ಪ್ರತಿದಿನ 4 ಬಾದಾಮಿಬೀಜ ತಿನ್ನುವುದರಿಂದ ಏನಾಗುತ್ತೆ ಗೊತ್ತಾ, ನಿಮಗಿದು ಗೊತ್ತಿರಲಿ

0 1

Almonds Benefits: ನೆನೆಸಿಟ್ಟ ಬಾದಾಮಿಗಳ ಸೇವನೆಯಿಂದ ಪಡೆಯಬಹುದಾದ ಆರೋಗ್ಯಕರ ಪ್ರಯೋಜನಗಳು ಬಾದಾಮಿಯಲ್ಲಿ ಹಲವಾರು ಅಗತ್ಯ ಪೋಷಕಾಂಶಗಳಿವೆ. (almonds) ಬಾದಾಮಿಯಲ್ಲಿ ಉತ್ತಮ ಪ್ರಮಾಣದ ಕರಗುವ ನಾರು, ಪ್ರೋಟೀನ್, ವಿಟಮಿನ್ ಇ, ಮೆಗ್ನೀಶಿಯಂ ಹಾಗೂ ಇತರ ಪೋಷಕಾಂಶಗಳಿವೆ. ಇವೆಲ್ಲವೂ ಬಾದಾಮಿ ಒಣಗಿದ್ದಾಗ ಲಭಿಸುವುದಕ್ಕಿಂತ ಹೆಚ್ಚಾಗಿ ನೆನೆಸಿಟ್ಟು ಹಸಿಯಾದಾಗ ಲಭಿಸುತ್ತವೆ.

ದಿನದ ಪ್ರಾರಂಭವನ್ನು ಅತ್ಯುತ್ತಮವಾಗಿ ಪ್ರಾರಂಭಿಸಲು ಈ ಎಲ್ಲಾ ಪೋಷಕಾಂಶಗಳು ನೆರವಾಗುತ್ತವೆ ಬಾದಾಮಿಯನ್ನು ಒಣದಾಗಿದ್ದಾಗ ಸೇವಿಸುವುದಕ್ಕಿಂತ ನೆನೆಸಿಟ್ಟು ಸೇವಿಸಿದಾಗ ಜೀರ್ಣಿಸಿಕೊಳ್ಳುವುದು ಸುಲಭ. ನೆನೆಸಿಟ್ಟ ಬಾದಾಮಿ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಅಲ್ಲದೇ ಈಗ ಪೋಷಕಾಂಶಗಳನ್ನು ಹೀರಿಕೊಳ್ಳಲು ಹೆಚ್ಚಿನ ಸಹಾಯ ಸಿಗುತ್ತದೆ. ಈ ಪೋಷಕಾಂಶಗಳು ಜೀರ್ಣಕ್ರಿಯೆಯನ್ನು ಉತ್ತೇಜಿಸುವ ಕಿಣ್ವಗಳ ಉತ್ಪಾದನೆಗೆ ಪ್ರಚೋದನೆ ನೀಡುತ್ತವೆ.

ಪರಿಣಾಮವಾಗಿ ಜೀರ್ಣಕ್ರಿಯೆ ಸುಲಭ ಮತ್ತು ಪರಿಪೂರ್ಣವಾಗುತ್ತದೆ. ಬಾದಾಮಿಗಳಲ್ಲಿ ವಿಟಮಿನ್ ಇ ಸಮೃದ್ದ ಪ್ರಮಾಣದಲ್ಲಿದೆ. ಈ ವಿಟಮಿನ್ ಇ ನಮ್ಮ ಚರ್ಮ ಮತ್ತು ಕೂದಲಿನ ಪೋಷಣೆಗೆ ಅಗತ್ಯವಾಗಿ ಬೇಕಾಗಿರುವ ಪೋಷಕಾಂಶವಾಗಿದೆ. ಬಾದಾಮಿಯಲ್ಲಿರುವ ವಿಟಮಿನ್ ಇ ನಿಮ್ಮ ಚರ್ಮವನ್ನು ನಯವಾಗಿ ಮತ್ತು ಸೊಂಪಾಗಿಸಲು ನೆರವಾಗುತ್ತದೆ.

ಚರ್ಮಕ್ಕೆ ಬಾದಾಮಿ ಎಣ್ಣೆಯನ್ನು ಬಳಸುವುದರಿಂದಲೂ ಹೆಚ್ಚಿನ ಪ್ರಯೋಜನ ಪಡೆಯಬಹುದು. ಕೂದಲಿನ ಸಮಸ್ಯೆಗಳ ವಿರುದ್ಧ ಹೋರಾಡಲು ಸಹಾ ಬಾದಾಮಿ ನೆರವಾಗುತ್ತದೆ. ವಿಶೇಷವಾಗಿ ಕೂದಲು ಉದುರುವಿಕೆಯ ತೊಂದರೆ ಇರುವ ವ್ಯಕ್ತಿಗಳಿಗೆ ಬಾದಾಮಿ ಎಣ್ಣೆ ಹೆಚ್ಚಿನ ನೆರವು ನೀಡುತ್ತದೆ. ಬಾದಾಮಿಯ ಗುಣಗಳಲ್ಲಿ ಅತ್ಯುತ್ತಮ ಪ್ರಯೋಜನವೆಂದರೆ ಮೆದುಳಿನ ಕ್ಷಮತೆ ಹೆಚ್ಚಿಸುವುದು. ಈ ಬಗ್ಗೆ ನಡೆಸಿದ ಕೆಲವಾರು ಅಧ್ಯಯನಗಳಲ್ಲಿ ಬಾದಾಮಿಯನ್ನು ನಿತ್ಯವೂ ಬೆಳಗ್ಗಿನ ಆಹಾರವಾಗಿ ಸೇವಿಸುವ ವ್ಯಕ್ತಿಗಳ ಮೆದುಳಿನ ಕ್ಷಮತೆ ಉಳಿದವರಿಗಿಂತ ಹೆಚ್ಚಿರುತ್ತದೆ ಎಂದು ಕಂಡುಕೊಳ್ಳಲಾಗಿದೆ.

ಬಾದಾಮಿಯಲ್ಲಿರುವ ವಿಟಮಿನ್ ಇ ಮೆದುಳಿನ ತಾರ್ಕಿಕ, ಸ್ಮರಣಾ ಮತ್ತು ಚಿಂತನಾ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ ಹಾಗೂ ಮರೆಗುಳಿತನವನ್ನು ಇಲ್ಲವಾಗಿಸುತ್ತದೆ. ಮಕ್ಕಳಿಗೆ ಪರೀಕ್ಷಾ ಸಮಯದಲ್ಲಿ ಹೆಚ್ಚಿನ ಸ್ಮರಣ ಶಕ್ತಿಯ ಅಗತ್ಯವಿರುವ ಕಾರಣದಿಂದಲೇ ತಾಯಂದಿರುವ ಮಕ್ಕಳಿಗೆ ತಪ್ಪದೇ ಬಾದಾಮಿಯನ್ನು ತಿನ್ನಿಸುತ್ತಾರೆ. ನಮ್ಮ ಆರೋಗ್ಯಕ್ಕೆ ಕೊಲೆಸ್ಟ್ರಾಲ್ ಬೇಕೇ ಬೇಕು. ಆದರೆ ಇದರಲ್ಲಿ ಒಳ್ಳೆಯ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಗಳೆಂಬ ಎರಡು ಬಗೆ ಗಳಿರುತ್ತವೆ.

(ಕ್ರಮವಾಗಿ ಹೆಚ್. ಡಿ. ಎಲ್ ಮತ್ತು ಎಲ್. ಡಿ. ಎಲ್) ಇವೆರಡೂ ಕೊಲೆಸ್ಟ್ರಾಲ್ ಹಾಗೂ ಟ್ರೈಗ್ಲಿಸರೈಡ್ ಎಂಬ ಇನ್ನೊಂದು ಬಗೆಯ ಕೊಬ್ಬುಗಳು ಒಂದು ಅನುಪಾತದಲ್ಲಿದ್ದಾಗಲೇ ಉತ್ತಮ ಅರೋಗ್ಯ ಪಡೆಯಲು ಸಾಧ್ಯ. ಬಾದಾಮಿಯಲ್ಲಿರುವ ಪೋಷಕಾಂಶಗಳು ಈ ಸಮತೋಲನವನ್ನು ಸಾಧಿಸಲು ಹೆಚ್ಚಿನ ನೆರವು ನೀಡುತ್ತವೆ. ಅಂದರೆ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಲು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಲು ನೆರವಾಗುತ್ತವೆ. ಇದರಿಂದ ಹೃದಯದ ಮೇಲಿನ ಹೊರೆ ತಗ್ಗುತ್ತದೆ ಹಾಗೂ ತನ್ಮೂಲಕ ಹೃದಯದ ಕ್ಷಮತೆ ಮತ್ತು ಆರೋಗ್ಯ ಎರಡೂ ಹೆಚ್ಚುತ್ತವೆ.

ವಿಶೇಷವಾಗಿ ಅಧಿಕ ರಕ್ತದೊತ್ತಡದ ತೊಂದರೆ ಇರುವ ವ್ಯಕ್ತಿಗಳು ನಿತ್ಯವೂ ರಾತ್ರಿ ನೆನೆಸಿಟ್ಟ ಬಾದಾಮಿಯನ್ನು ಬೆಳಿಗ್ಗೆ ಸೇವಿಸುವ ಮೂಲಕ ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತದೆ. ಕೇವಲ ಹೃದಯ ಮತ್ತು ಮೆದುಳಿಗೆ ಮಾತ್ರವಲ್ಲ, ಒಟ್ಟಾರೆ ಆರೋಗ್ಯಕ್ಕೆ ಬಾದಾಮಿ ಉತ್ತಮವಾಗಿದೆ. ಬಾದಾಮಿ ಕೆಲವು ಬಗೆಯ ಕ್ಯಾನ್ಸರ್ ಗಳನ್ನೂ ತಡೆಯುತ್ತದೆ ಎಂದು ಕಂಡುಕೊಳ್ಳಲಾಗಿದೆ ನೆನೆಸಿಟ್ಟ ಬಾದಾಮಿಯ ಸಿಪ್ಪೆಯನ್ನು ಕೊಂಚ ಒತ್ತಡದಲ್ಲಿ ಜಾರಿಸಿದರೆ ಸುಲಭವಾಗಿ ಸುಲಿಯಲು ಸಾಧ್ಯವಾಗುತ್ತದೆ.

ಇದನ್ನೂ ಓದಿ..ಪ್ರತಿದಿನ ಒಂದು ಮೊಟ್ಟೆ ತಿನ್ನುವುದರಿಂದ ಏನಾಗುತ್ತೆ ಗೊತ್ತಾ?ನಿಮಗಿದು ಗೊತ್ತಿರಲಿ

ಈ ಸಿಪ್ಪೆ ಕೊಂಚ ಕಹಿ ಇರುವ ಕಾರಣ ತಾಯಂದಿರುವ ಸಿಪ್ಪೆ ನಿವಾರಿಸಿಯೇ ಮಕ್ಕಳಿಗೆ ನೀಡುತ್ತಾರೆ. ಬಾದಾಮಿಯ ಬಹುತೇಕ ಎಲ್ಲಾ ಪೋಷಕಾಂಶಗಳು ಒಳಗಿನ ತಿರುಳಿನಲ್ಲಿದೆ ಹಾಗೂ ಸಿಪ್ಪೆಯಲ್ಲಿ ಅತ್ಯಲ್ಪ ಪ್ರಮಾಣದಲ್ಲಿವೆ. ಮತ್ತು ಸಿಪ್ಪೆಯಲ್ಲಿ ಕರಗದ ನಾರು ಹೆಚ್ಚಿನ ಪ್ರಮಾಣದಲ್ಲಿದೆ. ಹಾಗಾಗಿ, ಸಿಪ್ಪೆ ಸಹಿತ ತಿನ್ನುವುದು ಉತ್ತಮವೇ ಆದರೂ ಕಡ್ಡಾಯವಲ್ಲ. ಸಿಪ್ಪೆ ನಿವಾರಿಸಿ ತಿನ್ನುವುದರಿಂದ ಹೆಚ್ಚಿನ ನಷ್ಟವೇನೂ ಇಲ್ಲದ ಕಾರಣ ಹಾಗೂ ಸಿಪ್ಪೆಯ ಮೂಲಕ ಸಿಗಬಹುದಾದ ಕರಗದ ನಾರಿನ ಅಂಶ ಬೇರೆ ಆಹಾರದ ಮೂಲಕವೂ ಸಿಗುವ ಸಾಧ್ಯತೆ ಹೆಚ್ಚಿರುವ ಕಾರಣ ಸಿಪ್ಪೆಯನ್ನು ನಿವಾರಿಸಿಯೂ ತಿನ್ನಬಹುದು.

Leave A Reply

Your email address will not be published.