ಇತ್ತೀಚಿನ ದಿನಗಳಲ್ಲಿ ಮನೆಯಿಂದಲೇ ಕಂಪನಿಗಳಿಗಾಗಿ ಕೆಲಸ ಮಾಡುವ ಟ್ರೆಂಡ್ ಹೆಚ್ಚಾಗುತ್ತಿದೆ. ಈ ಟ್ರೆಂಡ್‌ಗೆ ಪೂರಕವೆಂಬಂತೆ ಹಲವಾರು ಪ್ರಖ್ಯಾತ ಕಂಪನಿಗಳು ಸಹ ‘ಮನೆಯಿಂದ ಕೆಲಸ’ ರೀತಿಯ ಕೆಲಸಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.

ಬೆಳಗಿನ ೯ ಗಂಟೆಯಿಂದ ಸಂಜೆ ೫ ರವರೆಗೆ ಕೆಲಸ ಮಾಡುವ ತೊಂದರೆ ನಿಮಗೆ ಬೇಡವಾಗಿದ್ದರೆ, ನಿಮ್ಮ ಅನುಕೂಲದ ಸಮಯದಲ್ಲಿ ಇರುವ ಸ್ಥಳದಿಂದಲೇ ಕೆಲಸ ಮಾಡುವ ಹಂಬಲ ನಿಮಗಿದ್ದರೆ ಈ ಲೇಖನದಲ್ಲಿ ಅಂತಹ ಕೆಲಸಗಳ ಹುಡುಕಾಟದ ವಿವರಗಳನ್ನು ತಿಳಿದುಕೊಳ್ಳೋಣ.

ದಿನದ ಪೂರ್ತಿ ಸಮಯ ಅಥವಾ ಅರ್ಧ ದಿನದ ಸಮಯದಲ್ಲಿ ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಕೆಲಸ ಮಾಡಲು ನಿಮಗೆ ಅನಿವಾರ್ಯತೆ ಇದ್ದಲ್ಲಿ ನೀವು ಅನೇಕ ಹೆಸರಾಂತ ಕಂಪನಿಗಳ ವತಿಯಿಂದ ಮನೆಯಿಂದಲೇ ಕೆಲಸ ನಿರ್ವಹಿಸಬಹುದು ಈ ಕೆಲಸವನ್ನು ಮಾಡಲು ಎಟಿಇಎಸ್ ಕೋರ್ಸ್ ಮಾಡಿದ್ದರೆ ಅನುಕೂಲವಾಗುತ್ತದೆ.

ಕೋರ್ಸ್ ಮಾಡಲು ಎಸೆಸೆಲ್ಸಿ ಪಾಸಾಗಿದ್ದು, ೧೮ ವರ್ಷ ಮೇಲ್ಪಟ್ಟವರಾಗಿರಬೇಕು. ಅಭ್ಯರ್ಥಿಗಳಲ್ಲಿ ಲ್ಯಾಪ್ಟಾಪ್ ಇದ್ದರೆ ಇನ್ನೂ ಅನುಕೂಲಕರವಾಗುತ್ತದೆ, ಈ ಕೋರ್ಸ್ ಮಾಡಲು 16 ಗಂಟೆಗಳ ಅವಶ್ಯಕತೆ ಇರುತ್ತದೆ. ನಂತರ ಕೋರ್ಸ್ ಮುಗಿದ ಬಳಿಕ ಒಂದು ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಗುತ್ತದೆ ಅದರಲ್ಲಿ ಪ್ರಸಾದದಲ್ಲಿ ಅಮೆಜಾನ್ ವತಿಯಿಂದ ಒಳ್ಳೆಯ ಕಂಪನಿಗಳಲ್ಲಿ ಮನೆ ಕೆಲಸಗಳು ಅಂದರೆ ಮನೆಯಿಂದಲೇ ಮಾಡುವಂತಹ ಸಾಫ್ಟ್ವೇರ್ ಕೆಲಸಗಳು ದೊರೆಯುತ್ತವೆ.

ಇದು ವಾಣಿಜ್ಯ ವಿಭಾಗದ ಕೆಲಸವಾಗಿರುತ್ತದೆ ಅಂದರೆ ಮಾರ್ಕೆಟಿಂಗ್ ಸೆಲ್ಲಿಂಗ್ ಇತ್ಯಾದಿಗಳನ್ನು ಇದರಲ್ಲಿ ಅವರು ಕೊಟ್ಟಿರುವ ಟಾರ್ಗೆಟ್ ಗಳನ್ನು ಮಾಡಿ ಮುಗಿಸುವುದರ ಮೂಲಕ ಲಾಭಾಂಶವನ್ನು ಪಡೆಯಬಹುದಾಗಿದೆ. ಡಿಜಿಟಲ್ ಯುಗದಲ್ಲಿ ಜೀವಿಸುತ್ತಿರುವ ನಮಗೆ ಆನ್ಲೈನ್ ಮೂಲಕ ಬೆರಳ ತುದಿಯಲ್ಲಿ ಎಲ್ಲವೂ ಲಭ್ಯವಿದೆ ಮನೆಯಿಂದಲೇ ದುಡಿದು ಕೈತುಂಬಾ ಹಣ ಗಳಿಸಲು ನೂರಾರು ಮಾರ್ಗಗಳಿವೆ.

ಇಂಟರ್ನೆಟ್ ಎಂಬ ಮಾಧ್ಯಮವು ಉದ್ಯೋಗ ಮಾಡುವ ಕೈಗಳಿಗೆ ಬೃಹತ್ ವೇದಿಕೆಯಾಗಿ ಮಾರ್ಪಟ್ಟಿದೆ, ಕಡಿಮೆ ಸಮಯದಲ್ಲಿ ಹೆಚ್ಚು ಹಣ ಗಳಿಸುವುದು ಹೊಸ ಟ್ರೆಂಡ್. ಮನೆಯಿಂದಲೇ ಆನ್ಲೈನ್ ಮೂಲಕ ಕೆಲಸ ಮಾಡಲು ಇಂದಿನ ಅಂತರ್ಜಾಲ ವ್ಯವಸ್ಥೆ ಸಾವಿರಾರು ಅವಕಾಶಗಳನ್ನು ಒದಗಿಸುತ್ತಿದೆ.

ಒಂದು ವೇಳೆ ನಿಮ್ಮಲ್ಲಿ ಅಪಾರ ಪ್ರತಿಭೆಯಿದ್ದರೆ ಇದನ್ನು ನಾಲ್ಕು ಜನರ ಮುಂದೆ ಪ್ರದರ್ಶಿಸುವ ಮೂಲಕ ಹಣವನ್ನು ಗಳಿಸಬಹುದು. ಮೊದಲಿಗೆ ನಿಮ್ಮ ಅಪ್ಪಟ ಪ್ರತಿಭೆಯನ್ನು ಅನಾವರಣಗೊಳಿಸುವ ವೀಡಿಯೋವನ್ನು ಉತ್ತಮ ಗುಣಮಟ್ಟದಲ್ಲಿ ರೆಕಾರ್ಡ್ ಮಾಡಿಕೊಂಡು ಯೂ ಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಬೇಕು.

ಇದು ನಿಮ್ಮಿಂದ ತಯಾರಾದ ಕಿರುಚಲನಚಿತ್ರವಿರಬಹುದು, ನೀವು ಹಾಡುವ ಹಾಡಾಗಿರಬಹುದು, ಎಲ್ಲರನ್ನು ನಗಿಸುವ ಹಾಸ್ಯಪ್ರಸಂಗವಾಗಿರಬಹುದು, ನೋಡುವವರು ಭಲೇ ಎನ್ನುವಂತಹ ಚಾಕಚಕ್ಯತೆ ಇರಬಹುದು ಅಥವಾ ಯಾರೂ ಮಾಡದ ಸಾಧನೆಯನ್ನು ಸಾಧಿಸುವಂತಹ ಕಾರ್ಯವಿರಬಹುದು, ಒಟ್ಟಾರೆ ಈ ವೀಡಿಯೋವನ್ನು ಒಬ್ಬರು ನೋಡಿದರೆ ಇನ್ನೊಬ್ಬರಿಗೆ ನೋಡಲು ಮುಂದೆ ಕಳಿಸುವಂತಿರಬೇಕು.

ಆಗ ಈ ವೀಡಿಯೋವನ್ನು ಮೊದಲು ನೋಡಿ ಮೆಚ್ಚಿದವರು ಇನ್ನಷ್ಟು ಜನರು ಮೆಚ್ಚಲೆಂದು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡುತ್ತಾ ಹೋಗುತ್ತಾರೆ. ಪ್ರತಿ ಬಾರಿ ಈ ವೀಡಿಯೋ ನೋಡಲ್ಪಟ್ಟಾಗ ನಿಮ್ಮ ವೀಡಿಯೋ ಇರುವ ಪುಟದಲ್ಲಿರುವ ಜಾಹೀರಾತುಗಳ ಮೂಲಕ ನಿಮಗೆ ಸಂಭಾವನೆ ಹರಿದು ಬರುತ್ತದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!