ಒಂಟಿಯಾಗಿರುವುದು ಮೂರ್ಖ ಮತ್ತು ನಕಾರಾತ್ಮಕ ಜನರ ಜೊತೆ ಇರುವುದಕ್ಕಿಂತ ಬಹಳ ಒಳ್ಳೆಯದು. ಒಂಟಿಯಾಗಿರುವ ಜನರು ಬಹಳ ಭಿನ್ನವಾಗಿರುತ್ತಾರೆ. ಯಾವಾಗ ವ್ಯಕ್ತಿ ಒಂಟಿಯಾಗಿ ಇರುತ್ತಾನೋ ಆಗ ಅವನ ಬಗ್ಗೆ ಅವನಿಗೆ ತಿಳಿಯುತ್ತದೆ. ಒಂಟಿಯಾಗಿರುವುದರ ಹಿಂದೆ ಯಶಸ್ಸು ಇದೆ. ಅದರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಒಂಟಿಯಾಗಿರುವ ವ್ಯಕ್ತಿ ಯಾವಾಗ ಅವನು ಅವನನ್ನು ಅರ್ಥ ಮಾಡಿಕೊಳ್ಳುವನೋ ಆಗ ಒಂದು ಸಕಾರಾತ್ಮಕ ಶಕ್ತಿ ಅನುಭವಕ್ಕೆ ಬರುತ್ತದೆ. ಅದೇ ರೀತಿ ಬೇರೆಯವರ ಜೊತೆ ಇದ್ದಾಗ ನಕಾರಾತ್ಮಕ ವಿಚಾರಗಳು ಮನಸ್ಸಿಗೆ ಬರುತ್ತವೆ. ಆದರೆ ಒಂಟಿಯಾಗಿರುವುದರಿಂದ ಅವರಿಗೆ ಬೇರೆಯವರ ಜೊತೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಹಾಗೆಯೇ ಒಂಟಿಯಾಗಿರುವ ಜನರು ಯಾರ ಬಗ್ಗೆಯೂ ಮೋಹವನ್ನು ಇಟ್ಟುಕೊಳ್ಳುವುದಿಲ್ಲ. ಯಾರ ಬಗ್ಗೆಯೂ ಮೋಹವಿಲ್ಲ ಎಂದಾದರೆ ಜನರು ಇಷ್ಟಪಡುತ್ತಾರೆ.

ಒಂಟಿಯಾಗಿರುವ ಜನರು ಹೆಚ್ಚಾಗಿ ಸೃಜನಶೀಲ ಆಗಿರುತ್ತಾರೆ. ಒಂಟಿಯಾಗಿರುವವರ ತಲೆಗೆ ಯೋಚನೆ ಮಾಡಲು ಬಹಳ ಸಮಯ ಸಿಗುತ್ತದೆ. ತಲೆಗೆ ಅಡಚಣೆ ಬಹಳ ಕಡಿಮೆ ಇರುತ್ತದೆ. ಆದ್ದರಿಂದ ಒಂಟಿಯಾಗಿರುವವರು ಹೆಚ್ಚಾಗಿ ಸೃಜನಶೀಲ ಆಗಿರುತ್ತಾರೆ. ಹಾಗೆಯೇ ಅವರು ತಮ್ಮ ಮೇಲೆ ತಾವು ಅವಲಂಬಿತರಾಗಿರುತ್ತಾರೆ. ಬೇರೆಯವರ ಹಾಗೆ ಬೇರೆಯವರ ಮೇಲೆ ಅವಲಂಬಿತರಾಗಿರುವುದಿಲ್ಲ. ಏಕೆಂದರೆ ಇನ್ನೊಬ್ಬರ ಮೇಲೆ ಆಧಾರವಾಗಿ ಇರಲು ಇವರು ಇಷ್ಟಪಡುವುದಿಲ್ಲ. ಅವಶ್ಯಕತೆಗಳನ್ನು ಒಂಟಿಯಾಗಿಯೇ ಪೂರೈಸಿಕೊಳ್ಳಲು ಬಹಳ ಚೆನ್ನಾಗಿ ತಿಳಿದುಕೊಂಡಿರುತ್ತಾರೆ.

ಈಗಿನ ದಿನಗಳಲ್ಲಿ ಹಲವಾರು ಜನ ಸ್ವಾರ್ಥಿಗಳಾಗಿದ್ದಾರೆ. ಹಾಗೆಯೇ ಇವರು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಬಹಳ ಗಟ್ಟಿಯಾಗಿ ಇರುತ್ತಾರೆ. ಏಕೆಂದರೆ ಏನಾದರೂ ತೊಂದರೆ ಆದರೆ ಅದನ್ನು ಅವರೇ ಅನುಭವಿಸಬೇಕು ಎಂದು ಅವರಿಗೆ ತುಂಬಾ ಚೆನ್ನಾಗಿ ತಿಳಿದಿರುತ್ತದೆ. ಇವರಿಗೆ ಯಾವುದೇ ರೀತಿಯ ಅಡೆತಡೆಗಳು ಇರುವುದಿಲ್ಲ. ಒಂಟಿಯಾಗಿ ಇರುವ ಕಾರಣ ಇವರು ತಮಗಾಗಿ ಹೆಚ್ಚಿನ ಸಮಯ ನೀಡುತ್ತಾರೆ. ಒಂಟಿಯಾಗಿ ಇರುವುದು ಎಂದರೆ ಮನೆಯವರಿಂದ ದೂರ ಇರುವುದಲ್ಲ. ಕೆಟ್ಟ ವ್ಯಕ್ತಿಗಳಿಂದ, ಆಲಸ್ಯ ಇರುವ ವ್ಯಕ್ತಿಗಳಿಂದ ಮತ್ತು ಜೀವನದ ಬಗ್ಗೆ ಏನೂ ತಿಳಿಯದ ವ್ಯಕ್ತಿಗಳಿಂದ ದೂರ ಇರುವುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!