ಅಡಿಕೆ ಬೆಳೆಯು ನೋಡಲು ಸುಂದರ ಮತ್ತು ವಾಣಿಜ್ಯ ಬೆಳೆಯಾಗಿದೆ. ಅಡಿಕೆ ಬೆಳೆಯನ್ನು ವ್ಯೆಜ್ಞಾನಿಕ ಪದ್ಧತಿಯಲ್ಲಿ ಬೆಳೆದರೆ ಮಾತ್ರ ಉಪಯೋಗವಾಗುತ್ತದೆ. ಅಡಿಕೆಯನ್ನು ಯಾವ ರೀತಿಯ ಪ್ರದೇಶದಲ್ಲಿ ನೆಡಬೇಕು, ಅಡಿಕೆಯನ್ನು ಜಾಸ್ತಿ ನೀರು ನಿಲ್ಲುವ ಪ್ರದೇಶದಲ್ಲಿ ಬೆಳೆಯಬಾರದು. ಇವತ್ತು ಬಯಲು ಪ್ರದೇಶ ಇರಬಹುದು ಅಥವಾ ಗದ್ದೆ ಪ್ರದೇಶ ಇರಬಹುದು ಹಿತಾಚಿಯ ಮೂಲಕ ಗುಂಡಿ ತೋಡಿಸುವ ಕೆಲಸ ಬಹಳ ಮಂದಿ ಮಾಡುತ್ತಾರೆ. ಗದ್ದೆಯಲ್ಲಿ ಅಡಿಕೆ ಬೆಳೆಯುವಾಗ ಜೆಸಿಬಿ ಅಥವಾ ಹಿತಾಚಿಯನ್ನು ಬಳಸಬೇಡಿ.ಬದಲಾಗಿ ಟ್ರಾಕ್ಟರ್ ಉಳುಮೆ ಒಳ್ಳೆಯದು. ಒಂದು ಅಡಿಕೆ ಮರದಿಂದ ಇನ್ನೊಂದು ಮರಕ್ಕೆ ಸಾಲಿನಿಂದ ಸಾಲಿಗೆ ಒಂಭತ್ತು ಫೀಟ್ ತುಂಬಾ ಒಳ್ಳೆಯದು. ಏಕೆಂದರೆ ಇದರ ಆಯುಷ್ಯ 25ವರ್ಷಗಳು.
ಅಡಿಕೆಯಲ್ಲಿ ಯಾವ ತಳಿ ಒಳ್ಳೆಯದು:- ಕೆಲವರು ಹೇಳುತ್ತಾರೆ ಮಂಗಳ, ಹೀರೆಹಳ್ಳಿ ಒಳ್ಳೆಯದು ಅಂತ. ಆದರೆ ಎಲ್ಲಾ ತಳಿಗಳು ಒಳ್ಳೆಯದು. ನಾವು ತೋಟಕ್ಕೆ ಮಾಡುವ ಇಳುವರಿಯ ಮೇಲೆ ಪರಿಣಾಮ ಬೀರುತ್ತದೆ.
ಎಷ್ಟು ಅಳತೆಯ ಗುಂಡಿಯನ್ನು ಮಾಡಬೇಕು:- ಮರಕ್ಕೆ ಹಾಕಿದ ಆಹಾರ ಆಚೆ ಈಚೆ ಹೋಗಬಾರದು ಎಂದು ಗುಂಡಿಯನ್ನು ಮೇಲ್ಪದರದಲ್ಲಿ ಮಾಡುತ್ತೇವೆ. 3ಫೀಟ್ ವ್ಯಾಸ 1ಫೀಟ್ ಆಳದ ಗುಂಡಿಯನ್ನು ಮಾಡಬೇಕು.
ಗಿಡವನ್ನು ಯಾವ ರೀತಿಯಲ್ಲಿ ನಾಟಿ ಮಾಡಬೇಕು:- ನಾಟಿಗೆ ಮುನ್ನ ಒಂದು ಎಕರೆಗೆ ಒಂದು ಕೆ.ಜಿ ಸುಣ್ಣವನ್ನು ಬಳಸಬೇಕು. 2 ರಿಂದ 3ಕೆಜಿಯಷ್ಟು ಕಹಿಬೇವಿನ ಹಿಂಡಿ ಹಾಕಬೇಕು. ಜೊತೆಗೆ ರಾಕ್ ಫಾಸ್ಫೆಟ್ ಹಾಕಬೇಕು. ಮಣ್ಣಿನ ಮಿಶ್ರಣ ಮಾಡಿ ಒಂದು ವಾರದ ನಂತರ ಗಿಡವನ್ನು ನಾಟಿ ಮಾಡಬೇಕು. ಜೂನ್ ತಿಂಗಳಲ್ಲಿ ನಾಟಿ ಮಾಡಬೇಕು.
ಅಡಿಕೆ ಗಿಡವನ್ನು ಯಾವ ರೀತಿಯಲ್ಲಿ ತಯಾರಿಸುವುದು:- ನರ್ಸರಿಯಿಂದ ಗಿಡಗಳನ್ನು ತರುತ್ತಾರೆ. ಯಾವುದೇ ಮಧ್ಯ ವಯಸ್ಸಿನ ಮರದಿಂದ ಬೀಜವನ್ನು ಮಣ್ಣಿನ ನೆಲದಲ್ಲಿ 15ದಿನ ಒಣಗಿಸಬೇಕು. ನಂತರ 5/7 ಅಳತೆಯ ಪ್ಲಾಸ್ಟಿಕ್ ಚೀಲ ಬಳಸಬೇಕು. ಒಂದು ಪ್ರಮಾಣದಲ್ಲಿ ಮರಳು ಮತ್ತು ಒಂದು ಪ್ರಮಾಣದಲ್ಲಿ ಗೊಬ್ಬರ ಹಾಕಿದರೆ ಬೀಜಗಳು 4ರಿಂದ5 ದಿನದಲ್ಲಿ ಮೊಳಕೆ ಬರುತ್ತದೆ. 6ತಿಂಗಳ ಒಳಗಿನ ಗಿಡ ನಾಟಿಗೆ ಒಳ್ಳೆಯದು.
ಗೊಬ್ಬರವನ್ನು ಹೇಗೆ ಕೊಡಬೇಕು:- ನಾಟಿ ಮಾಡಿದ ಗಿಡಗಳಿಗೆ ಒಂದು ವರ್ಷದ ತನಕ ಪ್ರತಿ ತಿಂಗಳಿಗೊಮ್ಮೆ ಗೊಬ್ಬರ ಕೊಡಬೇಕು. 2ವರ್ಷದ ನಂತರ ಪ್ರತಿ 2 ತಿಂಗಳಿಗೊಮ್ಮೆ ಹಾಗೆ 3ವರ್ಷದ ನಂತರ ಪ್ರತಿ 3ತಿಂಗಳಿಗೊಮ್ಮೆ 2ಫೀಟ್ ದೂರದಲ್ಲಿ ಗೊಬ್ಬರ ಅಡಿಕೆ ಗಿಡಕ್ಕೆ ತಾಗದೆ ಕೊಡಬೇಕು.
ಅಡಿಕೆ ಕಟಾವು ಮಾಡಿ ಒಣಗಿಸುವ ಪದ್ಧತಿ:- ಒಣ ಅಡಿಕೆಗೆ ನೀರು ಬಿದ್ದರೆ ಅಡಿಕೆಯ ಗುಣಮಟ್ಟ ಹಾಳು. ಆದ್ದರಿಂದ ಸರಿಯಾದ ಬಿಸಿಲಿನಲ್ಲಿ ಒಣಗಿಸಬೇಕು.ಅಡಿಕೆಯ ಮಾಹಿತಿಯನ್ನು ಪಡೆದು ಹೆಚ್ಚಿನ ಇಳುವರಿ ಪಡೆದುಕೊಳ್ಳಿ.