ವಿಜಯ್ ರಾಘವೇಂದ್ರ ಅವರು ಕೇವಲ ನಟರಷ್ಟೇ ಅಲ್ಲದೆ ಗಾಯನ ,ನೃತ್ಯ ಮತ್ತು ನಿರೂಪಣಾ ಕೌಶಲ್ಯ ದಲ್ಲೂ ಕೂಡ ಸೈ ಎನಿಸಿಕೊಂಡಿದ್ದಾರೆ. 26 ಮೇ 1979 ರಲ್ಲಿ ಜನಿಸಿದ್ದ ಇವರು ಬಾಲ ನಟರಾಗಿ “ಚಿನ್ನಾರಿ ಮುತ್ತ”, ಚಲಿಸುವ ಮೋಡಗಳು, ಅಂಬಿಕಾ ಸೇರಿದಂತೆ ಕೆಲ ಚಿತ್ರಗಳಲ್ಲಿ ಅಭಿನಹಿಸಿ ಅತ್ಯುತ್ತಮ ಬಾಲ ನಟ ಎಂದು ಖ್ಯಾತಿ ಪಡೆದರು.ಚಿನ್ನಾರಿ ಮುತ್ತ’ ಚಿತ್ರದ ಅತ್ಯುತ್ತಮ ನಟನೆಗೆ ರಾಜ್ಯ ಪ್ರಶಸ್ತಿ ಬಂದಿದೆ.ಕೊಟ್ರೇಶಿ ಕನಸು’ ಎಂಬ ಚಿತ್ರದ ಅಭಿನಯಕ್ಕೆ ಅತ್ಯುತ್ತಮ ಬಾಲನಟ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡ ಖ್ಯಾತಿ ವಿಜಯ ರಾಘವೇಂದ್ರ ಅವರಿಗೆ ಸಲ್ಲುತ್ತದೆ. ಇವರು ಸ್ಪಂದನಾ ಅವರನ್ನು ಪ್ರೀತಿಸಿ ತಮ್ಮ ಬಾಳ ಸಂಗಾತಿಯನ್ನಾಗಿ ಸ್ವೀಕರಿಸಿದ್ದಾರೆ.

2002 ರಲ್ಲಿ ಬಿಡುಗಡೆಗೊಂಡ ನಿನಗಾಗಿ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕರಾಗಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಸೇವಂತಿ ಸೇವಂತಿ, ರಿಷಿ, ಖುಷಿ, ಕಲ್ಲರಳಿ ಹೂವಾಗಿ, ಹೀಗೆ ಅನೇಕ ಚಿತ್ರಗಳಲ್ಲಿ ನಾಯಕನಾಗಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಸೈ ಎನಿಸಿಕೊಂಡಿದ್ದಾರೆ. ವಿಜಯ್​ ರಾಘವೇಂದ್ರ ಅವರು 49 ಸಿನಿಮಾಗಳಲ್ಲಿ ನಟಿಸಿದ್ದು, ಕಳದೆ ವರ್ಷವಷ್ಟೆ ತಮ್ಮ 50ನೇ ಸಿನಿಮಾವನ್ನು ಪ್ರಕಟಿಸಿದ್ದಾರೆ.ಇತ್ತೀಚೆಗಷ್ಟೆ ತಮ್ಮ 50ನೇ ಸಿನಿಮಾ ಪ್ರಕಟಿಸಿದ್ದ ನಟ ವಿಜಯ್​ ರಾಘವೇಂದ್ರ ಈಗ ಮತ್ತೊಂದು ಹೊಸ ಚಿತ್ರಕ್ಕೆ ಸಹಿ ಮಾಡಿದ್ದಾರೆ. ಈ ಸಿನಿಮಾಗೆ ಸಾವಿತ್ರಿ ಎಂಬ ಶೀರ್ಷಿಕೆ ನೀಡಲಾಗಿದ್ದು, ಕಳೆದ ನವೆಂಬರ್​ನಲ್ಲೇ ಇದರ ಮುಹೂರ್ತವನ್ನು ನೆರವೇರಿಸಲಾಗಿದೆ.

ಅತಿ ಹೆಚ್ಚು ಜನಮನ್ನಣೆ ಪಡೆದಿದ್ದ ಮಕ್ಕಳ ವೈಢೂರ್ಯವನ್ನು ಪ್ರದರ್ಶಿಸುತ್ತಿದ್ದ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ರಾಮಾ ಜ್ಯೂನಿಯರ್ ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಮಕ್ಕಳ ಜೊತೆ ಮಕ್ಕಳಾಗಿ ಸರಿ ತಪ್ಪುಗಳನ್ನು ತಿದ್ದಿ ತೀಡಿ ಮುನ್ನಡೆಸುತ್ತಿದ್ದರು.ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ ಅನ್ನೋ ಕಾರ್ಯಕ್ರಮದಲ್ಲಿ. ಮುಖ್ಯ ಜಡ್ಜ್ ಆಗಿ ಕಾಣಿಸಿಕೊಂಡಿದ್ದು ಖುಷಿಯ ಸಂಗತಿಯಾಗಿದೆ.

ಇತ್ತೀಚೆಗಷ್ಟೇ ನಿರ್ಮಾಣಗೊಂಡ ಅವರ ಮನೆಯ ಒಳ ನೋಟದ ಫೋಟೋ ಜೊತೆಗೆ ಮನೆಯಲ್ಲಿ ನಡೆದ ದೇವತಾ ಕಾರ್ಯ ಹಾಗೂ ಪೂಜಾ ಕಾರ್ಯಕ್ರಮ ದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಅವರ ಮನೆಯ ಫೋಟೋಗಳನ್ನು ನೋಡಿದ ಅವರ ಅಭಿಮಾನಿಗಳು ಕೂಡ ಖುಷಿಯ ಮೆಚ್ಚುಗೆ ಸೂಚಿಸಿದ್ದಾರೆ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!