ಸುಹಾಸಿನಿ ಮಣಿ ರತ್ನಂ ಇವರು ಕನ್ನಡ, ತಮಿಳು, ಮಲಯಾಳಂ, ತೆಲುಗು ಭಾಷೆಯ ಪ್ರಸಿದ್ಧ ನಟಿಯಾಗಿದ್ದಾರೆ. ಇವರು ಜನಿಸಿದ್ದು ಅಗಸ್ಟ್ 15, 1961 ಚೆನ್ನೈ ನಲ್ಲಿ. ಇವರು ಮದ್ರಾಸ್ ನ ಫಿಲ್ಮ್ ಇನ್ಸ್ ಟ್ಯೂಟ್ ನಲ್ಲಿ ತರಬೇತಿ ಪಡೆದುಕೊಂಡು ಅಶೋಕ್ ಕುಮಾರ್ ಎನ್ನುವರ ಕೆಳಗೆ ಅಸಿಸ್ಟೆಂಟ್ ಆಗಿ ಚಿತ್ರರಂಗದಲ್ಲಿ ಕಾರ್ಯನಿರ್ವಹಿಸಿದರು. ನಂತರ 1980 ರಲ್ಲಿ ತಮಿಳು ಚಿತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡು ತಮ್ಮ ಸಿನಿಮಾ ಪಯಣ ಪ್ರಾರಂಭಿಸಿದರು. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ತೆರೆಕಂಡಿರುವ ಕನ್ನಡದ ಪಾಪುಲರ್ ಚಿತ್ರವಾದ ವಿಷ್ಣುವರ್ಧನ್ ಅಭಿನಯದ ಬಂಧನ ಸಿನಿಮಾದಲ್ಲಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡರು. 1990 ರಲ್ಲಿ ರಾಜೇಂದ್ರ ಸಿಂಗ್ ಬಾಬು ಅವರು ನಿರ್ದೇಶನ ಮಾಡಿರುವ ಡಾ. ವಿಷ್ಣುವರ್ಧನ್ ಅಭಿನಯಿಸಿದ ಮುತ್ತಿನ ಹಾರ ಸೇರಿದಂತೆ ಇನ್ನು ಹಲವು ಕನ್ನಡ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಇವರು ಕೇವಲ ಕನ್ನಡ ಅಷ್ಟೇ ಅಲ್ಲದೆ ತೆಲುಗು ತಮಿಳು ಮಲಯಾಳಂ ಸೇರಿದಂತೆ ಇತರ ಬಾಷೆಗಳ ಚಿತ್ರಗಳಲ್ಲಿ ನಟಿಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. 1988 ರಲ್ಲಿ ಖ್ಯಾತ ನಿರ್ದೇಶಕ ಮಣಿ ರತ್ನಂ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಸ್ಯಾಂಡಲ್‌ವುಡ್ ದಿ ಬೆಸ್ಟ್ ಲವ್ ಸ್ಟೋರಿ ಅಂದ್ರೆ ಬಂಧನ ಅದರಲ್ಲೂ ಸಾಹಸ ಸಿಂಹ ವಿಷ್ಣುವರ್ಧನ್ ಅವರನ್ನು ಮೊದಲ ಬಾರಿಗೆ ಲವರ್ ಬಾಯ್ ಆಗಿ ಅಭಿಮಾನಿಗಳ ಮುಂದೆ ತಂದಿಟ್ಟವರು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು. ಚಿತ್ರದ ಮೊದಲ ಶಾಟ್‌ನಲ್ಲಿ ವಿಷ್ಣುಗೆ ಕಪಾಳ ಮೋಕ್ಷವಾದ ಸನ್ನಿವೇಶವನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಚಿತ್ರದಲ್ಲಿ ವಿಷ್ಣುವರ್ಧನ್ ಅವರಿಗೆ ನಾಯಕಿಯಾಗಿ ನಂದಿನಿ ಪಾತ್ರದಲ್ಲಿ ಸುಹಾಸಿನಿ ಮನೋಹರವಾಗಿ ಅಭಿನಯ ಮಾಡಿದ್ದಾರೆ.
ಇನ್ನು ಇತ್ತೀಚೆಗೆ ಕನ್ನಡದಲ್ಲಿ ಅಭಿನಯಿಸಿದ ಚಿತ್ರ ಎಂದರೆ ಅಂಬಿ ನಿಂಗೆ ವಯಸ್ಸಾಯ್ತೋ. ಈ ಚಿತ್ರದ ಅನುಭವ ಹಂಚಿಕೊಂಡ ಸುಹಾಸಿನಿ ಹೇಳಿದ್ದು ಈ ರೀತಿಯಾಗಿ. ಅಂಬರೀಷ್ ಅವರನ್ನು ನಾನು ಬಹಳ ವರ್ಷಗಳಿಂದ ನೋಡಿದ್ದೇನೆ. ನನ್ನ ಅಂಕಲ್ ಕಮಲ್ ಹಾಸನ್ ಮತ್ತು ಮಣಿರತ್ನಂ ಅವರಿಗೆ ಅಂಬಿ ತುಂಬಾ ಕ್ಲೋಸ್. ನನಗೆ ಅಂಬಿ ಅಂದ್ರೆ ವಿಷ್ಣು ಮತ್ತು ಭಾರತಿ ಅವರ ಮದುವೆಯ ದಿನ ರಾತ್ರಿಯೆಲ್ಲಾ ಹೊರಗಡೆ ಒಂದು ಬೆಂಚ್ ಕಲ್ಲಿನ ಮೇಲೆ ಮಲಗಿ ತಮಾಷೆ ಮಾಡಿದ್ದೆಲ್ಲ ನೆನಪಿಗೆ ಬರುತ್ತದೆ. ನಾವು ಇಷ್ಟೆಲ್ಲಾ ಇದ್ದರೂ ನಾನು ಅವರ ಜತೆ ಕೇವಲ ಎರಡು ಚಿತ್ರಗಳಲ್ಲಿ ಮಾತ್ರ ನಟಿಸಿದ್ದೇನೆ. ನಾನು ಯಾವಾಗಲೂ ಸೆಟ್‌ನಲ್ಲಿ ಫನ್ ವಾತಾವರಣ ಇಷ್ಟಪಡುತ್ತೇನೆ. ಇನ್‌ಫ್ಯಾಕ್ಟ್ ವಿಷ್ಣುವರ್ಧನ್ ಸಹ ಶಾಟ್‌ಗಿಂತಲೂ ಮೊದಲು ಬಹಳ ತಮಾಷೆ ಮಾಡುತ್ತಿದ್ದರು. ಆಮೇಲೆ ಶಾಟ್‌ನಲ್ಲಿ ಸೀರಿಯಸ್ ಆಗಿ ಕೆಲಸ ಮಾಡುತ್ತಿದ್ದರು. ಅಂಬರೀಷ್ ಅವರೂ ಕ್ಯಾಮೆರಾ ಆನ್ ಆದ ಕೂಡಲೇ ಅಲರ್ಟ್ ಆಗಿಬಿಡುತ್ತಿದ್ದರು. ಅಲ್ಲದೆ ಸೆಟ್‌ನಲ್ಲಿ ಸೀರಿಯಸ್ ಆಗಿದ್ದಾಗ ನಡೆಯುವ ಕೆಲಸಕ್ಕಿಂತ ತಮಾಷೆಯಾಗಿದ್ದಾಗ ಬಹಳ ಚೆನ್ನಾಗಿ ಆಗುತ್ತದೆ ಎಂಬುದು ನನ್ನ ನಂಬಿಕೆ. ಅಂಬಿ ಅವರು ತುಂಬಾ ತುಂಬಾ ನಗಿಸ್ತಾರೆ.
ಈ ಸಿನಿಮಾ ನನಗೆ ಬಹಳ ವಿಶೇಷ. ಏಕೆಂದರೆ ಇದರ ನಿರ್ದೇಶಕರಿಗೆ ಕೇವಲ 26 ವರ್ಷ ವಯಸ್ಸು. ನನ್ನ ಮಗನಿಗೂ ಇಷ್ಟೇ ವಯಸ್ಸು. ನಮಗಿಂತ ಅರ್ಧ ವಯಸ್ಸಿನವರಿಂದ ನಿರ್ದೇಶನ ಮಾಡಿಸಿಕೊಳ್ಳುವುದು ಅಂದ್ರೆ ಬಹಳ ವಿಶೇಷ ಅಲ್ವಾ? ಈ ನಿರ್ದೇಶಕರು ಮತ್ತು ಚಿತ್ರತಂಡದ ಜತೆ ಕೆಲಸ ಮಾಡಲು ನನಗೆ ಬಹಳ ಖುಷಿಯಾಗಿತ್ತು. ಅಲ್ಲದೆ ನನ್ನ ಕ್ಯಾರೆಕ್ಟರ್ ಸಹ ಬಹಳ ವಿಶೇಷ ಅನ್ನಿಸ್ತು. ಕರ್ನಾಟಕದ ಜನರಿಗೆ ಸುಹಾಸಿನಿ ಎನ್ನುವುದಕ್ಕಿಂತ ಬಂಧನ ಚಿತ್ರದ ನಂದಿನಿ ಪಾತ್ರದಿಂದಲೇ ಹೆಚ್ಚು ಜನರಿಗೆ ಗೊತ್ತು. ಅಂಬಿ ನಿಂಗೆ ವಯಸ್ಸಾಯ್ತೋ ಸಿನಿಮಾದಲ್ಲಿಯೂ ಪಾತ್ರದ ಹೆಸರು ಕೂಡ ನಂದಿನಿ ಎಂದೇ ಆಗಿತ್ತು. ಬಹುಭಾಷಾ ನಟಿ ಸುಹಾಸಿನಿ ಸದ್ಯ ತಮಿಳು ಹಾಗೂ ತೆಲುಗಿನ ಟಿಲಿವಿಷನ್ ಶೋಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಇವುಗಳ ನಡುವೆ ಆಗಾಗ ಸಿನಿಮಾಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಸುಹಾಸಿನಿ ಅವರ ಲೆಟೆಸ್ಟ್ ಸ್ಟಿಲ್ಗಳು ನಿಮಗಾಗಿ