ಚಿತ್ರನಟಿ ಸೌಂದರ್ಯ ಅವರ ಜೀವನ ಹಾಗೂ ಅವರ ಸಿನಿಮಾ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಕನ್ನಡ ತೆಲುಗು,ಹಿಂದಿ ಚಲನಚಿತ್ರಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಚಿತ್ರನಟಿ ಸೌಂದರ್ಯ ಅವರು ಮುಳಬಾಗಿಲು ತಾಲೂಕಿನ ಗಂಜಿಗುಂಟೆ ಗ್ರಾಮದಲ್ಲಿ 1976 ಜುಲೈ 18 ರಂದು ಜನಿಸಿದರು. ಕೆ.ಎಸ್ ಸತ್ಯನಾರಾಯಣ ಹಾಗೂ ಮಂಜುಳಾ ಸತ್ಯನಾರಾಯಣ ಎಂಬ ದಂಪತಿಗೆ ಜನಿಸಿದರು. ದುರಾದೃಷ್ಟವಶಾತ್ ಏಪ್ರಿಲ್ 17, 2004 ರಂದು ಭಾರತೀಯ ಜನತಾ ಪಕ್ಷ ಮತ್ತು ತೆಲುಗು ದೇಶಂ ಪಾರ್ಟಿಗೆ ಕ್ಯಾಂಪೇನ್ ಹೋಗಲು ಬೆಂಗಳೂರು ಏರಪೋರ್ಟನಿಂದ ಪ್ರಯಾಣ ಬೆಳೆಸಿದರು ಪ್ಲೇನ್ ಕ್ರಾಷ್ ಆಗುವ ಮೂಲಕ ಸಾವನ್ನಪ್ಪಿದರು. ಅವರು ಗಂಜಿಗುಂಟೆ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಟ್ಟಡ ನಿರ್ಮಿಸಿ ಕೊಡುಗೆ ನೀಡಿದ್ದಾರೆ. 2002 ರಲ್ಲಿ ನ್ಯಾಷನಲ್ ಫಿಲ್ಮ್ ಅವಾರ್ಡ್, ಕರ್ನಾಟಕ ಸ್ಟೇಟ್ ಫಿಲ್ಮ್ ಅವಾರ್ಡ್ ಹಲವು ಅವಾರ್ಡ್ ಗಳನ್ನು ಪಡೆದಿದ್ದಾರೆ.
ಸೌಂದರ್ಯ ಅವರ ತಾತಾ, ಅಜ್ಜಿ ಇದೇ ಊರಿನವರು. ಅವರ ತಂದೆ ನಿರ್ದೇಶಕರಾಗಿದ್ದರು. ಸೌಂದರ್ಯ ಅವರು ಮೊದಲು ಅಣ್ಣ ತಂಗಿ ಎಂಬ ಚಿತ್ರದಲ್ಲಿ ನಟಿಸಿದರು ಯಶಸ್ವಿಯಾಯಿತು. ತೆಲುಗಿನಲ್ಲಿ ಹಲವು ಚಿತ್ರಗಳಲ್ಲಿ ನಟಿಸಿದರು ಸಿನಿಮಾಗಳು ಹಿಟ್ ಆಗಿ ಒಳ್ಳೆ ಹೆಸರನ್ನು ಪಡೆದರು ಸೋದರ ಮಾವನನ್ನೆ ಮದುವೆಯಾಗಿದ್ದರು ಮದುವೆಯಾಗಿ ಒಂದು ವರ್ಷವಾಗಿತ್ತು. ಸೌಂದರ್ಯ ಅವರು ಬೆಂಗಳೂರಿನಲ್ಲೂ ಶಾಲೆಯನ್ನು ನಿರ್ಮಿಸಿದ್ದರು. ಸೌಂದರ್ಯ ಅವರು ಒಳ್ಳೆಯವರು, ಅಹಂಕಾರವಿರಲಿಲ್ಲ ಯಾರೇ ಮನೆಗೆ ಬಂದರೂ ಅವರಿಗೆ ಆದರದಿಂದ ನೋಡುತ್ತಿದ್ದರು, ಅವರನ್ನು ಕಳೆದುಕೊಂಡಿದ್ದು ಬೇಸರ ವಿಷಯ, ಅವರು ಇದ್ದಿದ್ದರೆ ಬಹಳಷ್ಟು ಒಳ್ಳೆಯ ಕೆಲಸ ಮಾಡುತ್ತಿದ್ದರು ಎಂದು ಅವರ ಸಂಬಂಧಿಯೊಬ್ಬರು ಹೇಳಿದರು. ಒಟ್ಟಿನಲ್ಲಿ ಅವರು ಇಂದಿಗೂ ಜನರ ಮನಸ್ಸಿನಲ್ಲಿ ಉಳಿದಿದ್ದಾರೆ.