Actor Srinivas Murthy: ಹಳೆಯ ನಟ ಶ್ರೀನಿವಾಸ ಮೂರ್ತಿ ಅವರು ಹೆಚ್ಚಿನ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡಿದ್ದಾರೆ ಬಹು ಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ ಹಾಗೆಯೇ ಶ್ರೀನಿವಾಸ ಮೂರ್ತಿ (Actor Srinivas Murthy) ಅವರು ವಿಲನ್ ಹಾಗೂ ತಂದೆ ಪಾತ್ರ ಹಾಸ್ಯ ಪಾತ್ರದಲ್ಲಿ ಸಹ ಕಾಣಿಸಿಕೊಂಡಿರುವ ನಟ ಅವರು ಕೇವಲ ನಟನಾಗಿ ಅಷ್ಟೇ ಅಲ್ಲದೆ ನಿರ್ದೇಶಕನಾಗಿ ಸಹ ಕೆಲಸ ಮಾಡಿದ್ದಾರೆ ಆದರೆ ಅದೆಷ್ಟೋ ಹೆಸರು ಕೀರ್ತಿಯನ್ನು ಹೊಂದಿದ್ದರು ಸಹ ಬದುಕಿನಲ್ಲಿ ತಿರುವುಗಳು ಬಂದು ಅನೇಕ ಸಂಕಷ್ಟವನ್ನು ಎದುರಿಸಿದ್ದಾರೆ
ರಾಜಕುಮಾರ್ (Raj kumar) ಅವರ ಕಾಲದಿಂದಲೂ ಹಿಡಿದು ಈಗಿನ ಯುವ ನಟರವರೆಗೂ ಸಹ ಕನ್ನಡ ಚಿತ್ರರಂಗದಲ್ಲಿ ಮೆಚ್ಚುಗೆಯನ್ನು ಪಡೆದ ನಟ ಹಾಗೂ ಪೋಷಕ ನಟ ಹಾಗೂ ವಿಲನ್ ಹಾಗೂ ಹಾಸ್ಯ ನಟ ಹಾಗೆಯೇ ಹೇಮಾವತಿ ಗುರುಶಿಷ್ಯರು ಹಾಗೆಯೇ ಕವಿರತ್ನ ಕಾಳಿದಾಸ ಭಕ್ತ ಪ್ರಲ್ದಾದ ಮತ್ತು ದೊರೆ ಪುನೀತ ರಾಜಕುಮಾರ್ ಅವರ ಸಿನಿಮಾದಲ್ಲಿ ತಂದೆಯ ಪಾತ್ರ ಮೈ ಆಟೋ ಗ್ರಾಫ್ ದೊಡ್ಡಮನೆ ಹುಡುಗ ಹೀಗೆ ಅನೇಕ ಸಿನಿಮಾದಲ್ಲಿ ನಟನೆಯನ್ನು ಮಾಡಿದ್ದಾರೆ ಸಿನಿಮಾ ಅಷ್ಟೇ ಅಲ್ಲದೆ ಧಾರಾವಾಹಿಗಳಲ್ಲಿ ನಟನೆ ಮಾಡಿದ್ದರು ಹಾಗೂ ಪ್ರಸ್ತುತ ಜಿ ಕನ್ನಡದಲ್ಲಿ ಬರುವ ಸತ್ಯ ಸೀರಿಯಲ್ ಅಲ್ಲಿ ನಟನೆ ಮಾಡುತ್ತಿದ್ದರೆ ನಾವು ಈ ಲೇಖನದ ಮೂಲಕ ಶ್ರೀನಿವಾಸ ಮೂರ್ತಿ ಅವರ ಜೀವನದ ತಿರುವುಗಳ ಬಗ್ಗೆ ತಿಳಿದುಕೊಳ್ಳೋಣ.
ಹಳೆಯ ನಟ ಶ್ರೀನಿವಾಸ ಮೂರ್ತಿ ಅವರು ಸ್ವಂತ ಮನೆ ಸೈಟು (Home Site) ಎಲ್ಲವನ್ನೂ ಕಳೆದುಕೊಂಡು ಬಾಡಿಗೆ ಮನೆಯಲ್ಲಿ ಇದ್ದಾರೆ ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾದಲ್ಲಿ ನಟನೆ ಮಾಡಿದಂತಹ ನಟ ಇವರು ಬದುಕು ಅನಿರೀಕ್ಷಿತ ತಿರುವುವನ್ನು ಹೊಂದಿರುತ್ತದೆ ನಿನ್ನೆ ಐಷಾರಾಮಿ ಜೀವನವನ್ನು ನಡೆಸುತ್ತಿದ್ದವರು ಸಹ ಭಿಕ್ಷುಕರಾಗಬಹುದು ಹೀಗೆ ಜೀವನ ಎಂಬುವುದು ಅನಿರೀಕ್ಷಿತ ತಿರುವನ್ನು ಹೊಂದಿರುತ್ತದೆ ಶ್ರೀನಿವಾಸ ಮೂರ್ತಿ ಅವರು ವಿಲನ ಹಾಗೂ ತಂದೆ ಪಾತ್ರ comedy ಪಾತ್ರದಲ್ಲಿ ಸಹ ಕಾಣಿಸಿಕೊಂಡಿರುವ ನಟ ರಾಜಕುಮಾರ್ ಅವರಿಂದ ಹಿಡಿದು ಈಗಿನ ಯುವ ನಟರವರೆಗೆ ಸಹ ಅಭಿನಯಿಸಿ ಅಭಿನಯದಲ್ಲಿ ಸೈ ಎನಿಸಿಕೊಂಡವರು.
ಯಾವುದೇ ಪಾತ್ರದಲ್ಲಿ ಸಹ ಪರಕಾಯ ಪ್ರವೇಶ ಮಾಡುತಿದ್ದರು ಇವರು 1949ರಲ್ಲಿ ಜನಿಸಿದರು ಹಾಗಾಗಿ 73 ವರ್ಷ ಆಗಿದೆ ಕೋಲಾರದ ಜಾಡಲ ತಿಮ್ಮನ ಹಳ್ಳಿಯಲ್ಲಿ ಜನಿಸಿದರು ಮಧ್ಯಮ ವರ್ಗದಲ್ಲಿ ಜನಿಸಿದರು ಇವರು ಶಿಕ್ಷಣವನ್ನು ಪಡೆದುಕೊಂಡು ಸರಕಾರಿ ಕೆಲಸದಲ್ಲಿ ಸಹ ಸೇವೆ ಸಲ್ಲಿಸುತ್ತಿದ್ದರು ಸರ್ವೇ ಇಲಾಖೆಯಲ್ಲಿ ಕೆಲಸ ಮಾಡುತಿದ್ದರು ಆಗ ದೇವೇಗೌಡ ಅವರು ಚುನಾವಣೆಗೆ ಭಾಗವಹಿಸು ಎಂಬ ಮಾತನ್ನು ಹೇಳುತ್ತಾರೆ ಹಾಗಾಗಿ ಕೆಲಸವನ್ನು ಬಿಟ್ಟು ದೊಡ್ಡಬಳ್ಳಾಪುರದಲ್ಲಿ ಚುನಾವಣೆಗೆ ನಿಲ್ಲುತ್ತಾರೆ ಹಾಗೆಯೇ ಸೋಲನ್ನು ಅನುಭವಿಸುತ್ತಾರೆ ಹಾಗೆಯೇ ರಂಗಭೂಮಿಯಲ್ಲಿ ತುಂಬಾ active ಆಗಿ ಇದ್ದರು ಬಾಲ್ಯದಿಂದಲೂ ಸಹ ನಾಟಕವನ್ನು ಮಾಡುತ್ತಿದ್ದರು ನಂತರದ ದಿನಗಳಲ್ಲಿ ಸಿನಿಮಾ ರಂಗವನ್ನು ಪ್ರವೇಶ ಮಾಡುತ್ತಾರೆ.
ಆರಂಭದಿಂದಲೇ ಒಳ್ಳೆಯ ಪಾತ್ರಗಳು ಸಿಕ್ಕಿದ್ದವು ಇವರ ಸಿನಿಮಾಗಳು ಹೇಮಾವತಿ ಗುರುಶಿಷ್ಯರು ಹಾಗೆಯೇ ಕವಿರತ್ನ ಕಾಳಿದಾಸ ಭಕ್ತ ಪ್ರಲ್ದಾದ ಮತ್ತು ದೊರೆ ಪುನೀತ ರಾಜಕುಮಾರ್ ಅವರ ಸಿನಿಮಾದಲ್ಲಿ ತಂದೆಯ ಪಾತ್ರ ಮೈ ಆಟೋ ಗ್ರಾಫ್ ದೊಡ್ಡಮನೆ ಹುಡುಗ ಹೀಗೆ ಅನೇಕ ಸಿನಿಮಾದಲ್ಲಿ ಭಾಗವಹಿಸಿದ್ದಾರೆ ಇತ್ತೀಚಿನ ದಿನದಲ್ಲಿ ಅವಕಾಶಗಳು ಸಹ ಕಡಿಮೆ ಆಗಿದೆ ಸಾಕಷ್ಟು ಧಾರಾವಾಹಿಯಲ್ಲಿ ಸಹ ಭಾಗವಹಿಸಿದ್ದಾರೆ ಒಂದಿಷ್ಟು ಸಿನಿಮಾವನ್ನು ನಿರ್ಮಾಣವನ್ನು ಮಾಡಿದ್ದಾರೆ ಹಾಗೆಯೇ ಸಿನಿಮಾ ನಿರ್ದೇಶನದಲ್ಲಿ ಸಹ ಸೈ ಎನಿಸಿಕೊಂಡಿದ್ದಾರೆ.
ಈ ಮೂಲಕ ಕಲಾವಿದ ಬೇರೆ ಪಾತ್ರಗಳಲ್ಲಿ ಭಾಗವಹಿಸಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಶ್ರೀನಿವಾಸ ಮೂರ್ತಿ ಅವರು ಎಂಟು ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ ಆದರೆ ಅವರು ನಿರ್ದೇಶನ ಮಾಡಿದ ಸಿನಿಮಾಗಳು ಹೆಚ್ಚಿನ ಯಶಸ್ಸನ್ನು ಹೊಂದಲಿಲ್ಲ ಹಾಗೆಯೇ ಲಾಭವನ್ನು ತಂದುಕೊಡಲಿಲ್ಲ ಹೀಗಾಗಿ ಸಿನಿಮಾದಲ್ಲಿ ದುಡಿದ ಹಣವನ್ನು ಸಿನಿಮಾದಿಂದಲೆ ಕಳೆದುಕೊಂಡರು .
ದೊಡ್ಡದಾಗಿ ಮನೆಯನ್ನು ಸಹ ಕಟ್ಟಿಸಿದ್ದರು ಹಾಗೆಯೇ ಬೆಂಗಳೂರಿನಲ್ಲಿ ಏಳು ಸೈಟ್ ಅನ್ನು ಖರೀದಿ ಮಾಡಿದ್ದರು ಸಾಕಷ್ಟು ಆಸ್ತಿಯನ್ನು ಮಾಡಿಕೊಂಡಿದ್ದರು ಸಿನಿಮಾ ನಿರ್ದೇಶನದ ದಾರಿಯಲ್ಲಿ ಜೀವನಕ್ಕೆ ಪೆಟ್ಟು ಕೊಟ್ಟಿತ್ತು ಬಹುತೇಕ ಹಣವನ್ನು ಸಿನಿಮಾಕ್ಕಾಗಿ ಕಳೆದುಕೊಂಡರು ಹೀಗಾಗಿ ಮನೆಯನ್ನು ಸಹ ಮಾರಿದರು ಏಳು ಸೈಟ್ ಅನ್ನು ಸಹ ಮಾರಾಟ ಮಾಡಿದ್ದರು ಕೊನೆಗೆ ಈಗ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ ಇತ್ತೀಚಿನ ದಿನಗಳಲ್ಲಿ ದೊಡ್ಡ ಪೆಟ್ಟುಕೊಟ್ಟಿರುವುದು ಮಗನ ದಿಮಾಕು ಸಿನಿಮಾವಾಗಿದೆ ಮಗನಿಗಾಗಿ ಸಿನಿಮಾವನ್ನು ನಿರ್ಮಾಣ ಮಾಡಿದ್ದರು ಅವರ ಮಗ ನವೀನ ಕೃಷ್ಣ ಇವರು ಅದ್ಬುತವಾದ ನಟ ಹಾಗೂ ಗಂಭೀರ ಹಾಗೂ ಹಾಸ್ಯದ ಪಾತ್ರವನ್ನು ಮಾಡುತ್ತಾರೆ ಆದರೆ ದಿಮಾಕು ಸಿನಿಮಾ ಲಾಭವನ್ನು ತಂಡುಕೊಡಲಿಲ್ಲ
ಇದೊಂದು ಸಿನಿಮಾದಿಂದ ಶ್ರೀನಿವಾಸ ಮೂರ್ತಿ ಅವರು ಎರಡು ಕೋಟಿಯನ್ನು ಕಳೆದುಕೊಳ್ಳುವಂತಾಯಿತು ಅದಾದ ನಂತರ ಅದರ ಸಾಲ ತೀರಿಸಲು ಸಾಕಷ್ಟು ವರ್ಷಗಳ ಕಾಲ ತೆಗೆದುಕೊಂಡರು ಹಾಗೆಯೇ ಅವರ ಮಗನ ಯಾವ ಸಿನಿಮಾ ಸಹ ದೊಡ್ಡ ಮಟ್ಟಿಗೆ ಹೆಸರನ್ನು ಮಾಡಲಿಲ್ಲ. ಒಂದಿಷ್ಟು ಧಾರಾವಾಹಿಯಲ್ಲಿ ಸಹ ನಟನೆ ಮಾಡಿದ್ದರು ಭೂಮಿಗೆ ಬಂದ ಭಗವಂತ ಎನ್ನುವ ಧಾರಾವಾಹಿಯಲ್ಲಿ ಅದ್ಬುತವಾದ ಪಾತ್ರವನ್ನು ಮಾಡಿದ್ದಾರೆ ಹೀಗೆ ಶ್ರೀನಿವಾಸ ಮೂರ್ತಿ ಅವರು ಯಶಸ್ಸನ್ನು ಹೊಂದಿದ್ದರು ಸಹ ಅವರು ನಿರ್ದೇಶಿಸಿದ ಸಿನಿಮಾದಿಂದಾಗಿ ಅವರ ಬದುಕಿನ ದಾರಿಯನ್ನು ಬದಲಾಯಿಸಿತು ಹೀಗೆ ಬದುಕು ಯಾವಾಗ ತಿರುವು ಪಡೆದುಕೊಳ್ಳುತ್ತದೆ ಎನ್ನುವುದನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ .