ಡಾಕ್ಟರ್ ರಾಜಕುಮಾರ್, ವಿಷ್ಣುವರ್ಧನ್ ಇವರ ಸಿನಿಮಾಗಳಲ್ಲಿ ಖಳ ನಾಯಕನಾಗಿ ಅದ್ಭುತವಾಗಿ ನಟಿಸುತ್ತಿದ್ದವರು ನಟ ವಜ್ರಮುನಿ. ವಜ್ರಮುನಿ ಅವರು ಈಗ ನಮ್ಮೊಂದಿಗಿಲ್ಲ ಆದರೆ ಅವರ ಸಿನಿಮಾಗಳು ನಮ್ಮ ಮನಸ್ಸಿನಲ್ಲಿ ಹಾಗೆಯೇ ಉಳಿದಿದೆ. ನಟ ವಜ್ರಮುನಿ ಅವರ ಸಿನಿಮಾ ಬಗ್ಗೆ ಹಾಗೂ ಅವರ ಸಮಾಧಿಯ ಬಗ್ಗೆ ಕೆಲವು ಮಾಹಿತಿಗಳನ್ನು ಈ ಲೇಖನದಲ್ಲಿ ನೋಡೋಣ.
ಕನ್ನಡ ಚಿತ್ರರಂಗದಲ್ಲಿ ನಟ ಭೈರವ, ನಟ ಭಯಂಕರ ಎಂಬ ಬಿರುದು ಪಡೆದ ವಜ್ರಮುನಿ ಅವರ ಇನ್ನೊಂದು ಹೆಸರು ಸದಾನಂದ ಸಾಗರ್. ಅವರು ಜನಪ್ರಿಯರಾಗಲು ಅವರ ಹೆಸರು ಒಂದು ರೀತಿಯಲ್ಲಿ ಕಾರಣವಾಗಿದೆ. ವಜ್ರಮುನಿ ಅವರು ಅದ್ಭುತ ಖಳನಟನಾಗಿ ಚಿತ್ರರಂಗದಲ್ಲಿ ಮೆರೆದ ನಟರಾಗಿದ್ದಾರೆ, ಅವರ ಧ್ವನಿಯೆಂದರೆ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಅವರು ನಟಿಸಿದ ಸಿನಿಮಾಗಳನ್ನು ಅಭಿಮಾನಿಗಳು ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ. ಅಭಿಮಾನಿಗಳೆಲ್ಲರೂ ಸೇರಿ ಅವರ ಸಮಾಧಿಯ ಸ್ಮಾರಕವನ್ನು ನಿರ್ಮಿಸಿದ್ದಾರೆ. ಈ ಸ್ಮಾರಕದ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು. ಸ್ಮಾರಕವನ್ನು ಹೂವಿನಿಂದ ಅಲಂಕಾರ ಮಾಡಿದ್ದಾರೆ ಇದರಿಂದ ಅವರ ಅಭಿಮಾನ ತಿಳಿಯುತ್ತದೆ. ವಜ್ರಮುನಿ ಅವರು 200 ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿದ್ದಾರೆ, ಇವರು ಮೊದಲು ನಟಿಸಿದ ಚಿತ್ರ ಮಲ್ಲಮ್ಮನ ಪವಾಡ. ಗೆಜ್ಜೆಪೂಜೆ, ಹಳೆಯ ಗೆಳೆಯ, ತಾಯಿಯೇ ದೇವರು, ಸಿಪಾಯಿ ರಾಮು, ಸಾಕ್ಷಾತ್ಕಾರ, ಮಯೂರ, ಸಂಪತ್ತಿಗೆ ಸವಾಲ್, ಗಿರಿಕನ್ಯೆ, ದಾರಿ ತಪ್ಪಿದ ಮಗ, ಪ್ರೇಮದ ಕಾಣಿಕೆ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಜನರಿಗೆ ಮನೋರಂಜನೆ ನೀಡಿದ್ದಾರೆ ಅಲ್ಲದೆ ತಮ್ಮ ಅಭಿನಯದಿಂದ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ವಜ್ರಮುನಿ ಅವರು ನಮ್ಮನ್ನು ಬಿಟ್ಟು ಅಗಲಿದಾಗ ಅವರಿಗೆ ಕೇವಲ 61 ವರ್ಷ ವಯಸ್ಸು. ಇವರಿಗೆ ಓದಿನಲ್ಲಿ ಹೆಚ್ಚು ಆಸಕ್ತಿ ಇರಲಿಲ್ಲ. ಅವರು ಸಣ್ಣವರಿರುವಾಗ ರಾವಣನ ಪಾತ್ರವನ್ನು ಮಾಡುತ್ತಿದ್ದರು. ಈ ಪಾತ್ರದಿಂದಲೇ ಅವರು ಮುಂದೆ ಹೆಸರು ಹಾಗೂ ಖ್ಯಾತಿಯನ್ನು ಪಡೆದರು.
ವಜ್ರಮುನಿ ಅವರು ಸಾಯುವ ಮುನ್ನ ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ನಂತರ ಅವರು 2006 ರಲ್ಲಿ ನಮ್ಮನ್ನು ಬಿಟ್ಟು ಅಗಲಿದರು. ಅವರ ಸಾವು ಎಲ್ಲರಿಗೂ ಬಹಳ ದುಃಖವಾಯಿತು. ವಜ್ರಮುನಿಯವರನ್ನು ಕಳೆದುಕೊಂಡಿದ್ದು ಕನ್ನಡ ಚಿತ್ರರಂಗಕ್ಕೆ ಒಬ್ಬ ಅದ್ಭುತ ಖಳನಾಯಕನನ್ನು ಕಳೆದುಕೊಂಡ ನಷ್ಟವಾಯಿತು. ಅನೇಕ ಅಭಿಮಾನಿಗಳಿಗೆ ವಜ್ರಮುನಿ ಎಂದರೆ ಬಹಳ ಇಷ್ಟ, ಗೌರವ. 70, 80ರ ದಶಕದಲ್ಲಿ ಟಾಪ್ ನಟನಾಗಿ, ಖ್ಯಾತ ಖಳನಾಯಕನಾಗಿ ಮಿಂಚಿ ಮೆರೆದಿದ್ದಾರೆ. ಈಗಿನ ಯುವಕರು ಸಹ ವಜ್ರಮುನಿ ಅವರ ನಟನೆಯನ್ನು ಇಷ್ಟ ಪಡುತ್ತಾರೆ, ಅವರ ಸಿನಿಮಾಗಳನ್ನು ನೋಡುತ್ತಾರೆ. ಅವರ ಸ್ಮಾರಕದಲ್ಲಿ ಇಂದಿಗೂ ಸಹ ಪೂಜೆ ನಡೆಯುತ್ತದೆ. ಕನ್ನಡ ಚಿತ್ರರಂಗದಲ್ಲಿ ವಜ್ರಮುನಿ ಅವರ ಸ್ಥಾನವನ್ನು ಮತ್ಯಾರಿಂದಲೂ ತುಂಬಲು ಸಾಧ್ಯವಿಲ್ಲ ಎಂದು ಹೇಳಿದರೆ ತಪ್ಪಾಗಲಾರದು.