ಬಟ್ಟೆ ಬಿಚ್ಚಿ ತೋರಿಸ್ತೀರಾ, ಅವಕಾಶ ಬೇಕು ಅಂದ್ರೆ ಬೀಚ್ ಗೆ ಬನ್ನಿ ಅಂತಾರೆ, ಚಿತ್ರರಂಗದ ಕರಾಳ ಸತ್ಯ ಬಿಚ್ಚಿಟ್ಟ ಖ್ಯಾತ ನಟಿ

0 12,327

Actress Amani: ನಟಿ ಆಮನಿ ಇವರು ಕನ್ನಡದ ಹುಡುಗಿ, ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರು. ಇವರ ತಂದೆ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಆಮನಿ ( Actress Amani) ಅವರಿಗೆ ಸಿನಿಮಾದಲ್ಲಿ ಹೆಚ್ಚಿನ ಅವಕಾಶಗಳು ಸಿಕ್ಕಿದ್ದು ತೆಲುಗು ಚಿತ್ರರಂಗದಲ್ಲಿ. ಕನ್ನಡಕ್ಕೆ ಬಹಳ ತಡವಾಗಿ ಎಂಟ್ರಿ ಕೊಟ್ಟರು, ತೆಲುಗಿನಲ್ಲಿ ಬಹುತೇಕ ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ನಟಿಸಿದ್ದಾರೆ ಆಮನಿ. ಇತ್ತೀಚೆಗೆ ಇವರು ಕ್ಯಾಸ್ಟಿಂಗ್ ಕೌಚ್ ಬಗ್ಗೆ ನೀಡಿರುವ ಹೇಳಿಕೆ ಈಗ ವೈರಲ್ ಆಗಿದೆ.

ನಟಿ ಆಮನಿ ಅವರು ನಾಯಕಿ ಆಗಬೇಕು ಎಂದು ಬಹಳ ವರ್ಷಗಳಿಂದ ಆಸೆ ಇಟ್ಟುಕೊಂಡಿದ್ದರು. ಅದೇ ರೀತಿ ಚಿತ್ರರಂಗದಲ್ಲಿ ಅವಕಾಶಕ್ಕಾಗಿ ಪ್ರಯತ್ನ ಪಡುವಾಗ ಅವರು ಅನುಭವಿಸಿದ ಕಷ್ಟಗಳ ಬಗ್ಗೆ ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ. ತಮಗೆ ಅವಕಾಶ ಕೊಡುವುದಾಗಿ ಕರೆದು, ಮೈಬಣ್ಣ ನೋಡಿ ಅವಕಾಶ ಕೊಡುವುದಿಲ್ಲ ಎಂದಿದ್ದರು ಎಂದು ಹಳೆಯ ನೆನಪುಗಳನ್ನು ನೆನೆದಿದ್ದಾರೆ.

ತೆಲುಗಿಗಿಂತ ತಮಿಳು ಚಿತ್ರರಂಗದಲ್ಲೇ ಕ್ಯಾಸ್ಟಿಂಗ್ ಕೌಚ್ ಜಾಸ್ತಿ ಇತ್ತು ಎಂದು ಹೇಳಿದ್ದಾರೆ ನಟಿ ಆಮನಿ. ತಮಿಳಿನಲ್ಲಿ ಅವಕಾಶ ಇದೆ ಎಂದು ಕರೆದು, ದೇಹದಲ್ಲಿ ಸ್ಟ್ರೆಚ್ ಮಾರ್ಕ್ಸ್ ಇದೆಯಾ ಎಂದು ಅಸಭ್ಯ ಪ್ರಶ್ನೆಗಳನ್ನು ಕೇಳುತ್ತಿದ್ದರಂತೆ, ಬಟ್ಟೆ ಬಿಚ್ಚಿ ತೋರಿಸುತ್ತೀರಾ ಎಂದು ಕೂಡ ಕೇಳಿದ್ದರಂತೆ. ಸಿನಿಮಾದಲ್ಲಿ ನಟಿಸುವ ಅವಕಾಶ ಕೊಟ್ಟು, ಪೇಮೆಂಟ್ ಕೂಡ ಕೊಟ್ಟು, ನಂತರ ನಿರ್ದೇಶಕ, ನಿರ್ಮಾಪಕ ಅಥವಾ ಹಣಕಾಸು ನಿರ್ವಹಣೆ ಮಾಡುವವರು ಬೀಚ್ ಗೆ ಬನ್ನಿ ಎಂದು ಕರೆಯುತ್ತಿದ್ದರಂತೆ.

ತಾವು ಹೀರೋಯಿನ್ ಆಗುವ ವೇಳೆ ನಡೆದ ಈ ಘಟನೆಗಳನ್ನು ಇತ್ತೀಚಿನ ಸಂದರ್ಶನ ಒಂದರಲ್ಲಿ ಆಮನಿ ಅವರು ನೆನಪು ಮಾಡಿಕೊಂಡಿದ್ದಾರೆ. ಇವರಿಗೆ ಮದುವೆಯಾದ ನಂತರ ಚಿತ್ರರಂಗದಿಂದ ದೂರವಾಗಿದ್ದರು, ಇದೀಗ ಮತ್ತೆ ಕಂಬ್ಯಾಕ್ ಮಾಡಿ, ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಮಿಡ್ಲ್ ಕ್ಲಾಸ್ ಅಬ್ಬಾಯಿ, ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಹೀರೋಯಿನ್ ಆಗಿದ್ದಾಗ ಕನ್ನಡದಲ್ಲಿಯೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು, ವಿಷ್ಣುದಾದ ಅವರ ಅಪ್ಪಾಜಿ ಸಿನಿಮಾದ ನಾಯಕಿ ಇವರೇ, ಏನೇ ಕನ್ನಡತಿ ನೀ ಯಾಕೆ ಹಿಂಗಾಡ್ತಿ ಈ ಹಾಡು ಇಂದಿಗೂ ಸಿಕ್ಕಾಪಟ್ಟೆ ಫೇಮಸ್.

Leave A Reply

Your email address will not be published.