IPL: ಇದೀಗ RCB ತಂಡದಲ್ಲಿ ಮತ್ತೊಬ್ಬ ಸಿಕ್ಸರ್ ಕಿಂಗ್ ನ ಎಂಟ್ರಿ

News

IPL:ಕೋಟ್ಯಾಂತರ ಅಭಿಮಾನಿಗಳನ್ನ ಹೊಂದಿರುವಂತಹ RCB ತಂಡದಲ್ಲಿ ಇದೀಗ ಹೊಸ ಪ್ಲೇಯರ್ ಎಂಟ್ರಿ ಅಗಲಿದ್ದಾರೆ (TATA ಐಪಿಎಲ್) ನಲ್ಲಿ ಇದೀಗ RCB ತಂಡಕ್ಕೆ ಕೇದಾರ್ ಜಾಧವ್ ಎಂಟ್ರಿ ಆಗಿದೆ. ಡೇವಿಡ್ ವಿಲ್ಲಿ ಯವರ ಜಾಗದಲ್ಲಿ ಈ ಹೊಸ ಆಟಗಾರ ಎಂಟ್ರಿ ಕೊಟ್ಟಿದ್ದು ಮೊದಲು ಈ ಆಟಗಾರ ಆರ್‌ಸಿಬಿ ತಂಡದಲ್ಲಿ ಆಡಿದ್ದರು. ಕೇದಾರ್ ಜಾಧವ್ ರೈಟ್ ಹ್ಯಾಂಡ್ ಬ್ಯಾಟರ್ ಆಗಿದ್ದು RCB ತಂಡಕ್ಕೆ ಎಷ್ಟರಮಟ್ಟಿಗೆ ಕಾಂಟ್ರಿಬ್ಯುಟ್ ಮಾಡುತ್ತಾರೆ ಎಂದು ಕಾದು ನೋಡಬೇಕಾಗಿದೆ. ಕೇದಾರ್ ಜಾಧವ್ ಅವರು ಇಂಡಿಯಾ ತಂಡದಲ್ಲಿ ಇಲ್ಲವಾದರೂ ಸಹ ಉತ್ತಮ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದವರು.

RCB ತಂಡ ಯಾಕೆ ಇವರನ್ನ ಆಯ್ಕೆ ಮಾಡಿಕೊಂಡಿದೆ ಎಂಬ ಪ್ರಶ್ನೆಗೆ ಉತ್ತರ ನೀಡುವುದಾದರೆ ಕೇದಾರ್ ಜಾಧವ್ ಅವರು ಒಳ್ಳೆಯ ಆಟಗಾರ ವಿಕೆಟ್ ಕೀಪಿಂಗ್ ಕೂಡ ಚೆನ್ನಾಗಿ ಮಾಡುತ್ತಾರೆ ಇದರ ಜೊತೆಗೆ ಉತ್ತಮವಾದ ಬೌಲಿಂಗ್ ಅನ್ನು ಮಾಡುತ್ತಾರೆ ಒಟ್ಟಾರೆಯಾಗಿ ಇವರನ್ನು ಫೈವ್ ಡಿ ಪ್ಲೇಯರ್ ಎಂದು ಕರೆಯಬಹುದಾಗಿದೆ.

ಕೇದಾರ್ ಜಾಧವ್ ತುಂಬಾ ಉತ್ತಮವಾಗಿ ಆಡುವಂತಹ ಆಟಗಾರ ಆಗಿದ್ದು ಇತ್ತೀಚಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಡಿದ್ದರು ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಅವರನ್ನ ಕಳಪೆ ಫಾರ್ಮ್ ಎಂದು ಕೈ ಬಿಟ್ಟಿತ್ತು ಇದೀಗ RCB ತಂಡ ಇವರನ್ನ ಕೈಗೆತ್ತಿಕೊಂಡಿದೆ ಸದ್ಯಕ್ಕೆ ಬೇರೆ ಪಂದ್ಯಗಳಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿದ ಕೇದಾರ್ ಜಾಧವ್ ಅವರು ಆರ್ ಸಿ ಬಿ ತಂಡದಲ್ಲಿ ಮಿಡಲ್ ಆರ್ಡರ್ ಗೆ ಎಂಟ್ರಿ ಕೊಡುತ್ತಾರೆ. ಡೇವಿಡ್ ಇನ್ನು ಮುಂದೆ ಆರ್‌ಸಿಬಿ ತಂಡದಲ್ಲಿ ಇರುವುದಿಲ್ಲ ಇವರ ಬದಲಿಗೆ ಕೇದಾರ್ ಜಾಧವ್ ಅವರು ಆಡಲಿದ್ದಾರೆ. RCB ತಂಡ ಕಪ್ ಗೆಲ್ಲಲು ಇವರು ಸಹಕಾರಿಯಾಗುತ್ತಾರ ಅಥವಾ ಇಲ್ಲವಾ ಎಂದು ಕಾದು ನೋಡಬೇಕಾಗಿದೆ.

ಇದನ್ನೂ ಓದಿ..Ration Card: ರೇಷನ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಗುಡ್ ನ್ಯೂಸ್

Leave a Reply

Your email address will not be published. Required fields are marked *