ಪ್ರತಿಯೊಂದು ವಿಷಯದಲ್ಲೂ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ರೀತಿಯ ಪದ್ಧತಿಗಳು ಇರುತ್ತದೆ ಹಾಗೆ ಮನೆಕೆಲಸದವರನ್ನು ನೇಮಿಸಿಕೊಳ್ಳುವುದು ಅವರ ಸಂಬಳದ ವಿಷಯವೂ ಸಹ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ರೀತಿಯಾಗಿರುತ್ತದೆ. ಜಗತ್ತಿನ ದೊಡ್ಡಣ್ಣ ಎಂದು ಕರೆಯಲ್ಪಡುವ ಅಮೇರಿಕಾ ದೇಶದಲ್ಲಿ ಮನೆ ಕೆಲಸದವರನ್ನು ಹೇಗೆ ನೇಮಿಸಿಕೊಳ್ಳಬಹುದು, ಅವರ ಸಂಬಳ ಎಷ್ಟು, ಅವರ ಕೆಲಸ ಹೇಗಿರುತ್ತದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಅಮೇರಿಕಾದಲ್ಲಿ ಪ್ರತಿಯೊಂದು ಕೆಲಸಕ್ಕೂ ಅದರದ್ದೆ ಆದಂತಹ ಘನತೆ ಇದೆ. ಅಲ್ಲಿ ಎಲ್ಲಾ ರೀತಿಯ ಜಾಬ್ಸ್ ಅಂದರೆ ಹೆಚ್ಚು ಸಂಬಳ ಪಡೆಯುವ ಜಾಬ್ಸ್ ಆಗಿರಬಹುದು, ಕಡಿಮೆ ಸಂಬಳ ಪಡೆಯುವ ಜಾಬ್ಸ್ ಆಗಿರಬಹುದು ಎಲ್ಲರನ್ನು ಒಂದೆ ರೀತಿಯಲ್ಲಿ ನೋಡುತ್ತಾರೆ. ಅಮೇರಿಕಾದಲ್ಲಿ ಬಹಳಷ್ಟು ವಿದ್ಯಾರ್ಥಿಗಳು ತಮ್ಮ ಬಿಡುವಿನ ಸಮಯದಲ್ಲಿ ಮನೆಕೆಲಸದಂತಹ ಪಾರ್ಟ್ ಟೈಮ್ ಜಾಬ್ ಮಾಡುತ್ತಾರೆ. ಅಲ್ಲಿ ಮನೆ ಕೆಲಸದವರನ್ನು ಏಜೆನ್ಸಿ ಮೂಲಕ ನೇಮಿಸಿಕೊಳ್ಳಬಹುದು ಅಥವಾ ಯಾವುದೇ ಏಜೆನ್ಸಿಗೆ ಸೇರದ ಮನೆ ಕೆಲಸ ಮಾಡುವವರಿರುತ್ತಾರೆ ಅವರನ್ನು ಮನೆ ಕೆಲಸಕ್ಕೆ ನೇಮಿಸಿಕೊಳ್ಳಬಹುದು. ಅಲ್ಲಿ ಮನೆ ಕೆಲಸದವರನ್ನು ನೇಮಿಸಿಕೊಳ್ಳುವಾಗಲೂ ಕೆಲವು ಪ್ರಕ್ರಿಯೆಗಳು ಇರುತ್ತವೆ. ಏಜೆನ್ಸಿ ಮೂಲಕ ಮನೆಕೆಲಸದವರನ್ನು ನೇಮಿಸಿಕೊಂಡರೆ ಕೆಲವು ಅನಾನುಕೂಲಗಳು ಇವೆ, ಅನುಕೂಲಗಳು ಇರುತ್ತವೆ.

ಅನುಕೂಲಗಳೆಂದರೆ ಅವರು ಕೆಲಸ ಮಾಡುವಾಗ ಮನೆಯಲ್ಲಿರುವ ಬೆಲೆ ಬಾಳುವ ವಸ್ತು ಕಾಣೆಯಾದರೆ ಅವರಿಂದ ಪಡೆದುಕೊಳ್ಳಬಹುದು. ಮನೆಯ ಯಾವುದಾದರೂ ವಸ್ತು ಹಾಳಾದರೆ ಅದಕ್ಕೆ ಪರಿಹಾರ ಪಡೆಯಬಹುದು. ಮನೆ ಕೆಲಸ ಮಾಡುವಾಗ ಅವರಿಗೆ ಅಪಾಯವಾದರೆ ಅದನ್ನು ಏಜೆನ್ಸಿ ನೋಡಿಕೊಳ್ಳುತ್ತದೆ. ಅವರು ಮಾಡಿದ ಕೆಲಸ ಮನೆಯವರಿಗೆ ಇಷ್ಟವಾಗದಿದ್ದರೆ ಏಜೆನ್ಸಿಗೆ ಕಂಪ್ಲೇಂಟ್ ಮಾಡಿದರೆ ಮತ್ತೊಮ್ಮೆ ಕೆಲಸ ಮಾಡುತ್ತಾರೆ. ಏಜೆನ್ಸಿಯಿಂದ ಕೆಲಸದವರನ್ನು ನೇಮಿಸಿಕೊಂಡರೆ ಹೆಚ್ಚು ಸಂಬಳ ಕೊಡಬೇಕಾಗುತ್ತದೆ. ಕೆಲಸ ಮಾಡುವ ವೃತ್ತಿಯನ್ನು ಇಂಡಿಪೆಂಡೆಂಟಾಗಿ ಮಾಡುತ್ತಿರುವವರನ್ನು ನೇಮಿಸಿಕೊಂಡರೆ ಏಜೆನ್ಸಿ ಮೂಲಕ ನೇಮಿಸಿಕೊಂಡರೆ ಕೊಡುವ ಸಂಬಳಕ್ಕಿಂತ ಇವರಿಗೆ ಕಡಿಮೆ ಸಂಬಳ ಕೊಡಬಹುದು. ಅವಶ್ಯಕತೆ ಇದ್ದಾಗ ರಿಕ್ವೆಸ್ಟ್ ಮಾಡಿಕೊಂಡರೆ ಬೇಕಾದ ಸಮಯಕ್ಕೆ ಬರುತ್ತಾರೆ. ಮನೆಯ ಬೆಲೆಬಾಳುವ ವಸ್ತು ಕಳೆದುಹೋದರೆ, ಹಾಳಾದರೆ ಅವರಿಗೆ ಕೇಳಲು ಆಗುವುದಿಲ್ಲ. ಕೆಲಸ ಮಾಡುವ ಸಮಯದಲ್ಲಿ ಕೆಲಸಗಾರರಿಗೆ ಅಪಾಯವಾದರೆ, ಬಿದ್ದು ಪೆಟ್ಟಾದರೆ ಮನೆಯವರು ಮೆಡಿಕಲ್ ಬಿಲ್ ಪೇ ಮಾಡಬೇಕಾಗುತ್ತದೆ.

ಅಮೇರಿಕಾದಲ್ಲಿ ಕೆಲಸಗಾರರ ಸಂಬಳ ಅವರು ಪ್ರತಿದಿನ ಬರುತ್ತಾರ, ಎರಡು ವಾರಕ್ಕೊಮ್ಮೆ ಬರುತ್ತಾರ ಅಥವಾ ಗಂಟೆಗಳ ಲೆಕ್ಕ ಹೀಗೆ ಬೇರೆ ಬೇರೆ ರೀತಿ ಇರುತ್ತದೆ. ಇಂಡಿಪೆಂಡೆಂಟ್ ಮನೆಕೆಲಸ ಮಾಡುವವರು ತಿಂಗಳಿಗೊಮ್ಮೆ ಬಂದರೆ ಡಾಲರ್ 100 ಅಂದರೆ ಅಂದಾಜು ಭಾರತೀಯ ರೂಪಾಯಿ 7,200 ಸಂಬಳ ಕೊಡಬೇಕಾಗುತ್ತದೆ. ಅಲ್ಲಿಯ ಕೆಲಸಗಾರರು ಹೇಳಿದ ಸಮಯಕ್ಕೆ ಸರಿಯಾಗಿ ಬರುತ್ತಾರೆ. ಅವರಿಗೆ ಟ್ರಾವೆಲ್ ಮಾಡಲು ಒಳ್ಳೆಯ ಕಾರು ಇರುತ್ತದೆ. ಕ್ಲೀನ್ ಮಾಡಲು ಬೇಕಾಗುವ ಸಾಮಗ್ರಿಗಳನ್ನು ಅವರೇ ತರುತ್ತಾರೆ. ಚಳಿಗಾಲದಲ್ಲಿ ಹೆಚ್ಚು ಚಳಿ ಇರುವುದರಿಂದ ಮನೆಯ ಹೆಚ್ಚು ಭಾಗ ಕಾರ್ಪೇಟರ್ ಹಾಕಿರುತ್ತಾರೆ ಆದ್ದರಿಂದ ವ್ಯಾಕ್ಯೂಮ್ ಮೂಲಕ ಕ್ಲೀನ್ ಮಾಡಬೇಕಾಗುತ್ತದೆ. ಬೆಡ್ ಶೀಟ್ಸ್, ತಲೆದಿಂಬು ಇವುಗಳನ್ನು ವಾಷ್ ಮಾಡಿ ಬೆಡ್ ಮೇಲೆ ಇಟ್ಟರೆ ಅವರು ನೀಟಾಗಿ ಫೋಲ್ಡ್ ಮಾಡಿ ಇಡುತ್ತಾರೆ. ಇಡಿ ಮನೆಯ ಎಲ್ಲಾ ರೂಮ್, ಹಾಲ್, ಬಾಥ್ ರೂಮ್ ಕ್ಲೀನ್ ಮಾಡುತ್ತಾರೆ. ಮನೆಯಿಂದ ಹೋಗುವಾಗ ತಮ್ಮ ಹೆಜ್ಜೆಗುರುತು ನೆಲದ ಮೇಲೆ ಬೀಳಬಾರದು ಎಂದು ನೀಟಾಗಿ ವರೆಸಿ ಹೋಗುತ್ತಾರೆ. ತಾವು ಕ್ಲೀನ್ ಮಾಡುವಾಗ ಸಿಕ್ಕಂತಹ ವೇಸ್ಟ್ ಗಳನ್ನು ಡಸ್ಟಬಿನ್ ಗೆ ನೀಟಾಗಿ ಹಾಕಿ ಹೋಗುತ್ತಾರೆ.

ಹೋಂ ಓನರ್ಸ್ ಅಸೋಸಿಯೇಷನ್ ಎಂಬ ಸಂಸ್ಥೆಯಿದೆ ಅವರಿಗೆ ಪ್ರತಿವರ್ಷ ಪೇಮೆಂಟ್ ಮಾಡಬೇಕಾಗುತ್ತದೆ. ಅವರು ಮನೆಯ ಮುಂದೆ ಗಿಡಗಳನ್ನು ನೆಡುವುದು, ಎತ್ತರವಾಗಿ ಬೆಳೆದ ಹುಲ್ಲುಗಳನ್ನು ಕಟ್ ಮಾಡುವುದು ಗಾರ್ಡನ್ ಕೆಲಸಗಳನ್ನು ಮಾಡುತ್ತಾರೆ. ಅಲ್ಲಿ ಪ್ರತಿಯೊಂದು ಕೆಲಸವನ್ನು ನೀಟಾಗಿ ಕಾಣುವಂತೆ ಮಾಡುತ್ತಾರೆ. ಗಾರ್ಡನ್ ಕೂಡ ಬಹಳ ಕ್ಲೀನ್ ಆಗಿರುತ್ತದೆ. ಅಮೇರಿಕಾದಲ್ಲಿ ಕ್ಲೀನಿಂಗ್ ಗೆ ಹೆಚ್ಚು ಮಹತ್ವ ಕೊಡುತ್ತಾರೆ ಅಲ್ಲಿ ಕಾಣುವ ಹೆಚ್ಚು ಪ್ರದೇಶ ಕ್ಲೀನಾಗಿ ಇರುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!