ಅಲೋವೆರಾ ಗಿಡವನ್ನು ಮನೆಯ ಬಾಗಿಲಿಗೆ ಕಟ್ಟುವುದರಿಂದ ಏನ್ ಲಾಭವಿದೆ?

0 6

ಅಲೋವೆರಾ ಸಣ್ಣ ಸಣ್ಣ ಪಾಟ್‌ನಲ್ಲಿ ಮನೆ ಮುಂದೆಯೇ , ಬೇಕಾದರೆ ಮನೆಯೊಳಗೆಯೇ ಬೆಳೆಸಬಹುದಾದಂತ ಪುಟ್ಟ ಗಿಡ. ಇದನ್ನು ಆರೋಗ್ಯ, ಸೌಂದರ್ಯಕ್ಕೂ ಬಹಳ ಉತ್ತಮ. ಬ್ಯೂಟಿ ವರ್ಧಕವಾಗಿರುವ ಇದರ ಪೇಸ್ಟ್‌, ಜೆಲ್‌ ಇತ್ಯಾದಿಯನ್ನು ಕೆಲವು ದಿನ ಶೇಖರಿಸಿಯೂ ಇಡಬಹುದು.

ಅಲೋವೆರಾವು ಹಲವಾರು ಆರೋಗ್ಯ ಲಾಭಗಳನ್ನು ಹೊಂದಿದೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ಇಂದಿನ ದಿನಗಳಲ್ಲಿ ಸೌಂದರ್ಯವರ್ಧಕವಾಗಿ ಅಲೋವೆರಾವನ್ನು ಬಳಸದೆ ಇರುವವರು ತುಂಬಾ ಕಡಿಮೆ. ಯಾಕೆಂದರೆ ಅಲೋವೆರಾದಲ್ಲಿ ಇರುವಂತಹ ಸೌಂದರ್ಯವರ್ಧಕ ಗುಣಗಳು ಬೇರೆ ಯಾವುದೇ ರೀತಿಯ ಸಾಮಗ್ರಿಗಳಲ್ಲೂ ನಿಮಗೆ ಸಿಗಲಾರದು. ಹೀಗಾಗಿ ಅಲೋವೆರಾವು ತುಂಬಾ ಪರಿಣಮಕಾರಿ ಆಗಿ ಸೌಂದರ್ಯವರ್ಧಕ ಉತ್ಪನ್ನಗಳಲ್ಲೂ ಬಳಕೆ ಮಾಡಲಾಗುತ್ತಾ ಇದೆ. ನೇರವಾಗಿ ಅಲೋವೆರಾ ಲೋಳೆಯನ್ನು ಮೈಗೆ ಹಚ್ಚಿಕೊಂಡರೂ ಅದರ ಲಾಭಗಳು ಸಿಗುವುದು. ಇದು ಕೆಲವೊಂದು ಚರ್ಮದ ಸಮಸ್ಯೆಗಳನ್ನು ನಿವಾರಿಸುವ ಜತೆಗೆ ಚರ್ಮಕ್ಕೆ ಮೊಶ್ಚಿರೈಸ್ ನೀಡುವುದು.ತಾಜಾ ಅಲೋವೆರಾ ಲೋಳೆಯನ್ನು ಕುಡಿದರೆ ಅದರಿಂದ ಜೀರ್ಣಕ್ರಿಯೆ ಸುಧಾರಣೆ ಆಗುವುದು ಮತ್ತು ಅಸಿಡಿಟಿಯಿಂದ ಬಳಲುವ ಸಮಸ್ಯೆಗೆ ಇದು ಪರಿಹಾರ ನೀಡುವುದು. ನೀವು ಅಲೋವೆರಾ ಲೋಳೆಯನ್ನು ಬೇರೆ ಜ್ಯೂಸ್ ಜತಗೆ ಸೇರಿಸಿಕೊಂಡು ಕುಡಿಯಬಹುದು. ಇದು ದೇಹವನ್ನು ಒಳಗಿನಿಂದಲೇ ಶುದ್ಧೀಕರಿಸುವುದು. ಹೀಗಾಗಿ ಇದರ ಪರಿಣಾಮವು ಚರ್ಮದಲ್ಲಿ ಕಾಣಸಿಗುವುದು. ಚರ್ಮವು ಸ್ವಚ್ಛವಾಗಿ ಕಾಂತಿಯುತವಾಗಿರುವುದು.

ಅಲೋವೆರಾ ಕೇವಲ ಸೌಂದರ್ಯವನ್ನು ಹೆಚ್ಚಿಸುವುದಲ್ಲದೇ, ಮನೆಯ ಅದೃಷ್ಟವನ್ನು ತರುತ್ತದೆ ಎಂದು ತಜ್ಞರು ಹೇಳುತ್ತಾರೆ. ಮನೆಯಲ್ಲಿ ಈ ಗಿಡ ಇರುವುದರಿಂದ ಅದೃಷ್ಟ ಬದಲಾಗುತ್ತದೆ. ಉದ್ಯೋಗ ಸಮಸ್ಯೆ ತುಂಬಾ ಜನರಿಗೆ ಕಾಡುತ್ತಿರುತ್ತದೆ. ಅಂಥವರು ಅಲೋವೆರಾ ಗಿಡವನ್ನು ಕೋಣೆಯೊಳಗೆ ಇಟ್ಟರೆ ಸಮಸ್ಯೆ ನಿವಾರಣೆಯಾಗುತ್ತದೆ.ಅಲೋವೆರಾ ಗಾಳಿಯನ್ನು ಶುದ್ಧೀಕರಿಸುತ್ತದೆ. ಅಲೋವೆರಾ ಸಸ್ಯಗಳಲ್ಲಿ ಹೆಚ್ಚಿನ ಇಂಗಾಲದ ಡೈ ಆಕ್ಸೈಡ್ ಗಳನ್ನು ಹೀರಿಕೊಳ್ಳುವ ಸಾಮರ್ಥ್ಯ ಪಡೆದಿದೆ. ಅಲೋವೆರಾ ಉತ್ತಮ ಪ್ರಮಾಣದ ಆಮ್ಲಜನಕವನ್ನು ಬಿಡಗಡೆ ಮಾಡುತ್ತದೆ. ಮನೆಯಲ್ಲಿ ಅಲೋವೆರಾ ಸಸ್ಯ ನೆಡುವುದರಿಂದ ಅದೃಷ್ಟ , ಸಂತೋಷ ಮತ್ತು ಧನಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ. ಇದು ಹಲವು ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದ್ದು. ಅಲೋವೆರಾ ಗಿಡ ಇದ್ದರೆ, ನಿಮ್ಮ ಜೀವನ ಹೆಚ್ಚು ಸಮೃದ್ಧಿ ಹಾಗೂ ಸಂತೋಷದಿಂದ ಕೂಡಿರುತ್ತದೆ.ಅಲೋವೆರಾ ಅದೃಷ್ಟ ಮತ್ತು ಪಾಸಿಟಿವ್‌ ಎನರ್ಜಿಯನ್ನು ತರುವ ಸಸ್ಯ. ಇದು ಕೆಟ್ಟ ಅದೃಷ್ಟ ಮತ್ತು ನೆಗಟಿವ್‌ ವೈಬ್ಸ್‌ಗಳನ್ನು ಹತ್ತಿಕ್ಕುವ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ ಎಂಬುದು ಪ್ರತೀತಿ.

Leave A Reply

Your email address will not be published.