ಹಳೆಯ ಕೃಷಿ ಪದ್ಧತಿಯನ್ನು ಬಿಟ್ಟು ಹೊಸದಾಗಿ ಹೊಸ ಹೊಸ ಬೆಳೆಯನ್ನು ಬೆಳೆಯುವುದರಿಂದ ಕೃಷಿಯಲ್ಲಿ ಹೆಚ್ಚಿನ ಲಾಭ ಗಳಿಸಬಹುದು. ಕೃಷಿಯ ಜೊತೆಗೆ ರೈತರು ಅಲೋವೆರಾ ಬೆಳೆಯುವುದರಿಂದ ಅಧಿಕ ಪ್ರಮಾಣದಲ್ಲಿ ಲಾಭ ಗಳಿಸಬಹುದು. ಅಲೋವೆರಾ ಪ್ರಾಚೀನ ಕಾಲದಿಂದಲೂ ಆಯುರ್ವೇದಿಕ್ ಗುಣಗಳನ್ನು ಹೊಂದಿದೆ ಆದ್ದರಿಂದ ಅಲೋವೆರಾ ಬೆಳೆಯನ್ನು ಹೇಗೆ ಬೆಳೆಯುವುದು, ಅದರ ಮಾರ್ಕೆಟಿಂಗ್ ಹಾಗೂ ಪ್ರಯೋಜನಗಳ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.
ಅಲೋವೆರಾವನ್ನು ಸೌಂದರ್ಯ ವರ್ಧಕಗಳು, ಕೈಗಾರಿಕೆಗಳಲ್ಲಿ, ಮಾತ್ರೆಗಳಲ್ಲಿ ಬಳಕೆ ಮಾಡುತ್ತಾರೆ. ಅಲೋವೆರಾವನ್ನು ನೇಚರ್ ಟಾನಿಕ್ ಎಂತಲೂ ಕರೆಯುತ್ತಾರೆ. ಅಲೋವೆರಾ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳು ಇವೆ. ಅಲೋವೆರಾ ನಮ್ಮ ದೇಹದಲ್ಲಿ ಬೇಡದೆ ಇರುವ ಅಂಶವನ್ನು ತೆಗೆದುಹಾಕಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೃಷಿಯಲ್ಲಿ ಹೊಸ ಹೊಸ ಟೆಕ್ನಾಲಜಿ ಹಾಗೂ ಬೆಳೆಯನ್ನು ಬೆಳೆಯುವುದರಿಂದ ಹೆಚ್ಚಿನ ಆದಾಯ ಗಳಿಸಬಹುದು. ಅಲೋವೆರಾ ಬೆಳೆಯುವುದರಿಂದ ಬೇರೆ ದೇಶಗಳಿಗೆ ರಫ್ತು ಮಾಡಲು ಅವಕಾಶವಿದೆ. ಅಲೋವೆರಾವನ್ನು ತರಕಾರಿಯಂತೆ ಉಪ್ಪಿನಕಾಯಿಯನ್ನು ತಯಾರಿಸಲು ಬಳಸಲಾಗುತ್ತದೆ. ಅಲೋವೆರಾವನ್ನು ವೈವಿಧ್ಯಮಯ ಮಣ್ಣಿನಲ್ಲಿ ಬೆಳೆಯಬಹುದು. ಹತ್ತಿ ಬೆಳೆಯುವ ಕಪ್ಪುಮಣ್ಣಿನಲ್ಲಿ ಅಲೋವೆರಾ ಚೆನ್ನಾಗಿ ಬೆಳೆಯುತ್ತದೆ.
ಅಲೋವೆರಾ ಬೆಳೆಸಲು ಮಣ್ಣಿನಲ್ಲಿ ಸಾವಯವ ತ್ಯಾಜ್ಯ ಇದ್ದರೆ ಕೊಟ್ಟಿಗೆ ಗೊಬ್ಬರದ ಅವಶ್ಯಕತೆಯೂ ಇಲ್ಲ ಎಂದು ರಿಸರ್ಚ್ ನಿಂದ ತಿಳಿದಿದೆ. ಅಲೋವೆರಾ ಬೆಳೆದ ಜಾಗದಲ್ಲಿ ನೀರು ನಿಲ್ಲಬಾರದು ಇದರಿಂದ ಕೊಳೆ ರೋಗ ಬರುತ್ತದೆ. ಈ ಬೆಳೆ ಬೆಳೆಯಲು 25-40 ಡಿಗ್ರಿ ಸೆಲ್ಸಿಯಸ್ ನಷ್ಟು ಉಷ್ಣಾಂಶ ಇರಬೇಕು. ಇಷ್ಟಿದ್ದರೆ ಸಾಕು ಅಲೋವೆರಾ ಬೆಳೆಯನ್ನು ಬೆಳೆಯಬಹುದು. ಅಲೋವೆರಾ ಬೆಳೆಯುವ ಭೂಮಿಯನ್ನು ಹೆಚ್ಚು ಉಳುಮೆ ಮಾಡುವುದು ಬೇಡ ಏಕೆಂದರೆ ಅದರ ಬೇರು ಆಳಕ್ಕೆ ಹೋಗುವುದಿಲ್ಲ. ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ 60 ಸೆಂಟಿಮೀಟರ್ ಅಂತರ ಇರಬೇಕು.
ನೀರಾವರಿ ಪ್ರದೇಶದಲ್ಲಿ ಯಾವ ಸೀಸನ್ ನಲ್ಲಿ ಬೇಕಾದರೂ ನಾಟಿ ಮಾಡಬಹುದು ನವೆಂಬರ್ ನಿಂದ ಫೆಬ್ರುವರಿ ತಿಂಗಳಲ್ಲಿ ನಾಟಿ ಮಾಡಬಾರದು. ನೀರಾವರಿ ಇಲ್ಲದ ಪ್ರದೇಶದಲ್ಲಿ ಜೂನ್ ತಿಂಗಳಿನಿಂದ ಆಗಸ್ಟ್ ತಿಂಗಳವರೆಗೆ ನಾಟಿ ಮಾಡಬಹುದು. 3-4 ತಿಂಗಳುಗಳ ಸಣ್ಣ ಸಣ್ಣ ಗಿಡವನ್ನು ನಾಟಿ ಮಾಡಲು ಆಯ್ಕೆ ಮಾಡಬೇಕು. ದಕ್ಷಿಣ ಭಾರತದ ಪ್ರದೇಶಗಳಲ್ಲಿ ಅಲೋವೆರಾ ಬೆಳೆಯಲು ಸೂಕ್ತವಾಗಿದೆ. ಅಲೋವೆರಾದ ಒಂದು ತಳಿಯನ್ನು ಬಿಡುಗಡೆ ಮಾಡಲಾಗಿದೆ ಆ ತಳಿಯ ಹೆಸರು ಶೀತಲ್.
ಅಲೋವೆರಾ ಗಿಡಗಳ ಮದ್ಯೆ ಮೊದಲ ವರ್ಷ ದ್ವಿದಳ ಧಾನ್ಯ, ತರಕಾರಿಗಳನ್ನು ಬೆಳೆಸಬಹುದು. ಮಣ್ಣಿನಲ್ಲಿ ಫಲವತ್ತತೆ ಕಡಿಮೆ ಇದ್ದರೆ ಕೊಟ್ಟಿಗೆ ಗೊಬ್ಬರವನ್ನು ಹಾಕಬೇಕು. ರಾಸಾಯನಿಕ ಗೊಬ್ಬರವನ್ನು ಬಳಸದೆ ಸಾವಯವ ಪದ್ಧತಿಯಲ್ಲಿ ಅಲೋವೆರಾ ಬೆಳೆಯಬಹುದು, ಹೆಚ್ಚಿನ ನೀರು ಅವಶ್ಯಕತೆಯಿಲ್ಲ. ಈ ಬೆಳೆಗೆ ಯಾವುದೆ ರೋಗ ಭಾದೆ ಇರುವುದಿಲ್ಲ ಆದರೆ ಅತಿಯಾಗಿ ನೀರು ಹಾಕಿದರೆ ಶಿಲೀಂದ್ರ, ಬ್ಯಾಕ್ಟೀರಿಯಾ ಉತ್ಪತ್ತಿಯಾಗಿ ಕೊಳೆ ರೋಗ ಹರಡುವ ಸಾಧ್ಯತೆ ಇದೆ. ಈ ಬೆಳೆಯನ್ನು 3-4 ಬಾರಿ ಕಟಾವು ಮಾಡಬಹುದು ಪ್ರತಿ ಹೆಕ್ಟೇರ್ ಗೆ 15-20 ಟನ್ ಅಲೋವೆರಾ ಬೆಳೆ ಬೆಳೆಯಬಹುದು.
ಅಲೋವೆರಾವನ್ನು ಸೌಂದರ್ಯ ವರ್ಧಕ ಗಳಲ್ಲಿ ಮೆಡಿಸಿನ್ ಗಳಲ್ಲಿ ಬಳಸಲಾಗುತ್ತದೆ. ಅಂತಹ ಕಂಪನಿಗಳ ಲಭ್ಯತೆ ಯಾವ ಸ್ಥಳದಲ್ಲಿದೆ ನೋಡಬೇಕು. ಅಂತರರಾಷ್ಟ್ರೀಯ ಮಟ್ಟದಲ್ಲಿ ಅಲೋವೆರಾ ವ್ಯಾಪಾರ ಮಾಡಬಹುದು, ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಆದಾಯ ಸಿಗುತ್ತದೆ. ಪತಂಜಲಿ, ಪೋಟಾನಿಕಲ್ ಇಂಡಿಯಾ ಮುಂತಾದ ಕಂಪನಿಗಳು ಅಲೋವೆರಾ ಬಳಸಿ ಪ್ರೊಡಕ್ಟ್ ತಯಾರಿಸುತ್ತವೆ. ನಿಮ್ಮ ಜಿಲ್ಲೆಗಳಲ್ಲಿ ಈ ಕಂಪನಿಗಳು ಇರುತ್ತವೆ ಅದರ ಸಂಪರ್ಕ ಮಾಡಿ ಮಾರ್ಕೇಟ್ ಮಾಡಬಹುದು. ವರ್ಷಕ್ಕೆ 15-20 ಲಕ್ಷ ರೂಪಾಯಿ ಆದಾಯ ಪಡೆಯಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲಾ ರೈತ ಬಾಂಧವರಿಗೆ ತಿಳಿಸಿ, ಅಲೋವೆರಾ ಬೆಳೆಯ ಮೂಲಕ ಸಾಕಷ್ಟು ಆದಾಯ ಗಳಿಸಿ. ಹೆಚ್ಚಿನ ಮಾಹಿತಿಗಾಗಿ 9099262233 -9900555458