ನಟಿ ಕಾಜಲ್ ಅಗರ್ವಾಲ್ ಮುಂಬೈ ಮೂಲದ ಖ್ಯಾತ ಬ್ಯುಸಿನೆಸ್‌ಮೆನ್ ಗೌತಮ್ ಕಿಚ್ಲು ಎಂಬುವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಅದರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

35 ವರ್ಷದ ಕಾಜಲ್ ಅಗರ್ವಾಲ್ ಅವರು ಪೋಷಕರು ಹುಡುಕಿದ ಹುಡುಗನಾದ ಗೌತಮ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಗೌತಮ್ ಕಿಚ್ಲು ಮುಂಬೈ ಮೂಲದವರಾಗಿದ್ದು, ‘ಡೈಸೆರ್ನ್ ಲಿವಿಂಗ್’ ಹೆಸರಿನ ಒಳಾಂಗಣ ವಿನ್ಯಾಸದ ಉದ್ಯಮವನ್ನು ಹೊಂದಿದ್ದಾರೆ. ದೇಶದ ಅತ್ಯುತ್ತಮ ಒಳಾಂಗಣ ವಿನ್ಯಾಸ ಸಂಸ್ಥೆಗಳಲ್ಲಿ ಗೌತಮ್ ಅವರ ಸಂಸ್ಥೆಯೂ ಒಂದು. ಕಾಜಲ್ ಅಗರ್ವಾಲ್ ಹಾಗೂ ಗೌತಮ್ ವಿವಾಹ ಮೊದಲೇ ನಿಶ್ಚಯವಾಗಿತ್ತು, ಆದರೆ ಕೊರೋನಾ ಕಾರಣದಿಂದ ಮುಂದೂಡಲ್ಪಟ್ಟಿದೆ. ಈಗ ನವೆಂಬರ್ ತಿಂಗಳಲ್ಲಿ ವಿವಾಹವನ್ನು ನಿಶ್ಚಯಿಸಲಾಗಿದ್ದು, ಮುಂಬೈನಲ್ಲಿ ಎರಡು ದಿನಗಳ ಕಾಲ ಮದುವೆ ನಡೆಯಲಿದೆ ಎನ್ನಲಾಗಿದೆ.

ನಟಿ ಕಾಜಲ್ ಅಗರ್ವಾಲ್ ಈಗಲೂ ಸಿನಿಮಾದಲ್ಲಿ ಸಾಕಷ್ಟು ಬ್ಯುಸಿಯಾಗಿದ್ದಾರೆ. ಪ್ರಸ್ತುತ ಅವರು ಹಿಂದಿಯ ‘ಮುಂಬೈ ಸಗಾ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಮಿಳಿನ ಇಂಡಿಯನ್ 2, ಹೇಯ್ ಸಿನಮಿಕಾ, ತೆಲುಗಿನ ಮೋಸಗಾಳ್ಳು, ಆಚಾರ್ಯ ಮತ್ತು ಕನ್ನಡದ ತಥಾಸ್ತು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕಾಜಲ್ ಆಪ್ತ ಸ್ನೇಹಿತರಿಗೆ ಮಾತ್ರವೇ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಆಹ್ವಾನ ಇತ್ತು ಎನ್ನಲಾಗಿದ್ದು, ಕಾರ್ಯಕ್ರಮದಲ್ಲಿ ಬೆಲ್ಲಂಕೊಂಡ ಶ್ರೀನಿವಾಸ್ ಸಹ ಭಾಗವಹಿಸಿದ್ದರಂತೆ. ಅವರ ವೈವಾಹಿಕ ಜೀವನ ಸುಖಕರವಾಗಿರಲಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!