ಪುರುಷರು ಮತ್ತು ಸ್ತ್ರೀಯರು ಇಬ್ಬರು ಮುಖ್ಯ, ಇವರು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಇವರಿಬ್ಬರು ಕೆಲವು ವಿಷಯಗಳಲ್ಲಿ ಒಂದೆ ಆದರೂ, ಇವರ ನಡುವೆ ಕೆಲವು ವ್ಯತ್ಯಾಸಗಳಿವೆ ಅವುಗಳು ಯಾವುವು ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.
ಹೆಣ್ಣು ಮತ್ತು ಗಂಡಿನ ನಡುವೆ ಕೆಲವು ವ್ಯತ್ಯಾಸಗಳಿವೆ. ಬಟ್ಟೆ ಧರಿಸುವ ವಿಷಯದಲ್ಲಿ ಪುರುಷರು ಮತ್ತು ಸ್ತ್ರೀಯರಲ್ಲಿ ವ್ಯತ್ಯಾಸವಿದೆ. ಹುಡುಗಿಯರು ಮೊದಲು ಕುರ್ತಾ, ಟಾಪ್ ಹಾಕಿಕೊಂಡು ನಂತರ ಜೀನ್ಸ್ ಪ್ಯಾಂಟ್ ಅಥವಾ ಚೂಡಿದಾರ್ ಪ್ಯಾಂಟ್ ಹಾಕಿಕೊಳ್ಳುತ್ತಾರೆ. ಹುಡುಗರು ಮೊದಲು ಸಾದಾ ಪ್ಯಾಂಟ್ ಅಥವಾ ಜೀನ್ಸ್ ಪ್ಯಾಂಟ್ ಹಾಕಿಕೊಂಡು ನಂತರ ಟೀಶರ್ಟ್ ಅಥವಾ ಶರ್ಟ್ ಹಾಕಿಕೊಳ್ಳುತ್ತಾರೆ. ಹುಡುಗಿಯರಿಗೆ ಮಲ್ಟಿ ಟಾಸ್ಕ್ ಮಾಡುವುದೆಂದರೆ ಇಷ್ಟ. ಇಬ್ಬರಿಗೂ ಒಂದೇ ಸಮಯದಲ್ಲಿ ನಾಲ್ಕು ಕೆಲಸ ಕೊಟ್ಟರೆ ಹುಡುಗಿಯರು ಅದೇ ಸಮಯದಲ್ಲಿ ನಾಲ್ಕು ಕೆಲಸವನ್ನು ಒಟ್ಟಿಗೆ ಮಾಡುತ್ತಾರೆ ಆದರೆ ಹುಡುಗರು ಒಂದಾದ ಮೇಲೆ ಒಂದು ಕೆಲಸ ಮಾಡುತ್ತಾರೆ. ಹುಡುಗಿಯರಿಗೆ ಯಾವುದೇ ಕಲರ್ ನೋಡಿದರೆ ಡಾರ್ಕ್ ಆಗಿ ಕಾಣಿಸುತ್ತದೆ ಹಾಗೂ ಹುಡುಗರಿಗೆ ಕಲರ್ ಸ್ವಲ್ಪ ಲೈಟ್ ಆಗಿ ಕಾಣಿಸುತ್ತದೆ. ಹುಡುಗರಿಗೆ ಸಣ್ಣ ಸಣ್ಣ ಫಾಸ್ಟ್ ಮುಮೆಂಟ್ ಗಳು ಬೇಗ ಗೊತ್ತಾಗುತ್ತದೆ ಆದರೆ ಹುಡುಗಿಯರಿಗೆ ತಡವಾಗಿ ಗೊತ್ತಾಗುತ್ತದೆ. ಹುಡುಗಿಯರು ಸ್ಮೆಲ್ ಅನ್ನು ಬೇಗ ಕಂಡುಹಿಡಿಯುತ್ತಾರೆ ಆದರೆ ಹುಡುಗರು ಸ್ಮೆಲ್ ಕಂಡು ಹಿಡಿಯುವುದರಲ್ಲಿ ಸ್ವಲ್ಪ ಹಿಂದೆ. ಆದ್ದರಿಂದ ಇತ್ತೀಚಿನ ದಿನಗಳಲ್ಲಿ ರೆಸ್ಟೋರೆಂಟ್ ಗಳಲ್ಲಿ ಹುಡುಗಿಯರನ್ನು ನೇಮಿಸಿಕೊಳ್ಳುತ್ತಿದ್ದಾರೆ.
ಹುಡುಗ ಹುಡುಗ ಶೇಕ್ ಹ್ಯಾಂಡ್ ಮಾಡಿಕೊಳ್ಳುವಾಗ ಸ್ವಲ್ಪ ಸಮಯ ಕೈಯನ್ನು ಶೇಕ್ ಮಾಡಿಕೊಳ್ಳುತ್ತಾರೆ. ಹುಡುಗಿ ಹುಡುಗಿ ಶೇಕ್ ಹ್ಯಾಂಡ್ ಮಾಡಿಕೊಳ್ಳುವಾಗ ಜಸ್ಟ್ ಕೈಯನ್ನು ಟಚ್ ಮಾಡಿ ಸ್ಮೈಲ್ ಮಾಡುತ್ತಾರೆ. ಹುಡುಗರು ಮತ್ತು ಹುಡುಗಿಯರು ಇಬ್ಬರೂ ಕನ್ನಡಿಯನ್ನು ಪ್ರತಿದಿನ ನೋಡಿಕೊಳ್ಳುತ್ತಾರೆ ಅದು ಸಾಮಾನ್ಯ. ಸರ್ವೇ ಪ್ರಕಾರ ಹುಡುಗರು ಕನ್ನಡಿಯನ್ನು ಒಂದು ದಿನಕ್ಕೆ 23 ಸಾರಿ ನೋಡುತ್ತಾರೆ. ಹುಡುಗಿಯರು ಕನ್ನಡಿಯನ್ನು ದಿನಕ್ಕೆ 16 ಸಾರಿ ನೋಡಿಕೊಳ್ಳುತ್ತಾರೆ. ಹುಡುಗಿಯರು ತಮ್ಮ ಡ್ರೆಸ್, ಕೂದಲು ಸರಿಯಾಗಿದೆಯೇ, ಸುಂದರವಾಗಿ ಕಾಣುತ್ತೇವೆಯೇ ಎಂದು ನೋಡಿಕೊಳ್ಳುತ್ತಾರೆ, ಹುಡುಗರು ತಮ್ಮ ಕೈ, ಕೂದಲು, ಡ್ರೆಸ್ ಸರಿಯಾಗಿದೆಯೇ ಎಂದು ನೋಡಿಕೊಳ್ಳುತ್ತಾರೆ. ಹುಡುಗರ ದೇಹ ಒಂದು ಸಾರಿ ಫಿಟ್ಟಾಗಿ ಸೆಟ್ ಮಾಡಿಕೊಂಡರೆ ಹಾಗೆ ಇರುತ್ತದೆ. ಹುಡುಗಿಯರ ದೇಹದ ಶೇಪ್ ಬೇರೆಬೇರೆ ಸಮಯದಲ್ಲಿ ಚೇಂಜ್ ಆಗುತ್ತಾ ಇರುತ್ತದೆ. ಮದುವೆಗೆ ಮುನ್ನ ಹುಡುಗಿಯರು ಸಣ್ಣವಿದ್ದು ಮದುವೆ ನಂತರ ಮಕ್ಕಳಾಗುವ ಸಮಯದಲ್ಲಿ ದಪ್ಪ ಆಗುತ್ತಾರೆ.