ಕನ್ನಡ ಚಿತ್ರರಂಗದ ನವರಸ ನಾಯಕ ಎಂದು ಖ್ಯಾತಿ ಪಡೆದಿರುವ ನಾಯಕ ನಟ ಜಗ್ಗೇಶ್ ಇವರು ಹುಟ್ಟಿದ್ದು ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಮಾಯಸಂದ್ರದಲ್ಲಿ ಮಾರ್ಚ್ 17ರಂದು ಇವರ ಜನನವಾಯಿತು ಶಿವಲಿಂಗಪ್ಪ ಮತ್ತು ನಂಜಮ್ಮ ಅವರ ದಂಪತಿ ಪುತ್ರರಾಗಿ ಜನಿಸಿದರು ಆರಂಭದಲ್ಲಿ ಖಳ ನಟನಾಗಿ ಹಾಸ್ಯ ನಟನಾಗಿ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ
ಕೊನೆಗೆ ಇಬ್ಬನಿ ಕರಗಿತು ಚಿತ್ರದ ಮೂಲಕ ನಟನೆ ಶುರು ಮಾಡಿದರು ಇವರ ನೂರನೇ ಚಿತ್ರ ಮಠ ಹಾಗೂ ಮೇಕಪ್ ಸಿನಿಮಾವನ್ನು ನಿರ್ಮಿಸಿ ನಿರ್ಮಾಪಕರು ಆಗಿದ್ದಾರೆ ಇನ್ನು ಮೊದಲನೇ ಸಿನಿಮಾ ತರ್ಲೆ ನನ್ ಮಗ ಮೂಲಕ ಪರಿಪೂರ್ಣ ನಾಯಕ ನಟನಾಗಿ ತಮ್ಮದೇ ಆದ ವಿಭಿನ್ನ ಹಾಸ್ಯ ಹಾವಭಾವದಿಂದ ಜನರಲ್ಲಿ ತಮ್ಮದೇ ಅದ ಛಾಪು ಮೂಡಿಸಿದ್ದಾರೆ
ಇನ್ನು ಪ್ರಮೀಳಾ ಅವರ ಜೊತೆಗೆ ದಾಂಪತ್ಯ ಜೀವನ ಕಾಲಿಟ್ಟರು ಇವರಿಬ್ಬರ ಪ್ರೇಮ ವಿವಾಹಕ್ಕೆ ಮನೆಯವರ ವಿರೋಧವಿತ್ತು ಅವರುಗಳ ವಿರೋಧದ ನಡುವೆಯೂ ಸುಂದರ ಸಂಸಾರ ನಡೆಸಿದರು ಇವರಿಗೆ ಯತಿರಾಜ್ ಮತ್ತು ಗುರುರಾಜ್ ಎನ್ನುವ ಇಬ್ಬರು ಮಕ್ಕಳು ಇದ್ದು ಅವರುಗಳು ಕೂಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಇನ್ನು ರಾಜಕೀಯ ಪಕ್ಷಗಳಲ್ಲೂ ಕೂಡ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ತುರುವೇಕೆರೆ ಶಾಸಕರು ಆಗಿದ್ದರು
ಇನ್ನು ಕಾಲಭೈರವ ದೇವಸ್ಥಾನಕ್ಕೆ ಗ್ರಹಣ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೋದ ಸಂದರ್ಭದಲ್ಲಿ ತಮ್ಮ ಬಾಲ್ಯದಲ್ಲಿ ತಮ್ಮ ತಾತನ ಜೊತೆ ಇದ್ದ ಸವಿ ನೆನಪುಗಳನ್ನು ತನ್ನ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ ಆಗಿನ ಕಾಲದ ಬಗ್ಗೆ ಮಾತಾಡುತ್ತಾ ಇವತ್ತಿನ ಕಾಲದ ಬದಲಾವಣೆಯ ಬಗ್ಗೆ ತಿಳಿಸಿದ್ದಾರೆ
ಅವರ ತಾತನ ಜೊತೆ ಮರದ ಕೆಳಗಡೆ ಕುಳಿತು ಕಥೆ ಕೇಳಿಕೊಳ್ಳುತ್ತ ಇದ್ದ ಜಾಗ ಹಾಗೂ ಅವರ ಗೆಳೆಯರೊಂದಿಗೆ ಕುಳಿತು ಮುಂದೆ ಒಂದು ದಿನ ನಾನು ಪ್ರಸಿದ್ದ ಸಿನಿಮಾ ನಟ ಆಗುತ್ತೇನೆ ಎಂದು ಹೇಳಿದ ಜಾಗ ಹಾಗೂ ಅವರ ತಾತ ಕಟ್ಟಿಸಿದ 120 ವರ್ಷ ಹಳೆಯ ಶಿವನ ದೇವಸ್ತಾನ ಹಾಗೂ ಅವರ ತಾತನ ಕೊನೆಯ ಉಸಿರು ಎಳೆದ ಜಾಗ ಮತ್ತು ಸಮಾಧಿ ಜಾಗವನ್ನುತೋರಿಸುತ್ತ ಅದರ ಬಗ್ಗೆ ತನ್ನ ಸ್ನೇಹಿತರ ಜೊತೆ ಹೇಳಿಕೊಂಡಿದ್ದಾರೆ
ಇನ್ನೂ ತಾನು ಆಟ ಪಾಠ ಆಡಿದ ಸ್ಥಳವನ್ನು ಹಾಗೂ ತನ್ನ ಚಿಕ್ಕಪ್ಪನ ಮನೆ ತಾನು ಹುಟ್ಟಿ ಆಡಿ ಬೆಳೆದ ಮನೆ ಬಗ್ಗೆ ತನ್ನ ಗೆಳೆಯರಲ್ಲಿ ಹಂಚಿಕೊಂಡಿದ್ದಾರೆ ತನ್ನ ಬಾಲ್ಯದಲ್ಲಿ ಹಳ್ಳಿಯ ಮನೆ ಇದ್ದು ಇವಾಗ ಹಳ್ಳಿಯ ಜನರು ಆಧುನಿಕ ಜೀವನಕ್ಕೆ ಒಗ್ಗಿ ಹೋಗಿದ್ದಾರೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.