ಐಪಿಎಲ್ ಈಗಾಗಲೇ ಮುಕ್ತಾಯದ ಹಂತಕ್ಕೆ ತಲುಪಿದ ವಿಷಯ ಎಲ್ಲರಿಗೂ ತಿಳಿದಿದೆ. ಇದರ ಕುರಿತಾಗಿ ಚೆನ್ನೈ ಸೂಪರ್ ಕಿಂಗ್ಸ್ ಅಥವಾ ಮುಂಬೈ ಇಂಡಿಯನ್ಸ್ ಈ ಎರಡು ಟೀಮ್ ಗಳಲ್ಲಿ ನಿಮ್ಮ ಬೆಂಬಲ ಯಾರಿಗೆ ಎಂದು ಕೇಳಿದ ವ್ಯಕ್ತಿಗೆ ಕನ್ನಡದ ನಟಿ ಪ್ರಣಿತಾ ಸುಭಾಷ್ ಅವರು ಈ ರೀತಿಯಾಗಿ ಉತ್ತರ ನೀಡಿದ್ದಾರೆ. ಹಾಗಾದರೆ ಅವರು ನೀಡಿದ ಉತ್ತರ ಏನು ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಐಪಿಎಲ್ 2020ನೇ ವರ್ಷದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಉತ್ತಮ ಆಟದ ಪ್ರದರ್ಶನ ನೀಡಿದ್ದು, ಫ್ಲೇ ಆಫ್ ಪ್ರವೇಶಿಸುವ ಸಾಧ್ಯತೆ ಹೆಚ್ಚಾಗಿಯೆ ಇದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯ ಗೆದ್ದರೆ ಆರ್ ಸಿ ಬಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಎರಲಿದೆ. ಇದರ ಪ್ರಕಾರವಾಗಿ ಈ ವರ್ಷ ಐಪಿಎಲ್ ಕಪ್ ಗೆಲ್ಲುವ ಭರವಸೆಯಲ್ಲಿ ಆರ್‌ಸಿಬಿ ಅಭಿಮಾನಿಗಳು ಇದ್ದಾರೆ. ನಟಿ ಪ್ರಣಿತಾ ಸುಭಾಷ್ ಅವರಿಗೆ ನೆಟ್ಟಿಗರೊಬ್ಬರು ನಿಮ್ಮ ಬೆಂಬಲ ಚೆನ್ನೈ ಸೂಪರ್ ಕಿಂಗ್ಸ್ ಅಥವಾ ಮುಂಬೈ ಇಂಡಿಯನ್ಸ್ ತಂಡ ಎರಡರಲ್ಲಿ ಯಾವುದಕ್ಕೆ ಎಂದು ಪ್ರಶ್ನಿಸಿದ್ದರು. ಪ್ರಣಿತಾ ಸುಭಾಷ್ ಅವರಿಗೆ ಕ್ರಿಕೆಟ್ ಅಂದರೆ ಆಸಕ್ತಿ ಹೆಚ್ಚಿದೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಡೆದ ಸಂದರ್ಭದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಹಾಗೂ ತೆಲುಗು ವಾರಿಯರ್ಸ್ ತಂಡಗಳ ಪರ ಬೆಂಬಲಿಸಿದ್ದ ಉದಾಹರಣೆಗಳೂ ಸಹ ಇವೆ. ಅವರ ಪ್ರಶ್ನೆಗೆ ಉತ್ತರಿಸಿರುವ ನಟಿ ಪ್ರಣಿತಾ ”ಕೇವಲ ಆರ್‌ಸಿಬಿಗೆ ಮಾತ್ರ ನನ್ನ ಬೆಂಬಲ” ಎಂದು ಹೇಳಿದ್ದಾರೆ.

ಪ್ರಣಿತಾ ಕೊಟ್ಟ ಉತ್ತರಕ್ಕೆ ಆರ್‌ಸಿಬಿ ಫ್ಯಾನ್ಸ್ ಬಹಳ ಸಂತೋಷಗೊಂಡಿದ್ದಾರೆ. ಅಂದಹಾಗೆ, ಪ್ರಣಿತಾ ಅವರು ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ನಟನೆ ಮಾಡುತ್ತಿದ್ದಾರೆ. ಬಹುಭಾಷೆಯಲ್ಲೂ ಅಭಿಮಾನಿಗಳನ್ನು ಹೊಂದಿರುವ ನಟಿ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿಗೆ ಸಪೋರ್ಟ್ ಮಾಡುತ್ತಿರುವುದಕ್ಕೆ ಇವ್ರ ಅಭಿಮಾನಿಗಳಿಗೆ ಖುಷಿ ನೀಡಿದೆ.

Leave a Reply

Your email address will not be published. Required fields are marked *