ಏಪ್ರಿಲ್ 19, 2020ರಲ್ಲಿ ನಿಖಿಲ್ ಮತ್ತು ರೇವತಿ ಬಿಡದಿ ಫಾರ್ಮ್ಹೌಸ್ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸೆಪ್ಟೆಂಬರ್ 24,2021ರಲ್ಲಿ ಪುತ್ರನನ್ನು ಬರ ಮಾಡಿಕೊಂಡರು. ನಿಖಿಲ್ ಅವರ ಹುಟ್ಟು ಹಬ್ಬದ ದಿನದಂದು ಹೊಸ ಸಿನಿಮಾ ಘೋಷಣೆಯಾಗಿದೆ. ಫಸ್ಟ್ ಲುಕ್ ಕೂಡ ಬಿಡುಗಡೆ ಮಾಡಿದೆ ಚಿತ್ರತಂಡ. ಈ ಸಿನಿಮಾ ಕೂಡ ಅದ್ದೂರಿಯಾಗಿ ಮೂಡಿ ಬರುವುದರಿಂದ, ಚಿತ್ರಕ್ಕೂ ಅವರು ಟೈಮ್ ಕೊಡಬೇಕಿದೆ.
ಈ ಎಲ್ಲದರ ಮಧ್ಯೆ ಕುಟುಂಬವನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ ನಿಖಿಲ್.
ಸದ್ಯ ನಿಖಿಲ್ ಕುಮಾರ್ ಸ್ವಾಮಿ ಎರಡು ದೋಣಿಯ ಮೇಲೆ ಪಯಣ ಮಾಡುತ್ತಿದ್ದಾರೆ. ಒಂದು ಕಡೆ ಅವರ ಹೊಸ ಸಿನಿಮಾ ಒಡೆಯರ್ ಘೋಷಣೆಯಾಗಿದೆ. ಈ ಕಡೆ ಪಕ್ಷ ಸಂಘಟಿಸುವ ಹೊಣೆಯನ್ನು ಹೊತ್ತಿದ್ದಾರೆ. ಹಾಗಾಗಿ ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿದ್ದಾರೆ. ಒಂದೂವರೆ ವರ್ಷದಲ್ಲಿ ಕರ್ನಾಟಕದಲ್ಲಿ ಚುನಾವಣೆ ನಡೆಯಲಿದೆ. ಹಾಗಾಗಿ ನಿಖಿಲ್ ಗುರುತರ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.
ನಿಖಿಲ್ ರಾಜಕಾರಣ ಮತ್ತು ಸಿನಿಮಾ ರಂಗ ಎರಡರಲ್ಲೂ ಸೆಣಸಬೇಕಿದೆ. ಈ ಬಾರಿಯೂ ಅವರು ರಾಜಕೀಯ ಅಖಾಡಕ್ಕೆ ಇಳಿಯಲಿದ್ದಾರೆ ಎನ್ನುವ ಸುದ್ದಿಯಿದೆ. ವಿಧಾನ ಸಭೆ ಚುನಾವಣೆಗೆ ಅವರು ಸ್ಪರ್ಧಿಸುತ್ತಿದ್ದಾರೆ. ಜೊತೆಗೆ ಸಿನಿಮಾ ರಂಗದಲ್ಲೂ ಸಾಕಷ್ಟು ಪೈಪೋಟಿ ಇದೆ. ಎರಡರಲ್ಲೂ ಅವರು ಸಖತ್ ಫೈಟ್ ಮಾಡಬೇಕು. ಈ ಎಲ್ಲ ಟೆನ್ಷನ್ ಮಧ್ಯೆ ಜಾಲಿಯಾಗಿ ಮಗನೊಂದಿಗೆ ಸಮಯ ಕಳೆಯುತ್ತಿದ್ದಾರೆ ನಿಖಿಲ್ ಕುಮಾರಸ್ವಾಮಿ.
ಬಿಡದಿಯ ತೋಟದ ಮನೆ ಈಗ ರಾಮನಗರ ಜಿಲ್ಲೆಗೆ ಜೆಡಿಎಸ್ ಪಕ್ಷದ ಶಕ್ತಿ ಕೇಂದ್ರವಾಗುವ ಜೊತೆಗೆ ಇಡೀ ರಾಜ್ಯದ ಚಟುವಟಿಕೆಗಳ ಕೇಂದ್ರ ಸ್ಥಾನವೂ ಆಗಿದೆ. ಎಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಪತ್ನಿ ಅನಿತಾ ಅವರುಗಳು ಪ್ರತಿನಿಧಿಸುತ್ತಿರುವ ಚನ್ನಪಟ್ಟಣ ಮತ್ತು ರಾಮನಗರ ವಿಧಾನಸಭಾ ಕ್ಷೇತ್ರಗಳಲ್ಲಿನ ಸಮಸ್ಯೆಗಳ ಕಡೆಗೆ ಗಮನಹರಿಸುವುದು ಹಾಗೂ ರಾಮನಗರ ಜಿಲ್ಲೆಯ ಮುಖಂಡರು ಮತ್ತು ಕಾರ್ಯಕರ್ತರ ಸಭೆಗಳನ್ನು ಕರೆದು ಪಕ್ಷ ಸಂಘಟನೆ ಹಾಗೂ ಕುಂದು ಕೊರತೆಗಳ ಬಗ್ಗೆ ಚರ್ಚಿಸಿ ಸ್ಪಂಧಿಸುವ ಕೆಲಸಗಳು ತೋಟದ ಮನೆಯಿಂದಲೇ ಜರುಗುತ್ತಿವೆ. ಎಚ್.ಡಿ.ಕುಮಾರಸ್ವಾಮಿ ಅವರು ನಾಲ್ಕು ಗೋವುಗಳನ್ನು ತಮ್ಮ ತೋಟದ ಮನೆಗೆ ತರಿಸಿಕೊಂಡಿದ್ದಾರೆ. ಕಪಿಲ, ಸ್ವರ್ಣಕಪಿಲ ಹಾಗೂ ಗೀರ್ ತಳಿಯ 4 ಹಸುಗಳಿಗೆ ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸಿದ್ದಾರೆ.
ನಿಖಿಲ್ ಕುಮಾರಸ್ವಾಮೀ ಹಾಗೂ ಕುಟುಂಬದವರು ಬಿಡದಿ ತೋಟದ ಮನೆಯಲ್ಲಿ ವಾಸಿಸುತ್ತಿದ್ದು ಇಲ್ಲೇ ಸುಂದರವಾದ ತೋಟವನ್ನು ನಿರ್ಮಿಸಿದ್ದಾರೆ. ತಮ್ಮ ಕುಟುಂಬದೊಂದಿಗೆ ಸುಮಧುರವಾದ ಕ್ಷಣಗಳನ್ನ ಕಳೆಯುತ್ತಿದ್ದಾರೆ. ಅಲ್ಲದೇ ರಾಜಕೀಯ ಮತ್ತು ಕೃಷಿ ಚಟುವಟಿಕೆ ದೃಷ್ಠಿಯಿಂದ ರಾಮನಗರ ಕುಮಾರಸ್ವಾಮಿ ಅವರ ಕುಟುಂಬದ ಕರ್ಮಭೂಮಿ, ಬಿಡದಿಯ ಕೇತಗಾನಹಳ್ಳಿಯ ತಮ್ಮ ಕೃಷಿ ಭೂಮಿಯ ಕಡೆ ಗಮನಹರಿಸುತ್ತಿದ್ದಾರೆ.