ಸಾಮಾನ್ಯವಾಗಿ ಚಿತ್ರರಂಗದಲ್ಲಿ ನಟಿಸುತ್ತಿರುವ ನಟಿಯರಿಗೆ ತಮ್ಮ ಬ್ಯುಸಿ ಜೀವನದಲ್ಲಿ ಮನೆಯವರೊಂದಿಗೆ ಬೆರೆತು ಹಬ್ಬವನ್ನು ಆಚರಿಸುವಷ್ಟು ಸಮಯ ಇರುವುದಿಲ್ಲ. ಹೀಗಿರುವಾಗ ಅದಿತಿ ಪ್ರಭುದೇವ್ ಅವರು ಗೌರಿ ಗಣೇಶ ಹಬ್ಬವನ್ನು ಸಾಂಪ್ರದಾಯಿಕವಾಗಿ ಹಳ್ಳಿ ಹುಡುಗಿಯಂತೆ ಆಚರಿಸಿದ್ದಾರೆ. ಹಾಗಾದರೆ ಅವರು ಗಣೇಶ ಹಬ್ಬವನ್ನು ಆಚರಿಸಿದ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಎಲ್ಲರಿಗೂ ಗೌರಿ-ಗಣೇಶ ಹಬ್ಬ ಬಂತೆಂದರೆ ಸಂಭ್ರಮ, ಸಡಗರ ಇರುತ್ತದೆ. ಅದಿತಿ ಪ್ರಭುದೇವ ಅವರು ಸಾಂಪ್ರದಾಯಿಕವಾಗಿ ಹಬ್ಬಗಳನ್ನು ಆಚರಿಸುತ್ತಾರೆ. ಮುದ್ದು ಮುದ್ದಾದ ಗಣಪತಿ ಮೂರ್ತಿಗಳನ್ನು ನೋಡುವುದೆ ಚೆಂದ ಎಂದು ಅವರು ಹೇಳುತ್ತಾರೆ. ಈ ಬಾರಿಯ ಗಣೇಶ ಹಬ್ಬದಲ್ಲಿ ಅದಿತಿ ಅವರು ಪರಿಸರಸ್ನೇಹಿ ಅರಿಶಿಣದ ಗಣಪತಿ ಮೂರ್ತಿಯನ್ನು ತಯಾರಿಸಿದ್ದಾರೆ.
ಅರಿಶಿಣದ ಗಣಪತಿ ತಯಾರಿಸಲು 1 ಬೌಲ್ ಗೋಧಿ ಹಿಟ್ಟು ಅಥವಾ ಮೈದಾ ಹಿಟ್ಟು, ಒಂದು ಬೌಲ್ ಅರಿಶಿಣ, 2 ಸ್ಪೂನ್ ಅಕ್ಕಿಹಿಟ್ಟು, ಎರಡು ಸ್ಪೂನ್ ಸಕ್ಕರೆ ಹಿಟ್ಟು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಕಲಸಿ 15 ನಿಮಿಷ ಹಾಗೆಯೆ ಬಿಟ್ಟು ನಂತರ ಎಲೆಯಮೇಲೆ ಹಿಟ್ಟಿನಿಂದ ಗಣೇಶನ ಮೂರ್ತಿಯನ್ನು ತಯಾರಿಸಿದರು. ನಂತರ ಗಣೇಶನ ಮೂರ್ತಿಯ ಮುಂದೆ ಸಣ್ಣದಾದ ಮುದ್ದಾದ ಇಲಿಯನ್ನು ಕೂಡ ತಯಾರಿಸಿದರು.
ನಂತರ ಅವರು ಬ್ಲೌಸ್ ಪೀಸ್ ಬಳಸಿ ಗಣೇಶನಿಗೆ ಪುಟ್ಟ ಛತ್ರಿಯನ್ನು ತಯಾರಿಸಿ ಅದಕ್ಕೆ ಸ್ಟಿಕ್ಕರ್ ಬಳಸಿ ಡೆಕೋರೇಷನ್ ಮಾಡಿದರು. ಕಾರ್ಬೋರ್ಡ್, ಡಬಲ್ ಟೇಪ್ ಬಳಸಿ ಫ್ಲವರ್ ಡೆಕೊರೇಟಿವ್ ಐಟಮ್ ಮಾಡಿಕೊಂಡರು ಅದನ್ನು ದೇವರ ಹಿಂದೆ ಇಟ್ಟಾಗ ಸುಂದರವಾಗಿ ಕಾಣಿಸುತ್ತದೆ. ಗಣೇಶನಿಗೆ ಮೋದಕ ಎಂದರೆ ಬಹಳ ಪ್ರಿಯ. ಗಣೇಶನ ಮೂರ್ತಿಯನ್ನು ತಯಾರಿಸಿದಾಗ ಮೋದಕವನ್ನು ತಯಾರಿಸಬೇಕು.
ಅವರು ಮೊದಲು ಒಂದು ಪಾತ್ರೆಗೆ ಎರಡು ಸ್ಪೂನ್ ತುಪ್ಪ, ಕಾಯಿತುರಿ ಹಾಕಿ ಸ್ವಲ್ಪ ಹೊತ್ತು ಬಾಡಿಸಿ ಆರ್ಗ್ಯಾನಿಕ್ ಬೆಲ್ಲದ ಪೌಡರ್, ಚಕ್ಕೆ ಪೌಡರ್ ಹಾಕಿ ಹೂರ್ಣ ತಯಾರಿಸಿದ ನಂತರ ಮೈದಾಹಿಟ್ಟು ಬಳಸಿ ಎಲೆಯನ್ನು ತಯಾರಿಸಿ ಹೂರ್ಣವನ್ನು ಅದರಲ್ಲಿ ಇಟ್ಟು ವಿಭಿನ್ನವಾಗಿ ಮೋದಕದ ಶೇಪ್ ನಲ್ಲಿ ಮಡಚಬೇಕು.
ನಂತರ ಎಣ್ಣೆಯಲ್ಲಿ ಖರಿಯಬೇಕು. ಹಳ್ಳಿಯಲ್ಲಿ ಸಗಣಿ ಗುಳ್ಳವ್ವ ತಯಾರಿಸಿ ಬಾಗಿಲಿಗೆ ಇಡುವ ಸಂಪ್ರದಾಯವಿದೆ ಅದನ್ನು ಅದಿತಿ ಪ್ರಭುದೇವ ಅವರು ಚೆನ್ನಾಗಿ ಆಚರಿಸಿದರು. ಅದಿತಿ ಪ್ರಭುದೇವ್ ಅವರಿಗೆ ಹೊಸದಾಗಿ ಏನನ್ನಾದರೂ ತಯಾರಿಸಿ ದೇವರಿಗೆ ಅರ್ಪಿಸಿದರೆ ಅದರಿಂದ ಖುಷಿ ಸಿಗುತ್ತದೆ ಅಲ್ಲದೆ ಮನಸ್ಸಿಗೆ ಏನೊ ಸಮಾಧಾನ ಸಿಗುತ್ತದೆ ಎನ್ನುವುದು ಅವರ ಅಭಿಪ್ರಾಯ. ಅದಿತಿ ಪ್ರಭುದೇವ್ ಅವರು ಹಳ್ಳಿಯ ಜೀವನಕ್ಕೂ ಹೊಂದಿಕೊಂಡಿದ್ದಾರೆ ಜೊತೆಗೆ ನಗರದಲ್ಲಿದ್ದು ಚಿತ್ರರಂಗದಲ್ಲಿ ನಟಿಸುವ ಮೂಲಕ ಅನೇಕ ಸಿನಿಮಾಗಳಲ್ಲಿ ನಟಿಸಿ ಜನರ ಮನಸ್ಸನ್ನು ಗೆದ್ದಿದ್ದಾರೆ.