ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿದ್ದ ನಟಿ ವಿಜಯಲಕ್ಷ್ಮಿ ಅವರಿಗೆ ಇಡೀ ಸಾಂಡಲ್ವುಡ್ ಮಂದಿ ಬೆನ್ನಿಗೆ ನಿಂತು ಧೈರ್ಯ ತುಂಬಿದ್ದಾರೆ. ನಮ್ಮ ತಾಯಿ ಹೋಗಿ ಕಂಪ್ಲೀಟ್ ಆಗಿ ಫ್ಯಾಮಿಲಿ‌ ಕೊಟ್ಟಿದ್ದಾರೆ ಎಂದು ನಟಿ ವಿಜಯಲಕ್ಷ್ಮಿ ಫಿಲ್ಮ್ ಚೇಂಬರ್ ಬಗ್ಗೆ ಭಾವುಕ ನುಡಿಗಳನ್ನಾಡಿದ್ದಾರೆ. ನಟಿ ವಿಜಯಲಕ್ಷ್ಮಿ ಅವರ ವೈಯಕ್ತಿಕ ಜೀವನ ಇತ್ತೀಚೆಗೆ ಅಷ್ಟಾಗೆ ಚೆನ್ನಾಗಿಲ್ಲ ಹೆತ್ತ ತಾಯಿ ಒಂದು ಕಡೆ ವಯಸ್ಸಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದರು.

ಕೆಲವು ದಿನದ ಹಿಂದಷ್ಟೆ ವಿಜಯಲಕ್ಷ್ಮಿ ಅವರ ತಾಯಿ ವಿಧಿವಶರಾಗಿದ್ದಾರೆ. ಇನ್ನು ಒಡಹುಟ್ಟಿದ ಅಕ್ಕ ಸಹ ಸುಮಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಚಿಕಿತ್ಸೆಗೆ ಹಣವಿಲ್ಲದೆ ವಿಜಯಲಕ್ಷ್ಮಿ ಹಲವರ ಬಳಿ ಸಹಾಯಕ್ಕೆ ಅಂಗಲಾಚಿದ್ರು. ಕೆಲವರು ಇವರ ಸಹಾಯಕ್ಕೆ ಬಂದು ಇರಲು ಮನೆ ನೀಡಿ ಮನೆಯಲ್ಲಿ ಕ್ಯಾಮರಾ ಇಟ್ಟು ವಿಜಯಲಕ್ಷ್ಮಿ ಮತ್ತವರ ಕುಟುಂಬಕ್ಕೆ ಭಾರಿ ನೋವುಂಟಾಗುವಂತೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಆ ಊರಿನಿಂದ ವಾಪಸ್ಸಾಗಿದ್ದರು. ಇದೀಗ ನಟಿ ವಿಜಯಲಕ್ಷ್ಮಿ ಗೆ ಅಭಿಮಾನಿಗಳಿಂದ ನೆರವಿನ ಮಹಾಪೂರವೆ ಬಂದಿದ್ದು ಅಭಿಮಾನಿಗಳ ಸಹಾಯ ನೆನೆದು ನಟಿ ಭಾವುಕರಾಗಿದ್ದಾರೆ.

ನಟಿ ವಿಜಯಲಕ್ಷ್ಮಿ ಒಂದು ಕಾಲದಲ್ಲಿ ಬಹುಬೇಡಿಕೆಯ ನಟಿಯಾಗಿದ್ದವರು. ತಾಯಿ ಮತ್ತು ಅಕ್ಕ ಉಷಾ ಅವರ ಆರೋಗ್ಯದ ಸ್ಥಿತಿ ಹದಗೆಡುತ್ತಿದ್ದಂತೆ ಚಿತ್ರರಂಗದಿಂದ ದೂರ ಉಳಿದು ತಾಯಿ ಮತ್ತು ಅಕ್ಕನ ಸೇವೆ ಮಾಡುತ್ತಿದ್ದರು. ಚಿಕಿತ್ಸೆ ಫಲಿಸದೆ ವಿಜಯಲಕ್ಷ್ಮಿ ಅವರ ತಾಯಿ ಸಾವನ್ನಪ್ಪಿದಾಗ ಸ್ಯಾಂಡಲ್ ವುಡ್ ನ ಕಲಾವಿದರ ಜೊತೆಗೆ ಅಭಿಮಾನಿಗಳೂ ಸಹಾಯಕ್ಕೆ ಮುಂದಾಗಿದ್ದಾರೆ.

ಹಿರಿಯ ನಟಿಯರಾದ ಪ್ರೇಮಾ, ಶೃತಿ, ಸುಧಾರಾಣಿ ಹಾಗೂ ನಟರಾದ ಶಿವಣ್ಣ, ಯಶ್, ಕರೆ ಮಾಡಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಫಿಲ್ಮ್ ಚೇಂಬರ್ ಕಾರ್ಯದರ್ಶಿ ಎನ್. ಎಮ್. ಸುರೇಶ್ , ಭಾ.ಮಾ ಹರೀಶ್ ಸೇರಿ ವಿಜಯಲಕ್ಷ್ಮಿ ಅವರ ತಾಯಿ ಅಂತ್ಯ ಸಂಸ್ಕಾರಕ್ಕೆ ನೆರವಾಗಿದ್ದರು.

ಬೆಂಗಳೂರಿನ ಹೋಟೆಲ್ ಒಂದರಲ್ಲಿ ವಿಜಯಲಕ್ಷ್ಮಿ ಮತ್ತು ಅವರ ತಾಯಿ, ಅಕ್ಕ ಜೊತೆ ವಾಸವಾಗಿದ್ದರು. ಆ ಹೋಟೆಲ್ ನಲ್ಲೆ ವಿಜಯಲಕ್ಷ್ಮಿ ತಾಯಿ ಕೊನೆಯುಸಿರೆಳೆದಿದ್ದಾರೆ. ತಕ್ಷಣ ನಟಿ ಪ್ರೇಮಾ ಅವರಿಗೆ ವಿಜಯಲಕ್ಷ್ಮಿ ಕರೆ ಮಾಡಿ ಮಾತನಾಡಿದ್ದರು. ಅವರು ಚಲನಚಿತ್ರ ವಾಣಿಜ್ಯ ಮಂಡಳಿಯ ಭಾ.ಮ ಹರೀಶ್ ಅವರ ನಂಬರ್ ನೀಡಿದ್ದರು. ನಂತರ ಹೋಟೆಲ್ ಗೆ ಭಾ. ಮಾ ಹರೀಶ್ ಬಂದು ಅಂತ್ಯಕ್ರಿಯೆಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿದ್ದರು. ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿದ್ದ ವಿಜಯಲಕ್ಷ್ಮಿ ಗೆ ಶ್ರುತಿ, ಸುಧಾರಾಣಿ, ಶಿವಣ್ಣ, ಯಶ್ ಸೇರಿದಂತೆ ಎಲ್ಲಾ ಕಲಾವಿದರು ಫೋನ್ ಕಾಲ್ ಮಾಡಿ ಧೈರ್ಯ ತುಂಬಿದ್ದಾರೆ. ಚಿತ್ರರಂಗದ ಕಲಾವಿದರೆಲ್ಲ ನಟಿ ವಿಜಯಲಕ್ಷ್ಮಿ ಯನ್ನು ಫ್ಯಾಮಿಲಿಯಂತೆ ನೋಡಿದ್ದಾರೆಂದು ಹೇಳಿಕೊಂಡಿದ್ದಾರೆ.

ನಟಿ ವಿಜಯಲಕ್ಷ್ಮಿ ತಾಯಿ ವಿಧಿವಶರಾಗಿದ್ದ ಹಿನ್ನಲೆ ವಿಜಯಲಕ್ಷ್ಮಿ ಕಷ್ಟ ನೋಡಲಾಗದೆ ಅವರ ಅಭಿಮಾನಿಗಳು ನಟಿಯ ಸಹಾಯಕ್ಕೆ ಮುಂದಾಗಿದ್ದು, ಒಟ್ಟು ​3,02,900 ರೂ. ಸಹಾಯ ಮಾಡಿದ್ದಾರೆ. ಫಿಲ್ಮ್ ಚೇಂಬರ್ ಸಹಭಾಗಿತ್ವದಲ್ಲಿ ವಿಜಯಲಕ್ಷ್ಮಿಗೆ ಹಣ ವಿತರಣೆ ಮಾಡಿದ್ದಾರೆ. ‘ಅಕ್ಕನ ಟ್ರಿಂಟ್ಮೆಂಟ್ ನಂತ್ರ ಮತ್ತೆ ಚಿತ್ರರಂಗಕ್ಕೆ ಮರಳುತ್ತೇನೆ. ನಾನು ಇಲ್ಲೇ ಇತ್ತೀನಿ ಕರ್ನಾಟಕ ಬಿಟ್ಟು ಎಲ್ಲೂ ಹೋಗಲ್ಲ‘ ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!