ಕನ್ನಡ ಚಿತ್ರರಂಗ ‌ಹಿಂದಿಗಿಂತ ಈಗ ಬದಲಾಗಿದೆ. ಕನ್ನಡ ಚಿತ್ರರಂಗದ ಬಗ್ಗೆ ಇಂದು ಎಲ್ಲರೂ ಹೆಮ್ಮೆ ಪಡುವಷ್ಟು ಚಿತ್ರರಂಗ ಅಭಿವೃದ್ಧಿಯಾಗಿದೆ. ಇಂದು ಕನ್ನಡ ಚಿತ್ರರಂಗವನ್ನು ಬೇರೆ ಬೇರೆ ಚಿತ್ರರಂಗದವರು ತಿರುಗಿ ನೋಡುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಏನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಕನ್ನಡ ಸಿನಿಮಾ ರಂಗ ಈ‌ ಹಿಂದಿನಂತಿಲ್ಲ. ಬೇರೆ ಬೇರೆ ಸಿನಿಮಾ ಕ್ಷೇತ್ರಗಳು ಒಂದು‌ ಕಾಲದಲ್ಲಿ ಕನ್ನಡ ಸಿನಿಮಾ ರಂಗವನ್ನು ಕೀಳಾಗಿ ನೋಡುತ್ತಿತ್ತು. ಹಾಗೆ ನೋಡುವುದಾದರೆ ನಮ್ಮ ಚಂದನವನದಲ್ಲಿ ಇದ್ದಂತಹ ಚಂದನವನವನ್ನು ಆಳಿದಂತಹ ಮಹಾನಟರು ಕಡಿಮೆ ಇರಲಿಲ್ಲ. ಉಳಿದ ಸಿನಿಮಾ ಕ್ಷೇತ್ರದಲ್ಲಿ ಯಾರೂ ಅಂತಹ ನಟ ಇರಲಿಲ್ಲ. ಅಂತಹ ದಿಗ್ಗಜರು ನಮ್ಮ ಕನ್ನಡ ಕಲಾವಿದರು, ನಟರು ಆದರೆ ಅದ್ದೂರಿ ಸಿನಿಮಾಗಳ ಕೊರತೆ ಸ್ವಲ್ಪ ಎದ್ದು ಕಾಣುತಿತ್ತು. ಆದರೆ ಈಗ ಭಾರತೀಯ ಸಿನಿಮಾ ರಂಗವೆಲ್ಲಾ ಕನ್ನಡ ಸಿನಿಮಾ ಅಂದ ಕೂಡಲೆ ತಿರುಗಿ ನೋಡುತ್ತಿದೆ.

ಇದಕ್ಕೆ ಕಾರಣ ಕೆಜಿಎಫ್ ನಂತಹ ಸಿನಿಮಾ ಎಂದರೆ ತಪ್ಪಾಗಲಾರದು. ನಟ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಮೊದಲ‌ ಭಾಗದಲ್ಲಿಯೆ ಕನ್ನಡ ಸಿನಿಮಾ ರಂಗವನ್ನು ಉತ್ತುಂಗಕ್ಕೆ ಏರಿಸಿದೆ. ಇದೀಗ ಕೆಜಿಎಫ್ ಎರಡನೆ ಭಾಗ ರಿಲೀಸ್ ಗೆ ಸಿದ್ಧವಾಗಿದ್ದು, ಸಿನಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಬೆನ್ನಿಗೆ ಇದೀಗ ಯೂ ಟ್ಯೂಬ್ ನಲ್ಲಿ ಯಶ್ ಅವರ ಹೊಸ ಸಿನಿಮಾದ ಟೀಸರ್ ಒಂದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ಈ ಟೀಸರ್ ಎಷ್ಟು ನಿಜ ಎಷ್ಟು ಸುಳ್ಳು ಎನ್ನುವುದೆ ಎಲ್ಲರ ತಲೆ ಕೆಡಿಸಿದೆ. ಯಶ್ ಅವರು ಛತ್ರಪತಿ ಶಿವಾಜಿಯಾಗಿ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರಾ ಅನ್ನುವ ಪ್ರಶ್ನೆ ಎಲ್ಲರನ್ನೂ ಕಾಡಲು ಶುರುವಾಗಿದೆ. ವಿಡಿಯೊ ನೋಡಿದರೆ ಬಹಳ ಅದ್ದೂರಿಯಾಗಿದ್ದು, ಖ್ಯಾತ ಸಂಗೀತ ಸಂಯೋಜಕ ಎಂ ಎಂ ಕೀರವಾಣಿ ಹಾಗೂ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ ಹೆಸರು ಇದರಲ್ಲಿದೆ.

ಎಂ. ಎಂ.ಕೀರವಾಣಿ ತೆಲಗು ಚಿತ್ರರಂಗದ ಪ್ರಸಿದ್ಧ ಸಂಗೀತ ನಿರ್ದೇಶಕರು ಮತ್ತು ಗಾಯಕರು. ಈ ಹಿಂದೆ ನಿರ್ದೇಶಕ ರಾಜಮೌಳಿ ಮತ್ತು ಇವರು ಜೋಡಿಯಲ್ಲಿ ಮಗಧೀರ, ಬಾಹುಬಲಿ ಮುಂತಾದ ಹಿಟ್ ಚಿತ್ರಗಳು ಮೂಡಿ ಬಂದಿದ್ದು, ಎಲ್ಲವೂ ಸೂಪರ್ ಹಿಟ್ ಆಗಿವೆ. ಈ ಟೀಸರ್ ನಲ್ಲಿ ಬಾಹುಬಲಿಯನ್ನು ಮೀರಿಸುವಂತಹ ಕ್ಯಾಮರಾ ವರ್ಕ್, ಗ್ರಾಫಿಕ್ಸ್ ವರ್ಕ್ ಕಾಣುತ್ತಿದ್ದು, ಯಶ್ ಕೂಡ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಯೂ ಟ್ಯೂಬ್ ನಲ್ಲಿ ಮಾತ್ರ ಈ ಶಿವಾಜಿ ಸಿನಿಮಾದ ಟೀಸರ್ ಸಂಚಲನ ಮೂಡಿಸಿದ್ದು, ಬೇರೆ ಎಲ್ಲಿಯೂ ಈ ಬಗ್ಗೆ ಯಶ್ ಆಗಲಿ, ರಾಜಮೌಳಿಯವರಾಗಲಿ ಹೇಳಿಕೊಂಡಿಲ್ಲ. ಹಾಗಾಗಿ ಈ ಟೀಸರ್ ಎಷ್ಟು ನಿಜ ಅನ್ನುವುದು ತಿಳಿದು ಬಂದಿಲ್ಲ.‌

ಕೆಲವರು ಇದು ಫೇಕ್ ಅಂದರೆ, ಇನ್ನು ಕೆಲವರು ಸರ್ಪೈಸ್ ಆಗಿ ಚಿತ್ರ ತಂಡ ಮಾಹಿತಿ ಕೊಡಲಿದೆ ಎನ್ನುತ್ತಿದ್ದಾರೆ. ಯಾವುದಕ್ಕೂ ನಾವು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ, ಯಶ್ ಅವರ ಮುಂದಿನ ಸಿನಿಮಾ ಯಾವುದು ಎಂಬುದರ ಬಗ್ಗೆ ಅವರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!