ನಟಿ ಮಯೂರಿ ಹೊಸ ಬೇಬಿ ಬಂಪ್ ಪೋಟೋಶೂಟ್ ಹೇಗಿದೆ ನೋಡಿ ವಿಡಿಯೋ

0 0

ಕನ್ನಡ ಕಿರುತೆರೆಯಲ್ಲಿ ಅಶ್ವಿನಿ ನಕ್ಷತ್ರ ಧಾರವಾಹಿಯ ಮೂಲಕ ಪರಿಚಿತರಾದ ಮಯೂರಿ ಅವರು ಗರ್ಭಿಣಿಯಾಗಿದ್ದು ಇತ್ತೀಚಿಗೆ ಸೀಮಂತ ಶಾಸ್ತ್ರವನ್ನು ಅದ್ದೂರಿಯಾಗಿ ಮಾಡಿಕೊಂಡಿದ್ದಾರೆ. ಅಲ್ಲದೆ ಮತ್ತೊಮ್ಮೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.‌ ಈ ಫೋಟೋಶೂಟ್ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಕೃಷ್ಣಲೀಲಾ, ಇಷ್ಟಕಾಮ್ಯ, ನಟರಾಜ ಸರ್ವಿಸ್, ಮೌನಂ ಸಿನಿಮಾಗಳಲ್ಲಿ ನಟಿಸಿದ ಮಯೂರಿ ಅವರು ಅಶ್ವಿನಿ ನಕ್ಷತ್ರ ಧಾರವಾಹಿಯ ಮೂಲಕ ಇಂಡಸ್ಟ್ರಿಗೆ ಬಂದರು. ನಂತರ ಕಿರುತೆರೆಯಿಂದ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟರು ಅಲ್ಲಿಯೂ ಬಹಳ ಫೇಮಸ್ ಆದರು. ಅಜಯ್ ರಾವ್ ಅವರೊಂದಿಗಿನ ಕೃಷ್ಣಲೀಲಾ ಅವರ ಮೊದಲ ಸಿನಿಮಾ ಆಗಿದೆ ಅದು ಹಿಟ್ ಆಯಿತು. ನಂತರ ಸ್ಟಾರ್ ನಟರೊಂದಿಗೆ ಸಿನಿಮಾ ಮಾಡಿದರು. ಧ್ರುವ ಸರ್ಜಾ ಅವರ ಪೊಗರು ಸಿನಿಮಾದಲ್ಲಿ ಮಯೂರಿ ಅವರು ನಟಿಸಿದ್ದಾರೆ. ಅವರು ಬಾಲ್ಯದ ಗೆಳೆಯ ಅರುಣ್ ರಾಜ್ ಅವರೊಂದಿಗೆ ಬೆಂಗಳೂರಿನಲ್ಲಿ ಜೂನ್ ತಿಂಗಳಿನಲ್ಲಿ ಮದುವೆಯಾದರು. ಇವರದ್ದು ಲವ್ ಕಮ್ ಆರೆಂಜ್ ಮ್ಯಾರೇಜ್. 10 ವರ್ಷಗಳ ಕಾಲ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ನಂತರ ಮನೆಯವರ ಒಪ್ಪಿಗೆಯನ್ನು ಪಡೆದು ಮದುವೆಯಾದರು.

ಇದೀಗ ತಾಯಿಯಾಗಲಿದ್ದಾರೆ, ಮಗುವಿನ ಬರುವಿಕೆಗೆ ಕಾಯುತ್ತಿದ್ದಾರೆ. ದಂಪತಿಗಳಿಬ್ಬರು ಮುದ್ದು ಮುದ್ದಾಗಿರುವ ಫೋಸ್ ನಲ್ಲಿ ಫೋಟೊ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಖುಷಿಪಟ್ಟಿದ್ದಾರೆ, ಅವರ ಫೋಟೋಗಳು ಸಖತ್ ವೈರಲ್ ಆಗಿದೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಮಯೂರಿ ಹಾಗೂ ಅರುಣ್ ಹೊಸದಾಗಿ ಮತ್ತೊಮ್ಮೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಪ್ರಸವ ಸಮಯಕ್ಕೆ ಹತ್ತಿರದಲ್ಲಿದ್ದು ಮೊದಲ ಗರ್ಭದ ಸವಿನೆನಪಿಗಾಗಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಅವರೊಂದಿಗೆ ಫೋಟೋದಲ್ಲಿ ನಾಯಿಯೊಂದು ಕಾಣುತ್ತದೆ, ಬೇಬಿ ಬಂಪ್ ಫೋಟೋಸ್ ಎಲ್ಲವನ್ನು ತಮ್ಮ ಇನ್ಸಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು ಸಂಭ್ರಮಪಟ್ಟಿದ್ದಾರೆ. ಮಯೂರಿ ಅವರು ಸ್ನೇಹಿತರೊಂದಿಗೆ ಸಂಭ್ರಮದಿಂದ ಪಾರ್ಟಿ ಮಾಡಿದ್ದಾರೆ. ತಾಯಿಯಾಗುತ್ತಿರುವ ಸಂಭ್ರಮದಲ್ಲಿರುವ ನಟಿ ಮಯೂರಿ ಅವರಿಗೆ ಸ್ನೇಹಿತರು ಶುಭಕೋರಿದ್ದಾರೆ. ಕೆಲವು ಫೋಟೋಗಳಿಗೆ ನಟಿ ಮಯೂರಿ ಅವರು ತಮ್ಮ ಇನ್ಸಟಾಗ್ರಾಮ್ ಖಾತೆಯಲ್ಲಿ ಬಹಳ ವಿಶೇಷವಾಗಿದೆ ಎಂದು ಕ್ಯಾಪ್ಷನ್ ಹಾಕುವ ಮೂಲಕ ಹಂಚಿಕೊಂಡಿದ್ದಾರೆ. ತುಂಬು ಗರ್ಭಿಣಿಯಾಗಿರುವ ನಟಿ ಮಯೂರಿ ಅವರಿಗೆ ಅಭಿಮಾನಿಗಳು ಶುಭಕೋರುವುದರ ಜೊತೆಗೆ ನಿಮಗೆ ಹೆಣ್ಣು ಮಗು ಆಗುತ್ತದೆ ಎಂದು ಕಮೆಂಟ್ ಮಾಡಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಮಯೂರಿ ಅವರು ಯಾವುದೇ ಸಮಸ್ಯೆ ಇಲ್ಲದೆ ಮಗುವಿಗೆ ಜನ್ಮ ನೀಡಲಿ ಎಂದು ಆಶಿಸೋಣ.

Leave A Reply

Your email address will not be published.