆಲಸ ಮಾಡಬೇಕು. ಈ ಚಿಕನ್ ಗುನ್ಯಾ ಬಂದು ಹೋದರು ಕೂಡ ಇದರಿಂದ ಉಂಟಾಗುವಂತ ಕೀಲು ನೋವು ಮಂಡಿ ನೋವು ಈ ಸಮಸ್ಯೆಗಳು 2 ರಿಂದ 3ತಿಂಗಳವರೆಗೆ ನೋವು ಇರುತ್ತದೆ, ಅಂತ ಸಮಸ್ಯೆಗೆ ಪರಿಹಾರ ನೀಡುವ ಮನೆಮದ್ದುಗಳನ್ನು ತಿಳಿಯೋಣ ಅದರ ಜೊತೆಗೆ ಜ್ವರಕ್ಕೂ ಔಷಧಿಯಾಗಿ ಕೆಲಸ ಮಾಡುವ ಕೆಲವು ಮನೆಮದ್ದುಗಳು ಇಂತಿವೆ.
ಆರೋಗ್ಯದ ನಿಧಿ ಎಂಬುದಾಗಿ ಕರೆಸಿಕೊಳ್ಳುವ ಅಮೃತಬಳ್ಳಿ, ಈ ಅಮೃತಬಳ್ಳಿಯ ಕಷಾಯ ಮಾಡಿ ಪ್ರತಿದಿನ ಸೇವನೆ ಮಾಡುವುದರಿಂದ ದೇಹದಲ್ಲಿನ ನೋವು ಹಾಗೂ ಜ್ವರ ನಿವಾರಣೆಯಾಗುತ್ತದೆ, ಅಷ್ಟೇ ಅಲ್ಲದೆ ದೇಹದಲ್ಲಿ ಊತ ಆಗಿದ್ದರೆ ನಿವಾರಣೆಯಾಗುತ್ತದೆ. ಇನ್ನು ಕೆಲವರ ಮನೆಮುಂದೆ ತುಳಸಿ ಗಿಡ ಬೆಳೆಸಿರುತ್ತಾರೆ, ಈ ತುಳಸಿ ಗಿಡ ಬರಿ ಪೂಜೆಗೆ ಸೀಮಿತವಾಗದೆ ಆರೋಗ್ಯಕ್ಕೂ ಸಹಕಾರಿ. ತುಳಸಿಯ ಕಷಾಯವನ್ನು ನೀರಿನೊಂದಿಗೆ ಮಾಡಿ ಸೇವಿಸುವುದರಿಂದ ಜ್ವರ ಕಡಿಯಾಗಿ ನೋವು ನಿವಾರಣೆಯಾಗುತ್ತದೆ.
ಚಿಕನ್ ಗುನ್ಯಾ ನೋವು ಇದ್ರೆ ಮನೆಯಲ್ಲಿ ಅಡುಗೆಗೆ ಬಳಸುವಂತ ಓಂ ಕಾಳನ್ನು ಹುರಿದು ನಿಯಮಿತವಾಗಿ ಸ್ವಲ್ಪ ಸ್ವಲ್ಪ ಸೇವಿಸಿದರೆ ಚಿಕೂನ್ ಗುನ್ಯಾ ನೋವು ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲದೆ ಸಂಧಿನೋವು ಸಮಸ್ಯೆಗಳು ಏನಾದ್ರು ಕಾಣಿಸಿಕೊಂಡರೆ ಸಾಸಿವೆ ಎಣ್ಣೆಯನ್ನು ಪ್ರತಿದಿನ ಮಸಾಜ್ ರೀತಿಯಲ್ಲಿ ಮಾಡುವುದರಿಂದ ಸಂದಿ ನೋವು ನಿವಾರಣೆಯಾಗುವುದು.