ದಿನನಿತ್ಯದ ಆಹಾರದಲ್ಲಿ ಬಳಸುವ ಸಾಸಿವೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂದು ನಮಗೆ ತಿಳಿದಿಲ್ಲ. ಕೆಲವರು ಒಗ್ಗರಣೆಗೆ ಹಾಕಿದ ಸಾಸಿವೆಯನ್ನು ತೆಗೆದು ಬದಿಗಿರಿಸುವವರು ಇದ್ದಾರೆ. ಸಾಸಿವೆಯಲ್ಲಿ ತುಂಬಾ ಔಷಧೀಯ ಗುಣಗಳಿವೆ. ಹಾಗಾದರೆ ಸಾಸಿವೆಯಿಂದ ಸಿಗುವ ಆರೋಗ್ಯ ಲಾಭಗಳು ಏನೆಂದು ಇಲ್ಲಿ ನಾವು ತಿಳಿಯೋಣ.
ಸಾಸಿವೆಯನ್ನು ಭಾರತದಲ್ಲಿ ಒಗ್ಗರಣೆ ರೂಪದಲ್ಲಿ ಬಳಸಲಾಗುತ್ತದೆ. ಸಾಸಿವೆಯ ಚೂರ್ಣ ಎರಡು ಗ್ರಾಂ ಹಾಗೂ ಸಕ್ಕರೆ ಎರಡು ಬೆರೆಸಿ ಸೇವಿಸಬೇಕು. ನಂತರ ಅರ್ಧ ಗ್ಲಾಸ್ ನೀರನ್ನು ಕುಡಿಯಬೇಕು. ಇಷ್ಟು ಮಾಡಿದ ಸ್ವಲ್ಪ ಸಮಯದ ನಂತರ ಹೊಟ್ಟೆ ನೋವು ಕಡಿಮೆಯಾಗುತ್ತದೆ. ಹಲ್ಲು ನೋವು ಬಂದಾಗ ಸಾಸಿವೆಯ ಪುಡಿಯನ್ನು ಬಿಸಿ ನೀರಿಗೆ ಬೆರೆಸಿ ಬಾಯಿ ಮುಕ್ಕಳಿಸುವುದರಿಂದ ನೋವು ಕಡಿಮೆಯಾಗುತ್ತದೆ. ಸಾಸಿವೆಯನ್ನು ರುಬ್ಬಿದ ನಂತರ ಸ್ವಲ್ಪ ನೀರನ್ನು ಬೆರೆಸಿ ಹಣೆಗೆ ಹಚ್ಚುವುದರಿಂದ ಮೈಗ್ರೇನ್ ಸಮಸ್ಯೆ ನಿವಾರಿಸುತ್ತದೆ. ಜೇನು ತುಪ್ಪದ ಜೊತೆಗೆ ಸಾಸಿವೆ ಪುಡಿ ಬೆರೆಸಿ ತಿನ್ನುವುದರಿಂದ ಜ್ವರದ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಸಟಿಕಾ ಸಿಯಾಟಿಕ್ ನ್ಯೂರೈಟಸ್ ಸಮಸ್ಯೆ ಇರುವ ಜಾಗದಲ್ಲಿ ಸಾಸಿವೆ ನೀರಿನೊಂದಿಗೆ ರುಬ್ಬಿ ಹಚ್ಚಿದರೆ ನೋವು ಮಾಯವಾಗುತ್ತದೆ.
ಎರಡು ಗ್ರಾಂ ರುಬ್ಬಿದ ಸಾಸಿವೆಯನ್ನು ಊಟಕ್ಕೆ ಮೊದಲು ಸೇವಿಸುವುದರಿಂದ ತಿಂಗಳ ಸಮಸ್ಯೆಗಳು ನಿವಾರಣೆಯಾಗುತ್ತದೆ. ಪುರುಷರ ವೀರ್ಯ ಸಮಸ್ಯೆ ನಿವಾರಣೆಗೆ ಐದು ಗ್ರಾಂ ಸಾಸಿವೆ, ಐದು ಗ್ರಾಂ ಲವಂಗ, ಹತ್ತು ಗ್ರಾಂ ದಾಲ್ಚಿನ್ನಿ ಮೂರನ್ನು ರುಬ್ಬಿ ಒಂದು ಗ್ಲಾಸ್ ಹಾಲಿನೊಂದಿಗೆ ಬೆಳಿಗ್ಗೆ ಹಾಗೂ ರಾತ್ರಿ ವೇಳೆಯಲ್ಲಿ ಸೇವಿಸಬೇಕು. ರುಬ್ಬಿದ ಸಾಸಿವೆ ವಾಸನೆ ಪಿಟ್ಸ್ ಇರುವ ರೋಗಿಗಳಿಗೆ ತೋರಿಸಿದರೆ ಪಿಟ್ಸ್ ನ ಸಮಸ್ಯೆ ದೂರವಾಗುತ್ತದೆ. ಕಲೆಗಳಿಗೆ ಎನ್.ಸಿ.ಎಂ ಆದಾಗ ಆ್ಯಪಲ್ ವಿನಿಗರ್ ಜೊತೆಗೆ ಸಾಸಿವೆಯನ್ನು ರುಬ್ಬಿ ಕಲೆಗಳ ಮೇಲೆ ಲೇಪಿಸುವುದರಿಂದ ಬೇಗ ಕಲೆಗಳು ಮಾಯವಾಗುತ್ತದೆ.
ಇವುಗಳು ಸಾಸಿವೆಯ ಉಪಯೋಗಗಳಾಗಿದ್ದು, ಸಾಸಿವೆಯನ್ನು ಆಹಾರದಿಂದ ಎತ್ತಿ ಬದಿಗಿರಿಸದೆ ಸೇವನೆ ಮಾಡುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸಾಸಿವೆಯು ನೋಡಲು ಸಣ್ಣದಾಗಿ ಕಂಡರು, ಇದರ ಔಷಧೀಯ ಗುಣಗಳು ತುಂಬಾ ಇವೆ.