Akshaya Tritiya: ಅಕ್ಷಯ ತೃತೀಯ ದಿನದಂದು ಚಿನ್ನ ತರದಿದ್ದರೂ ಪರವಾಗಿಲ್ಲ, ಮರೆಯದೆ ಈ ವಸ್ತುಗಳನ್ನು ಮನೆಗೆ ತನ್ನಿ ನಿಮ್ಮ ಸಂಪತ್ತು ದ್ವಿಗುಣವಾಗುತ್ತೆ.

0 3

Akshaya Tritiya ಅಕ್ಷಯ ತೃತೀಯ ಹಬ್ಬದ ದಿನದಂದು ನೂತನ ಕಾರ್ಯಗಳನ್ನು ಪ್ರಾರಂಭಿಸಿದರೆ ಯಶಸ್ಸು ಬೇಗನೆ ಪ್ರಾಪ್ತಿಯಾಗುತ್ತದೆ ಹಾಗೂ ಇಷ್ಟ ವಸ್ತುಗಳನ್ನು ದಾನ ಮಾಡಿದರೆ ನಿಮಗೆ ಸುಖ ಸಂಪತ್ತು ಹಾಗೂ ದೀರ್ಘ ಆಯಸ್ಸು ಕೂಡ ಬೇಗನೆ ಲಭಿಸುತ್ತದೆ ಎಂಬ ನಂಬಿಕೆಯು ಇದೆ. ಅಕ್ಷಯ ತೃತೀಯವು (Akshaya Tritiya) ಹಿಂದುಗಳ ಅತ್ಯಂತ ಪವಿತ್ರವಾದ ಹಬ್ಬವಾಗಿದೆ, ಈ ಶುಭದಿನವನ್ನು ಹಿಂದೂ ಭಾಂದವರು ಸಂಭ್ರಮ ಸಡಗರದಿಂದ ಆಚರಿಸುತ್ತಾರೆ.

ಇಲ್ಲಿ ಅಕ್ಷಯ (Akshaya) ಎಂದರೆ ಎಂದೆಂದಿಗೂ ಕಡಿಮೆ ಯಾಗದ್ದು ಎಂದರ್ಥ ಹಾಗೂ ತೃತೀಯ (Tritiya) ಎಂದರೆ ವೈಶಾಖ ಮಾಸದ ಮೂರನೇಯಾ ದಿನ ಎಂಬರ್ಥವಿದೆ. ಈ ಹಬ್ಬವು ವೈಶಾಖ ಮಾಸದ ಶುಕ್ಲ ಪಕ್ಷದ ಚಂದ್ರನು ಅತ್ಯಂತ ಪ್ರಖರವಾಗಿ ಬೆಳಗುವ ದಿನವಾದ ತೃತೀಯ ತಿಥಿಯಂದು ಸಂತಸದಿಂದ ಆಚರಿಸಲಾಗುತ್ತದೆ.

ಅಕ್ಷಯ ತೃತೀಯ ದಿನವನ್ನು ಲಕ್ಷ್ಮಿ ದೇವಿಗೆ ಸಮರ್ಪಿಸಲಾಗುತ್ತದೆ ಈ ದಿನ ಚಿನ್ನವನ್ನು ಖರೀದಿಸುವುದರಿಂದ ಸಂಪತ್ತು ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಇದೆ. ಆದರೆ ಚಿನ್ನವನ್ನು ಹೊರತು ಪಡಿಸಿ ಕೆಲವು ವಸ್ತುಗಳನ್ನು ಖರೀದಿಸುವುದು ಸಹ ತುಂಬಾ ಪ್ರಯೋಜನಕಾರಿ ಎನ್ನಲಾಗುತ್ತದೆ. ಭಾರತೀಯರಿಗೆ ಚಿನ್ನದೊಂದಿಗೆ ಅವಿನಾಭವ ಸಂಬಂಧವಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲಾ. ಚಿಕ್ಕಪುಟ್ಟ ಕಾರ್ಯಕ್ರಮಗಳಿಂದ ಹಿಡಿದು ಮದುವೆಗಲವರೆಗೆ ಚಿನ್ನವನ್ನು ಖರೀದಿಸಲೇಬೇಕು ಎನ್ನುವುದು ಒಂದು ಸಂಪ್ರದಾಯವಾಗಿದೆ. ಚಿನ್ನ ಭಾರತೀಯರಿಗೆ ಒಂದು ಭಾವನೆ ಎಂದರೆ ತಪ್ಪಲ್ಲ. ಅದಕ್ಕಾಗಿಯೇ ಯಾವುದೇ ಶುಭ ಕಾರ್ಯ ಇದ್ದರೂ ಚಿನ್ನವನ್ನು ಖರೀದಿಸುತ್ತಾರೆ.

ನಿಮ್ಮ ಬಜೆಟ್ ನಲ್ಲಿ ಚಿನ್ನ ಖರೀದಿಸಲು ಸಾಧ್ಯ ವಾಗುತ್ತಿಲ್ಲವೆಂದರೆ ಈ ದಿನ ನೀವು ಬಾರ್ಲಿಯನ್ನು ಸಹ ಖರೀದಿಸಬಹುದು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಬಾರ್ಲಿಯನ್ನು ಕನಕ ಅಂದರೆ ಚಿನ್ನಕ್ಕೆ ಸಮಾನವೆಂದು ಪರಿಗಣಿಸಲಾಗಿದೆ. ಬಾರ್ಲಿಯನ್ನು ಖರೀದಿಸಿ ಮತ್ತು ವಿಷ್ಣುವಿನ ಪಾದಗಳಿಗೆ ಅರ್ಪಿಸಿ, ಇದರ ನಂತರ ಬಾರ್ಲಿಯನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಅದನ್ನು ಹಣ ಇಡುವ ಸ್ಥಳದಲ್ಲಿ ಇಡಿ.

ಅಕ್ಷಯ ತೃತೀಯದಂದು ಶ್ರೀ ಯಂತ್ರವನ್ನು ಖರೀದಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಶ್ರೀ ಯಂತ್ರವು ಲಕ್ಷ್ಮಿ ದೇವಿಗೆ ಅತ್ಯಂತ ಪ್ರಿಯಕರವಾಗಿದೆ. ಇದನ್ನು ಮನೆಯ ಪೂಜಾ ಸ್ಥಳದಲ್ಲಿ ಇಡುವುದು ಒಳ್ಳೆಯದು. ಅಕ್ಷಯ ತೃತೀಯದಂದು ಒಂದು ಕವಡೆಯನ್ನು ತೆಗೆದುಕೊಂಡು ಅದನ್ನು ಲಕ್ಷ್ಮಿ ದೇವಿಯ ಪಾದದಲ್ಲಿ ಇರಿಸಿ, ಅದರ ನಂತರ ಲಕ್ಷ್ಮಿ ದೇವಿಯನ್ನು ವಿಧಿ ವಿಧಾನಗಳ ಮೂಲಕ ಪೂಜಿಸಿ ಮತ್ತು ಮರುದಿನ, ಈ ಕವಡಿಗಳನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಮತ್ತು ನೀವು ಹಣ ಇಡುವ ಸ್ಥಳದಲ್ಲಿ ಆ ಕವಡೆಗಳನ್ನು ಇಡೀ.

ಅಕ್ಷಯ ತೃತೀಯದಂದು ಹೂಜಿಯನ್ನು ಖರೀದಿಸುವುದು ಕೂಡ ಮಂಗಳಕರವೆಂದು ಪರಿಗಣಿಸಲಾಗಿದೆ.ಈ ದಿನದಂದು ನಿಮಗೆ ಚಿನ್ನವನ್ನು ಖರೀದಿಸಲು ಆಗದಿದ್ದರೆ ದ್ವಿದಳ ಧಾನ್ಯ, ಅಕ್ಕಿ, ಗೋಧಿ ಅಥವಾ ತುಪ್ಪು ಮುಂತಾದ ಆಹಾರ ಸಾಮಗ್ರಿಗಳನ್ನು ಖರೀದಿಸಿ, ಏಕೆಂದರೆ ಆಹಾರ ಸಾಮಗ್ರಿಗಳು ಕೂಡ ನಿಮ್ಮ ಅದೃಷ್ಟವನ್ನು ಖುಲಾಯಿಸಬಹುದು

Leave A Reply

Your email address will not be published.