ನಟ ಉಪೇಂದ್ರ ಮಾಡಲು ಹೊರಟಿರುವ ಮಹತ್ವದ ಕೆಲಸ ಏನು?

0 1

ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅನೇಕ ಜನರು ಕೊರೊನಾದಿಂದ ಸಾವಿಗೀಡಾಗಿದ್ದಾರೆ. ಮತ್ತೊಂದು ಕಡೆ ಚಂಡಮಾರುತದ ಹೊಡೆತಕ್ಕೆ, ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಇದರ ಜೊತೆಗೆ ಪ್ರವಾಹವು ಕೂಡ ಉಂಟಾಗಿದೆ. ಹೀಗೆ ಜನರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜನಪ್ರತಿನಿಧಿಗಳು ರಾಜಕಾರಣಿಗಳು ಹಗಲಿರುಳು ಶ್ರಮಿಸಿ ಜನರ ಕಷ್ಟದ ಜೊತೆ ಇರಬೇಕು. ಇದರ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ ಹೇಳಿಕೆಯನ್ನು ನೀಡಿದ್ದಾರೆ. ಆದ್ದರಿಂದ ನಾವು ಇಲ್ಲಿ ಉಪೇಂದ್ರ ಅವರು ಹೇಳಿರುವ ಹೇಳಿಕೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಪ್ರತಿಯೊಬ್ಬರು ತಮ್ಮ ಮತಗಳನ್ನು ಹಾಕಿ ಜನಪ್ರತಿನಿಧಿಗಳಾಗಿ, ಎಂಎಲ್ಎ, ಎಂಪಿಗಳಾಗಿ ಆಯ್ಕೆ ಮಾಡುವ ಕಾರಣ ತಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ ಎಂಬ ನಿಲುವನ್ನು ಹೊಂದಿರುತ್ತಾರೆ. ಆದರೆ ರಾಜಕಾರಣಿಗಳು ಇಂತಹ ಸಮಸ್ಯೆಗಳಿಗೆ ಸ್ಪಂದಿಸದೆ ಉಡಾಫೆ ಉತ್ತರಗಳನ್ನು ನೀಡಿ ಹೋಗುತ್ತಾರೆ ಇಂದು ರಾಜಕಾರಣಿಗಳ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಅವರು ಹೇಳಿದ್ದಾರೆ. ರಾಜ್ಯದಲ್ಲಿ ಒಂದು ಕಡೆ ಕೊರೋನಾ ಇನ್ನೊಂದು ಕಡೆ ಪ್ರವಾಹದ ಪರಿಸ್ಥಿತಿಯಲ್ಲಿ ರಾಜಕಾರಣಿಗಳು ಬ್ಯಾಂಕಿನಲ್ಲಿಟ್ಟಿರುವ ಹಣವನ್ನು ತೆಗೆದು ಜನರಿಗೆ ಸಹಾಯ ಮಾಡಬೇಕು. ಜನರ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ಹೇಳಿದ್ದಾರೆ.

ಇಂತಹ ಸಮಸ್ಯೆಗಳಿಗೆ ನೀವು ಸ್ಪಂದಿಸದಿದ್ದರೆ ನೀವು ನೀಡಿದ ಆಶ್ವಾಸನೆಗಳಿಗೆ ಬೆಲೆ ಇರುವುದಿಲ್ಲ ಎಂದು ಹೇಳಿದ್ದಾರೆ. ಪ್ರಜಾಪ್ರಭುತ್ವ ಕೇವಲ ಹೆಸರಿಗೆ ಮಾತ್ರ ಆಗುತ್ತಿದೆ. ಪ್ರಜಾಪ್ರಭುತ್ವದ ಹೆಸರಿನಲ್ಲಿ ರಾಜಕಾರಣಿಗಳು ರಾಜನಂತೆ ಮೆರೆಯುತ್ತಿದ್ದಾರೆ. ಇಂತಹ ಸಮಸ್ಯೆಗಳನ್ನು ಕಿತ್ತೊಗೆಯುವ ಸಲುವಾಗಿಯೇ ಪ್ರಜಾಕೀಯ ಪಕ್ಷವನ್ನು ಆರಂಭಿಸಿದ್ದೇನೆ ಎಂದು ಉಪೇಂದ್ರ ಅವರು ಹೇಳಿಕೊಂಡಿದ್ದಾರೆ. ಪ್ರಜಾಕೀಯ ಪಕ್ಷದಲ್ಲಿ ಪ್ರಜೆಗಳ ನಿರ್ಣಯವೇ ಅಂತಿಮವಾಗಿರುತ್ತದೆ. ಪ್ರಜೆಗಳಿಂದ ಪ್ರಜೆಗಳಿಗಾಗಿಯೇ ಪ್ರಜಾಕೀಯ ಪಕ್ಷ ಹುಟ್ಟಿಕೊಂಡಿದೆ.

ಚುನಾವಣೆಯ ಸಂದರ್ಭದಲ್ಲಿ ಓಟ್ ಹಾಕಿಸಿ ಕೊಳ್ಳುವಾಗ ಲಕ್ಷಗಟ್ಟಲೆ ಕೋಟಿಗಟ್ಟಲೆ ಹಣವನ್ನು ಸುರಿದು ಜನರ ಬಳಿ ಹೋಗುವ ರಾಜಕಾರಣಿಗಳು ಇಂತಹ ಸಮಸ್ಯೆ ಸಂದರ್ಭದಲ್ಲಿ ಜನರಿಗೆ ಸ್ಪಂದಿಸುತ್ತಿಲ್ಲ ಎಂದು ಉಪೇಂದ್ರ ಅವರು ರಾಜಕಾರಣಿಗಳಿಗೆ ಕಟುವಾಗಿ ಪ್ರಶ್ನಿಸಿದ್ದಾರೆ. ಅದರ ಜೊತೆಗೆ ಉಪೇಂದ್ರ ಅವರು ರೈತರ ಜೊತೆಗೆ ನೇರವಾಗಿ ಒಡನಾಟ ಇಟ್ಟುಕೊಳ್ಳಲು ಬಯಸಿದ್ದು ರೈತರು ಬೆಳೆಯುತ್ತಿರುವ ಬೆಳೆ ಮತ್ತು ಅದಕ್ಕೆ ಸಿಗುತ್ತಿರುವ ನಿಗದಿತ ದರವನ್ನು ಬೆಂಗಳೂರಿಗೆ ಹಸ್ತಾಂತರಿಸಲು ತಗಲುವ ವೆಚ್ಚವನ್ನು ಹಂಚಿಕೊಳ್ಳಲು ವಾಟ್ಸಪ್ ನಂಬರ್ ಅನ್ನು ಕೂಡ ಕೊಟ್ಟಿದ್ದಾರೆ. ಇಂತಹ ಒಂದು ಬಗೆಯಲ್ಲಿ ಯಾವೊಬ್ಬ ರಾಜಕಾರಣಿಯೂ ಕೂಡ ಕೆಲಸವನ್ನು ಮಾಡಿಲ್ಲ.

Leave A Reply

Your email address will not be published.