ಕನ್ನಡ ಚಿತ್ರರಂಗದ ಕನಸಿನ ರಾಣಿ, ಮೋಹಕ ನಟಿ ಮಾಲಾಶ್ರೀ ಅವರಿಗೆ 90ರ ದಶಕದಲ್ಲಿ ಹೀರೋಗಳಿಗೆ ಇದ್ದಷ್ಟೇ ಪ್ರಾಮುಖ್ಯತೆಯನ್ನು ಇವರಿಗೂ ಸಹ ನೀಡಲಾಗಿತ್ತು. ಕನ್ನಡ ಚಿತ್ರರಂಗ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಕೂಡಾ ಯಶಸ್ವಿ ನಟಿಯಾಗಿದ್ದರು ಮಾಲಾಶ್ರೀ. ಈ ಹಿರಿಯ ನಟಿ ಕಳೆದ ವರ್ಷ ಇನ್ಸ್ಟಾಗ್ರಾಮ್ ಗೆ ಎಂಟ್ರಿ ಕೊಟ್ಟರು.
ಬಹಳ ಸಕ್ರಿಯವಾಗಿ ಇಲ್ಲದೆ ಇದ್ದರು, ಆಗಾಗ ತಮ್ಮ ವೈಯಕ್ತಿಕ ಜೀವನದ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ಮಾಲಾಶ್ರೀ ಅವರ ಪತಿ ರಾಮು ಅವರು ಅಗಲಿರುವ ವಿಷಯ ನಿಮಗೆ ಗೊತ್ತೇ ಇದೆ. ಇಂತಹ ಸಂದರ್ಭದಲ್ಲಿ ಮಾಲಾಶ್ರೀ ಅವರ ಹುಟ್ಟುಹಬ್ಬವನ್ನು ಪತಿ ಇಲ್ಲದೆ ಆಚರಣೆ ಮಾಡಿಕೊಂಡಿದ್ದಾರೆ. ಮಾಲಾಶ್ರೀ ಅವರಿಗೆ ಮಕ್ಕಳು ಒಂದು ಸರ್ಪ್ರೈಸ್ ಉಡುಗೊರೆಯನ್ನು ನೀಡಿದ್ದಾರೆ.
ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಕೋಟಿ ರಾಮು ಏಪ್ರಿಲ್ 26 ರಂದು ಕೊರೊನಾಗೆ ಬಲಿಯಾಗಿದ್ದಾರೆ. ರಾಮು ಅವರನ್ನು ಕಳೆದುಕೊಂಡ ನಟಿ ಮಾಲಾಶ್ರೀ ಮತ್ತು ಅವರ ಕುಟುಂಬ ದುಃಖದಲ್ಲಿ ಮುಳುಗಿದೆ. ರಾಮು ಇಲ್ಲದ ಜೀವನವನ್ನು ಮಾಲಾಶ್ರೀಗೆ ಊಹಿಸಿ ಕೊಳ್ಳಲು ಸಾಧ್ಯವಾಗುತ್ತಿಲ್ಲ. ನೋವಿನಲ್ಲಿರುವ ನಟಿ ಮಾಲಾಶ್ರೀಗೆ ಚಿತ್ರರಂಗದ ಅನೇಕರು ಧೈರ್ಯ ತುಂಬಿದ್ದರು.
ಭೇಟಿಯಾಗಿ ಮಾತನಾಡಿಸಿ, ಕಣ್ಣೀರು ಒರೆಸುವಂತ ಸ್ಥಿತಿಯೂ ಇಲ್ಲವಲ್ಲ ಎಂದು ಅನೇಕರು ನೊಂದುಕೊಂಡಿದ್ದಾರೆ. ಇಂಥ ಸಂಕಷ್ಟದ ಸಮಯದಲ್ಲಿ ಅನೇಕರು ಸಾಮಾಜಿಕ ಜಾಲತಾಣದ ಮೂಲಕ ಕೂಡಾ ಸಾಂತ್ವನ ಹೇಳಿದ್ದಾರೆ. ಈ ಎಲ್ಲಾ ದುಃಖದಿಂದ ಹೊರಬಂದ ನಟಿ ಮಾಲಾಶ್ರೀ ತನ್ನ ಮಕ್ಕಳ ಜೊತೆ ತನ್ನ ಹುಟ್ಟುಹಬ್ಬವನ್ನು ಸರಳವಾಗಿ ಆಚರಣೆ ಮಾಡಿಕೊಂಡಿದ್ದಾರೆ.
ನಟಿ ಮಾಲಾಶ್ರೀ ಆಗಿನ ಕಾಲದ ಎಲ್ಲಾ ಹುಡುಗರ ಮೋಸ್ಟ್ ಫೇವರೆಟ್ ನಟಿ. 90ರ ದಶಕದಲ್ಲಿ ಕನ್ನಡ ಚಿತ್ರರಂಗದ ಟಾಪ್ ಮೋಸ್ಟ್ ನಟಿಯಾಗಿ ಮೆರೆದರು ಮಾಲಾಶ್ರೀ. ಹೀರೋಗಳಿಗೆ ಇರುತ್ತಿದ್ದಷ್ಟೇ ಬೇಡಿಕೆ ಮಾಲಾಶ್ರೀ ಅವರಿಗು ಇತ್ತು. ಕನ್ನಡ ಚಿತ್ರರಂಗದ ಎಲ್ಲಾ ಸ್ಟಾರ್ ನಟರ ಜೊತೆ ನಟಿಸಿದ ಹೆಗ್ಗಳಿಕೆ ಇವರದ್ದು. ಒಂದು ಕಾಲದಲ್ಲಿ ಇವರ ಕಾಲ್ ಶೀಟ್ ಸಿಗುವುದೇ ಕಷ್ಟವಾಗಿತ್ತು. ಹೋಮ್ಲಿ ಹುಡುಗಿ, ಮುಗ್ಧ ಹುಡುಗಿ, ಹಳ್ಳಿ ಹುಡುಗಿ, ಸಿಟಿಯ ಬೋಲ್ಡ್ ಹುಡುಗಿ, ಖಡಕ್ ಪೊಲೀಸ್ ಪಾತ್ರಗಳು ಎಲ್ಲಾ ಪಾತ್ರಗಳಿಗೂ ಹೊಂದಿಕೊಳ್ಳುವಂತಹ ಕಲಾವಿದೆ ಮಾಲಾಶ್ರೀ ಅವರು.
ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಚಿತ್ರರಂಗದಲ್ಲಿ ಕೂಡ ಇವರಿಗೆ ಬಹಳ ಬೇಡಿಕೆ ಇತ್ತು. ಮಾಲಾಶ್ರೀ ಅವರು ಸ್ಯಾಂಡಲ್ ವುಡ್ ನ ಹೆಸರಾಂತ ನಿರ್ಮಾಪಕ ರಾಮು ಅವರೊಡನೆ ವಿವಾಹವಾದರು. ಮದುವೆ ನಂತರ ಇವರು ನಟಿಸುವುದು ಸ್ವಲ್ಪ ಕಡಿಮೆ ಆಗಿತ್ತು. ಇತ್ತೀಚೆಗಂತೂ ಮಾಲಾಶ್ರೀ ಅವರು ಅಭಿನಯಿಸುವುದು ಬಹಳ ಕಡಿಮೆ ಆಗಿದೆ.
ಮದುವೆ ನಂತರ ತಮ್ಮ ಸಂಪೂರ್ಣ ಸಮಯವನ್ನು ಹೆಚ್ಚಾಗಿ ಕುಟುಂಬಕ್ಕೆ ಮೀಸಲಾಗಿ ಇಟ್ಟರು ಮಾಲಾಶ್ರೀ ಅವರು. ಸಿನಿರಂಗದಿಂದ ದೂರಾಗಿ ಸಾಂಸಾರಿಕ ಜೀವನದಲ್ಲಿ ಬ್ಯುಸಿ ಆಗಿದ್ದರು ನಟಿ ಮಾಲಾಶ್ರೀ. ಮಾಲಾಶ್ರೀ ಮತ್ತು ರಾಮು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇವರ ಮಗಳು ಅನನ್ಯ ಮತ್ತು ಮಗ ಆರ್ಯ. ಸರಳವಾಗಿ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡ ಮಾಲಾಶ್ರೀ ಇದೇ ಸಮಯದಲ್ಲಿ ಅವರು ತಮ್ಮ ಪತಿಯನ್ನು ನೆನೆದು ಒಂದು ಕ್ಷಣ ಭಾವುಕರಾಗಿದ್ದರು.
ವಿಧಿಯ ಆಟ, ಕಳೆದ ಎರಡು ತಿಂಗಳ ಹಿಂದೆ ಮಾಲಾಶ್ರೀ ಅವರ ಪತಿ ನಿರ್ಮಾಪಕ ಕೋಟಿ ರಾಮು ಅವರು ಉಸಿರಾಟದ ಸಮಸ್ಯೆಯಿಂದ ಇಹಲೋಕ ತ್ಯಜಿಸಿದ್ದಾರೆ. ಇದು ರಾಮು ಅವರು ಇಲ್ಲದೆ ಮಾಲಾಶ್ರಿ ಅವರಿಗೆ ಮೊದಲನೇ ಹುಟ್ಟುಹಬ್ಬ.
ಈ ದಿನವನ್ನು ಸ್ಪೆಷಲ್ ಆಗಿಸಲು ಮಾಲಾಶ್ರೀ ಅವರ ಮಕ್ಕಳು ತಮ್ಮ ಪ್ರೀತಿಯ ಅಮ್ಮನಿಗೆ ಮುದ್ದಾದ ಪಿಟ್ ಬುಲ್ ನಾಯಿಮರಿಯನ್ನು ಗಿಫ್ಟ್ ಆಗಿ ನೀಡಿದ್ದಾರೆ, ಈ ನಾಯಿಮರಿಗೆ ಬಘಿರಾ ಎಂದು ಹೆಸರಿಟ್ಟಿದ್ದಾರೆ ನಟಿ ಮಾಲಾಶ್ರೀ. ನಾಯಿಮರಿ ಜೊತೆ ಮುದ್ದಾದ ಫೋಟೋ ಒಂದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಮಾಲಾಶ್ರೀ ಅವರ ಹುಟ್ಟು ಹಬ್ಬ ಆಚರಣೆ ಹೇಗಿತ್ತು ಎಂದು ನೀವು ಇಲ್ಲಿ ನೋಡಬಹುದು. ಇದೇ ಸಮಯದಲ್ಲಿ ಮಾಲಾಶ್ರೀ ಅವರು ಕೂಡ ತಮ್ಮ ಪತಿಯನ್ನು ನೆನೆದು ಒಂದು ಕ್ಷಣ ಭಾವುಕರಾಗಿದ್ದಾರೆ. ಅವರ ಹುಟ್ಟು ಹಬ್ಬ ಆಚರಣೆ ಹೇಗಿತ್ತು ಎಂದು ನೀವು ಇಲ್ಲಿ ನೋಡಬಹುದು.