ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ನಮ್ಮ ಕನ್ನಡದ ಹೆಮ್ಮೆಯ ಸುಧಾ ಮೂರ್ತಿ ಅವರು. ಆ ಶೋನಲ್ಲಿ ಗೆದ್ದಂತಹ 25 ಲಕ್ಷ ರೂಪಾಯಿ ಹಣವನ್ನು ಸುಧಾಮೂರ್ತಿ ಏನು ಮಾಡಿದ್ದಾರೆ ಗೊತ್ತೇ? ಇಷ್ಟಕ್ಕೂ ಆ ಹೆಸರಾಂತ ಕಾರ್ಯಕ್ರಮ ಯಾವುದು? ಸುಧಾ ಮೂರ್ತಿ ಎನು ಮಾಡಿದ್ದಾರೆ ಇದೆಲ್ಲದರ ಬಗೆಗಿನ ವಿವರವನ್ನು ನಾವು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಸುಧಾಮೂರ್ತಿಯವರು ನಮ್ಮ ಕರ್ನಾಟಕದ ಹೆಮ್ಮೆ. ಹೆಸರಾಂತ ಕಂಪನಿಯಾದ ಇನ್ಫೋಸಿಸ್ ನಾರಾಯಣ ಮೂರ್ತಿಯವರ ಧರ್ಮಪತ್ನಿಯವರಾದ ಸುಧಾಮೂರ್ತಿ ಅವರು ತಾವು ಕೋಟ್ಯಾಧೀಶರಾದರೂ ಸಹ ಅತ್ಯಂತ ಸರಳ ಹಾಗೂ ಸಜ್ಜನ ಜೀವನ ನಡೆಸುತ್ತಾರೆ. ಇವರು ಇದುವರೆಗೂ ಇಡೀ ದೇಶಾದ್ಯಂತ 20 ಸಾವಿರ ಶೌಚಾಲಯಗಳನ್ನು ಕಟ್ಟಿಸಿದ್ದಾರೆ ಹಾಗೂ 70 ಸಾವಿರ ಗ್ರಂಥಾಲಯಗಳನ್ನು ನಿರ್ಮಿಸಿದ್ದಾರೆ. ಕೊಡಗಿನ ನೆರೆ ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಲು ಸಹಾಯ ಮಾಡಿದ್ದಾರೆ. ಅಂತಹ ಸುಧಾಮೂರ್ತಿಯವರನ್ನು ಕರ್ನಾಟಕದ ಜನತೆ ಪ್ರೀತಿಯಿಂದ ಅಮ್ಮಾ ಎಂದು ಕರೆಯುತ್ತಾರೆ. ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದಲ್ಲಿ ಕನ್ನಡತಿ ಸುಧಾ ಮೂರ್ತಿ ಅವರು ಭಾಗವಹಿಸಿದ್ದರು. ಇದು ವಿಶೇಷವಾದ ಸಂಚಿಕೆ ಆಗಿದ್ದು ಈ ಶೋನಲ್ಲಿ ಸುಧಾಮೂರ್ತಿಯವರು ವಿಶೇಷ ಸ್ಪರ್ಧಿಯಾಗಿ ಭಾಗವಹಿಸಿ ಎಲ್ಲರಿಗೂ ಅಚ್ಚರಿ ತಂದಿದ್ದರು. ಸುಧಾಮೂರ್ತಿಯವರ ಕಾಲಿಗೆ ಬಿದ್ದ ಅಮಿತಾಭ್ ಬಚ್ಚನ್ ಬಗ್ಗೆ ಕೂಡಾ ಇಲ್ಲಿ ಅಭಿಮಾನ ಹೆಚ್ಚಾಗುತ್ತದೆ .ಕಾರಣ ಅವರ ವಯಸ್ಸಿಗಿಂತ ಚಿಕ್ಕವರಾದ ಸುಧಾಮೂರ್ತಿಯವರ ಕಾಲಿಗೆ ಬಿದ್ದು ಅವರು ಇನ್ನೂ ದೊಡ್ಡವರಾಗುತ್ತಾರೆ. ಸುಧಾಮೂರ್ತಿಯವರು ಜನತೆಗೆ ಮಾಡುತ್ತಿರುವ ನಿಸ್ವಾರ್ಥ ಸೇವೆಯಿಂದ ಸ್ಪೂರ್ತಿ ಪಡೆದ ಅಮಿತಾಭ್ ಬಚ್ಚನ್ ಬದುಕಿದರೆ ಅವರಂತೆ ಬದುಕಬೇಕು ಹೇಳಿದ್ದಾರೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸುಧಾಮೂರ್ತಿಯವರು ತಮ್ಮ ಬಾಲ್ಯದ ಜೀವನ, ಕಾಲೇಜು ಶಿಕ್ಷಣ, ಅಲ್ಲಿ ಶೌಚಾಲಯ ಇಲ್ಲದೆ ಪರಿತಪಿಸಿದ್ದು, ಆನಂತರ ನಾರಾಯಣ ಮೂರ್ತಿ ಅವರನ್ನು ಮದುವೆಯಾದ ಮೇಲೆ ಸಾವಿರಾರು ಶೌಚಾಲಯ ನಿರ್ಮಿಸಲು ಪಣ ತೊಟ್ಟಿದ್ದು ಇವೆಲ್ಲವನ್ನು ಸಹ ಶೋನಲ್ಲಿ ಹೇಳಿದರು. ಹತ್ತಾರು ಪುಸ್ತಕಗಳನ್ನು ಬರೆದ ಇವರು ಕನ್ನಡದ ಅತ್ಯುತ್ತಮ ಲೇಖಕಿಯಾಗಿದ್ದಾರೆ. ಇವರ ಲೇಖನ ಕನ್ನಡ ದಿನಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ.
ಸುಧಾಮೂರ್ತಿಯವರು ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದಲ್ಲಿ 25 ಲಕ್ಷ ರೂಪಾಯಿಗಳನ್ನು ಗೆದ್ದರು. ಮೊದಲ ಪ್ರಶ್ನೆಗೆ ಉತ್ತರಿಸಿದ ಅವರು 1 ಲಕ್ಷದ 60 ಸಾವಿರ ರೂಪಾಯಿ ಗೆದ್ದಿದ್ದರು. ಹೀಗೆ ಚೆನ್ನಾಗಿ ಆಡುತ್ತಿದ್ದ ಅವರು ಕೊನೆಯಲ್ಲಿ 25 ಲಕ್ಷ ರೂಪಾಯಿ ಗೆದ್ದರು. ಐವತ್ತು ಲಕ್ಷ ಪ್ರಶ್ನೆಗೆ ತಪ್ಪು ಉತ್ತರ ನೀಡಿದರು . ಆ ಪ್ರಶ್ನೆ ಹೀಗಿತ್ತು. ಸತತವಾಗಿ 2 ವರ್ಷ ಫಿಲ್ಮ್ ಫೇರ್ ಪ್ರಶಸ್ತಿ ಪಡೆದ ನಟಿ ಯಾರು ಎಂದು. ಅದಕ್ಕೆ ಉತ್ತರ ತಿಳಿಯದೇ ಆಟವನ್ನು ಕೊನೆ ಮಾಡಿದರು. ಗೆಸ್ ಮಾಡಿದ ಉತ್ತರ ಕಾಜೊಲ್ ಆಗಿತ್ತು. ಆದರೆ ಸರಿಯಾದ ಉತ್ತರ ಜಯಾ ಬಚ್ಚನ್ ಆಗಿತ್ತು. ಹಾಗಾದರೆ ಸುಧಾ ಮೂರ್ತಿ ಅವರು ತಾವು ಗೆದ್ದ 25 ಲಕ್ಷ ಹಣವನ್ನು ಏನು ಮಾಡುತ್ತಾರೆ ಗೊತ್ತೇ, ಆ ಹಣವನ್ನು ಅವರು ಸ್ವಂತ ಖರ್ಚಿಗೆ ಅಂತೂ ಬಳಸುವುದಿಲ್ಲ. ಸಮಾಜದ ಸುಧಾರಣೆಗೆ, ಬಡಕುಟುಂಬಗಳಿಗೆ ಸಹಾಯ ಮಾಡಲು ಅವರು ರೂಪಿಸಿದ ಟ್ರಸ್ಟ್’ಗೆ ಕೊಡುತ್ತಾರೆ. ಆ ಹಣವು ಬಡಬಗ್ಗರ ಉಪಯೋಗಕ್ಕೆ ಬರುತ್ತದೆ.
ಇದೇ ಅಲ್ಲವೇ ಸರಳತೆ ಸಜ್ಜನತೆ ಎಂದರೆ, ಕೋಟಿ ಕೋಟಿ ಆಸ್ತಿ ಸಂಪಾದನೆ ಮಾಡಿ ತಾವು ಬೆಳೆದುಬಂದ ಹಾದಿಯನ್ನೇ ಮರೆಯುವ ಜನರೆಲ್ಲಿ ಎಷ್ಟೇ ಆಸ್ತಿ ಪಾಸ್ತಿ ಇದ್ದರೂ ಸರಳವಾಗಿ ಜೀವನ ನಡೆಸುವ ಸುಧಾ ಮೂರ್ತಿ ಅವರೆಲ್ಲಿ ಸರಳತೆಗೆ ಇನ್ನೊಂದು ಹೆಸರು ಅಂದರೆ ಅದೂ ಸುಧಾ ಮೂರ್ತಿ ಅವರು ಎಂದರೆ ತಪ್ಪಾಗಲಾರದು.