2019 – 20 ನೇ ಸಾಲಿನ ಅಗ್ನಿಶಾಮಕ ಇಲಾಖೆಯಲ್ಲಿ ನೇಮಕಾತಿ ನಡೆಯುತ್ತಿದ್ದು, ಅದರ ಕುರಿತಾಗಿ ಎಷ್ಟು ಸಂಖ್ಯೆಯಲ್ಲಿ ಭರ್ತಿ ಮಾಡಿಕೊಳ್ಳುತ್ತಾರೆ, ಹೇಗೆ ಹಾಗೂ ವಿದ್ಯಾರ್ಹತೆ ಏನೆಲ್ಲ ಇರಬೇಕು ಅನ್ನೋದರ ಕುರಿತು ಮಾಹಿತಿಯನ್ನು ತಿಳಿಸಿಕೊಡ್ತೀವಿ.
ಈ ಬಾರಿಯ ಅಗ್ನಿಶಾಮಕ ಇಲಾಖೆಯಲ್ಲಿ ನೇಮಕಾತಿಗಾಗಿ ಇರುವ ಒಟ್ಟೂ ಹುದ್ದೆಗಳು 1567. ಸಚಿವರಾದ ಬಸವರಾಜ್ ಬೊಮ್ಮಾಯಿ ಅವರು ಇನ್ನು 100 ದಿನಗಳಲ್ಲಿ ಈ ಎಲ್ಲಾ ಹುದ್ದೆಗಳಿಗೂ ನೇಮಕಾತಿ ಮಾಡಿಕೊಳ್ಳಬೇಕು ಎಂದು ಅಗ್ನಿಶಾಮಕ ಇಲಾಖೆಗೆ ಆದೇಶ ನೀಡಿದ್ದಾರೆ. ಹಾಗಾಗಿ ಇನ್ನು ಎರಡು ಮೂರು ತಿಂಗಳಿನಲ್ಲಿ ಈ ಪ್ರಕ್ರಿಯೆ ಆರಂಭ ಆಗಲಿದೆ. 1567ರಲ್ಲಿ 1222 ಅಗ್ನಿಶಾಮಕ ಹುದ್ದೆಗಳು ಹಾಗೂ 227 ಅಗ್ನಿಶಾಮಕ ಚಾಲಕ ಹುದ್ದೆಗಳು, 82 ತಂತ್ರಜ್ಞರ ಹುದ್ದೆಗಳು ಮತ್ತು 36 ಠಾಣಾಧಿಕಾರಿಗಳ ಹುದ್ದೆಗಳು ಖಾಲಿ ಇದೆ.
ಇನ್ನು ವಿದ್ಯಾರ್ಹತೆಯ ಬಗ್ಗೆ ನೋಡುವುದಾದರೆ, ಅಗ್ನಿಶಾಮಕ ಹುದ್ದೆಗೆ SSLC ಆಗಿರಬೇಕು ಹಾಗೆ ಕನ್ನಡ ಒಂದು ಪಠ್ಯ ವಿಷ್ಯವೂ ಆಗಿರಬೇಕು. ಅಗ್ನಿಶಾಮಕ ಚಾಲಕರ ಹುದ್ದೆಗೆ ಇವರಿಗೂ ಕೂಡ SSLC ಆಗಿರಬೇಕು ಹಾಗೆ ಕನ್ನಡ ಒಂದು ಪಠ್ಯ ವಿಷ್ಯವೂ ಆಗಿರಬೇಕು ಅದರ ಜೊತೆಗೆ ಭಾರೀ ವಾಹನದ ಚಾಲನಾ ಪರವಾನಿಗೆಯನ್ನು ಸಹ ಹೊಂದಿರಬೇಕು. ಇನ್ನೂ ತಂತ್ರಜ್ಞರ ಹುದ್ದೆಗೆ ವಿದ್ಯಾರ್ಹತೆ ನೋಡುವುದಾದರೆ, SSLC ಜೊತೆಗೆ ITI ಕೂಡ ಆಗಿರಬೇಕು. ಹಾಗೆಯೇ ಠಾಣಾ ಅಧಿಕಾರಿಗಳ ಪೋಸ್ಟ್ ಗೆ ವಿದ್ಯಾರ್ಹತೆ ಸೈನ್ಸ್ ನಲ್ಲಿ ಡಿಗ್ರಿ ಆಗಿರಬೇಕು ಅದರಲ್ಲೂ ಕೆಮಿಸ್ಟ್ರಿ ವಿಷಯ ಓದಿರಬೇಕು.
ಇನ್ನು ದೇಹ ದೃಢತೆ ಮತ್ತು ದೈಹಿಕ ಪರೀಕ್ಷೆಗಳನ್ನು ನೋಡುವುದಾದರೆ, ಮೊದಲಿಗೆ ಎತ್ತರ ಕನಿಷ್ಠ 168 ಸೆಂಟಿ ಮೀಟರ್ ಎತ್ತರವನ್ನು ಹೊಂದಿರಬೇಕು. ಎದೆಯ ಸುತ್ತಳತೆ 81 – 86 ಸೆಂಟಿ ಮೀಟರ್ ಇರಬೇಕು. ತೂಕ ಕನಿಷ್ಠ 50 ಕೆಜಿ.
ಇನ್ನು ಆಯ್ಕೆ ಪ್ರಕ್ರಿಯೆ ನೋಡುವುದಾದರೆ, ಮೊದಲು ಫಿಸಿಕಲ್ ಟೆಸ್ಟ್ ಹಾಗೂ ನಂತರದಲ್ಲಿ ಬರವಣಿಗೆ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಡ್ರೈವರ್ ಪೋಸ್ಟಿಗೆ ಡ್ರೈವಿಂಗ್ ಅಲ್ಲಿ ಹೆಚ್ಚ್ ಮಾರ್ಕ್ಸ್ ಪಡೆದುಕೊಂಡರೆ ಆಯ್ಕೆ ಮಾಡುತ್ತಾರೆ. ತಂತ್ರಜ್ಞರ ಪೋಸ್ಟ್ ನಲ್ಲಿ ಆಯ್ಕೆ ಇದರಲ್ಲಿ SSLC ಮಾರ್ಕ್ಸ್ ಹಾಗೂ ಬರವಣಿಗೆಯ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ನೋಡಿ ಆಯ್ಕೆ ಮಾಡುತ್ತಾರೆ. ಇಕ್ಕಿ ITI ಮಾರ್ಕ್ಸ್ ಪರಿಗಣನೆಗೆ ಬರುವುದಿಲ್ಲ.
ಫಿಸಿಕಲ್ ಟೆಸ್ಟ್ ಗಳಲ್ಲಿ ಏನೆಲ್ಲ ಇರಬಹುದು ಅಂತ ನೋಡುವುದಾದರೆ, 100ಮೀಟರ್ ಓಟ. ಸಾಮಾನ್ಯ ಅಭ್ಯರ್ಥಿಗಳಿಗೆ 15 ಸೆಕೆಂಡ್ ಗಳು ಹಾಗೂ 100 ಮೀಟರ್ ಓಟ ಬೆನ್ನಿನಲ್ಲಿ 20ಕೆಜಿ ಭಾರದ ಜೊತೆಗೆ 25 ಸೆಕೆಂಡ್ ಗಳಲ್ಲಿ ಒಡಬೇಕು. 20 ಸೆಕೆಂಡುಗಳಲ್ಲಿ 22ಕೆಜಿ ಭಾರವನ್ನು ಹೊತ್ತುಕೊಂಡು 20 ಅಡಿ ಎತ್ತರದ ಎಣಿಯನ್ನು ಏರುವುದು. 7.26 ಕಿಲೋ ಭಾರ ಇರುವ ಗುಂಡು ಎಸೆತ ಅದು 3 ಪ್ರಯತ್ನದಲ್ಲಿ 5.36 ಮಿಟರವರೆಗೂ . 800 ಮೀಟರ್ ಓಟವನ್ನು 2ನಿಮಿಷ 50 ಸೆಕೆಂಡ್ ಗಳಲ್ಲಿ ಮುಗಿಸಬೇಕು. ಇಷ್ಟು ಪರೀಕ್ಷೆಗಳಲ್ಲಿ ಯಾವುದೇ 3 ಪರೀಕ್ಷೆಗಳಲ್ಲಿ ಪಾಸ್ ಆದರೆ ನೇಮಕಾತಿ ಮಾಡಿಕೊಳ್ಳುತ್ತಾರೆ.
ಇನ್ನು ವೇತನ ನೋಡುವುದಾದರೆ,, ಅಗ್ನಿಶಾಮಕರಿಗೆ 11 ಸಾವಿರದಿಂದ ಆರಂಭಿಸಿ 21 ಸಾವಿರದ ವರೆಗೂ ಹಾಗೂ ಅಗ್ನಿಶಾಮಕ ಚಾಲಕರು ಮತ್ಯು ತಂತ್ರಜ್ಞರಿಗೆ 12 ಸಾವಿರದಿಂದ ಆರಂಭಿಸಿ 24 ಸಾವಿರದವರೆಗೂ ವೇತನವನ್ನು ನೀಡಲಾಗುತ್ತದೆ.