ಕರ್ನಾಟಕ ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಅನೇಕ ರೈತರು ಅಡಿಕೆ ಬೆಳೆಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅಡಿಕೆ ಬೆಳೆಯು ವಾರ್ಷಿಕ ಬೆಳೆಯಾಗಿದ್ದು ತೋಟಗಾರಿಕಾ ಬೆಳೆಯಾಗಿದೆ. ಅಡಿಕೆ ಸಸಿಗಳನ್ನು ಹೇಗೆ ನೆಡಬೇಕು ಹಾಗೂ ಅವುಗಳ ಪೋಷಣೆಯ ಬಗ್ಗೆ ಈ ಲೇಖನದಲ್ಲಿ ನೋಡೋಣ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಶಂಬೂರಿ ಎಂಬಲ್ಲಿ ದಿ. ಶ್ರೀಕೃಷ್ಣ ಸೋಮಯಾಜಿ ಎನ್ನುವವರು 25 ವರ್ಷಗಳಿಂದ ಕೃಷಿ ಮಾಡುತ್ತಿದ್ದಾರೆ. ಅವರು ದಿನಕ್ಕೆ 250 ಕಿಲೋ ಅಡಿಕೆ ಉತ್ಪಾದನೆ ಆಗಬೇಕು ಎಂಬ ಗುರಿ ಇಟ್ಟುಕೊಂಡು ತೋಟ ಮಾಡಿದ್ದಾರೆ. ತೋಟ ಮಾಡಿ ಅವರು ಅದರಲ್ಲಿ ಯಶಸ್ವಿಯಾಗಿದ್ದಾರೆ. ಅಡಿಕೆ ತೋಟವನ್ನು ಸಮತಟ್ಟಾದ ಜಾಗದಲ್ಲಿಯೂ ಮಾಡಬಹುದು, ಏರು ತಗ್ಗಾದ ಜಾಗದಲ್ಲಿಯೂ ಮಾಡಬಹುದು ಆದರೆ ಸಸಿ ನೆಡುವಾಗ ಸಮತಟ್ಟು ಮಾಡಿ ನೆಡಬೇಕು ಎಂದಾದರೆ ಮೇಲು ಮಣ್ಣು ಹಾಳಾಗದಂತೆ ನೋಡಿಕೊಳ್ಳಬೇಕು. ಅಡಿಕೆ ಸಸಿಗಳನ್ನು ನೆಡುವ ಜಾಗದಲ್ಲಿ ಮರ ಮಟ್ಟುಗಳು, ಪೊದರು ಸಸ್ಯಗಳು ಇರಬಾರದು. ಸಮತಟ್ಟು ಮಾಡುವಾಗ ಸಿಗುವ ಮೇಲು ಮಣ್ಣನು ಎರೆಮಣ್ಣು ಎಂದು ಕರೆಯುತ್ತಾರೆ ಈ ಮಣ್ಣನು ಗಿಡ ನೆಡುವಾಗ ಬಳಸಬೇಕು.
ಗಿಡ ನೆಡುವಾಗ ಎರಡು ಅಡಿ ಹೊಂಡ ಮಾಡಿ ಹೊಂಡದಲ್ಲಿ ಪ್ಯಾಕೆಟ್ ನಲ್ಲಿ ಮೇಲು ಮಣ್ಣು, ಸುಡು ಮಣ್ಣು ಮತ್ತು ಕೊಟ್ಟಿಗೆ ಗೊಬ್ಬರವನ್ನು ಹಾಕಬೇಕು, ಇವೆಲ್ಲವೂ ಸೇರಿ ಸುಮಾರು 5-6 ಕಿಲೋ ಆಗಿರಬೇಕು. ಸಾಧ್ಯವಾದರೆ ಕಾಫಿ ಸಿಪ್ಪೆ ಕಾಂಪೋಸ್ಡ್ ಹಾಕಬೇಕು. ಹೊಂಡವನ್ನು ಹೆಚ್ಚು ಆಳ ಮಾಡಬಾರದು ಏಕೆಂದರೆ ಅಲ್ಲಿ ಫಲವತ್ತಾದ ಮಣ್ಣು ಸಿಗದೆ ಎಳೆತಿರುವಾಗಲೆ ಸೊರಗಿ ಹೋಗುತ್ತದೆ ಆದ್ದರಿಂದ ಹೊಂಡದ ತುಂಬಿ ನೆಡಬೇಕು ಇದರಿಂದ ಗಿಡ ಪುಷ್ಟಿಯಾಗಿ ಬೆಳೆಯುತ್ತದೆ. ಗಿಡ ನೆಡುವಾಗ ಬುಡ ಭಾಗವನ್ನು ಸ್ವಲ್ಪ ಏರು ಮಾಡಿ ನೆಡಬೇಕು. ಸಸಿ ನೆಟ್ಟ ನಂತರ ಬುಡಕ್ಕೆ ಸ್ವಲ್ಪ ಹಸಿ ಸೊಪ್ಪು ಹಾಕಬೇಕು. ನೆಟ್ಟ ಸಸಿಗೆ ಎಲೆ ಅಡಿಗೆ, ಸುಳಿ ಭಾಗಕ್ಕೆ ಸಿಡಿಯಬಾರದು ಇದರಿಂದ ಗಿಡ ಸೊರಗುತ್ತದೆ ಹಸಿ ಸೊಪ್ಪು ಹಾಕಿದರೆ ಗಿಡ ಸೋರಗುವುದಿಲ್ಲ. ಸಸಿ ನೆಡುವಾಗ ಬಿಸಿಗಾಲುವೆ ಮಾಡಬೇಕು. ನೀರು ನಿಲ್ಲದಿರಲಿ, ನಿಲ್ಲಲಿ ಬಿಸಿಗಾಲುವೆ ಮಾಡಬೇಕು.
ಎರಡು ಅಡಿಕೆ ಗಿಡಗಳ ಸಾಲುಗಳ ಮದ್ಯಂತರದಲ್ಲಿ ಒಂದೊಂದು ಬಿಸಿಗಾಲುವೆಯನ್ನು ಮಾಡಿದರೆ ಪ್ರತಿ ಸಸಿಯ ಒಂದು ಪಾರ್ಶ್ವದಲ್ಲಿ ನೀರು ಬಸಿಯಲು ಮತ್ತು ಸಸ್ಯದ ಬೇರುಗಳ ಉಸಿರಾಟಕ್ಕೆ ಅನುಕೂಲ ಮಾಡಿಕೊಡುತ್ತದೆ ಇಲ್ಲವಾದರೆ ಬೇರುಗಳು ಮೇಲೆ ಬರುತ್ತದೆ. ಬಿಸಿಗಾಲುವೆಯನ್ನು ಗಿಡ ನೆಡುವಾಗಲೆ ಮಾಡಬೇಕು. ತೋಟ ಮಾಡುವಾಗ ಅಡಿಕೆ ಸಸಿಗಳಿಗೆ ಹೆಚ್ಚು ಬಿಸಿಲು ತಾಗುವಂತಿದ್ದರೆ ತೆಂಗಿನ ಸಸಿಗಳನ್ನು ನೆಡಬಹುದು. ತೆಂಗಿನ ಸಸಿ ನೆಟ್ಟು ಸುಮಾರು 15 ಅಡಿ ಅಂತರ ಬಿಟ್ಟು ಅಡಿಕೆ ಸಸಿಗಳನ್ನು ನೆಡಬೇಕು. ತೆಂಗಿನ ಮರಗಳು ಅಡಿಕೆ ತೋಟಕ್ಕೆ ಗಾಳಿ ಬರದಂತೆ ತಡೆಯುತ್ತದೆ. ತೋಟದ ಹತ್ತಿರ ಸೊಪ್ಪಿನ ಮರಗಳನ್ನು ಉಳಿಸಿಕೊಂಡರೆ ತೋಟಕ್ಕೆ ಸೊಪ್ಪು ಹಾಕಲು ಅನುಕೂಲವಾಗುತ್ತದೆ. ಅಡಿಕೆ ಸಸಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಸಸಿ ಇರುವಾಗ ಗಿಡ ಸೊರಗಿದರೆ ಉತ್ತಮ ಫಲ ಕೊಡುವುದಿಲ್ಲ. ಸಾಮಾನ್ಯವಾಗಿ ಎಲ್ಲಾ ತಳಿಯ ಅಡಿಕೆ ಸಸಿಗಳು 3 ವರ್ಷಕ್ಕೆ ಹೂ ಮೊಗ್ಗು ಮೂಡುವ ಮಟ್ಟಕ್ಕೆ ಬೆಳೆಯಬೇಕು. 4 ನೇ ವರ್ಷಕ್ಕೆ ಫಲ ಬಿಡಲು ಪ್ರಾರಂಭವಾಗಬೇಕು. ಅಡಿಕೆ ಸಸಿಗಳಿಗೆ ಸರಿಯಾಗಿ ಪೋಷಣೆ ಮಾಡಿದರೆ ಒಂದು ಗಿಡಕ್ಕೆ 5-6 ಅಡಿಕೆ ಗೊನೆ ಬರುತ್ತದೆ. ಈ ಮಾಹಿತಿಯನ್ನು ಅಡಿಕೆ ಬೆಳೆಗಾರರಿಗೆ ತಪ್ಪದೆ ತಿಳಿಸಿ.